ಭಾರತವು ಮಹಾಶಕ್ತಿಯಾಗುವ ಸಿದ್ಧತೆಯಲ್ಲಿದೆ ! – ಅಮೇರಿಕಾ

ನವ ದೆಹಲಿ – ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವು ಅಮೇರಿಕಾಗೆ ಮಹತ್ತ್ವದ್ದಾಗಿದೆ. ಒಂದು ವಸ್ತುಸ್ಥಿತಿ ಹೇಗಿದೆ ಅಂದರೆ, ಕಳೆದ ೨೦ ವರ್ಷಗಳಲ್ಲಿ ಭಾರತ ಮತ್ತು ಅಮೇರಿಕಾದ ನಡುವೆ ಸ್ಥಾಪಿತವಾದ ಸಂಬಂಧವು ಇತರರಿಗಿಂತಲೂ ಭಿನ್ನವಾಗಿದೆ. ಅದು ವೇಗದಿಂದ ಭದ್ರವಾಗುತ್ತಿದೆ. ಭಾರತವು ಅಮೇರಿಕಾದ ಕೇವಲ ಸಹಕಾರಿಯಾಗಿರದೇ ಒಂದು ಸ್ವತಂತ್ರ, ಶಕ್ತಿಶಾಲೆ ದೇಶವಾಗುವ ಸಿದ್ಧತೆಯಲ್ಲಿದೆ. ಅಮೇರಿಕಾವು ‘ಭಾರತವು ಒಂದು ಮಹಾಶಕ್ತಿಯಾಗಿ ಮುಂದೆ ಬರಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದೆ. ‘ಐಸ್ಪನ ಸೆಕ್ಯೂರಿಟಿ ಫೊರಮ್’ ಆಯೋಜಿಸಿದ ಸಭೆಯಲ್ಲಿ ಭಾರತಕ್ಕೆ ಸಂಬಂಧಿಸಿದ ಚರ್ಚೆ ನಡೆಯಿತು. ಇದರಲ್ಲಿ ‘ವೈಟ್‌ ಹೌಸ್‌’ನ ಏಶಿಯಾ ಧೋರಣೆಗಳ ಸಮನ್ವಯಕರಾದ ಕೆಂಪಬೆಲ್‌ರವರು ಈ ಹೇಳಿಕೆ ನೀಡಿದ್ದಾರೆ.

‘ವೈಟ್‌ ಹೌಸ್‌’ನ ಏಶಿಯಾ ಧೋರಣೆಗಳ ಸಮನ್ವಯಕರಾದ ಕೆಂಪಬೆಲ್‌