ಕಾಶ್ಮೀರಿ ಹಿಂದೂಗಳ ನರಸಂಹಾರದ ವಿಚಾರಣೆ ಇಲ್ಲ !

ಸರ್ವೋಚ್ಚ ನ್ಯಾಯಾಲಯವು ಪುನರ್ವಿಚಾರ ಮನವಿಯನ್ನು ತಳ್ಳಿ ಹಾಕಿದೆ !

ನವದೆಹಲಿ – ಕಾಶ್ಮೀರ ಕಣಿವೆಯಲ್ಲಿ ೧೯೯೦ ರ ದಶಕದಲ್ಲಿ ನಡೆದಿರುವ ಹಿಂದೂಗಳ ಭಯಾನಕ ನರಸಂಹಾರದ ಬಗ್ಗೆ ಕೇಂದ್ರ ಅನ್ವೇಷಣಾ ಇಲಾಖೆ (ಸಿಬಿಐ) ಅಥವಾ ಕೇಂದ್ರೀಯ ಅನ್ವೇಷಣಾ ಇಲಾಖೆ (ಎನ್‌ಐಎ) ಇವುಗಳಿಂದ ವಿಚಾರಣೆಗೆ ಒತ್ತಾಯಿಸಿರುವ ಪುನರ್ವಿಚಾರ ಮನವಿ ಸರ್ವೋಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ. ರೂಟ್ಸ್ ಇನ್ ಕಾಶ್ಮೀರ್ ಈ ಸರಕಾರೇತರ ಸಂಸ್ಥೆಯಿಂದ ಪುನರ್ವಿಚಾರ ಮನವಿಯನ್ನು ದಾಖಲಿಸಲಾಗಿತ್ತು.

ಸರ್ವೋಚ್ಚ ನ್ಯಾಯಾಲಯವು ಜುಲೈ ೨೪.೨೦೧೭ ರಲ್ಲಿ ಈ ರೀತಿಯ ಮನವಿಯನ್ನು ತಳ್ಳಿ ಹಾಕಿತ್ತು. ಇಷ್ಟು ವರ್ಷಗಳ ನಂತರ ನರಸಂಹಾರದ ಸಾಕ್ಷಿಗಳನ್ನು ಒಗ್ಗೂಡಿಸುವುದು ಕಠಿಣವಾಗಿದೆ, ಎಂದು ಹೇಳುತ್ತಾ ನ್ಯಾಯಾಲಯವು ಈ ಮನವಿ ತಳ್ಳಿಹಾಕಿತ್ತು. ಈ ನಿರ್ಣಯದ ಬಗ್ಗೆ ಪುನರ್ವಿಚಾರ ಮಾಡುವುದಕ್ಕಾಗಿ ಅಕ್ಟೋಬರ್ ೨೦೨೨ ರಲ್ಲಿ ಮತ್ತೊಮ್ಮೆ ಮನವಿ ದಾಖಲಿಸ ಲಾಗಿತ್ತು.

೧. ಈ ಸಮಯದಲ್ಲಿ ನ್ಯಾಯಾಲಯವು, ಕಾಶ್ಮೀರಿ ಹಿಂದೂಗಳ ಸಂದರ್ಭದಲ್ಲಿ ಏನೆಲ್ಲಾ ನಡೆದಿದೆ ಅದು ವಿಷಾದನೀಯವಾಗಿದೆ. ಆದರೆ ೨೭ ವರ್ಷಗಳ ನಂತರ ಈ ವಿಷಯವಾಗಿ ಮನವಿ ದಾಖಲಿಸಿದರೆ ಯಾವುದೇ ವಿಶೇಷ ಲಾಭ ಆಗುವುದಿಲ್ಲ. ಆದ್ದರಿಂದ ವಿಚಾರಣೆಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.

೨. ೧೯೮೯ ಮತ್ತು ೧೯೯೮ ಈ ಕಾಲಾವಧಿಯಲ್ಲಿ ೭೦೦ ಕ್ಕಿಂತಲೂ ಹೆಚ್ಚು ಕಾಶ್ಮೀರಿ ಪಂಡಿತರ ಹತ್ಯೆ ನಡೆಸಲಾಗಿದೆ. ಅದರಲ್ಲಿನ ೨೦೦ ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ದೂರು ದಾಖಲಿಸಲಾಗಿದೆ. ಆದರೆ ಒಂದೇ ಒಂದು ಪ್ರಕರಣದಲ್ಲಿ ಆರೋಪ ಪತ್ರ ದಾಖಲಿಸಲಾಗಿಲ್ಲ.

ಮನವಿಕರ್ತರು ದೆಹಲಿಯಲ್ಲಿನ ಸಿಕ್ಖ್ ವಿರೋಧಿ ದಂಗೆಯ ಬಗ್ಗೆ ಹೊಸದಾಗಿ ವಿಚಾರಣೆ ನಡೆಸುತ್ತಿರುವುದರ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ಈ ಪುನರ್ವಿಚಾರ ಮನವಿ ದಾಖಲಿಸುವಾಗ ರೂಟ್ಸ್ ಇನ್ ಕಾಶ್ಮೀರ್‌ವು ಮುಂದಿನಂತೆ ಹೇಳಿದೆ, ವಿಳಂಬವಾಗಿರುವ ಕಾರಣ ಹೇಳುತ್ತಾ ಮನವಿ ತಿರಸ್ಕರಿಸುವುದು ಯೋಗ್ಯವಲ್ಲ. ದೆಹಲಿಯಲ್ಲಿನ ಸಿಕ್ಖ್ ವಿರೋಧಿ ದಂಗೆಯ ವಿಚಾರಣೆ ಹೊಸದಾಗಿ ಈಗ ನಡೆಸಲಾಗುತ್ತಿದೆ. ಮಾನವೀಯತೆ ವಿರುದ್ಧದ ಅಪರಾಧಗಳು ಮತ್ತು ನರಸಂಹಾರ ಈ ರೀತಿಯ ಘಟನೆಗಳ ವಿಚಾರಣೆಗೆ ಸಮಯಮಿತಿ ಅನ್ವಯಿಸುವುದಿಲ್ಲ.