ಮನೆಯಲ್ಲಿ ಬೆಳೆದ ಸಸ್ಯಗಳ ಎಲೆಹೂವುಗಳಿಂದ ಮಾಡುವ ಚಹಾದ ವಿವಿಧ ಪರ್ಯಾಯಗಳು

ಸನಾತನದ `ಮನೆಮನೆಯಲ್ಲಿ ಕೈತೋಟ’ ಅಭಿಯಾನ

ಸೌ. ರಾಘವಿ ಕೊನೆಕರ

ಸಾಮಾನ್ಯವಾಗಿ ಚಹಾದ ದುಷ್ಪರಿಣಾಮವಿರುವುದರಿಂದ ಅನೇಕ ಜನರಿಗೆ `ಚಹಾ ಕುಡಿಯುವುದನ್ನು ನಿಲ್ಲಿಸಬೇಕು’, ಎಂದೆನಿಸುತ್ತದೆ; ಆದರೆ`ಚಹಾಗಾಗಿ ಬೇರೆ ಏನಾದರೂ ಪರ್ಯಾಯಬೇಕು’, ಎಂದು ಎನಿಸುತ್ತದೆ. ಅವರಿಗಾಗಿ ಮನೆಯಲ್ಲಿ ಬೆಳೆದ ಸಸ್ಯಗಳ ಎಲೆಹೂವುಗಳಿಂದ ಮಾಡುವ ಈ ಪರ್ಯಾಯವು ಲಭ್ಯಗಳಿವೆ. ಸತತವಾಗಿ ಒಂದೇ ತರಹದ ಚಹಾ ಕುಡಿಯುವುದಕ್ಕಿಂತ ಇಂತಹ ವಿವಿಧ ಪರ್ಯಾಯವನ್ನು ಬಳಸಿದರೆ ಮನಸ್ಸಿಗೂ ಬೇರೆ ಆನಂದವನ್ನು ಅನುಭವಿಸಲು ಸಿಗುತ್ತದೆ.

೧. ಗೋಕರ್ಣದ ನೀಲಿ ಹೂವುಗಳು, ೨. ನಿಂಬೆಹಣ್ಣು, ೩. ಮಜ್ಜಿಗೆಹುಲ್ಲಿನ ಎಲೆಗಳು, ೪. ದಾಲ್ಚಿನಿ, ೫. ತುಳಸಿ, ೬. ಬೆಲ್ಲ

೧. ಗೋಕರ್ಣ ಹೂವುಗಳ ನೀಲಿ ಚಹಾ (Blue Tea)

ಗೋಕರ್ಣದ ಬಳ್ಳಿ ಮತ್ತು ಅದರ ನೀಲಿ ಹೂವುಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಗೋಕರ್ಣದ ಬಳ್ಳಿಗೆ ಚಿಕ್ಕ ಚಿಕ್ಕ ಕಾಯಿ ಬರುತ್ತವೆ. ಈ ಕಾಯಿ ಗಿಡದ ಮೇಲೆಯೇ ಒಣಗಿದ ನಂತರ ಅದರಿಂದ ಬೀಜಗಳು ತಯಾರಾಗುತ್ತವೆ. ಈ ಬೀಜಗಳನ್ನು ಬಿತ್ತಿದ ನಂತರ ಅವುಗಳಿಂದ ಗೋಕರ್ಣದ ಬಳ್ಳಿಗಳಾಗುತ್ತವೆ. ಗೋಕರ್ಣದ ಹೂವುಗಳಿಂದ `ನೀಲಿ ಚಹಾ’ ತಯಾರಿಸಬಹುದು.

೧ ಅ. ಸುಮಾರು ೨ ಕಪ್ ಚಹವನ್ನು ಮಾಡಲು ಬೇಕಾಗುವ ಪದಾರ್ಥಗಳು : ಎರಡೂವರೆ ಕಪ್ ನೀರು, ನೀಲಿ ಗೋಕರ್ಣದ ೮ ರಿಂದ ೧೦ ಹೂವುಗಳು, ೪-೫ ತುಳಸಿಯ ಎಲೆಗಳು, ಹಸಿಶುಂಠಿಯ ಚಿಕ್ಕ ತುಂಡು, ೪ ಮಜ್ಜಿಗೆ ಹುಲ್ಲಿನ ಚಿಕ್ಕ ಎಲೆ ಮತ್ತು ದಾಲ್ಚಿನಿಯ ೧ ಸಣ್ಣ ತುಂಡು

೧ ಆ. ಕೃತಿ : ಗೋಕರ್ಣದ ಹೂವುಗಳನ್ನು ಹಗುರವಾಗಿ ಕೈಯಿಂದ ತೊಳೆಯಬೇಕು; ಏಕೆಂದರೆ ಹೂವುಗಳು ಮುದ್ದೆಯಾದರೆ ಅವುಗಳಲ್ಲಿನ ನೀಲಿ ಬಣ್ಣವು ಹೊರಟು ಹೋಗುತ್ತದೆ. ಈ ಹೂವುಗಳೊಂದಿಗೆ ಮೇಲಿನ ಎಲ್ಲ ಸಾಹಿತ್ಯಗಳನ್ನು ೨ ನಿಮಿಷಗಳ ವರೆಗೆ ಕುದಿಸಬೇಕು ಮತ್ತು ಸ್ವಲ್ಪ ಸಮಯ ಮುಚ್ಚಿಡಬೇಕು. ನಂತರ ಅದರಲ್ಲಿ ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ರುಚಿಗೆ ನಿಂಬೆರಸವನ್ನು ಸೇರಿಸಿ ಬೆಚ್ಚಗಿನ ಚಹಾವನ್ನು ಕುಡಿಯಬೇಕು.

೨. ದಾಸವಾಳದ ಪಕಳೆಗಳ ಕೆಂಪು ಚಹಾ (Rea Tea)

ಗೋಕರ್ಣದ ಹೂವುಗಳಂತೆಯೇ ದಾಸವಾಳ ಹೂವಿನ ಪಕಳೆಗಳ ಚಹಾವನ್ನು ತಯಾರಿಸಬಹುದು. ಕೆಂಪು ದೇಶಿ ದಾಸವಾಳ ಹೂವಿನ ಪಕಳೆಗಳನ್ನು ತೆಗೆದು ಜರಡಿಯಲ್ಲಿ ತೊಳೆಯಬೇಕು. ಮೇಲಿ ಹೇಳಿದ ಗೋಕರ್ಣದ ಹೂವುಗಳ ಚಹಾದಂತೆಯೇ ಇತರ ಸಾಹಿತ್ಯಗಳನ್ನು ಉಪಯೋಗಿಸಬೇಕು ಮತ್ತು ಕೃತಿಯನ್ನು ಅದೇ ರೀತಿ ಮಾಡಬೇಕು.

ಚಹಾ ಮಾಡಲು ಮೇಲಿನ ಎರಡೂ ತಾಜಾ ಹೂವುಗಳು ದೊರಕದಿದ್ದರೆ ಹಿಂದಿನ ದಿನದ ಒಣಗಿದ ಹೂವುಗಳನ್ನು ಉಪಯೋಗಿಸಬಹುದು.

೩. ತುಳಸಿ ಎಲೆ ಮತ್ತು ಹಸಿಶುಂಠಿಯಎಲೆಗಳ ಹಸಿರು ಚಹಾ (Green Tea)

ಮಾರುಕಟ್ಟೆಯಲ್ಲಿ ಸಿಗುವ ಹಸಿಶುಂಠಿಯ ಗಡ್ಡೆಯನ್ನು ಮಣ್ಣಿನಲ್ಲಿ ನೆಟ್ಟು ಹಸಿಶುಂಠಿಯ ಕೃಷಿಯನ್ನು ಸಹಜವಾಗಿ ಮಾಡಬಹುದು. ಗಡ್ಡೆಯನ್ನು ನೆಟ್ಟ ನಂತರ ಹೊಸ ಶುಂಠಿಯು ಬರಲು ಸುಮಾರು ೮-೯ ತಿಂಗಳು ಬೇಕಾಗುತ್ತದೆ. ಈ ಕಾಲದಲ್ಲಿ ಬೆಳೆಯುವ ಸಸಿಗೆ ತುಂಬಾ ಎಲೆಗಳು ಬರುತ್ತಿರುತ್ತವೆ. ಈ ಎಲೆಗಳ ಚಹಾ ಮಾಡಬಹುದು. ಅನೇಕ ಪ್ರಕಾರದ ತುಳಸಿಯನ್ನು ನೆಡಬಹುದು, ಉದಾ. ರಾಮ ತುಳಸಿ, ಕೃಷ್ಣ ತುಳಸಿ, ಕಾಡುತುಳಸಿ, ಕರ್ಪೂರ ತುಳಸಿ, ಧೂಪ ತುಳಸಿ. ಇವುಗಳನ್ನು ಚಹಾದಲ್ಲಿ ನಮಗೆ ಇಷ್ಟವಾಗುವ ತುಳಸಿಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪ್ರಕಾರದ ಎಲೆಗಳನ್ನು ಹಾಕಬಹುದು.

೩ ಅ. ಸುಮಾರು ೨ ಕಪ್ ಚಹಾ ಮಾಡಲು ಬೇಕಾಗುವ ಸಾಹಿತ್ಯಗಳು : ಎರಡೂವರೆ ಕಪ್ ನೀರು, ೫-೬ ಶುಂಠಿಯ ಎಲೆಗಳು, ೫-೬ ತುಳಸಿಯ ಎಲೆಗಳು, ೪ ಚಿಕ್ಕ ತುಂಡು ಮಜ್ಜಿಗೆ ಹುಲ್ಲಿನ ಎಲೆ, ರುಚಿಗೆ ತಕ್ಕಷ್ಟು ಏಲಕ್ಕಿ ಪುಡಿ ಅಥವಾ ದಾಲ್ಚಿನಿ, ಲವಂಗ ಮತ್ತು ಮೆಣಸಿನ ಕಾಳು ಇವುಗಳಲ್ಲಿ ಯಾವುದಾದರೊಂದು ಮಸಾಲೆಯ ಪದಾರ್ಥ

೩ ಆ. ಕೃತಿ : ಎಲ್ಲ ಎಲೆಗಳನ್ನು ಸ್ವಚ್ಛವಾಗಿ ತೊಳೆಯಬೇಕು. ನಂತರ ಎಲ್ಲ ಪದಾರ್ಥಗಳನ್ನು ೫ ನಿಮಿಷ ಕುದಿಸಬೇಕು. ನಂತರ ಅದರಲ್ಲಿ ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಬೇಕಿದ್ದರೆ ನಿಂಬೆರಸವನ್ನು ಹಾಕಿ ಬೆಚ್ಚಗಿನ ಚಹಾ ಕುಡಿಯಬೇಕು. ತಮ್ಮ ಕೈದೋಟದಲ್ಲಿ ಪುದಿನಾ ಅಥವಾ ಅಜ್ವಾನದ ಎಲೆಯನ್ನು ನೆಟ್ಟಿದ್ದರೆ ಆ ಎಲೆಗಳನ್ನು ಇದರಲ್ಲಿ ಹಾಕಿ ವೈವಿಧ್ಯಮಯ ರುಚಿಯನ್ನು ನೋಡಬಹುದು.’ (೨೭.೯.೨೦೨೨) – ಸೌ. ರಾಘವಿ ಮಯೂರೇಶ ಕೊನೆಕರ, ಢವಳಿ, ಫೊಂಡಾ, ಗೋವಾ.

`ತಾವು ಸಹ ಈ ರೀತಿ ವಿವಿಧ ರೀತಿಯ ಚಹಾ ಮಾಡಿ ಕುಡಿದ ನಂತರ ಅದರ ಬಗ್ಗೆ ತಮಗೆ ಬಂದ ಅನುಭವವನ್ನು ಕೆಳಗೆ ಕೊಟ್ಟಿರುವ ಗಣಕೀಯ ವಿಳಾಸಕ್ಕೆ ತಪ್ಪದೇ ತಿಳಿಸಬೇಕು. ಆಪತ್ಕಾಲದಲ್ಲಿ ಚಹಾ ದೊರಕದಿದ್ದರೆ ತಾವು ತಮಗೆ ಬೇಕಾದ ಚಹಾವನ್ನು ಮಾಡಿ ಕುಡಿಯಬಹುದು ಮತ್ತು ಆ ಬಗೆಗಿನ ಲೇಖನಗಳನ್ನು ಪ್ರಕಟಿಸಲು ಅವಶ್ಯವಾಗಿ ತಿಳಿಸಿರಿ. ಇತರ ಸಾಧಕರಿಗೂ ಅದರ ಲಾಭವಾಗುವುದು. – ಸಂಕಲನಕಾರರು

ವಿ-ಅಂಚೆ ವಿಳಾಸ : `[email protected]