೧. ಪೂ. ರಮಾನಂದಣ್ಣನವರು ಮಾರ್ಗದರ್ಶನ ಮಾಡುವಾಗ ‘ಸಾಧನೆಯಲ್ಲಿ ಮುಂದೆ ಹೋಗಲು ಹೇಗೆ ಪ್ರಯತ್ನಿಸಬೇಕು’ ಎಂಬ ಬಗ್ಗೆ ಸಾಧಕರಿಗೆ ಚಿಂತನೆ ಮಾಡಲು ಹೇಳಿ ಧ್ಯೇಯವನ್ನಿಟ್ಟು ಪ್ರಯತ್ನಿಸಲು ಹೇಳುವುದು
‘೨೭.೮.೨೦೨೦ ರಂದು ಕರ್ನಾಟಕ ರಾಜ್ಯದ ಸಾಧಕರಿಗಾಗಿ ಸನಾತನದ ಸಂತರಾದ ಪೂ. ರಮಾನಂದ ಗೌಡ (ಪೂ. ರಮಾನಂದಣ್ಣ) ಇವರ ಮಾರ್ಗದರ್ಶನ ಇತ್ತು. ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡ ಸಾಧಕರಲ್ಲಿ ಕೆಲವರ ಮಟ್ಟವು ಕಡಿಮೆಯಾಯಿತು, ಕೆಲವರ ಆಧ್ಯಾತ್ಮಿಕ ಮಟ್ಟವು ಅಷ್ಟೇ ಉಳಿಯಿತು, ಇನ್ನು ಕೆಲವು ಸಾಧಕರ ಆಧ್ಯಾತ್ಮಿಕ ಮಟ್ಟವು ಹೆಚ್ಚಾಯಿತು. ಇಂತಹ ಎಲ್ಲ ಸಾಧಕರಿಗಾಗಿ ಈ ಮಾರ್ಗದರ್ಶನ ಇತ್ತು.
ಸತ್ಸಂಗದಲ್ಲಿ ಸಾಧಕರು ‘ಯಾವ ಸ್ವಭಾವದೋಷಗಳಿಂದ ನಾವು ಸಾಧನೆಯಲ್ಲಿ ಹಿಂದೆ ಉಳಿದಿದ್ದೇವೆ ?’, ಎಂಬುದರ ಬಗ್ಗೆ ಹೇಳಿದರು. ಅನಂತರ ಪೂ. ರಮಾನಂದಣ್ಣನವರು ‘ಸಾಧನೆಯಲ್ಲಿ ಮುಂದೆ ಹೋಗಲು ಹೇಗೆ ದೃಷ್ಟಿಕೋನವನ್ನಿಡಬೇಕು ? ಹೇಗೆ ಪ್ರಯತ್ನಿಸಬೇಕು ? ನಮ್ಮಲ್ಲಿ ಶಿಷ್ಯಭಾವವು ಹೇಗಿರಬೇಕು ? ಯಾವ ಗುಣಗಳ ಕೊರತೆಯಿಂದ ನಾವು ಕಡಿಮೆ ಬಿದ್ದೆವು ? ಎಂಬುದರ ಚಿಂತನೆಯನ್ನು ಮಾಡಲು ಹೇಳಿದರು. ತನ್ನಲ್ಲಿ ಪರಿವರ್ತನೆ ಮಾಡಲು ದೀಪಾವಳಿಯವರೆಗೆ ಧ್ಯೇಯವನ್ನಿಟ್ಟು ಅವರು ಪ್ರಯತ್ನಿಸಲು ಹೇಳಿದರು.
೨. ಮಾರ್ಗದರ್ಶನದ ಕೊನೆಗೆ ಪೂ. ರಮಾನಂದಣ್ಣನವರು ಶರಣಾಗತಭಾವದಿಂದ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ ನಂತರ ಸಾಧಕರಿಗೆ ಭಾವಜಾಗೃತಿಯಾಗಿ ವಾತಾವರಣದಲ್ಲಿ ಬದಲಾವಣೆಯಾಗುವುದು
ಮಾರ್ಗದರ್ಶನದ ಕೊನೆಗೆ ಪೂ. ರಮಾನಂದಣ್ಣನವರು ಕೃತಜ್ಞತೆ ಮತ್ತು ಶರಣಾಗತ ಭಾವದಿಂದ ಪ್ರಾರ್ಥನೆಯನ್ನು ಮಾಡಿದರು. ಈ ಪ್ರಾರ್ಥನೆಯು ಅವರಿಗೆ ಒಳಗಿನಿಂದ ಹೊಳೆದಿತ್ತು. ಅದನ್ನು ಕೇಳಿ ಎಲ್ಲ ಸಾಧಕರಿಗೆ ಭಾವಜಾಗೃತಿಯಾಯಿತು ಮತ್ತು ಅವರು ಒಂದು ಬೇರೆ ಸ್ಥಿತಿಯನ್ನೇ ಅನುಭವಿಸಿದರು. ಅನೇಕ ಸಾಧಕರಿಗೆ ‘ಇದೆಲ್ಲವು ನಾವು ನಮ್ಮ ಜೀವನದಲ್ಲಿ ಅನುಭವಿಸಿದ್ದೇವೆ’, ಎಂದೆನಿಸಿತು. ಈ ಪ್ರಾರ್ಥನೆ ಕೇಳುವಾಗ ವಾತಾವರಣದಲ್ಲಿಯೂ ಬದಲಾವಣೆ ಆಗಿತ್ತು.
೩. ಪೂ. ರಮಾನಂದಣ್ಣನವರು ಭಾವಪೂರ್ಣ ಶಬ್ದಗಳಲ್ಲಿ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವರ್ಣನೆ ಮತ್ತು ಅವರಿಗೆ ಮಾಡಿದ ಪ್ರಾರ್ಥನೆ !
೩ ಅ. ಜನ್ಮ-ಮೃತ್ಯುವಿನ ಚಕ್ರಗಳಲ್ಲಿ ಸಿಲುಕಿದ ಜೀವಗಳಿಂದ ಸಾಧನೆಯನ್ನು ಮಾಡಿಸಿಕೊಳ್ಳುವ ‘ಮೋಕ್ಷಗುರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್ ‘! : ‘ಹೇ ದಯಾಸಾಗರ, ಹೇ ಕೃಪಾಸಿಂಧು ಗುರುದೇವಾ, ಈ ಜೀವವು ಕಲಿಯುಗದಲ್ಲಿನ ಘೋರ ಅಂಧಃಕಾರದ ಸುಳಿಯಲ್ಲಿ ಸಿಲುಕಿತ್ತು. ಅನೇಕ ಜನ್ಮಗಳಲ್ಲಿ ಮಾಡಿದ ಕರ್ಮಗಳಿಂದ ‘ಪುನರಪಿ ಜನನಂ ಪುನರಪಿ ಮರಣಂ |’ ಎಂದರೆ ‘ಪುನಃ ಜನನ ಮತ್ತು ಪುನಃ ಮರಣ’ ಈ ಚಕ್ರಗಳಲ್ಲಿ ಸಿಲುಕಿದ ಈ ಅನಾಥನಿಗೆ ಮುಂದೆ ದಿಶೆ ಸಿಗುತ್ತಿರಲಿಲ್ಲ. ಈ ಜನ್ಮದಲ್ಲಿ ನೀವು ನನ್ನ ಕೈಯನ್ನು ಹಿಡಿದಿದ್ದೀರಿ. ಅನೇಕ ಜನ್ಮಗಳಲ್ಲಿ ಮಾಡಿದ ನನ್ನ ಪಾಪಗಳ ಕ್ಷಾಲನೆಯನ್ನು ಮಾಡಿ ನೀವು ನನಗೆ ಗುರುಕೃಪಾಯೋಗಾನುಸಾರ ಸಾಧನೆ ಮಾಡುವ ಮಾರ್ಗವನ್ನು ತೋರಿಸಿದ್ದೀರಿ ಮತ್ತು ಈ ಜೀವಕ್ಕೆ ಆಶ್ರಯವನ್ನು ನೀಡಿದ್ದೀರಿ. ನಿಮ್ಮ ಅಪಾರ ಕೃಪೆಯಿಂದಲೇ ನನ್ನನ್ನು ಈ ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತನನ್ನಾಗಿ ಮಾಡಿದ್ದೀರಿ. ನಮ್ಮ ಜೀವದ ಉದ್ಧಾರಕರು ನೀವೇ ಆಗಿರುವಿರಿ.
೩ ಆ. ಸಾಧಕರಿಗೆ ಘೋರ ಪ್ರಾರಬ್ಧ ಮತ್ತು ಅಡಚಣೆಗಳಿಂದ ಹೊರಗೆ ತೆಗೆಯುವ ಮತ್ತು ‘ಜೀವದಾನ ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್’ ! : ನೀವು ನನ್ನ ಜೀವನದಲ್ಲಿ ಬಂದ ನಂತರ ನನ್ನ ಅನೇಕ ಜನ್ಮಗಳ ಪ್ರಾರಬ್ಧ, ಎಂದರೆ ಶಾರೀರಿಕ ತೊಂದರೆ (ದೇಹಪ್ರಾರಬ್ದ), ಮಾನಸಿಕ ತೊಂದರೆ (ಮನೋಪ್ರಾರಬ್ಧ), ಅನೇಕ ರೀತಿಯ ಕೌಟುಂಬಿಕ ಮತ್ತು ಆರ್ಥಿಕ ಅಡಚಣೆ (ಕೊಡುಕೊಳ್ಳುವ ಲೆಕ್ಕ), ಹಾಗೆಯೇ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಿವೆ. ಇಷ್ಟೇ ಅಲ್ಲದೇ, ಎಷ್ಟೋ ಬಾರಿ ಈ ಶರೀರದಿಂದ ಪ್ರಾಣ ಹೋಗುವ ಅಂದರೆ ಮೃತ್ಯುವಿನ ಪ್ರಸಂಗಗಳು ಬಂದಿರಬಹುದು, ಇಂತಹ ಸ್ಥಿತಿಯಲ್ಲಿ ನೀವೇ ನನಗೆ ಜೀವದಾನವನ್ನು ನೀಡಿರುವಿರಿ. ಘೋರ ಪ್ರಾರಬ್ಧದಲ್ಲಿ ಸಿಲುಕಿದ ಈ ಜೀವಕ್ಕೆ ನೀವೇ ಮುಕ್ತಗೊಳಿಸಿರುವಿರಿ. ನಾನು ಏನು ಮಾಡಲು ಸಾಧ್ಯವಿಲ್ಲ ಗುರುದೇವಾ. ನೀವೇ ಎಲ್ಲವನ್ನೂ ಮಾಡಿರುವಿರಿ. ನೀವು ಮಾಡಿದ ಕೃಪೆಗಾಗಿ ನಾನು ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯೇ ಇದೆ ಗುರುದೇವಾ !
೩ ಇ. ಸಾಧಕರಲ್ಲಿನ ದುರ್ಗುಣಗಳನ್ನು ನಾಶಗೊಳಿಸಿ ಸಾಧನೆಯ ಸಂಸ್ಕಾರವನ್ನು ಮಾಡುವ ‘ಸಾಧನಾಗುರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ’ ! : ನನ್ನಲ್ಲಿನ ಮಾಯಾ, ಮೋಹ, ಕ್ರೋಧ, ಲೋಭ ಮತ್ತು ವಾಸನಾ ಈ ಅನೇಕ ದುರ್ಗುಣಗಳಿಂದ ತುಂಬಿದ್ದು ಅವುಗಳನ್ನು ಕಡಿಮೆ ಮಾಡುವ ಕ್ಷಮತೆಯು ನನ್ನಲ್ಲಿ ಎಳ್ಳಷ್ಟು ಇಲ್ಲ. ಇದೆಲ್ಲವನ್ನು ಕೇವಲ ನೀವೇ ತಮ್ಮ ದಿವ್ಯ ದೃಷ್ಟಿಯಿಂದ ಕಡಿಮೆ ಮಾಡುತ್ತಿರುವಿರಿ. ನನ್ನ ಮನಸ್ಸು ಮತ್ತು ಬುದ್ಧಿಯಲ್ಲಿರುವ ಜನ್ಮಜನ್ಮಾಂತರಗಳ ಕೆಟ್ಟ ಸಂಸ್ಕಾರಗಳೂ ನೀವೇ ತೆಗೆದು ಹಾಕುತ್ತಿದ್ದೀರಿ. ಇಷ್ಟೇ ಅಲ್ಲದೇ, ನನ್ನ ಅಂತರ್ಮನಸ್ಸನ್ನು ಶುದ್ಧಗೊಳಿಸಿ ನೀವು ಅಲ್ಲಿ ಸಾಧನೆಯ ಸಂಸ್ಕಾರವನ್ನು ಮಾಡಿದ್ದೀರಿ.
೩ ಈ. ಸಾಧಕ-ಜೀವಗಳ ಮೇಲೆ ಅಪಾರ ಕೃಪೆಯನ್ನು ಮಾಡುವ ‘ಕೃಪಾಸಿಂಧು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್’ ! : ನೀವು ನಮ್ಮ ಮೇಲೆ ಮಾಡಿದ ಅಪಾರ ಪ್ರೀತಿಯ ಗುಣಗಾನ ಮತ್ತು ನಿಮ್ಮ ಕೃಪೆಯನ್ನು ನಾನು ಹೇಗೆ ವರ್ಣಿಸಲಿ ? ನಾನು ಇದುವರೆಗೆ ಎಷ್ಟೋ ಬಾರಿ ಈ ಅಪಾರ ಪ್ರೀತಿ ಮತ್ತು ಕೃಪೆಯ ಅನುಭವವನ್ನು ಪಡೆದಿದ್ದೇನೆ. ನಾನು ಇನ್ನು ಎಷ್ಟು ಜನ್ಮ ಪಡೆದರೂ, ನಿಮ್ಮ ಋಣದಿಂದ ಮುಕ್ತನಾಗಲು ಸಾಧ್ಯವಿಲ್ಲ, ಗುರುದೇವಾ !
೩ ಉ. ಸಾಧಕರಿಗೆ ಜ್ಞಾನವನ್ನು ನೀಡುವ ‘ಜ್ಞಾನಗುರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್’ ! : ಸಾಧಕರಿಗೆ ನೀವು ಎಂತಹ ಜ್ಞಾನವನ್ನು ಕೊಡುತ್ತಿರುವಿರೆಂದರೆ, ಸಾಮಾನ್ಯ ಜನರಿಗೆ ತಿಳಿಯಲಾರದಂತಹ ಮತ್ತು ಗ್ರಹಿಸಲೂ ಸಾಧ್ಯವಾಗದಂತಹದ್ದಿದೆ. ನೀವು ಇಷ್ಟೊಂದು ಕೃಪಾವಂತರಾಗಿರುವಿರಿ, ಎಂದರೆ ನನ್ನ ಮನಸ್ಸು ಮತ್ತು ಬುದ್ಧಿಯ ಮೇಲಿನ ಆವರಣವನ್ನು ದೂರಗೊಳಿಸಿ ನೀವು ನನ್ನಲ್ಲಿ ಜ್ಞಾನವನ್ನು ಗ್ರಹಿಸುವ ಕ್ಷಮತೆಯನ್ನು ನಿರ್ಮಾಣ ಮಾಡಿದ್ದೀರಿ. ನಿಮ್ಮ ಈ ಕೃಪೆಗಾಗಿ ನನ್ನ ಸಂಪೂರ್ಣ ಜೀವನವನ್ನು ನಾನು ಸಾಧನೆಗಾಗಿ ಸಮರ್ಪಿಸಿಕೊಳ್ಳುತ್ತಿದ್ದೇನೆ.
೩ ಊ. ಸಾಧಕರಿಗೆ ‘ಸಂತರು’, ‘ಸದ್ಗುರು’ ಮತ್ತು ‘ಪರಾತ್ಪರ ಗುರು’ಗಳ ಪದವಿಯವರೆಗೆ ಕರೆದುಕೊಂಡು ಹೋಗುವ ‘ಸರ್ವಶಕ್ತಿಮಾನ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ’ ! : ಜೀವನಮುಕ್ತ ಅಥವಾ ಬಂಧನಗಳಿಂದ ಮುಕ್ತರಾಗಲು ನೀವು ತೋರಿಸಿದ ಈ ಮೋಕ್ಷಮಾರ್ಗದ ಮೇಲೆ ಅನೇಕ ಸಾಧಕರು ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತರಾಗಿದ್ದಾರೆ, ಕೆಲವರು ಸಂತರು ಮತ್ತು ಸದ್ಗುರುಗಳಾಗಿದ್ದಾರೆ. ಇನ್ನು ಕೆಲವರು ಪರಾತ್ಪರ ಗುರು ಪದವಿಯವರೆಗೂ ತಲುಪಿದ್ದಾರೆ. ಈ ಶ್ರೇಷ್ಠವಾದ ಪದವಿಯಲ್ಲಿ ತಲುಪುವುದು, ಇದು ಸಚ್ಚಿದಾನಂದಸ್ವರೂಪ ಸರ್ವಶಕ್ತಿಶಾಲಿಯಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಕೃಪೆಯಿಂದಲೇ ಸಾಧ್ಯವಾಯಿತು. ‘ಈ ಮಾರ್ಗದಲ್ಲಿ ನೀವು ನಮ್ಮನ್ನು ಮುಂದೆ ಮುಂದೆ ಕರೆದುಕೊಂಡು ಹೋಗಬೇಕು’, ಇದೇ ತಮ್ಮ ಚರಣಗಳಲ್ಲಿ ಸಮರ್ಪಿತಭಾವದಿಂದ ವಿನಂತಿಸುತ್ತೇನೆ !
ಒಂದು ವೇಳೆ ನಾನು ನಿಮ್ಮ ಕೈಯನ್ನು ಹಿಡಿದಿರುತ್ತಿದ್ದರೆ, ನನ್ನ ಕೈ ಯಾವಾಗಲೋ ತಪ್ಪಿಸಿಕೊಳ್ಳುತ್ತಿತ್ತು; ಆದರೆ ಇಂದು ನೀವು ನನ್ನ ಕೈಯನ್ನು ಹಿಡಿದಿರುವುದರಿಂದ ನಾನು ಜೀವಂತನಾಗಿದ್ದು ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿದೆ ಗುರುದೇವಾ !
೩ ಎ. ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಘೋಶಿಸಿ ಆ ಮಹಾನ ಕಾರ್ಯದಲ್ಲಿ ಸಾಧಕರನ್ನು ಸೇರಿಸಿಕೊಳ್ಳುವ ‘ಹಿಂದೂ ರಾಷ್ಟ್ರದ ಪ್ರವಕ್ತೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ’ ! : ಇಂದು ನನ್ನ ತಾಯಿ-ತಂದೆ, ಕುಟುಂಬ, ಸಹೋದರರು ಮುಂತಾದವರು ಯಾರೂ ನನ್ನ ಮೇಲೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ನೀವೊಬ್ಬರೇ ನನ್ನ ಮೇಲೆ ಗಮನ ಕೊಡುತ್ತಿರುವಿರಿ ! ಈ ಜೀವಕ್ಕೆ ಕೇವಲ ನಿಮ್ಮದೇ ಆಧಾರವಾಗಿದೆ. ತಮ್ಮ ಕೃಪಾಕಟಾಕ್ಷದಿಂದ ನನಗೆ ನನ್ನ ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳ ಸಂದರ್ಭದಲ್ಲಿ ಘಟಿಸುವ ಪ್ರಸಂಗಗಳಲ್ಲಿ ಸಂಘರ್ಷವನ್ನು ಮಾಡಿ ಹೋರಾಡುವ ಶಕ್ತಿ ದೊರಕಿತು. ಹಿಂದೂ ರಾಷ್ಟ್ರ ಸ್ಥಾಪನೆಯ ಮಹಾನ ಕಾರ್ಯದಲ್ಲಿ ನೀವು ನನ್ನನ್ನು ಸೇರಿಸಿಕೊಂಡಿದ್ದೀರಿ, ಅದಕ್ಕಾಗಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ. ಗುರುದೇವಾ, ಈಗ ನನ್ನ ಅಂತರ್ಮನಸ್ಸಿನಲ್ಲಿ ಕೇವಲ ನಿರಂತರ ನಿಮ್ಮ ಸ್ಮರಣೆಯೇ ಇರಲಿ. ನಾನು ಎಷ್ಟು ಜನ್ಮಗಳನ್ನು ಪಡೆದರೂ, ನಿಮ್ಮ ಋಣವನ್ನು ತೀರಿಸಲು ಸಾಧ್ಯವಿಲ್ಲ ಗುರುದೇವಾ !
೩ ಐ. ಸಾಧಕರ ಎಲ್ಲ ಇಚ್ಛೆಗಳನ್ನು ಪೂರೈಸುವ ‘ದಯಾಸಾಗರ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ’ ! : ಗುರುದೇವಾ, ನಿಮ್ಮ ಬಳಿ ಕೇಳಲು ನನ್ನ ಬಳಿ ಏನೂ ಇಲ್ಲ, ನಾನು ಕೇಳುವ ಮೊದಲೇ ನೀವು ನನಗೆ ಎಲ್ಲವನ್ನು ಕೊಟ್ಟಿದ್ದೀರಿ. ಹೇ ಗುರುದೇವಾ, ನನಗೆ ಈ ಭವಬಂಧನದಿಂದ ಮುಕ್ತಗೊಳಿಸುವವರು ಬೇರೆ ಯಾರೂ ಇಲ್ಲ. ‘ತಮ್ಮ ಚರಣಕಮಲಗಳಲ್ಲಿ ಆಸರೆ ಸಿಗುವುದು’, ಎಂಬ ಇಚ್ಛೆಯನ್ನು ಮನಸ್ಸಿನಲ್ಲಿಟ್ಟು ನಾನು ಬಂದಿದ್ದೇನೆ. ನನ್ನ ಮೇಲೆ ದಯೆತೋರಿಸುವವರು ನೀವೊಬ್ಬರೇ ಇದ್ದೀರಿ. ಶ್ರೀಹರಿ, ನನ್ನ ಹೃದಯವು ನಿಮಗಾಗಿ ವ್ಯಾಕುಲವಾಗಿದೆ. ಈಗ ನನ್ನ ಒಂದೇ ಧ್ಯೇಯವು ಉಳಿದಿದೆ, ಅದೆಂದರೆ ತಮ್ಮ ಚರಣಗಳಲ್ಲಿ ಲೀನವಾಗಬೇಕು !
‘ಗುರುದೇವಾ, ‘ನನ್ನಲ್ಲಿ ತೀವ್ರ ತಳಮಳ, ನಿರಂತರ ಭಾವಾವಸ್ಥೆ ಮತ್ತು ದೃಢ ಶ್ರದ್ಧೆಯನ್ನು ನೀವೇ ನಿರ್ಮಾಣ ಮಾಡಿರಿ. ‘ಬೇರೆ ಏನೆಲ್ಲ ಬಿಡುವೆನು; ಆದರೆ ಪ್ರಾಣ ಹೋದರು ಸರಿ, ತಮ್ಮ ಚರಣಗಳನ್ನು ಬಿಡಬಾರದು’, ಎಂಬ ದೃಢ ಶ್ರದ್ಧೆಯನ್ನು ನಿರ್ಮಾಣ ಮಾಡಿರಿ ! ಇದೇ ಹಂಬಲವು ನನ್ನ ಕೊನೆಯ ಉಸಿರಿನವರೆಗೆ ನನ್ನ ಹೃದಯದಲ್ಲಿರಲಿ. ‘ಈ ದೇಹದಿಂದ ಪ್ರಾಣವು ಹೊರಗೆ ಹೋಗುವುದರೊಳಗೆ ತಮ್ಮ ಚರಣಗಳ ಧೂಳಾಗಿ ನನ್ನನ್ನು ಸಮರ್ಪಿಸಿಕೊಳ್ಳಿ, ಇದೇ ತಮ್ಮ ಚರಣಗಳಲ್ಲಿ ಶರಣಾತಗತಭಾವದಿಂದ ಪ್ರಾರ್ಥನೆಯಾಗಿದೆ.’
– (ಪೂ.) ರಮಾನಂದ ಗೌಡ, ಮಂಗಳೂರು, ಕರ್ನಾಟಕ. (೨೭.೮.೨೦೨೦)