ಇಂತಹ ವಿಶ್ವವಿದ್ಯಾಲಯಗಳನ್ನು ನಿಷೇಧಿಸಬೇಕು!

ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ

೧. ಜಿಹಾದಿ ಭಯೋತ್ಪಾದನೆಯು ಇಸ್ಲಾಂ ಅನ್ನು ಬಲಪಡಿಸುತ್ತದೆಯೇ?

ಕರ್ಣಾವತಿಯ (ಗುಜರಾತ) ಜಾಮಾ ಮಸೀದಿಯ ಇಮಾಮ್ ಶಬ್ಬೀರ್ ಅಹ್ಮದ್ ಸಿದ್ದಿಕಿ ಇವರು, ಚುನಾವಣೆಯಲ್ಲಿ ಮಹಿಳೆಯರನ್ನು ನಾಮನಿರ್ದೇಶನ ಮಾಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಮತ್ತು ಅವರು ಇಸ್ಲಾಂ ಧರ್ಮವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಹೇಳಿದರು.

೨. ಈಗ ಜಾತ್ಯತೀತರು ಏಕೆ ಮೌನವಾಗಿದ್ದಾರೆ?

ಮಸೀದಿಗಳಲ್ಲಿ ಹೋಗುವ ಮಹಿಳೆಯರು ಇಮಾಮ್‌ರಿಂದ ಕಿರುಕುಳಕ್ಕೊಳಗಾಗುತ್ತಾರೆ ಅಥವಾ ಅವರ ಅನುಯಾಯಿಗಳು ಅತ್ಯಾಚಾರಕ್ಕೆ ಪ್ರಯತ್ನಿಸುತ್ತಾರೆ. ಹಾಗಾಗಿ ಮುಸ್ಲಿಂ ಮಹಿಳೆಯರು ಮಸೀದಿಯಲ್ಲಿ ಹೋಗುವುದಿಲ್ಲ ಎಂದು ರಾಷ್ಟ್ರೀಯ ಮಂಚ್ ನ ಜಿಲ್ಲಾ ಸಂಯೋಜಕ ಮತ್ತು ದೇವಬಂದ್‌ನ ಮೌಲಾನಾ ರಾವ್ ಮುಷರಫ್ ಹೇಳಿಕೆ ನೀಡಿದ್ದಾರೆ.

೩. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಅವಾಮಿ ಲೀಗ್‌ನ ಮೂವರು ನಾಯಕರು ಹಿಂದೂ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರಿಗಳು ಈ ಕೃತ್ಯವನ್ನು ಚಿತ್ರೀಕರಿಸಿ ಆಕೆಯ ಹಿರಿಯ ಮಗನಿಗೆ ಕಳುಹಿಸಿದ್ದಾರೆ ಮತ್ತು ದೂರು ನೀಡಿದರೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

೪. ಇಂತಹ ವಿಶ್ವವಿದ್ಯಾಲಯಗಳನ್ನು ನಿಷೇಧಿಸಬೇಕು!

ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಮುಸ್ಲಿಂ ವಿದ್ಯಾರ್ಥಿಗಳು ಡಿಸೆಂಬರ್ ೬ ರಂದು ಬಾಬರಿ ಮಸೀದಿ ಧ್ವಂಸವನ್ನು ಕರಾಳ ದಿನ ಎಂದು ಆಚರಿಸಿದರು. ಈ ವೇಳೆ ‘ಈ ಭೂಮಿ ಅಲ್ಲಾಹನಿಗೆ ಸೇರಿದ್ದು, ಇಲ್ಲಿಂದ ಎಲ್ಲ ವಿಗ್ರಹಗಳನ್ನು ತೆಗೆಯಲಾಗುವುದು’ ಎಂಬ ಮಾತುಗಳಲ್ಲಿ ಬೆದರಿಕೆ ಹಾಕಿದ್ದಾರೆ.

೫. ಭಾರತೀಯ ಭದ್ರತಾ ವ್ಯವಸ್ಥೆ ಏನು ಮಾಡುತ್ತಿದೆ ?

ಏಪ್ರಿಲ್ ೨೦೨೨ ರಲ್ಲಿ, ವೀಸಾ ಅವಧಿ ಮುಗಿದ ನಂತರ ತಮ್ಮ ದೇಶಕ್ಕೆ ಹಿಂತಿರುಗದೆ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ನಾಗರಿಕರ ಸಂಖ್ಯೆ ೪ ಲಕ್ಷ ೨೧ ಸಾವಿರದ ೨೫೫ ಆಗಿತ್ತು.

೬. ತೆಲಂಗಾಣ ಸರಕಾರದ ದಬ್ಬಾಳಿಕೆಯನ್ನು ತಿಳಿಯಿರಿ !

ಅನುಮತಿ ನಿರಾಕರಣೆಯಿಂದಾಗಿ ಭಾಗ್ಯನಗರದಲ್ಲಿ (ತೆಲಂಗಾಣ) ಡಿಸೆಂಬರ್ ೧೧ ರಂದು ನಿಗದಿಯಾಗಿದ್ದ ‘ಹಲಾಲ್ ಜಿಹಾದ್’ ಗ್ರಂಥದ ತೆಲುಗು ಆವೃತ್ತಿಯ ಬಿಡುಗಡೆಯನ್ನು ರದ್ದುಗೊಳಿಸಲಾಗಿದೆ. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಈ ಗ್ರಂಥವನ್ನು ಬರೆದಿದ್ದಾರೆ.

೭. ತೃಣಮೂಲ ಕಾಂಗ್ರೆಸ್ ಅನ್ನು ಏಕೆ ನಿಷೇಧಿಸುವುದಿಲ್ಲ ?

ಮಿದನಾಪುರದಲ್ಲಿ (ಬಂಗಾಲ) ತೃಣಮೂಲ ಕಾಂಗ್ರೆಸ್‌ನ ಸ್ಥಳೀಯ ಪದಾಧಿಕಾರಿ ರಾಜಕುಮಾರ್ ಮನ್ನಾ ಅವರ ಮನೆಯಲ್ಲಿ ದೇಶಿ ಬಾಂಬ್ ತಯಾರಿಸುವಾಗ ಸ್ಫೋಟ ಸಂಭವಿಸಿ ಪಕ್ಷದ ಮೂವರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ.