ಭಗವಂತನ ದರ್ಶನ ಪಡೆಯಲು ಸಾಧನಾರೂಪಿ ತಪಸ್ಸು ಮಾಡಿರಿ !- ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಪೊಂಡ (ಗೋವಾ)ದ ಸಾಧಕಿ ಶ್ರೀಮತಿ ಭಾರತಿ ಪಾಲನ್ ಇವರು ೬ ನವೆಂಬರ್ ೨೦೨೨ ರಂದು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡರು. ಈ ಸತ್ಕಾರ ಸಮಾರಂಭದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ.

ಸನಾತನದ ಆಶ್ರಮಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವಿದೆ. ಇಂತಹ ಚೈತನ್ಯಮಯ ಕ್ಷೇತ್ರದಲ್ಲಿ ಪರಿಶ್ರಮವಹಿಸಿ ಸಾಧನೆಯ ಪ್ರಯತ್ನವನ್ನು ಮಾಡಿದರೆ, ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಯಾವ ಯಾವ ಸ್ಥಳಗಳಲ್ಲಿ ಸಾಧಕರು ಸಾಧನೆಯ ಪ್ರಯತ್ನವನ್ನು ಮಾಡುತ್ತಿರುವರೋ, ಅಂತಹ ಭೂಮಂಡಲದಲ್ಲಿನ ಪ್ರತಿಯೊಂದು ಸ್ಥಳದಲ್ಲಿ ಗುರುದೇವರ ಚೈತನ್ಯದ ಸ್ರೋತವು ಕಾರ್ಯನಿರತವಾಗಿದೆ.

ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಳ್ಳುವುದು, ಸಾಧನೆಯಲ್ಲಿನ ದೊಡ್ಡ ಹಂತವಾಗಿದೆ. ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟಾದ ನಂತರ ಮನಸ್ಸು ಸ್ಥಿರವಾಗಿ ಸಾಧಕರ ಮನೋಲಯವಾಗಲು ಆರಂಭವಾಗುತ್ತದೆ. ಸಾಧಕರು ದೇವರ ಹೆಚ್ಚು ಸಮೀಪ ಹೋಗುತ್ತಾರೆ. ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ಸಾಧಕರಿಂದ ಕಲಿತು ಇತರ ಸಾಧಕರೂ ಸಾಧನೆಯ ಪ್ರಯತ್ನಗಳ ವೇಗವನ್ನು ಹೆಚ್ಚಿಸಬೇಕು.

೧. ಅಲ್ಪಸಂತುಷ್ಟರಾಗಿರದೇ ಹೆಚ್ಚೆಚ್ಚು ಪ್ರಯತ್ನಿಸಿ !

ಸಾಧನೆಯನ್ನು ಮಾಡುತ್ತಿರುವಾಗ `ನಮ್ಮ ಮನಸ್ಸು ಮಾಯೆಯಲ್ಲಿ ಸಿಲುಕಿದೆಯೇ ?’, `ಸ್ವಭಾವದೋಷ ಮತ್ತು ಅಹಂನಲ್ಲಿ ಸಿಲುಕಿದೆಯೇ ?’, `ಯಾವುದೇ ಸಾಧಕನೊಂದಿಗೆ ಏನಾದರೂ ಪ್ರಸಂಗ ಘಟಿಸಿದ್ದರೆ ಆ ಪ್ರಸಂಗದಲ್ಲಿ, ಪರಿಸ್ಥಿತಿಯಲ್ಲಿ ಸಿಲುಕಿದ್ದೀರಾ ?’ ಎಂಬ ಚಿಂತನೆ ಮಾಡಿರಿ. ಪ್ರತಿ ಬಾರಿ ನಾವು ಯಾವ ಹಂತದಲ್ಲಿ ಸಿಲುಕಿದ್ದೇವೆ, ಎಂದು ಹುಡುಕಿ ಪ್ರಯತ್ನಿಸಿ. ಇತರೆಡೆ ಸಿಲುಕಿದ ಮನಸ್ಸನ್ನು ದೇವರೆಡೆಗೆ ಹರಿಸೋಣ. `ನಾನು ಪರಿಶ್ರಮಪಟ್ಟು ಪ್ರಯತ್ನಿಸುತ್ತೇನೆ’, ಎಂದು ಸ್ವತಃ ನಿಶ್ಚಯಿಸದೇ `ನಾನು ಸಾಧನೆಯಲ್ಲಿ ಪರಿಶ್ರಮಪಟ್ಟು ಪ್ರಯತ್ನಿಸುತ್ತಿದ್ದೇನೆ’, ಎಂದು ಈಶ್ವರನಿಗೆ ಅನಿಸುತ್ತಿದೆಯೇ ಎಂಬುದರ ಚಿಂತನೆಯನ್ನು ಮಾಡಿರಿ. ಸಾಧನೆಯಲ್ಲಿ ಅಲ್ಪಸಂತುಷ್ಟರಾಗಿರದೇ ಹೆಚ್ಚೆಚ್ಚು ಪ್ರಯತ್ನಿಸೋಣ.

೨. ಯಾರು ತಳಮಳದಿಂದ ಪ್ರಯತ್ನಿಸುವರೋ,ಅವರಿಗೆ ಈಶ್ವರನು ಸಹಾಯ ಮಾಡುತ್ತಾನೆ !

ಹಿಂದಿನ ಕಾಲದಲ್ಲಿ ಸಂತರು ಬಹಳ ಯಾತನೆಗಳನ್ನು ಸಹಿಸಿ ಘೋರ ತಪಸ್ಸು ಮಾಡುತ್ತಿದ್ದರು. ಅನಂತರ ಅವರಿಗೆ ಭಗವಂತನ ದರ್ಶನವಾಗುತ್ತಿತ್ತು. ದೇವರು ಸಹಜವಾಗಿ ಭೇಟಿಯಾಗುವುದಿಲ್ಲ. ಸಂತರAತೆ ನಾವು ಸಹ ಯಾವುದೇ ರಿಯಾಯಿತಿ ಪಡೆಯದೇ ಸಾಧನಾ ರೂಪಿ ತಪಸ್ಸನ್ನು ಮಾಡೋಣ. `ಸೇವೆಯನ್ನು ಮಾಡುತ್ತಿರುವಾಗ ಕೃತಿಗೆ ಭಾವದ ಜೊತೆಯನ್ನು ನೀಡಿದ್ದೀರಾ ?’, `ಭಾವದ ಸ್ಥಿತಿಯನ್ನು ಎಷ್ಟು ಸಮಯ ಅನುಭವಿಸುತ್ತೀರಿ ?’, ಎಂಬ ಬಗ್ಗೆ ಪ್ರತಿಯೊಬ್ಬರು ನಡು ನಡುವೆ ವರದಿ ತೆಗೆದುಕೊಳ್ಳೋಣ. `ದೇವರು ಹಿಂದೂ ರಾಷ್ಟçವನ್ನು ನೀಡಲು ತಯಾರಿದ್ದಾನೆ; ಆದರೆ ನಾವು ಅದಕ್ಕೆ ಪಾತ್ರರಾಗಿದ್ದೇವಾ ?’ ಎಂಬ ಬಗ್ಗೆ ಸಾಧಕರು ಚಿಂತನೆ ಮಾಡ ಬೇಕು.

ಯಾರು ತಳಮಳದಿಂದ ಪ್ರಯತ್ನಿಸುವರೋ, ಅವರಿಗೆ ಈಶ್ವರನು ಸಹಾಯ ಮಾಡುತ್ತಾನೆ. ತಳಮಳಕ್ಕೆ ಸಾಧನೆಯಲ್ಲಿ ಶೇ. ೮೦ ರಷ್ಟು ಮಹತ್ವವಿದೆ. ತಳಮಳವಿಲ್ಲದಿದ್ದರೆ, ಈಶ್ವರನ ಸಹಾಯವನ್ನೇ ಗ್ರಹಣ ಮಾಡಲು ಬರುವುದಿಲ್ಲ. ಸಾಧನೆಯಲ್ಲಿ ತಳಮಳದ ಮಹತ್ವವನ್ನು ತಿಳಿದು ಪರಿಶ್ರಮವಹಿಸಿ ಪ್ರಯತ್ನಿಸಿ.

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬೋಧನೆಗನುಸಾರ ಅಂತಃಕರಣದಲ್ಲಿ ಗುಣಗಳ ದೀಪಗಳನ್ನು ಬೆಳಗಿ ಆಂತರಿಕ ದೀಪೋತ್ಸವನ್ನು ಆಚರಿಸಿ !

ದೀಪಾವಳಿಯಲ್ಲಿ ನಾವು ಮನೆಯನ್ನು ಸ್ವಚ್ಛ ಮಾಡುತ್ತೇವೆ. ಆಕಾಶದೀಪವನ್ನು ಹಾಕುತ್ತೇವೆ ಮತ್ತು ಹಣತೆಗಳನ್ನು ಬೆಳಗಿಸಿ ದೀಪೋತ್ಸವನ್ನೂ ಆಚರಿಸುತ್ತೇವೆ. ಅದರಿಂದ ನಮಗೆ ಆನಂದ ಸಿಗುತ್ತದೆ. ಬಾಹ್ಯ ದೀಪಗಳಂತೆಯೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮ್ಮ ಅಂತಃಕರಣದಲ್ಲಿ ಗುಣಗಳ ದೀಪಗಳನ್ನು ಬೆಳಗಿಸಿ ಆಂತರಿಕ ದೀಪೋತ್ಸವವನ್ನು ಆಚರಿಸಲು ಕಲಿಸಿದ್ದಾರೆ. ಗುರುದೇವರು ನಮ್ಮೆಲ್ಲರಿಗಾಗಿ ಸರ್ವೋಚ್ಚ ಮೋಕ್ಷಪ್ರಾಪ್ತಿಯ ಸಂಕಲ್ಪವನ್ನು ಮಾಡಿದ್ದಾರೆ. ಆದುದರಿಂದ ನಾವೆಲ್ಲರೂ ಸಾಧನೆಯ ಪ್ರಯತ್ನಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ ಪ್ರಯತ್ನಿಸುವಲ್ಲಿನ ಆನಂದವನ್ನು ಪಡೆಯೋಣ !

೪. ಆಧ್ಯಾತ್ಮಿಕ ಉನ್ನತಿಯ ಮೂಲಕ ಸಾಧಕರೂಪಿ ಹಣತೆಗಳನ್ನು ಗುರುಚರಣಗಳಲ್ಲಿ ಪ್ರಜ್ವಲಿಸಿ !

ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಳ್ಳುವ ಮೂಲಕ ಒಂದು ಸಾಧಕರೂಪಿ ಹಣತೆಯು ಗುರುಗಳ ಚರಣಗಳಲ್ಲಿ ಪ್ರಜ್ವಲಿತವಾಗಿದೆ. ಸಾಧಕನು ಜನ್ಮ-ಮೃತ್ಯುವಿನ ಚಕ್ರಗಳಿಂದ ಬಿಡು ಗಡೆ ಯಾಗಿ ಭಗವಂತನ ಚರಣಗಳಲ್ಲಿ ಲೀನನಾಗುತ್ತಾನೆ, ಆಗ ಅವನು ಒಂದು ರೀತಿಯಲ್ಲಿ ಸಮಷ್ಟಿಗೆ ಭಗವಂತನ ಚೈತನ್ಯವನ್ನು ಪ್ರಕ್ಷೇಪಿಸುವ ಒಂದು ಮಾಧ್ಯಮವಾಗುತ್ತಾನೆ. ಇಂತಹ ಸಾಧಕರ ಸಹವಾಸದಲ್ಲಿ ನಮಗೆ ಅವರ ಗುಣಗಳನ್ನು ಕಲಿಯಲು ಬರುತ್ತದೆ, ಹಾಗೆಯೇ ಅವರಿಂದ ಸೂಕ್ಷ÷್ಮ ಸ್ತರದಲ್ಲಿ ಪ್ರಕ್ಷೇಪಿಸಲಾಗುವ ಚೈತನ್ಯದ ಲಾಭವೂ ಸಮಷ್ಟಿಗೆ ಆಗುತ್ತಿರುತ್ತದೆ. ಆಧ್ಯಾತ್ಮಿಕ ಉನ್ನತಿಯನ್ನು ಮಾಡಿ ಕೊಂಡ ಸಾಧಕರ ಅಸ್ತಿತ್ವದಿಂದ ವಾತಾವರಣದ ಶುದ್ಧಿಯೂ ಆಗುತ್ತದೆ.


ಸನಾತನದ ಸಾಧಕರು ಶ್ರೀವಿಷ್ಣುವಿನ ಪರಮಧಾಮವಾಗಿರುವ ವಿಷ್ಣು ಲೋಕದಲ್ಲಿಯೂ ಗುರುಕೃಪೆಯಿಂದ ಸ್ಥಾನವನ್ನು ಪ್ರಾಪ್ತಮಾಡಿಕೊಳ್ಳುವರು, ಎಂಬುದು ನಿಶ್ಚಿತ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ವೈಕುಂಠ ಚತುರ್ದಶಿಯ ದಿನ ಭಕ್ತರಿಗಾಗಿ ವೈಕುಂಠದ ಬಾಗಿಲು ತೆರೆದಿರುತ್ತದೆ. ವೈಕುಂಠ ಚತುದರ್ಶಿಯ ಹಿಂದಿನ ದಿನ ಸಾಯಂಕಾಲ ಶ್ರೀವಿಷ್ಣುಸ್ವರೂಪ ಗುರುದೇವರ ಕೃಪೆ ಯಿಂದ ಸನಾತನದ ಒಂದು ಜೀವವು ಜನ್ಮ ಮೃತ್ಯುವಿನ ಚಕ್ರ ದಿಂದ ಮುಕ್ತವಾಗುವುದು, ಎಂದರೆ ಪ್ರತ್ಯಕ್ಷದಲ್ಲಿ ಶ್ರೀವಿಷ್ಣುವು ವೈಕುಂಠದ ಬಾಗಿಲನ್ನು ಸಾಧಕರಿಗಾಗಿ ತೆರೆದೇ ಇದ್ದಾನೆ. ನಮ್ಮ ಭಕ್ತಿಯನ್ನು ಹೆಚ್ಚಿಸಿ ಆ ದ್ವಾರದಿಂದ ನಾವು ಪ್ರವೇಶ ಮಾಡುವುದು ಬಾಕಿ ಇದೆಯೆಂದು ಭಗವಂತನು ಅನುಭವ ಮಾಡಿಸಿ ದ್ದಾನೆ. ನಾವೆಲ್ಲರೂ ನಮ್ಮ ಆಂತರ್ಯದಲ್ಲಿನ ಸಾಧನೆಯ, ಶ್ರೀವಿಷ್ಣುಪ್ರಾಪ್ತಿಯ ತಳಮಳವನ್ನು ಹೆಚ್ಚಿಸೋಣ, ಭಕ್ತಿ ಯನ್ನು ಹೆಚ್ಚಿಸೋಣ ಮತ್ತು ಮೋಹಮಾಯೆಯ ಎಲ್ಲ ಬಂಧನಗಳನ್ನು ಕಡಿದುಹಾಕಿ ವಿಷ್ಣುದ್ವಾರದಿಂದ ಪ್ರವೇಶಿಸೋಣ !

ಶ್ರೀವಿಷ್ಣುಸ್ವರೂಪ ಗುರುದೇವರು ಸಾಧನೆಯನ್ನು ಮಾಡಲು ಇಚ್ಛಿಸುವ, ಈಶ್ವರಪ್ರಾಪ್ತಿಯ ತಳಮಳವಿರುವ ಜೀವಗಳಿಗಾಗಿ ಈ ಭೂಲೋಕದ (ಸನಾತನದ ರಾಮನಾಥಿ ಆಶ್ರಮದ) ದ್ವಾರಗಳನ್ನು ೩೬೫ ದಿನಗಳೂ ತೆರೆದಿಟ್ಟಿದ್ದಾನೆ. ಇಲ್ಲಿ ಪ್ರವೇಶಿಸುವ ಪ್ರತಿಯೊಂದು ಜೀವವು ಮುಂದೆ ಶ್ರೀವಿಷ್ಣು ವಿನ ಪರಮಧಾಮವಾಗಿರುವ ವಿಷ್ಣುಲೋಕದಲ್ಲಿಯೂ ಗುರು ಕೃಪೆಯಿಂದ ಸ್ಥಾನ ಪ್ರಾಪ್ತಮಾಡಿಕೊಳ್ಳುವುದು ನಿಶ್ಚಿತ !

ತಮ್ಮ ಮನಸ್ಸಿನಲ್ಲಿ ಯಾವ ತೀವ್ರ ಅಯೋಗ್ಯ ವಿಚಾರ ಪ್ರಕ್ರಿಯೆ ನಡೆದಿದೆಯೋ ಅದೇ ತೀವ್ರತೆಯಿಂದ ಅದನ್ನು ಮಂಡಿಸಿ ಜವಾಬ್ದಾರ ಸಾಧಕರ ಮಾರ್ಗದರ್ಶನವನ್ನು ಪಡೆದರೆ ಬೇಗನೆ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ ! : ಒಂದು ಸತ್ಸಂಗದಲ್ಲಿ ಓರ್ವ ಸಾಧಕಿಯು ತನ್ನ ಮನಸ್ಸಿನಲ್ಲಿನ ಅಯೋಗ್ಯ ಪ್ರಕ್ರಿಯೆಯನ್ನು ಅದೇ ತೀವ್ರತೆಯಿಂದ ಮಂಡಿಸಿದಳು. ಆ ಬಗ್ಗೆ ಅವರಿಗೆ ಮಾರ್ಗದರ್ಶನ ಮಾಡಲಾಯಿತು. ಅನಂತರ ಸ್ವಲ್ಪ ಕಾಲಾವಧಿಯ ನಂತರ ನಡೆದ ಎರಡನೇಯ ಸತ್ಸಂಗದಲ್ಲಿ ಅವರ ಸಹಸಾಧಕರು ಸಾಧಕಿಯ ಮಾತಿನÀಲ್ಲಿ ಬದಲಾವಣೆ ಯಾದ ಬಗ್ಗೆ ತಾವಾಗಿಯೇ ಹೇಳಿದರು. ಆರಂಭದಲ್ಲಿ ಸಾಧಕಿಯ ಮನಸ್ಸಿನಲ್ಲಿನ ಅಡಚಣೆಗಳು ಬಹಳ ತೀವ್ರವಾಗಿದ್ದರೂ ಅವರು ಮನಮುಕ್ತವಾಗಿ ಅದನ್ನು ಅದೇ ತೀವ್ರತೆಯಿಂದ ಮಂಡಿಸಿದುದರಿಂದ ಬದಲಾವಣೆಯಾಗುವ ಪ್ರಕ್ರಿಯೆಯು ಸಹ ವೇಗವಾಗಿ ಆರಂಭವಾಯಿತು.

ಈ ಉದಾಹರಣೆಯಿಂದ, ಜವಾಬ್ದಾರ ಸಾಧಕರಿಂದ ವ್ಯಷ್ಟಿ ಸಾಧನೆಯ ಬಗ್ಗೆ ಮಾರ್ಗದರ್ಶನ ಪಡೆಯುವಾಗ, ವರದಿ ಸತ್ಸಂಗದಲ್ಲಿ ಸಾಧನೆಯಲ್ಲಿನ ದೋಷ-ಅಹಂನ ಸ್ತರದ ಅಡಚಣೆಗಳ ಬಗ್ಗೆ ಹೇಳುವಾಗ ಅವು ಮನಸ್ಸಿನಲ್ಲಿ ಯಾವ ತೀವ್ರಸ್ವರೂಪದಲ್ಲಿವೆಯೋ, ಅದೇ ತೀವ್ರತೆಯಿಂದ ಹೇಳಿದರೆ, ಜವಾಬ್ದಾರ ಸಾಧಕರಿಗೆ ನಮ್ಮ ದೋಷಗಳ ತೀವ್ರತೆ ತಿಳಿದು ನಿಖರವಾಗಿ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಆದುದರಿಂದ ದೋಷ-ಅಹಂನ ಲಕ್ಷಣ ಗಳಲ್ಲಿ ಬದಲಾವಣೆಯಾಗುವ ಪ್ರಕ್ರಿಯೆ ಸಹ ಶೀಘ್ರ ಗತಿಯಿಂದ ಆಗುತ್ತದೆ. ಆದುದರಿಂದ ದೋಷಗಳ ತೀವ್ರತೆಯು ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ. ನಾವು ನಮ್ಮ ಮನಸ್ಸಿನ ಅಯೋಗ್ಯ ವಿಚಾರಪ್ರಕ್ರಿಯೆಯನ್ನು ಹೇಳುವಾಗ ಏನು ಹೇಳಲಿ, ಎಷ್ಟು ಹೇಳಲಿ ಎಂದು ನಮ್ಮನ್ನು ಸಂಭಾಳಿಸಿಕೊಂಡ ಹೇಳಿದರೆ ಬದಲಾವಣೆಯಾಗುವ ವೇಗವು ಸಹ ಕಡಿಮೆಯೇ ಇರುತ್ತದೆ’ ಎಂದು ಗಮನಕ್ಕೆ ಬರುತ್ತದೆ. (೬.೧೧.೨೦೨೨)