೧. ಜಗತ್ತಿಗೆ ದಯೆ, ಕ್ಷಮೆ ಮತ್ತು ಶಾಂತಿಯ ಉಪದೇಶ ನೀಡುವ ಕ್ರೈಸ್ತ ಪಾದ್ರಿಗಳೇ ಅನೈತಿಕ ಕೃತಿಗಳನ್ನು ಮಾಡುವುದು
ಜಗತ್ತಿನಾದ್ಯಂತ ದಯೆ, ಕ್ಷಮೆ ಮತ್ತು ಶಾಂತಿಯ ಗುತ್ತಿಗೆದಾರರಾಗಿರುವ ಕ್ರೈಸ್ತರು, ಪ್ರಭು ಯೇಸುವಿನ ಹೆಸರಿನಲ್ಲಿ ಎಷ್ಟು ಪಾಪಕರ್ಮಗಳನ್ನು ಮಾಡುತ್ತಾರೆ, ಇದಕ್ಕೆ ಯಾವುದೇ ಸೀಮೆ ಇಲ್ಲವೇ ? ಹಾಗೆ ನೋಡಿದರೆ ಕ್ರೈಸ್ತರ ಪ್ರಕಾರ, ನೀವು ಎಷ್ಟೇ ಸತ್ಕರ್ಮಗಳನ್ನು ಮಾಡಿದರೂ, ಜನಹಿತದ ಕಾರ್ಯಗಳನ್ನು ಮಾಡಿದರೂ ನೀವು ಪ್ರಭು ಯೇಸುವಿಗೆ ಶರಣಾಗದಿದ್ದರೆ, ನೀವು ಪಾಪಿಗಳಾಗಿಯೇ ಉಳಿಯುವಿರಿ ಮತ್ತು ನೀವು ನರಕದ ಬೆಂಕಿಯಲ್ಲಿ ಸುಟ್ಟುಕೊಳ್ಳಬೇಕಾಗುವುದು. ನೀವು ಯಾವ ಕ್ಷಣ ಕ್ರೈಸ್ತರಾಗುವಿರೋ ಮತ್ತು ಯೇಸುವನ್ನು ನಿಮ್ಮ ಉದ್ಧಾರಕನೆಂದು ತಿಳಿಯುವಿರೋ, ಆಗ ನಿಮ್ಮ ಎಲ್ಲ ಪಾಪಕರ್ಮಗಳನ್ನು ಒಂದೇ ಕ್ಷಣದಲ್ಲಿ ಕ್ಷಮಿಸಲಾಗುವುದು. ಪ್ರಭು ನಿಮ್ಮ ಪಾಪಗಳ ಶಿಕ್ಷೆಯನ್ನು ಭೋಗಿಸುವನು. ಆದುದರಿಂದಲೇ ಚರ್ಚ್ ಮತ್ತು ಚರ್ಚ್‌ಗಳಿಂದ ನಡೆಸಲಾಗುವ ಶಾಲೆ, ಪ್ರಾರ್ಥನೆಯ ಸ್ಥಳಗಳು, ನಿವಾಸಸ್ಥಾನ ಇತ್ಯಾದಿಗಳಲ್ಲಿ ಪಾದ್ರಿಗಳು ಯಾವುದೇ ಭಯ ಅಥವಾ ನೈತಿಕತೆ ಇಲ್ಲದೇ ಲೈಂಗಿಕ ಶೋಷಣೆಯಂತಹ ದುಷ್ಕೃತ್ಯಗಳನ್ನು ಮಾಡುತ್ತಾರೆಯೇ ?
೨. ಕ್ರೈಸ್ತರು ಲೈಂಗಿಕ ಶೋಷಣೆ ಮಾಡಿದ ಬಿಶಪ್‌ರ ವೈಭವೀಕರಣ ಮಾಡುವುದು
ನಿಜವಾಗಿಯೂ ಕ್ಷಮೆ ಕೇಳುವುದರಿಂದ ಪಾಪಕರ್ಮಗಳು ಮತ್ತು ಪೀಡಿತ ಬಾಲಕರ ವೇದನೆ ಮತ್ತು ದುಃಖಗಳು ಮುಗಿಯುತ್ತವೆಯೇ ? ಕೇರಳದಲ್ಲಿ ಬಿಶಪ್ ಫ್ರ್ಯನ್ಕೋ ಮುಲಕ್ಕಲ್ ಇವರ ಪ್ರಕರಣವು ಇದರ ಎಲ್ಲಕ್ಕಿಂತ ದೊಡ್ಡ ಉದಾಹರಣೆಯಾಗಿದೆ. ಲೈಂಗಿಕ ಶೋಷಣೆಯನ್ನು ಮಾಡಿದ ಬಿಶಪ್‌ರಿಗೆ ಜಾಮೀನು ಸಿಕ್ಕ ನಂತರ ಅವರ ಮೇಲೆ ಪುಷ್ಪವೃಷ್ಟಿ ಮಾಡಿ ಭವ್ಯ ಸ್ವಾಗತವನ್ನು ಮಾಡಲಾಯಿತು ಮತ್ತು ಹಾಗೆಯೇ ಯಾವ ನನ್‌ಳ ಮೇಲೆ ಅತ್ಯಾಚಾರವನ್ನು ಮಾಡಲಾಗಿತ್ತೋ, ಅಂದರೆ ಯಾರ ಶೋಷಣೆಯಾಗಿತ್ತೋ, ಅವಳನ್ನು ಚರ್ಚ್‌ನಿಂದ ಕೂಡಲೇ ಹೊರಗೆ ಹಾಕಲಾಯಿತು. ಇದಕ್ಕೇ ನ್ಯಾಯ ಎಂದು ಹೇಳುತ್ತಾರೆಯೇ ?
೩. ಈ ಪ್ರಕರಣದಲ್ಲಿ ಹಿಂದೂ ಸಾಧೂ-ಸಂತರ ಮೇಲೆ ವಿಷಕಾರುವ ಮಾಧ್ಯಮಗಳು ಕ್ರೈಸ್ತ ಸಂಸ್ಥೆಗಳಲ್ಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಮಶಾನಮೌನ !
ಇದೇ ಕೇರಳದಲ್ಲಿ ಸಿಸ್ಟರ್ ಜೆಸಮಿಯು ‘ಆಮೆನ್-ಎಕ್ ನನ್ ಆತ್ಮಕಥನ’ ಎಂಬ ಹೆಸರಿನ ಪುಸ್ತಕವನ್ನು ಬರೆದು ಚರ್ಚ್ ಮತ್ತು ಪಾದ್ರಿಗಳ ದುಷ್ಕೃತ್ಯಗಳನ್ನು ಬಯಲಿಗೆಳೆದಿದ್ದಾಳೆ. ಆದರೂ ಚರ್ಚ್ ಅಥವಾ ಸರಕಾರ ಯಾವುದೇ ಕಾರ್ಯಾಚರಣೆಯನ್ನು ಮಾಡುತ್ತಿಲ್ಲ ! ಕೇವಲ ಪೋಪ್‌ರು ಎಲ್ಲ ಕಡೆಗೆ ಹೋಗಿ ಕ್ಷಮೆ ಕೇಳುತ್ತಿದ್ದಾರೆ. ಈ ರೀತಿಯ ಸಮರ್ಥನೆ ದೊರಕಿದುದರಿಂದ ಮುಂಬಯಿಯಲ್ಲಿ ಚರ್ಚ್‌ಗಳಿಂದ ನಡೆಸಲಾಗುವ ಶಾಲೆ ಮತ್ತು ಅನಾಥಾಲಯಗಳಲ್ಲಿನ ದುಷ್ಕೃತ್ಯಗಳ ಪ್ರಕರಣಗಳು ಬಯಲಿಗೆ ಬರುತ್ತಿವೆ. ಪೊಲೀಸರು ಸಹ ಮೂಲದ ವರೆಗೆ ಹೋಗಿ ತನಿಖೆಯನ್ನು ಮಾಡುವುದಿಲ್ಲ. ಪಾದ್ರಿಯನ್ನು ಬಂಧಿಸಿದ ನಂತರ ಸಾಮಾನ್ಯ ವಿಚಾರಣೆಗಾಗಿ ಚರ್ಚ್‌ನ ಯಾವುದೇ ವಿಶ್ವಸ್ಥರನ್ನು ಕರೆಯಲಾಗಿಲ್ಲ. ‘ಸೆಕ್ಯುಲರ್ ಮಾಧ್ಯಮಗಳೂ ಬಾಯಿಮುಚ್ಚಿ ಕುಳಿತುಕೊಂಡಿವೆ. ಇಂತಹದೇ ಏನಾದರೂ ಘಟನೆ ಹಿಂದೂಗಳ ಸಂಸ್ಥೆಯಲ್ಲಿ ಘಟಿಸಿದ್ದರೆ… !
೪. ಚರ್ಚ್‌ನ ಇತಿಹಾಸದ ಕೆಲವು ಕಲಂಕಿತ ಉದಾಹರಣೆಗಳು
ಅ. ಅನೇಕ ಶತಕಗಳ ಹಿಂದೆ ನಡೆದ ಧಾರ್ಮಿಕ ಧರ್ಮಯುದ್ದದಲ್ಲಿ ಸ್ಪೇನ್, ಪೋರ್ತುಗಲ್, ಮ್ಯಾಕ್ಸಿಕೋ ಮತ್ತು ಪೆರೂವಿನಲ್ಲಿನ ‘ಇನ್ಕ್ವಿಝಿಶನ್‌ನಲ್ಲಿ (ಧರ್ಮಚ್ಛಲದಲ್ಲಿ)’, ಮಹಿಳೆಯರನ್ನು ‘ವಿಚ್ (Witch, ಮಾಟಗಾರ್ತಿ) ಎಂದು ಹೇಳಿ ಜೀವಂತ ಸುಡುವುದು, ಹಾಗೆಯೇ ಯಹೂದಿ ಇತ್ಯಾದಿ ಪಂಥಿಯರ ಹತ್ಯೆಯನ್ನು ಮಾಡುವುದು ಮುಂತಾದ ಅಪರಾಧಗಳಿಗಾಗಿ ಚರ್ಚ್ ದೋಷಿಯಾಗಿದೆ. ಒಂದು ಅಂದಾಜಿನ ಅಂಕಿಅಂಶಗಳಿಗನುಸಾರ ೧೪೫೦ ರಿಂದ ೧೭೫೦ ಇಸ್ವಿ ಈ ೩೦೦ ವರ್ಷಗಳ ಕಾಲಾವಧಿಯಲ್ಲಿ ೧ ಲಕ್ಷಕ್ಕಿಂತ ಹೆಚ್ಚು ಮಹಿಳೆಯರನ್ನು ಮಾಟಗಾತಿಯರು ಎಂದು ಹೇಳಿ ಕೊಲ್ಲಲಾಗಿತ್ತು. ಇದರಲ್ಲಿ ಕ್ರೈಸ್ತ ವಿರಾಂಗನೆ ‘ಜೊನ್ ಆಫ್ ಆರ್ಕ್’ ಇವಳ ಸಹಭಾಗವೂ ಇದೆ, ಅವಳ ಪರಾಕ್ರಮ ಇಷ್ಟವಾಗದ ಕಾರಣ ಅವಳನ್ನೂ ಅಪರಾಧಿಯೆಂದು ಘೋಷಿಸಿ ಕೊಲ್ಲಲಾಯಿತು.
ಆ. ೨೫ ಡಿಸೆಂಬರ್ ೧೮೮೧ ರಂದು ಪೊಲಂಡ್‌ನ ವಾರಸಾದಲ್ಲಿ ಮತಾಂಧ ಕ್ರೈಸ್ತರು ೧೨ ಜನ ಯಹೂದಿಗಳನ್ನು ಬರ್ಬರವಾಗಿ ಹತ್ಯೆ ಮಾಡಿದರು ಮತ್ತು ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು.
ಇ. ಮಾರ್ಚ್ ೨೦೦೦ ರಲ್ಲಿ ಆಗಿನ ದಿವಂಗತ ಪೊಪ್ ಜಾನ್ ಪಾಲ್-೨ ಇವರು ಯಾವುದೇ ಸಂದರ್ಭ ಅಥವಾ ವೈಯಕ್ತಿಕ ಅಪರಾಧಿಯ ಹೆಸರನ್ನು ಉಚ್ಚರಿಸದೇ ಚರ್ಚ್‌ನಿಂದ ಘಟಿಸಿದ ಪಾಪಗಳಿಗಾಗಿ ಕ್ಷಮಾಯಾಚನೆಯನ್ನು ಮಾಡಿದ್ದರು.
ಈ. ಕೆಲವು ತಿಂಗಳುಗಳ ಹಿಂದೆ ಕೆನಡಾದಲ್ಲಿ ಚರ್ಚ್ ಸ್ಥಾಪಿಸಿದ ೨ ನಿವಾಸಿ ಶಾಲೆಗಳಲ್ಲಿ ೧ ಸಾವಿರ ಮಕ್ಕಳ ಗೋರಿಗಳು ಸಿಕ್ಕಿದವು. ಇಂತಹ ಅನೇಕ ಶಾಲೆಗಳಿಂದ (ವರ್ಷ ೧೮೭೬-೧೯೯೬) ಕೆನಡಾದಲ್ಲಿನ ಲಕ್ಷಗಟ್ಟಲೆ ಮೂಲ ನಿವಾಸಿಗಳನ್ನು ಕ್ರೈಸ್ತರನ್ನಾಗಿ ಮಾಡಲಾಗಿತ್ತು.
೫. ಲೈಂಗಿಕ ಶೋಷಣೆಯನ್ನು ಮಾಡುವ ಪಾದ್ರಿಗಳಿಗೆ ಯೋಗ್ಯ ಶಿಕ್ಷೆಯಾಗಲು ಭಾರತೀಯ ಕಾನೂನುಗಳನ್ನು ಸಕ್ಷಮಗೊಳಿಸುವುದು ಆವಶ್ಯಕ !
ಕೆಲವು ದಿನಗಳ ಹಿಂದೆ ಪೋಪ್ ಫ್ರಾನ್ಸಿಸ್ ಇವರು, ‘ಫ್ರಾನ್ಸ್’ನ ಅನೇಕ ಚರ್ಚ್‌ಗಳಲ್ಲಿ ಪಾದ್ರಿಗಳಿಂದ ೭೦ ವರ್ಷಗಳಲ್ಲಿ ೩ ಲಕ್ಷ ೩೦ ಸಾವಿರ ಮಕ್ಕಳ ಲೈಂಗಿಕ ಶೋಷಣೆಯಾಗಿದೆ ಎಂಬುದನ್ನು ಬಯಲು ಮಾಡಿದ್ದರು. ಈ ಬೀಭತ್ಸ (ಅಸಹ್ಯಕರ) ಶೋಷಣೆಗೆ ಪೋಪ್ ಇವರು ನಾಚಿಕೆಗೇಡು ಎಂದು ಹೇಳಿದ್ದರು. ಐತಿಹಾಸಿಕ ತಪ್ಪುಗಳು ಅಥವಾ ಅಪರಾಧಗಳ ಬಗ್ಗೆ ರೋಮನ್ ಕ್ಯಾಥೋಲಿಕ್ ಚರ್ಚ್‌ಗಳಿಂದ ಪಶ್ಚಾತ್ತಾಪ ಅಥವಾ ಕ್ಷಮಾಯಾಚನೆ ಮಾಡುವುದು, ಇದೇನು ಹೊಸ ವಿಷಯವಾಗಿಲ್ಲ. ೨೦೦೮ ರಲ್ಲಿ ಆಗಿನ ಪೊಪ್ ಬೆನೆಡಿಕ್ಟ್-೧೬ ಇವರು ಮತ್ತು ಸದ್ಯದ ಪೊಪ್ ಫ್ರಾನಿನ್ಸ್ ಇವರು ೨೦೧೮ ರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಈಗ ಕೇವಲ ಕ್ಷಮೆ ಕೇಳಿದರೆ ನಡೆಯುವುದಿಲ್ಲ. ‘ಕನ್ಫೆಶನ್’ನ (ಪಾಪದ ಸ್ವೀಕೃತಿಯನ್ನು ನೀಡುವ) ಆಧಾರದ ಮೇಲೆ ಲೈಂಗಿಕ ಶೋಷಣೆಯನ್ನು ಮಾಡುವ ಪಾದ್ರಿಗಳಿಗೆ ಅವರ ಪ್ರಭು ಯಾವಾಗ ಶಿಕ್ಷೆಯನ್ನು ನೀಡುವನು ಗೊತ್ತಿಲ್ಲ; ಆದರೆ ಭಾರತದ ಸಂವಿಧಾನ ಮತ್ತು ಕಾನೂನು ಅವರ ದುಷ್ಕೃತ್ಯಗಳಿಗಾಗಿ ಗಂಭೀರ ಶಿಕ್ಷೆಯನ್ನು ನೀಡಲು ಸಕ್ಷಮವಾಗಬೇಕು.
– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ (೩.೧೧.೨೦೨೨)