ಸಾಧಕರೆ, ‘ಆಧ್ಯಾತ್ಮಿಕ ತೊಂದರೆಗಳಿಂದಲ್ಲ, ನಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂ ಇವುಗಳಿಂದ ತಪ್ಪುಗಳಾಗುತ್ತವೆ’, ಎಂಬುದನ್ನು ಗಮನದಲ್ಲಿಟ್ಟು ಅವುಗಳ ನಿರ್ಮೂಲನೆಗಾಗಿ ಪ್ರಯತ್ನಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಅನೇಕ ಸಾಧಕರಿಗೆ ತೀವ್ರ ಅಥವಾ ಮಧ್ಯಮ ಆಧ್ಯಾತ್ಮಿಕ ತೊಂದರೆ ಇದೆ. ವ್ಯಷ್ಟಿ ಅಥವಾ ಸಮಷ್ಟಿ ಸಾಧನೆಯಲ್ಲಿ ತಪ್ಪುಗಳಾದರೆ  ಕೆಲವು ಸಾಧಕರ ಮನಸ್ಸಿನಲ್ಲಿ ‘ನನಗಿರುವ ಆಧ್ಯಾತ್ಮಿಕ ತೊಂದರೆಯಿಂದ ಈ ತಪ್ಪಾಗಿದೆ’, ಎಂಬ ವಿಚಾರವಿರುವುದು ಗಮನಕ್ಕೆ ಬಂದಿದೆ. ನಿಜವೆಂದರೆ ಯಾವುದೇ ತಪ್ಪು ಆಧ್ಯಾತ್ಮಿಕ ತೊಂದರೆಯಿಂದಲ್ಲ, ಸಾಧಕರಲ್ಲಿನ ಸ್ವಭಾವದೋಷ ಮತ್ತು ಅಹಂಗಳಿಂದಾಗುತ್ತದೆ. ಕೆಟ್ಟ ಶಕ್ತಿಗಳು ಆಧ್ಯಾತ್ಮಿಕ ತೊಂದರೆಯನ್ನು ದುರುಪಯೋಗಿಸಿ ಸಾಧಕರಲ್ಲಿ ಮೂಲತಃ ಇರುವ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಹೆಚ್ಚಿಸುತ್ತವೆ. ಆಗಿರುವ ತಪ್ಪಿನ ಬಗ್ಗೆ ಅಂತರ್ಮುಖತೆಯಿಂದ ಚಿಂತನೆ ಮಾಡದೆ ಆಧ್ಯಾತ್ಮಿಕ ತೊಂದರೆಯ ಕಾರಣ ಹೇಳುವುದರಿಂದ ಸಾಧಕರ ಸಾಧನೆಯಲ್ಲಿ ಹಾನಿಯಾಗುತ್ತದೆ.

ಸಾಧಕರೆ, ಏನೇ ತಪ್ಪಾದರೂ ಅದರ ಹಿಂದಿನ ಮೂಲ ಸ್ವಭಾವದೋಷ ಅಥವಾ ಅಹಂನ ಅಂಶಗಳ ಬಗ್ಗೆ ಚಿಂತನೆ ಮಾಡಬೇಕು ಮತ್ತು ಅದರ ನಿರ್ಮೂಲನೆಗಾಗಿ ತಳಮಳದಿಂದ ಪ್ರಯತ್ನಿಸಬೇಕು.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ರಾಮನಾಥಿ, ಗೋವಾ. (೧೦.೧೦.೨೦೨೨)

* ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದ’ದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.