ಅಧ್ಯಾತ್ಮದ ಬಗ್ಗೆ ಆಧುನಿಕ ವಿಜ್ಞಾನಿಗಳ ವಿಚಾರಗಳು

ಖಗೋಳವಿಜ್ಞಾನಿ ಸರ್ ಆರ್ಥರ್ ಎಡಿಂಗ್ಟನ್

ಭೌತಿಕಶಾಸ್ತ್ರಗಳ ಮೂಲಕ ವಿಶ್ವದ ರಹಸ್ಯವನ್ನು ಬಿಡಿಸಿಹೇಳಲು ಆಗುವುದಿಲ್ಲ –  ಖಗೋಳವಿಜ್ಞಾನಿ ಸರ್ ಆರ್ಥರ್ ಎಡಿಂಗ್ಟನ್

‘ಕೆಂಬ್ರಿಜ್ ವಿಶ್ವವಿದ್ಯಾಲಯದ ಸರ್ ಆರ್ಥರ್ ಎಂಡಿಗ್ಟನ್ ಇವರು ಖಗೋಲವಿಜ್ಞಾನಿಯಾಗಿದ್ದಾರೆ. ಅವರು ‘ಬ್ರಹ್ಮಾಂಡದ ರಹಸ್ಯವನ್ನು ಭೌತಶಾಸ್ತ್ರಗಳಿಂದ ತಿಳಿಯಬಹುದು’ ಎಂದು ಹೇಳುವ, ೧೯ ನೇ ಶತಮಾನದ ಕಲ್ಪನೆಯನ್ನು ಈಗಿನ ಆಧುನಿಕ ವಿಜ್ಞಾನಿಗಳು ತಳ್ಳಿ ಹಾಕಿದ್ದಾರೆ. ನಾಸ್ತಿಕವಾದವು ಈಗ ಮುಗಿದು ಹೋಗಿದೆ. ಅಧ್ಯಾತ್ಮ ಮತ್ತು ಬುದ್ಧಿಯ ಮೇಲೆ ಆಧರಿಸಿದ  ಸನಾತನ ಧರ್ಮದ ಮೇಲೆ ಈಗ ಯಾರೂ ಪ್ರಹಾರ ಮಾಡಲಾರರು.

೨. ಅಧ್ಯಾತ್ಮವು ಭೌತಿಕತೆಯನ್ನು ನಿರ್ಮಾಣ ಮಾಡುತ್ತದೆ ಮತ್ತು ಅದುವೇ ಅದರ ನಿಯಂತ್ರಣವನ್ನೂ ಮಾಡುತ್ತದೆ ! – ಸರ್ ಜೇಮ್ಸ್ ಜೀನ್ಸ್, ಖಗೋಳಶಾಸ್ತ್ರಜ್ಞರು

ಸರ್ ಜೇಮ್ಸ್ ಜೀನ್ಸ್ ಇವರು ಕೆಂಬ್ರಿಜ್ ಮತ್ತು ಪ್ರಿಸ್ಟನ್ ವಿಶ್ವವಿದ್ಯಾಲಯದ ಹಿರಿಯ ಗಣಿತತಜ್ಞ ಮತ್ತು ಖಗೋಳವಿಜ್ಞಾನಿ ಆಗಿದ್ದಾರೆ. ಗ್ರೆಟ್ ಬ್ರಿಟನಿನ ರಾಯಲ್ ಸೊಸೈಟಿಯ ಕಾರ್ಯದರ್ಶಿ ಇವರು ‘ಆಧುನಿಕ ಶಾಸ್ತ್ರವು ವಿಶ್ವದ ಚೇತನವಾದದ ಕಡೆಗೆ ವೇಗದಿಂದ ಹೋಗುತ್ತಿದೆ. ಈಗ ಜಗತ್ತು ಯಂತ್ರಾತ್ಮಕವಾಗಿ ಕಾಣಿಸುವುದಿಲ್ಲ, ಈಗ ಅದು ವಿಚಾರಾತ್ಮಕವಾಗಿ ಕಾಣಿಸುತ್ತದೆ. ಇಂದು ಅಧ್ಯಾತ್ಮದ ಸ್ವಾಗತವಾಗುತ್ತಿದೆ. ಅದುವೇ ಭೌತಿಕತೆಯನ್ನು ನಿರ್ಮಾಣ ಮಾಡಿಸುತ್ತದೆ ಮತ್ತು ಅದುವೇ ಅದರ ನಿಯಂತ್ರಣವನ್ನೂ ಮಾಡುತ್ತದೆ. ವಿಶ್ವವೇ ಈಶ್ವರವಾಗಿದೆ. ಇದು ಒಂದು ಶುದ್ಧ ವಿಚಾರವಾಗಿದೆ. ಈ ವಿಶ್ವವನ್ನು ನಡೆಸುವ ವಿರಾಟ ಮಹಾಪುರುಷನು (ಈಶ್ವರನು) ಗಣಿತಜ್ಞನಾಗಿರಲೇಬೇಕು. ವಿಶ್ವದ ವಿಚಾರವನ್ನು ಮಾಡುವಾಗ ಭೌತಿಕತೆಗೆ ಅಧ್ಯಾತ್ಮದ ಜೊತೆ ಸಿಗುತ್ತದೆ, ಎಂದಾಗಿರದೇ ಭೌತಿಕತೆಯೇ ನಾಶವಾಗುತ್ತಿದೆ, ಭೌತಿಕತೆಯಲ್ಲಿನ ಯಾವುದೇ ವಸ್ತು ಬಾಕಿ ಉಳಿಯುವುದಿಲ್ಲ. ಅಧ್ಯಾತ್ಮವೇ (ಈಶ್ವರನೇ) ಜಗತ್ತಿನ ಹಿನ್ನೆಲೆಯಾಗಿದೆ ಎಂದು ಅವರು ಹೇಳುತ್ತಾರೆ

೩. ವಿಶ್ವಶಕ್ತಿ ಯಂತ್ರಾತ್ಮಕವಾಗಿರದೇ ಆಧ್ಯಾತ್ಮಿಕ ಸ್ವರೂಪದ್ದಾಗಿದೆ ! – ಕರ್ಟಲಿ ಮಾದರ್ ಹಾವರ್ಡ್, ಭೂಸ್ತರ ಜೀವವಿಜ್ಞಾನಿ

ಪ್ರಖ್ಯಾತ ಭೂಸ್ತರ ಜೀವವಿಜ್ಞಾನಿ ಕರ್ಟಲೀ ಮಾದರ ಹಾವರ್ಡ್ ಇವರು, ಇಂದು ನಮಗೆ ಅಣುಗಳ ಮೂಲ ಬಣ್ಣದಲ್ಲಿ ಸಂಚರಿಸುವ ವಿಶ್ವಶಕ್ತಿಯು ಯಂತ್ರಾತ್ಮಕವಾಗಿರದೇ ಆಧ್ಯಾತ್ಮಿಕ ಸ್ವರೂಪದ್ದಾಗಿದೆ ಎಂದು ಕಂಡು ಬಂದಿದೆ ಎಂದು ಹೇಳುತ್ತಾರೆ.

೪. ಈ ಜಗತ್ತಿನಲ್ಲಿ ಇರುವುದೆಲ್ಲವೂ ಪರಮೇಶ್ವರನೇ ಆಗಿದೆ – ಸರ್ ಜೇಮ್ಸ್ ಜೀನ್ಸ್, ಖಗೋಳವಿಜ್ಞಾನಿ

ಖಗೋಳವಿಜ್ಞಾನಿ ಸರ್ ಜೇಮ್ಸ್ ಜೀನ್ಸ್ ಇವರ ವಿಚಾರಗಳಿಗೆ ಬಹಳ ಮಹತ್ವವಿದೆ. ಅವರ ಅಭಿಪ್ರಾಯಕ್ಕನುಸಾರ ಈ ಜಗತ್ತು ಯಂತ್ರಾತ್ಮಕವಾಗಿರದೇ ವಿಚಾರಾತ್ಮಕ ಸ್ವರೂಪದಲ್ಲಿದೆ. ವಸ್ತುಸ್ಥಿತಿ ಮತ್ತು ಘಟನೆಗಳ ನಿರೀಕ್ಷಣೆಯನ್ನು ಮಾಡುವಾಗ, ಇದು ನಿರ್ಜೀವ ಯಂತ್ರಗಳ ಕಾರ್ಯವಾಗಿದೆ ಎಂದು ಹೇಳಿದರೆ ಅವುಗಳ ರಹಸ್ಯವನ್ನು ಬಿಡಿಸಲು ಸಾಧ್ಯಗುವುದಿಲ್ಲ. ಈ ಘಟನೆ ಎಂದರೆ ಚಿನ್ಮಯನ (ಈಶ್ವರನ) ವ್ಯಕ್ತ ಸ್ವರೂಪವಾಗಿದೆ. ವಿಶ್ವವು ಮನಸ್ಸಿನ ಅಭಿವ್ಯಕ್ತಿ (ಪ್ರಕಟೀಕರಣ) ಆಗಿದೆ. ಇದೇ ನಿರ್ಣಯವನ್ನು ದ್ರವ್ಯ ಮತ್ತು ಶಕ್ತಿಗಳ ಹೆಚ್ಚೆಚ್ಚು ಪೃಥಃಕರಣ (ಬೇರೆ ಬೇರೆ) ಮಾಡಿ ನಮಗೆ ಕೊಡಬೇಕಾಗುತ್ತದೆ. ನನ್ನ ಈಶ್ವರನ ಮೇಲಿನ ಶ್ರದ್ಧೆ ಈ ಸ್ವರೂಪದ್ದಾಗಿದೆ, ಮಾನವನಿಂದ ಶ್ರೇಷ್ಠ ಪುರುಷನನ್ನು ನಿರ್ಮಾಣ ಮಾಡುವ ಈ ವಿಶ್ವದಲ್ಲಿ ಏನೆಲ್ಲ ಇದೆಯೋ, ಅದೆಲ್ಲವೂ ಪರಮೇಶ್ವರನೇ ಆಗಿದೆ. ಈ ವಿಶ್ವದಲ್ಲಿ ಸಜ್ಜನರಿದ್ದಾರೆ ಹಾಗಾದರೆ ಅವರನ್ನು ನಿರ್ಮಾಣ ಮಾಡುವ ವಿಶ್ವಶಕ್ತಿಯು ಅವರಿಗಿಂತ ಎಷ್ಟೋ ಪಟ್ಟು ಪುಣ್ಯಶೀಲವಾಗಿರಲೇಬೇಕು.’

(ಕೃಪೆ : ಮಾಸಿಕ ‘ಘನಗರ್ಜಿತ’, ಜನವರಿ ೨೦೨೧)

ಇದರ ಬಗ್ಗೆ ಭಾರತದಲ್ಲಿನ ಬುದ್ಧಿಪ್ರಾವಣ್ಯವಾದಿಗಳು, ಕಥಿತ ಪ್ರಗತಿ(ಅಧೋಗತಿ)ಪರರು ಮತ್ತು ನಾಸ್ತಿಕವಾದಿಗಳಿಗೆ  ಏನು ಹೇಳುವುದಿದೆ ? – ಸಂಪಾದಕರು.