ಪಾಕಿಸ್ತಾನದಲ್ಲಿನ ವಿವಾದಗ್ರಸ್ತ ಮೌಲವಿ ಮಿಯಾ ಅಬ್ದುಲ್ ಇವನ ಮೇಲೆ ಬ್ರಿಟಿಷಿ ಸರಕಾರ ನಿಷೇಧ ಹೇರಿದೆ

ಅಪ್ರಾಪ್ತ ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರಗೊಳಿಸಿ ವಿವಾಹವಾದ ಪ್ರಕರಣ !

(ಮೌಲವಿ ಎಂದರೆ ಇಸ್ಲಾಮಿನ ಧಾರ್ಮಿಕ ನಾಯಕ)

ಲಂಡನ – ಪಾಕಿಸ್ತಾನದಲ್ಲಿನ ಸಿಂಧಪ್ರಾಂತದಲ್ಲಿನ ವಿವಾದಗ್ರಸ್ತ ಮೌಲವಿ ಮಿಯಾ ಅಬ್ದುಲ್ ಹಕ್ ಇವನನ್ನು ಬ್ರಿಟಿಷ್ ಸರಕಾರದ ನಿಷೇಧಿತ ಸೂಚಿಯಲ್ಲಿ ಸೇರಿಸಲಾಗಿದೆ. ಆದ್ದರಿಂದ ಮೂಲಭೂತ ಅಧಿಕಾರದ ಉಲ್ಲಂಘನೆ ಮಾಡುವವರಿಗೆ ಶಿಕ್ಷೆ ನೀಡಲಾಗುವ ೧೧ ದೇಶಗಳ ಸೂಚಿಯಲ್ಲಿ ಪಾಕಿಸ್ತಾನದ ಹೆಸರನ್ನು ಸೇರಿಸಲಾಗಿದೆ.

೧. ಡಾನ್ ಗೆ ನೀಡಿರುವ ಒಂದು ಸಂದರ್ಶನದಲ್ಲಿ ಬ್ರಿಟಿಷ್ ಉಚ್ಚ ಆಯುಕ್ತರು , ನಮ್ಮ ದೇಶವು ಧರ್ಮ ಅಥವಾ ಶ್ರದ್ದೆ ಈ ವಿಷಯದ ಬಗೆಗಿನ ಸ್ವಾತಂತ್ರ್ಯ ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಬ್ರಿಟನ್ ಜಗತ್ತಿನಾದ್ಯಂತ ಅಲ್ಪಸಂಖ್ಯಾತರ ಸಂರಕ್ಷಣೆ ಮಾಡುವುದಕ್ಕೆ ಕಟಿಬದ್ಧವಾಗಿದೆ.

೨. ಬ್ರಿಟನ್ ದೇಶವು ಜಗತ್ತಿನಾದ್ಯಂತ ವ್ಯಕ್ತಿಯ ಮೂಲಭೂತ ಅಧಿಕಾರವನ್ನು ದಮನಿಸುವ ಜನರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಸಿಂಧ ಪ್ರಾಂತದ ಭರಚುಂಡಿ ಶರೀಫ್ ದರ್ಗಾದ ಮೌಲವಿ ಮಿಯಾ ಅಬ್ದುಲ್ ಹಕ್ ಇವರ ಹೆಸರೂ ಇದೆ. ಅಪ್ರಾಪ್ತ ಮುಸಲ್ಮಾನೇತರ ಹುಡುಗಿಯನ್ನು ಬಲವಂತವಾಗಿ ಮತಾಂತರಗೊಳಿಸಿ ವಿವಾಹ ಮಾಡಿರುವ ಆರೋಪ ಅವನ ಮೇಲಿದೆ.

೩. ಬ್ರಿಟಿಷ ಸರಕಾರ ಯಾವ ಜನರನ್ನು ಈ ಪಟ್ಟಿಯಲ್ಲಿ ಸೇರಿಸುತ್ತದೆಯೋ ಅವರೊಂದಿಗೆ ಬ್ರಿಟನ್‌ನ ನಾಗರಿಕರು ಮತ್ತು ಕಂಪನಿಗಳು ಯಾವುದೇ ಆರ್ಥಿಕ ವ್ಯವಹಾರ ಅಥವಾ ವ್ಯಾಪಾರ ಮಾಡುವಂತಿಲ್ಲ. ಹಾಗೂ ಅವರಿಗೆ ಬ್ರಿಟನಿನಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ.

೪. ಮಿಯಾ ಮಿಟು ಈ ಹೆಸರಿನ ಕುಖ್ಯಾತ ಮೌಲವಿಯು ಫೆಬ್ರುವರಿ ೨೦೧೨ ರಲ್ಲಿ ರಿಂಕಲ್ ಕುಮಾರಿ ಈ ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರ ಗೊಳಿಸಿ ಮತ್ತು ನಂತರ ಆಕೆಯ ಫರಯಾಲ್ ಎಂದು ನಾಮಕರಣ ಮಾಡಿ ಆಕೆಯನ್ನು ನಾವಿದ ಶಾಹ ಇವನ ಜೊತೆಗೆ ಬಲವಂತವಾಗಿ ಮದುವೆ ಮಾಡಿಸಿದ ಬಗ್ಗೆ ಮೌಲವಿ ಮಿಯಾ ಮಿಟು ಚರ್ಚೆಯಲ್ಲಿದ್ದನು.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿನ ಹಿಂದೂಗಳ ಮಾನವಾಧಿಕಾರದ ದಮನಿಸುವವರ ವಿರುದ್ಧ ಬ್ರಿಟನ ಸರಕಾರ ಏನಾದರು ಕ್ರಮ ಕೈಗೊಳ್ಳುತ್ತಾ ಇದೆ. ಭಾರತ ಸರಕಾರ ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ನಿಷ್ಠೂರವಾದ ಕ್ರಮ ಯಾವಾಗ ಕೈಗೊಳ್ಳುವುದು ?