ಶ್ರೀಕೃಷ್ಣಜನ್ಮಭೂಮಿಯ ಸಂದರ್ಭದಲ್ಲಿನ ಎಲ್ಲ ಪುರಾವೆಗಳು ಹಿಂದೂಗಳ ಪರವಾಗಿರುವುದರಿಂದ, ಇದರ ಬಗ್ಗೆ ಮಾಡಲಾದ ಅರ್ಜಿಯು ತುಂಬಾ ಪ್ರಭಾವಶಾಲಿಯಾಗಿದೆ. ಎಲ್ಲ ಹಿಂದೂಗಳಿಗೆ, ನನ್ನ ಕರೆ ಏನೆಂದರೆ, ಖಟ್ಲೆಯ ಮಾಧ್ಯಮದ ಈ ಯುದ್ಧವನ್ನು ಧರ್ಮಸಂಸ್ಥಾಪನೆಯ ದೇವತೆ ಭಗವಾನ ಶ್ರೀಕೃಷ್ಣನ ಜನ್ಮಭೂಮಿಗಾಗಿ ಮಾಡಲಿಕ್ಕಿದೆ. ಇದರಲ್ಲಿ ಯಾವುದೇ ರಾಜಕೀಯ ಭೂಮಿಕೆ ಇಲ್ಲ. ೧೦೦ ಕೋಟಿ ಹಿಂದೂಗಳು ಸಂಘಟಿತರಾಗಿ ಈ ಅರ್ಜಿಗೆ ಬೆಂಬಲವನ್ನು ನೀಡಬೇಕು. ಹಿಂದೂಗಳಿಗಾದ ಘೋರ ಅನ್ಯಾಯವನ್ನು ಸನ್ಮಾರ್ಗದಿಂದ ಹೋರಾಡಿ ಹಿಂದೂಗಳ ನ್ಯಾಯಯುತ ಹಕ್ಕನ್ನು ಪಡೆಯಲು ಈ ಹೋರಾಟವಿದೆ. ಶ್ರೀಕೃಷ್ಣಜನ್ಮಭೂಮಿಯನ್ನು ಮುಕ್ತಗೊಳಿಸಲು ಪ್ರತಿಯೊಬ್ಬ ಹಿಂದೂ ಅದರ ಇತಿಹಾಸವನ್ನು ತಿಳಿದುಕೊಂಡು ಧರ್ಮಕ್ಕಾಗಿ ಸನ್ಮಾರ್ಗದಿಂದ ಹೋರಾಡಬೇಕು, ಎಂದು ‘ಹಿಂದೂ ಫ್ರಂಟ್ ಫ್ವಾರ್ ಜಸ್ಟೀಸ್’ನ ಪದಾಧಿಕಾರಿ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಒಂದು ಕಾರ್ಯಕ್ರಮದಲ್ಲಿ ಹೇಳಿದರು. ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ರಾಮಜನ್ಮಭೂಮಿಯ ಸಂದರ್ಭದಲ್ಲೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದ್ದರು.
ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಮಂಡಿಸಿದ ಮಹತ್ವಪೂರ್ಣ ಅಂಶಗಳು
೧. ಶ್ರೀಕೃಷ್ಣಜನ್ಮಭೂಮಿಯ ಇತಿಹಾಸ
ನಾವು ಮಥುರೆಯ ಇತಿಹಾಸವನ್ನು ಓದಿದಾಗ ಗಮನಕ್ಕೆ ಬಂದ ಅಂಶವೆಂದರೆ, ಶ್ರೀಕೃಷ್ಣಜನ್ಮಭೂಮಿಯ ಪ್ರತೀಕವನ್ನು ಮೊಗಲ ಆಕ್ರಮಣಕಾರರು ಅನೇಕ ಬಾರಿ ಒಡೆದರು. ೧೬೧೮ ರಲ್ಲಿ ರಾಜಾ ವೀರಸಿಂಹ ಬುಂದೇಲಾ ಎಂಬವರು ೩೩ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಅದರ ಪುನರ್‌ನಿರ್ಮಾಣವನ್ನು ಮಾಡಿದ್ದರು. ೩೧ ಜುಲೈ ೧೬೫೮ ರಲ್ಲಿ ಔರಂಗಜೇಬನು ‘ಬಾದಶಾಹ’ ಆದ ನಂತರ ಅವನು ದೆಹಲಿ, ಮಥುರಾದಲ್ಲಿನ ಎಲ್ಲ ಪ್ರದೇಶಗಳನ್ನು ವಶಪಡಿಸಿಕೊಂಡನು. ೧೬೭೦ ರಲ್ಲಿ ಔರಂಗಜೇಬನು ಶ್ರೀಕೃಷ್ಣಜನ್ಮಭೂಮಿಯಲ್ಲಿನ ಮಂದಿರವನ್ನು ಒಡೆಯುವ ಆದೇಶವನ್ನು ನೀಡಿದನು. ಅವನ ಆದೇಶದಲ್ಲಿ ‘ಮಥುರೆ’ಗೆ ಹೋಗಿ ಅಲ್ಲಿನ ಮಂದಿರವನ್ನು ಒಡೆಯಿರಿ. ಆ ಮಂದಿರದಲ್ಲಿನ ಮೂರ್ತಿಯನ್ನು ಆಗ್ರಾದಲ್ಲಿನ ಜಹನಾರಾ ಮಸೀದಿಯಲ್ಲಿ ಹುಗಿಯಿರಿ ಎಂದು ಹೇಳಿದ್ದನು. ಈ ಆದೇಶವು ಪರ್ಶಿಯನ್ ಭಾಷೆಯಲ್ಲಿದ್ದು ಇತಿಹಾಸಕಾರ ಜದುನಾಥ ಸರಕಾರ ಇವರು ಅದನ್ನು ಭಾಷಾಂತರ ಮಾಡಿದ್ದಾರೆ.
ಈ ಆದೇಶವು ಬೀಕಾನೇರದ ಸಂಗ್ರಹಾಲಯದಲ್ಲಿ ಲಭ್ಯವಿದೆ. ಅನಂತರ ೫ ಎಪ್ರಿಲ್ ೧೭೭೦ ರಂದು ‘ಗೋವರ್ಧನ’ದಲ್ಲಿ ಯುದ್ಧವಾಯಿತು ಮತ್ತು ಅದರಲ್ಲಿ ಮರಾಠರು ಈ ಪ್ರದೇಶವನ್ನು ಗೆದ್ದುಕೊಂಡರು. ಆಗ ಮುಸಲ್ಮಾನ ಸಮುದಾಯದ ಜನರನ್ನು ಮಥುರೆಯ ಗಡಿಯಿಂದ ಹೊರಗಟ್ಟಲಾಯಿತು. ವರ್ಷ ೧೮೦೩ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಈ ಭೂಮಿಯನ್ನು ವಶಪಡಿಸಿಕೊಂಡಿತು ಮತ್ತು ಅದನ್ನು ‘ನಝೂಲ ಪ್ರದೇಶ’ (ಇಂತಹ ಪ್ರದೇಶವು ಪಾಲಿಕೆಯ ಗಡಿಯಿಂದ ೨ ಮೈಲ್ ದೂರದಲ್ಲಿ ಮತ್ತು ಅದು ಸರಕಾರದ ಅಧೀನದಲ್ಲಿರುತ್ತದೆ) ಎಂದು ಘೋಷಿಸಿತು. ೧೮೧೫ ರಲ್ಲಿ ಆಂಗ್ಲರು ೧೩.೩೭ ಎಕರೆ ಭೂಮಿಯನ್ನು ಹರಾಜು ಮಾಡಿದರು. ಆಗ ಆ ಭೂಮಿಯನ್ನು ವಾರಾಣಸಿಯಲ್ಲಿನ ರಾಜಾ ಪಟಣೀಮಲ್ ಎಂಬವರು ಖರೀದಿಸಿದರು. ೧೮೭೫ ರ ವರೆಗೆ ಹಿಂದೂ-ಮುಸಲ್ಮಾನರ ನಡುವೆ ಈ ವಿಷಯದಲ್ಲಿ ೬ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದವು. ಆ ಎಲ್ಲ ಪ್ರಕರಣಗಳಲ್ಲಿ ರಾಜಾ ಪಟಣಿಮಲ್ ಇವರ ಪರವಾಗಿ ನಿರ್ಣಯವನ್ನು ನೀಡಲಾಯಿತು. ರಾಜಾ ಪಟಣಿಮಲ್ ಇವರ ವಂಶಜರು (ರಾಯಕಿಶನ್ ದಾಸ್ ಮತ್ತು ರಾಯಾನಂದ ದಾಸ್ ಇವರು) ಈ ಭೂಮಿಯನ್ನು ೮ ಫೆಬ್ರವರಿ ೧೯೪೪ ರಂದು ೧೩ ಸಾವಿರದ ೪೦೦ ರೂಪಾಯಿಗಳಿಗೆ ಪಂಡಿತ ಮದನ ಮೋಹನ ಮಾಳವೀಯ, ಗೋಸ್ವಾಮಿ ಗಣೇಶ ದತ್ತ, ಬಿಕೆನಜೀ ಲಾಲಜೀ ಅತ್ರೆ ಇವರಿಗೆ ಮಾರಿದರು. ಈ ಹಣವನ್ನು ಪಂಡಿತ ಜುಗಲಕಿಶೋರ ಬಿರ್ಲಾ ಇವರು ಕೊಟ್ಟಿದ್ದರು. ೨೧ ಫೆಬ್ರವರಿ ೧೯೫೧ ರಂದು ‘ಶ್ರೀಕೃಷ್ಣಜನ್ಮಭೂಮಿ ಟ್ರಸ್ಟ್ ರಚನೆಯಾಯಿತು.
೨. ಶ್ರೀಕೃಷ್ಣಜನ್ಮಭೂಮಿಯ ನ್ಯಾಯಾಂಗ ಇತಿಹಾಸ
ಈ ವಿಷಯದಲ್ಲಿ ನ್ಯಾಯಾಲಯದಲ್ಲಿ ೧೦ ಪ್ರಕರಣಗಳು ದಾಖಲಾದವು. ೯ ಮಾರ್ಚ್ ೧೯೨೧ ರಲ್ಲಿ ಮಥುರಾ ನ್ಯಾಯಾಲಯದಲ್ಲಿ ಮುಸಲ್ಮಾನ ಸಮುದಾಯದಿಂದ ಈ ಭೂಮಿಯ ಮಾಲಕತ್ವದ ಹಕ್ಕಿಗಾಗಿ ಒಂದು ಅರ್ಜಿಯನ್ನು ಸಲ್ಲಿಸಲಾಗಿತ್ತು. ಅದೇ ದಿನ ಅದರ ಆಲಿಕೆ (ಹಿಯರಿಂಗ) ಯಾಯಿತು ಮತ್ತು ಹಿಂದೂಗಳ ಪರವಾಗಿ ನಿರ್ಣಯವನ್ನು ನೀಡಲಾಯಿತು. ಅದರ ಮೇಲೆ ಮುಸಲ್ಮಾನರು ೧೬ ಮಾರ್ಚ್ ೧೯೨೩ ರಂದು ‘ಫಸ್ಟ್ ಅಪೀಲು’ (ಪ್ರಥಮ ಅರ್ಜಿ) ಮಾಡಿದರು. ವರ್ಷ ೧೯೨೮ ರಲ್ಲಿ ರಾಜಾ ಪಟಣೀಮಲ್ ಇವರು ಅವರ ಕಾನೂನು ಸಹಾಯಕರ ಮೂಲಕ ಮುಸಲ್ಮಾನರಿಂದಾಗುವ ಅತಿಕ್ರಮಣದ ಬಗ್ಗೆ ಅರ್ಜಿಯನ್ನು ದಾಖಲಿಸಿದರು. ೨ ಡಿಸೆಂಬರ್ ೧೯೩೫ ರಲ್ಲಿ ಉಚ್ಚ ನ್ಯಾಯಾಲಯದಲ್ಲಿಯೂ ರಾಜಾ ಪಟಣೀಮಲ್ ಇವರ ಪರವಾಗಿ ನಿರ್ಣಯ ಬಂದಿತು.
‘ಶ್ರೀಕೃಷ್ಣಜನ್ಮಭೂಮಿ ಟ್ರಸ್ಟ್ ೧೯೫೧ ರಲ್ಲಿ ರಚನೆಯಾಯಿತು. ಅದು ೧೯೫೮ ರಲ್ಲಿ ಕಾರ್ಯನಿರತವಾಗಿರಲಿಲ್ಲ. ಅದೇ ವರ್ಷ ‘ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಎಂಬ ಒಂದು ಸಂಸ್ಥೆ ರಚನೆಯಾಯಿತು. ೧೨ ಮೇ ೧೯೬೪ ರಂದು ಈ ಸಂಸ್ಥೆಯು ಮತಾಂಧರು ನಮ್ಮ ಭೂಮಿಯ ಮೇಲೆ ಅತಿಕ್ರಮಣ ಮಾಡುತ್ತಿದ್ದಾರೆ, ಎಂದು ಒಂದು ಅರ್ಜಿಯನ್ನು ಸಲ್ಲಿಸಿತು. ೧೨ ಅಕ್ಟೋಬರ್ ೧೯೬೮ ರಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘವು ಪ್ರಕರಣವನ್ನು ಹೊಂದಾಣಿಕೆ ಮಾಡಿಕೊಳ್ಳಲು, ಎಲ್ಲಿಯ ವರೆಗೆ ಅತಿಕ್ರಮಣವಾಗಿದೆಯೋ, ಆ ಭೂಮಿಯನ್ನು ಈದ್ಗಾಹ ಮಸೀದಿಗೆ ಕೊಟ್ಟು ಒಂದು ಒಪ್ಪಂದವನ್ನು ಮಾಡಿಕೊಂಡಿತು. ಇದನ್ನು ಆಧಾರವಾಗಿಟ್ಟುಕೊಂಡು ಅಕಬರುದ್ದೀನ ಓವೈಸಿಯಂತಹವರು ಶ್ರೀಕೃಷ್ಣಜನ್ಮಭೂಮಿಯ ಪುನರುತ್ಥಾನವಾಗದಂತೆ ವಿರೋಧಿಸುತ್ತಿದ್ದಾರೆ.
೩. ಅಲಾಹಾಬಾದ ಉಚ್ಚ ನ್ಯಾಯಾಲಯವೇ ಒಪ್ಪಂದದ ವಿರುದ್ಧ ಅರ್ಜಿಯನ್ನು ದಾಖಲಿಸಲು ಆದೇಶ ನೀಡುವುದು !
೧೯೬೭ ರಲ್ಲಿನ ಅರ್ಜಿಯಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘವು ತನ್ನ ಹೆಸರನ್ನು ಶ್ರೀಕೃಷ್ಣಜನ್ಮಭೂಮಿ ಟ್ರಸ್ಟ್‌ನೊಂದಿಗೆ ಜೋಡಿಸುತ್ತ ಇವೆರಡೂ ಒಂದೇ ಆಗಿವೆ ಎಂದು ಹೇಳಿತು. ನ್ಯಾಯಾಲಯ ಮತ್ತು ಜನರ ಕಣ್ಣಿಗೆ ಧೂಳೆರಚುವ ಕೆಲಸವನ್ನು ಈ ಅರ್ಜಿಯಿಂದ ಮಾಡಲಾಯಿತು. ಒಪ್ಪಂದದ ಪತ್ರದಲ್ಲಿಯೂ ‘ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ’ವು (ಟ್ರಸ್ಟ್ ಅಲ್ಲ) ಒಪ್ಪಂದವನ್ನು ಮಾಡುತ್ತಾ ಈದ್ಗಾಹ ಮಸೀದಿಗೆ ಭೂಮಿಯನ್ನು ನೀಡಿತು.
೭ ಮೇ ೧೯೯೩ ರಂದು ಓರ್ವ ಭಕ್ತರು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ ಶ್ರೀಕೃಷ್ಣಜನ್ಮಭೂಮಿ ಟ್ರಸ್ಟ್ ಕೆಲಸವನ್ನು ಮಾಡುವುದಿಲ್ಲ, ಆದ್ದರಿಂದ ಸೇವಾ ಸಂಘವು ಅದನ್ನು ತನ್ನ ಆಧೀನದಲ್ಲಿ ತೆಗೆದುಕೊಂಡಿದೆ. ಅವರಿಗೆ ಯೋಗ್ಯ ವ್ಯವಸ್ಥೆಯನ್ನು ಮಾಡಲು ಆದೇಶ ನೀಡಬೇಕು ಎಂದು ಹೇಳಿತ್ತು. ಈ ಅರ್ಜಿಗೆ ಉತ್ತರ ನೀಡುವಾಗ ೨೩ ಸಪ್ಟೆಂಬರ್ ೧೯೯೭ ರಂದು ಅಲಾಹಾಬಾದ ಉಚ್ಚ ನ್ಯಾಯಾಲಯವು ‘ಸೇವಾ ಸಂಘ ಮತ್ತು ಟ್ರಸ್ಟ್ ಇವೆರಡೂ ಸಂಸ್ಥೆಗಳು ಬೇರೆ ಬೇರೆಯಾಗಿವೆ, ಮತ್ತು ಟ್ರಸ್ಟ್‌ನ ಕೆಲವು ಜನರು ಟ್ರಸ್ಟ್‌ನ ಭೂಮಿಯಲ್ಲಿ ಸೇವಾ ಸಂಘದ ಹೆಸರಿನಲ್ಲಿ ಕಾರ್ಯಾಲಯವನ್ನು ತೆರೆದಿದ್ದರೆ, ಟ್ರಸ್ಟ್ ಇಲ್ಲ ಎಂದು ಆಗುವುದಿಲ್ಲ, ಎಂದು ನಿರ್ಣಯ ನೀಡಿತು. ಇದರ ಅರ್ಥ ಸೇವಾ ಸಂಘವು ನ್ಯಾಯವಿರೋಧಿ ಒಪ್ಪಂದವನ್ನು ಮಾಡಿಕೊಂಡು ಈದ್ಗಾಹ ಮಸೀದಿಗೆ ಭೂಮಿಯನ್ನು ನೀಡಿತು.
೨೩ ಸಪ್ಟೆಂಬರ್ ೧೯೯೭ ರಂದು ಅಲಾಹಾಬಾದ ಉಚ್ಚ ನ್ಯಾಯಾಲಯವು ಇದೇ ನಿರ್ಣಯದಲ್ಲಿ ಮುಂದೆ, ಆಗಿರುವ ಒಪ್ಪಂದವು ಸುಳ್ಳು ಅಥವಾ ಕಾನೂನುಬಾಹಿರವಾಗಿದೆ, ಹಾಗೆಯೇ ಅದಕ್ಕೆ ಸಂಬಂಧಿಸಿದ ನ್ಯಾಯಾಲಯವು ನೀಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಒಂದು ಸ್ವತಂತ್ರ ಅರ್ಜಿಯನ್ನು ದಾಖಲಿಸಬಹುದು ಎಂದು ಹೇಳಿತು.
೪. ‘ಪ್ಲೇಸಸ್ ಆಫ್ ವರ್ಶಿಪ್ ಕಾನೂನು ಮತ್ತು ಸದ್ಯದ ಅರ್ಜಿಗೆ ಯಾವುದೇ ಸಂಬಂಧವಿಲ್ಲ
ವಾರ್ತಾವಾಹಿನಿಗಳು ‘ಪ್ಲೇಸಸ್ ಆಫ್ ವರ್ಶಿಪ್’ ಕಾನೂನಿನ ದೃಷ್ಟಿಯಿಂದ ಹರಡಿದ ಕೆಲವು ಮಾಹಿತಿಗಳಿಂದ ಅದರ ಪರಿಣಾಮವು ಅರ್ಜಿಯ ಮೇಲೆ ಹೇಗಾಗುತ್ತದೆ, ಇದು ಈಗಿನ ಅರ್ಜಿಯ ಸರ್ವೋತ್ತಮ ಉದಾಹರಣೆಯಾಗಿದೆ. ಯಾವುದಾದರೊಬ್ಬ ವ್ಯಕ್ತಿಯು ಯಾವಾಗ ನ್ಯಾಯಾಲಯಕ್ಕೆ ಹೋಗುತ್ತಾನೆಯೋ, ಆಗ ಮೊತ್ತಮೊದಲು ಅವನ ಅರ್ಜಿಯನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ಅನಂತರ ವಿರೋಧಿ ಪಕ್ಷಕಾರರಿಗೆ ಸಮನ್ಸ್‌ಗಳನ್ನು ನೀಡಲಾಗುತ್ತದೆ ಮತ್ತು ವಿರೋಧಿಗಳ ಉತ್ತರಗಳಿಂದ ನಿರ್ಣಯ ತೆಗೆದುಕೊಂಡು ಅರ್ಜಿಯನ್ನು ರದ್ದುಪಡಿಸಲಾಗುತ್ತದೆ. ಇಲ್ಲಿ ಮಾತ್ರ ನಾವು ನೀಡಿದ ಅರ್ಜಿಯನ್ನು ನೋಂದಾಯಿಸಿಕೊಳ್ಳಲೇ ಇಲ್ಲ. ‘ಕೋಡ್ ಆಫ್ ಸಿವಿಲ್ ಪ್ರೊಸಿಜರ್’ (ನಾಗರಿಕ ಪ್ರಕ್ರಿಯಾ ಸಂಹಿತೆ) ನ ಕಲಮ್ ೨೦ ರ ಅಂತರ್ಗತ ಎಲ್ಲಿ ಆಸ್ತಿ ಇದೆಯೋ ಅಥವಾ ಎಲ್ಲಿ ಅರ್ಜಿದಾರನು ವಾಸಿಸುತ್ತಾನೆಯೋ, ಅಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿಯನ್ನು ನೋಂದಾಯಿಸಿಕೊಳ್ಳಬಹುದು. ಆದ್ದರಿಂದ ಯಾವುದೇ ವ್ಯಕ್ತಿಯು ಅರ್ಜಿಯನ್ನು ದಾಖಲಿಸಬಹುದು.
೨೧ ಫೆಬ್ರವರಿ ೧೯೫೧ ರ ಶ್ರೀಕೃಷ್ಣಜನ್ಮಭೂಮಿ ಟ್ರಸ್ಟ್‌ನ ಘೋಷಣಾಪತ್ರ ಏನು ಹೇಳುವುದೇನೆಂದರೆ, ೧೯೫೧ ರಲ್ಲಿ ಟ್ರಸ್ಟ್ ಆದಾಗ ಎಲ್ಲ ಭೂಮಿಯು ಅದರ ಅಧಿಕಾರದಲ್ಲಿಯೇ ಇತ್ತು. ಆಗ ಯಾವುದೇ ಮಸೀದಿ ಇರುವುದರ ಉಲ್ಲೇಖ ಪತ್ರದಲ್ಲಿಲ್ಲ. ಐತಿಹಾಸಿಕ ಪುರಾತತ್ತ್ವದ ಸಾಕ್ಷಿಯಿಂದ ಎಲ್ಲ ಹಿಂದೂ ಜನರು ಈ ಸ್ಥಾನವನ್ನು ಶ್ರೀಕೃಷ್ಣನ ಜನ್ಮಭೂಮಿ ಎಂದು ತಿಳಿಯುತ್ತಾರೆ. ಹಾಗೆಯೇ ಆ ಸ್ಥಾನ ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ.