ಕಾಂಗ್ರೆಸ್‌ಗೆ ಹಿಂದೂಗಳ ಬಗ್ಗೆ ಇರುವ ಅಪನಂಬಿಕೆಯನ್ನು ತಿಳಿಯಿರಿ !

ಕಾಂಗ್ರೆಸ್ ಅಭ್ಯರ್ಥಿ ಚಂದನ್ ಠಾಕೋರ್

೧. ಕಾಂಗ್ರೆಸ್‌ಗೆ ಹಿಂದೂಗಳ ಬಗ್ಗೆ ಇರುವ ಅಪನಂಬಿಕೆಯನ್ನು ತಿಳಿಯಿರಿ !

ಗುಜರಾತನ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದನ್ ಠಾಕೋರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ‘ಈಗ ದೇಶವನ್ನು ಯಾರಾದರೂ ಉಳಿಸಬಹುದಾದರೆ ಅದು ಮುಸಲ್ಮಾನರು ಮತ್ತು ಕಾಂಗ್ರೆಸ್ ಮಾತ್ರ’ ಎಂದು ಹೇಳಿದ್ದಾರೆ.

೨. ಭಾರತದಲ್ಲಿ ಹಿಜಾಬ್ ಬೆಂಬಲಿಗರು ಈ ಬಗ್ಗೆ ಮಾತನಾಡುತ್ತಾರೆಯೇ ?

ದೋಹಾದ (ಕತಾರ್) ಫುಟಬಾಲ್ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮತ್ತು ಇರಾನ್ ನಡುವಿನ ಪಂದ್ಯಕ್ಕೂ ಮುನ್ನ ಇರಾನ್ ಆಟಗಾರರು ಹಿಜಾಬ್‌ವಿರೋಧಿ ಆಂದೋಲನವನ್ನು ಬೆಂಬಲಿಸಿ ತಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡಲಿಲ್ಲ.

೩. ಇಸ್ಲಾಮಿಕ್ ದೇಶಗಳ ವಿರುದ್ಧ ಕ್ರಮ ಕೈಗೊಳ್ಳಬೇಕು !

‘ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಕೊಲ್ಲಿ ದೇಶಗಳಿಂದ ಹಣ ಪೂರೈಕೆಯಾಗುತ್ತಿತ್ತು’ ಎಂದು ಜಾರಿ ನಿರ್ದೇಶನಾಲಯವು ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪತ್ರದಲ್ಲಿ ತಿಳಿಸಿದೆ.

೪. ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನಿ ಆಡಳಿತ !

ರಾಜಸ್ಥಾನದ ಭರತಪುರದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನವ ದಂಪತಿಗಳಿಗೆ ಹಿಂದೂವಿರೋಧಿ ಪ್ರಮಾಣ ವಚನ ಬೋಧಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ವಿಡಿಯೋ ಪ್ರಸಾರವಾಗಿದೆ.

೫. ಇಂತಹ ಪಠ್ಯಕ್ರಮವು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಗತ್ಯವಿದೆ !

ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರಾಕೃತ ವಿಭಾಗವು ಅಥರ್ವಶೀರ್ಷ ಪ್ರಮಾಣಪತ್ರ ಪಠ್ಯಕ್ರಮವನ್ನು ಆರಂಭಿಸಿದ್ದು ಅದಕ್ಕೆ ವಿಶ್ವವಿದ್ಯಾಲಯವು ಅನುಮತಿ ನೀಡಿದೆ.

೬. ಇದು ಎಲ್ಲ ಮುಸಲ್ಮಾನರಿಗೆ ಒಪ್ಪಿಗೆ ಇದೆಯೇ ?

‘ಭಗವಾನ್ ಶ್ರೀರಾಮ ಹಿಂದೂಗಳಿಗೆ ಮಾತ್ರವಲ್ಲ ಎಲ್ಲಾ ಜನರಿಗೆ ಸಂಬಂಧಿಸಿದ್ದಾರೆ’, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಜಮ್ಮು-ಕಾಶ್ಮೀರದಲ್ಲಿನ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

೭. ಮತಾಂತರನಿಷೇಧ ಕಾನೂನು ಯಾವಾಗ ಬರುತ್ತದೆ ?

ದಮೋಹ (ಮಧ್ಯಪ್ರದೇಶ)ದಲ್ಲಿ ಓರ್ವ ದಲಿತ ಹಿಂದೂ ದಂಪತಿಗಳಿಗೆ ೧ ಲಕ್ಷ ೨೦ ಸಾವಿರ ರೂಪಾಯಿ ನೀಡಿ ಕ್ರೈಸ್ತರನ್ನಾಗಿ ಮಾಡಿದ ನಂತರ ಅವರು ಚರ್ಚಗೆ ಬರುತ್ತಿಲ್ಲವೆಂದು ಅವರಿಂದ ನಾಲ್ಕು ಪಟ್ಟು ಹಣ ಕೇಳಿದ ಘಟನೆ ಬೆಳಕಿಗೆ ಬಂದಿದೆ.