ಪಾಕಿಸ್ತಾನದ ‘ಆಪ್‌’ ಮತ್ತು ‘ಸಂಕೇತಸ್ಥಳ’ಗಳ ಮೇಲೆ ಭಾರತದಿಂದ ನಿರ್ಬಂಧ

ನವದೆಹಲಿ – ಕೇಂದ್ರೀಯ ಮಾಹಿತಿ ಮತ್ತು ಪ್ರಸಾರಣ ಮಂತ್ರಾಲಯವು ಪಾಕಿಸ್ತಾನದ ‘Vidly TV’ಯ ಸಂಕೇತಸ್ಥಳ, ೨ ಮೊಬೈಲ ಆಪ್‌, ೪ ಸಾಮಾಜಿಕ ಮಾಧ್ಯಮಗಳು ಹಾಗೂ ೧ ಸ್ಮಾರ್ಟ ಟಿವಿ ಆಪ್‌ ಮೇಲೆ ನಿರ್ಬಂಧ ಹೇರಿದೆ. ಈ ಕಾರ್ಯಾಚರಣೆಯನ್ನು ಇತ್ತೀಚೆಗೆ ಪ್ರದರ್ಶಿತವಾದ ಪಾಕಿಸ್ತಾನಿ ವೆಬ್‌ ಸೀರಿಸ ‘ಸೇವಕ : ದ ಕನ್ಫೆಶನ’ನಿಂದಾಗಿ ಮಾಡಲಾಗಿದೆ. ಈ ವೆಬ್‌ ಸೀರಿಸನಲ್ಲಿ ಭಾರತ ಮತ್ತು ಹಿಂದೂಗಳ ಪ್ರತಿಮೆಯನ್ನು ಮಲೀನಗೊಳಿಸುವ ಪ್ರಯತ್ನ ನಡೆದಿದೆ.