ಗೀತಾ ಜಯಂತಿ ಪ್ರಯುಕ್ತ : ಭಗವದ್ಗೀತೆ ಏನು ಹೇಳುತ್ತದೆ ?

ಮಾರ್ಗಶಿರ ಶುಕ್ಲ ಏಕಾದಶಿಯಂದು (ಡಿಸೆಂಬರ್ ೧೧) ಗೀತಾ ಜಯಂತಿ

೧. ಪ್ರಶ್ನೆ : ನಿಮ್ಮ ಎಲ್ಲ ಲೇಖನಗಳಲ್ಲಿ ಭಗವದ್ಗೀತೆಯ ಉಲ್ಲೇಖವಿರುತ್ತದೆ. ನಾವು ಗೀತೆಯನ್ನು ಓದಲಿಲ್ಲ; ಆದರೆ ಬಹುತೇಕ ಎಲ್ಲ ಧಾರ್ಮಿಕ ಪುಸ್ತಕಗಳಲ್ಲಿ ಯಾವುದಾದರೊಬ್ಬರ ಚರಿತ್ರೆ ಮತ್ತು ಚಮತ್ಕಾರವೇ ಇರುತ್ತವೆ. ಗೀತೆಯಲ್ಲಿ ಬೇರೆ ಏನು ವಿಶೇಷವಿದೆ ?

ಉತ್ತರ :

ಅ. ಭಗವದ್ಗೀತೆಯು ಯಾರ ಚರಿತ್ರೆಯನ್ನು ಹೇಳುವುದಿಲ್ಲ.

. ಗೀತೆಯು ಯಾವುದೇ ಚಮತ್ಕಾರಗಳನ್ನು ವರ್ಣಿಸುವುದಿಲ್ಲ.

. ಗೀತೆಯು ಮಾಂತ್ರಿಕ, ತಾಂತ್ರಿಕ, ಮಠಾಧೀಶರಲ್ಲಿ ಯಾರಲ್ಲಿಯೂ ನಮ್ಮನ್ನು ಸಿಲುಕಿಸುವುದಿಲ್ಲ.

. ಗೀತೆಯು ಗೀತೆಯ ಪಾರಾಯಣವನ್ನು ಮಾಡಲು ಹೇಳುವುದಿಲ್ಲ.

. ಗೀತೆಯಲ್ಲಿ ಯಾವುದೇ ಮಂತ್ರವನ್ನು ಹೇಳಲು ಒತ್ತಾಯವಿಲ್ಲ

. ಗೀತೆಯು ಯಾವುದೇ ಸ್ಥಾನಮಹಾತ್ಮೆ, ತೀರ್ಥಯಾತ್ರೆಯನ್ನು ಮಾಡಲು ಹೇಳುವುದಿಲ್ಲ.

. ಗೀತೆಯು ಯಾವುದೇ ಅನುಷ್ಠಾನವನ್ನು ಮಾಡಲು ಕಲಿಸುವುದಿಲ್ಲ.

. ಗೀತೆಯಲ್ಲಿ ಯಾವುದೇ ಸಾಧನಾಮಾರ್ಗವನ್ನು ಕಡಿಮೆಯೆಂದು ಪರಿಗಣಿಸುವುದಿಲ್ಲ.

. ಗೀತೆಯು ಯಾರಲ್ಲಿಯೂ ಅವಲಂಬಿಸಿರಲು ಹೇಳುವುದಿಲ್ಲ.

. ಗೀತೆಯಲ್ಲಿ ಫತ್ವಾಗಳು, ಕಮಾಂಡಮೆಂಟ್ಸ್, ಆಜ್ಞೆಗಳಿಲ್ಲ.

ಪೂ. ಅನಂತ ಆಠವಲೆ

೨. ಪ್ರಶ್ನೆ : ಹಾಗಾದರೆ ಗೀತೆ ಏನು ಹೇಳುತ್ತದೆ ?

ಉತ್ತರ : ಒಂದು ಶ್ಲೋಕವಿದೆ –

‘ನ ಹಸ್ತೇ ಯಷ್ಟಿಮಾದಾಯ ದೇವಾಃ ರಕ್ಷನ್ತಿ ಸಾಧಕಮ್ |

ಯಂ ತು ರಕ್ಷಿತುಮಿಚ್ಛನ್ತಿ ಸುಬುದ್ಧ್ಯಾಮ್ ಯೋಜಯನ್ತಿ ತಮ್ ||’

ಅರ್ಥ : ‘ದೇವತೆಗಳು ಕೈಯಲ್ಲಿ ಕೋಲು ಹಿಡಿದು ಸಾಧಕನ ರಕ್ಷಣೆಯನ್ನು ಮಾಡುವುದಿಲ್ಲ. ಯಾರ ರಕ್ಷಣೆಯನ್ನು ಮಾಡಬೇಕೆಂದು ಇಚ್ಛಿಸುತ್ತಾರೋ ಅವರಿಗೆ ಸದ್ಬುದ್ಧಿಯಿಂದ ಯುಕ್ತಗೊಳಿಸುತ್ತಾರೆ.’ ಗೀತೆಯು ಸಹ ಇದನ್ನೇ ಮಾಡುತ್ತದೆ !

ಭಗವಾನ ಶ್ರೀಕೃಷ್ಣನು, ಈ ಗೀತೆಯಲ್ಲಿ ಇದನ್ನು ಹೇಳಿದ್ದಾನೆ. ಭಗವದ್ಗೀತೆಯ ಅ. ೧೦ ರಲ್ಲಿ ನಾನು ಭಕ್ತರಿಗೆ ಮೋಕ್ಷವನ್ನು ಕೊಡುತ್ತೇನೆ, ಎಂದು ಹೇಳುವುದಿಲ್ಲ. ಅವನು ‘ನಾನು ಅವರಿಗೆ ಬುದ್ಧಿಯನ್ನು ಕೊಡುತ್ತೇನೆ’ ಎಂದು ಹೇಳುತ್ತಾನೆ.

‘ದದಾಮಿ ಬುದ್ಧಿಯೋಗಂ ತಂ ಯೇನ ಮಾಂ ಉಪಯಾನ್ತಿ ತೇ ||’

– ಭಗವದ್ಗೀತೆ, ಅಧ್ಯಾಯ ೧೦, ಶ್ಲೋಕ ೧೦

ಅರ್ಥ : ‘ನನ್ನ ಭಕ್ತರಿಗೆ ನಾನು ತತ್ತ್ವದ ಜ್ಞಾನವನ್ನು ನೀಡುತ್ತೇನೆ ಅದರಿಂದ (ಆ ರೀತಿ ಪ್ರಯತ್ನಿಸಿ) ಅವರು ನನಗೆ ಪ್ರಾಪ್ತವಾಗುತ್ತಾರೆ.’

ಸಂಕ್ಷಿಪ್ತವಾಗಿ ಹೇಳುವುದಾದರೆ, ಗೀತೆಯು ಜನ್ಮಮರಣದ ಚಕ್ರಗಳಿಂದ ಬಿಡುಗಡೆಯಾಗುವ ಪ್ರಯತ್ನಗಳನ್ನು ಮಾಡುವ ಬುದ್ಧಿಯನ್ನು ನೀಡಿ ಅದಕ್ಕಾಗಿ ಉಪಾಯವನ್ನು (ಮಾರ್ಗ) ಸಹ ಹೇಳುತ್ತದೆ. ಅನೇಕ ಮಾರ್ಗಗಳನ್ನು ಹೇಳಿ ನಮ್ಮ ಪ್ರಕೃತಿಗೆ ಇಷ್ಟವಾಗುವ ಮಾರ್ಗವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೂ ಕೊಡುತ್ತದೆ.

– ಅನಂತ ಆಠವಲೆ (೨೨.೪.೨೦೨೧)

|| ಶ್ರೀಕೃಷ್ಣಾರ್ಪಣಮಸ್ತು ||