ಸಾಧಕರೇ, ಆಧ್ಯಾತ್ಮಿಕ ತೊಂದರೆಯ ತೀವ್ರತೆಯು ಸತತ ಬದಲಾಗುತ್ತಿರುವುದರಿಂದ ಆಗಾಗ ತೊಂದರೆಯ ಲಕ್ಷಣಗಳ ಅಧ್ಯಯನ ಮಾಡಿ ‘ಎಷ್ಟು ಗಂಟೆ ಉಪಾಯ ಮಾಡಬೇಕು ?’, ಎಂಬುದನ್ನು ಜವಾಬ್ದಾರ ಸಾಧಕರಲ್ಲಿ ಕೇಳಿಕೊಳ್ಳಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಸಾಧಕರು ಪ್ರತಿದಿನ ನಾಮಜಪ ಮುಂತಾದ ಉಪಾಯಗಳನ್ನು ಮಾಡುತ್ತಾರೆ. ಸಾಧಕರಿಗೆ ಆಗುವ ಆಧ್ಯಾತ್ಮಿಕ ತೊಂದರೆಗಳ ತೀವ್ರತೆಯು ಕೆಲಮೊಮ್ಮೆ ಹೆಚ್ಚಾದರೆ, ಕೆಲವೊಮ್ಮೆ ಕಡಿಮೆ ಇರುತ್ತದೆ (ಮಂದವಾಗಿರುತ್ತದೆ). ಆಧ್ಯಾತ್ಮಿಕ ತೊಂದರೆಗಳು ಹೆಚ್ಚಾದಾಗ ಸಾಧಕರು ಸಮಯಕ್ಕೆ ಸರಿಯಾಗಿ ಅದರ ಕಡೆಗೆ ಗಾಂಭೀರ್ಯದಿಂದ ಗಮನ ಕೊಡುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ತಮಗಾಗುವ ತೊಂದರೆಗಳ ಲಕ್ಷಣಗಳ, ಉದಾ. ಏನೂ ಹೊಳೆಯದಿರುವುದು, ತಲೆ ಭಾರವಾಗುವುದು, ಅನಾವಶ್ಯಕ ವಿಚಾರಗಳು ಬರುವುದು ಇತ್ಯಾದಿ. ಆಗಾಗ ಸಾಧಕರು ಇವುಗಳ ಅಧ್ಯಯನ (ಅಭ್ಯಾಸ) ಮಾಡಬೇಕು. ಇದಕ್ಕೆ ಸಂಬಂಧಿಸಿದ ಮುಂದಿನ ಅಂಶಗಳನ್ನು ಗಮನದಲ್ಲಿ ತೆಗೆದುಕೊಳ್ಳಿರಿ.

೧. ಆಧ್ಯಾತ್ಮಿಕ ತೊಂದರೆಗಳಾಗುತ್ತಿರುವಾಗ ಸೇವೆಯನ್ನು ಮಾಡಿದರೆ ನಾವು ಮಾಡುತ್ತಿರುವ ಸೇವೆಯ ಗತಿ ಕಡಿಮೆಯಾಗುತ್ತದೆ ಮತ್ತು ನಮ್ಮ ಸೇವೆಯ ಫಲನಿಷ್ಪತ್ತಿಯೂ ಕಡಿಮೆಯಾಗುತ್ತದೆ. ಇದರಿಂದ ನಮ್ಮ ಸೇವೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ, ಹಾಗೆಯೇ ಸೇವೆಯಲ್ಲಿ ತಪ್ಪುಗಳಾಗುತ್ತವೆ. ಅದರ ಪರಿಣಾಮದಿಂದ ನಮ್ಮ ಸಾಧನೆಯಲ್ಲಿ ಹಾನಿ ಆಗುತ್ತದೆ. ಇದನ್ನು ತಡೆಯಲು ನಮಗೆ ಆಧ್ಯಾತ್ಮಿಕ ತೊಂದರೆಗಳಾಗುತ್ತಿದ್ದರೆ ಕೂಡಲೇ ಜಾಗರೂಕರಾಗಿ ಉಪಾಯಗಳನ್ನು ಮಾಡಲು ಆಧ್ಯತೆಯನ್ನು (Preference) ಕೊಡಬೇಕು ಮತ್ತು ಆ ತೊಂದರೆಗಳು ದೂರವಾದ ನಂತರ ಸೇವೆಯನ್ನು ಮಾಡಲು ಪ್ರಾರಂಭಿಸಬೇಕು.

೨. ನಮಗಾಗುತ್ತಿರುವ ತೊಂದರೆಗಳ ಅಧ್ಯಯನವನ್ನು ಪುನಃ ಪುನಃ ಮಾಡಿ ಪ್ರತಿ ೧೫ ದಿನಗಳಿಗೊಮ್ಮೆ ‘ನಾಮಜಪ ಮುಂತಾದ ಉಪಾಯಗಳನ್ನು ಎಷ್ಟು ಗಂಟೆ ಮಾಡಬೇಕು ?’, ಎಂಬುದರ ಬಗ್ಗೆ ಜವಾಬ್ದಾರ ಸಾಧಕರಲ್ಲಿ ಕೇಳಬೇಕು.

. ಕೆಲವು ಸಾಧಕರು ಆಗಾಗ ನಾಮಜಪಾದಿ ಉಪಾಯಗಳನ್ನು ಹುಡುಕಲು ಮೈಗಳ್ಳತನ ಮಾಡುತ್ತಾರೆ ಅಥವಾ ಮುಂದೂಡುತ್ತಾರೆ ಅಥವಾ ಬೇಸರಪಡುತ್ತಾರೆ. ಸಾಧಕರು ಉಪಾಯಗಳ ಗಾಂಭೀರ್ಯವನ್ನು ಗಮನದಲ್ಲಿಟ್ಟುಕೊಂಡು ಆಗಾಗ ಉಪಾಯಗಳನ್ನು ಹುಡುಕಬೇಕು. ತಮಗೆ ಉಪಾಯಗಳನ್ನು ಹುಡುಕಲು ಬರದಿದ್ದರೆ ಜವಾಬ್ದಾರ ಸಾಧಕರಲ್ಲಿ ಉಪಾಯಗಳನ್ನು ಕೇಳಬೇಕು.

೪. ಬಹಳಷ್ಟು ಸಾಧಕರಿಗೆ ಆಧ್ಯಾತ್ಮಿಕ ತೊಂದರೆಗಳು ಇರುವುದಿಲ್ಲ; ಆದರೆ ಅವರಿಗೆ ಕೆಲವೊಂದು ಸಮಯ ತಾತ್ಕಾಲಿಕ ತೊಂದರೆಗಳು ಕಡಿಮೆಯಾಗಲು ಉಪಾಯವನ್ನು ಮಾಡಲು ಹೇಳಲಾಗುತ್ತದೆ. ಜವಾಬ್ದಾರ ಸಾಧಕರು ಇಂತಹ ಸಾಧಕರ ತೊಂದರೆಗಳ ಲಕ್ಷಣಗಳನ್ನು ಆಗಾಗ ಅಧ್ಯಯನ ಮಾಡಬೇಕು ಮತ್ತು ಅವರ ಉಪಾಯಗಳ ಗಂಟೆಗಳನ್ನು ನಿಶ್ಚಯಿಸಬೇಕು.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೦.೨೦೨೨)

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.