೧. ಅರ್ಥ
ಈಶ್ವರನ ನಿರ್ಗುಣ ಲಹರಿಗಳನ್ನು ಸಮಾವೇಶಗೊಳಿಸಿಕೊಳ್ಳುವ ಹಾಗೂ ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಲು ಸಂಪೂರ್ಣ ತ್ರಿಲೋಕಕ್ಕೆ ಒಂದೇ ಸಮಯದಲ್ಲಿ ಒಂದೇ ಕ್ಷಣದಲ್ಲಿ ಮಂಡಲವನ್ನು ಹಾಕುವ ಕ್ಷಮತೆಯುಳ್ಳ ಜಲವು ಯಾವ ಕುಂಡದಲ್ಲಿದೆಯೋ, ಅಂತಹ ಕುಂಡವೆಂದರೆ ಕಮಂಡಲ. – ಓರ್ವ ವಿದ್ವಾಂಸ (ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೫.೨೦೦೫, ಬೆಳಗ್ಗೆ ೧೧.೩೯)
೨. ವೈಶಿಷ್ಟ್ಯ
ದತ್ತನ ಕೈಯಲ್ಲಿರುವ ಕಮಂಡಲದಲ್ಲಿನ ಜಲವು ಅತ್ಯಂತ ಪವಿತ್ರವಾಗಿದೆ. – ಕು. ಮಧುರಾ ಭೋಸಲೆ
೩. ಯಾವುದರ ಪ್ರತೀಕ ?
೧. ‘ಕಮಂಡಲ ಮತ್ತು ದಂಡ ಈ ವಸ್ತುಗಳು ಸಂನ್ಯಾಸಿಯ ಜೊತೆಗೆ ಇರುತ್ತವೆ. ಸಂನ್ಯಾಸಿಯು ವಿರಕ್ತನಾಗಿರುತ್ತಾನೆ. ಕಮಂಡಲವು ಒಂದು ರೀತಿಯಲ್ಲಿ ತ್ಯಾಗದ ಪ್ರತೀಕವಾಗಿದೆ; ಏಕೆಂದರೆ ಕಮಂಡಲವೇ ಅವನ ಐಹಿಕ ಧನವಾಗಿರುತ್ತದೆ.’
೨. ದತ್ತನ ಕೈಯಲ್ಲಿರುವ ಕಮಂಡಲವು ನಿರ್ಗುಣ ರೂಪಿ ಸುಪ್ತ ಮಾರಕ ಚೈತನ್ಯದ ಪ್ರತೀಕವಾಗಿದೆ.
೪. ಕಮಂಡಲದ ದಿಕ್ಕಿನಂತೆ ಅದರ ಕಾರ್ಯ
೧. ಕಮಂಡಲವು ಯಾವ ದಿಕ್ಕಿಗೆ ಬಾಗುತ್ತದೆಯೋ, ಆಯಾ ದಿಕ್ಕುಗಳಲ್ಲಿರುವ ಕೆಟ್ಟ ಶಕ್ತಿಗಳ ಸಂಹಾರ : ದತ್ತನ ಕೈಯಲ್ಲಿರುವ ಕಮಂಡಲವು ಅವಶ್ಯಕತೆಗನುಸಾರ ಕೆಟ್ಟ ಶಕ್ತಿಗಳ ನಾಶಕ್ಕಾಗಿ ಬಾಗಿರುವ ಅವಸ್ಥೆಯಲ್ಲಿ, ಹತ್ತೂ ದಿಕ್ಕುಗಳಲ್ಲಿ ಸಂಚರಿಸಿ, ಆಯಾ ಸ್ಥಳಗಳಲ್ಲಿ ನಿರ್ಗುಣ ರೂಪಿ ಮಾರಕ ಚೈತನ್ಯದ ಪ್ರವಾಹೀ ಧಾರೆಯನ್ನು ಪ್ರಕ್ಷೇಪಿಸುತ್ತದೆ.
೨. ಪಾತಾಳದ ದಿಕ್ಕಿನತ್ತ ಮಗುಚಿ ಪಾತಾಳದಲ್ಲಿನ ಕೆಟ್ಟ ಶಕ್ತಿಗಳ ಸಂಹಾರ : ವಿನಾಶದ ಕಾಲದಲ್ಲಿ ಕಮಂಡಲವು ಪೂರ್ಣ ಪಾತಾಳದ ದಿಕ್ಕಿನತ್ತ ಮಗುಚಿ ಪಾತಾಳದಲ್ಲಿನ ಎಲ್ಲ ಪ್ರಕಾರದ ಕೆಟ್ಟ ಶಕ್ತಿಗಳನ್ನು ಸಂಹರಿಸಿ ಶಿವನ ಲಯಶಕ್ತಿಗೆ ಸಹಾಯ ಮಾಡುತ್ತದೆ.
೩. ಆಕಾಶದ ದಿಕ್ಕಿನತ್ತ ಸ್ಥಿರವಾಗಿ ಬ್ರಹ್ಮಾಂಡದ ಸಮತೋಲನ ಅವಸ್ಥೆ : ಕಮಂಡಲದ ಆಕಾಶದ ದಿಕ್ಕಿನಲ್ಲಿರುವ ಸ್ಥಿರಸ್ಥಿತಿಯು ಬ್ರಹ್ಮಾಂಡದಲ್ಲಿನ ಸಮತೋಲನ ಅವಸ್ಥೆಯನ್ನು ತೋರಿಸುತ್ತದೆ.
– ಓರ್ವ ವಿದ್ವಾಂಸ (ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ‘ಓರ್ವ ವಿದ್ವಾಂಸ’ ಎಂಬ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ)
ಪೂರ್ವಜರ ತೊಂದರೆಯಿಂದ ರಕ್ಷಣೆ ಮಾಡುವ ದೇವತೆ !
ದತ್ತ
ಕಿರುಗ್ರಂಥ : ದತ್ತ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ) ದತ್ತ ತತ್ತ್ವದ ಅನುಭೂತಿ ನೀಡುವ ಸನಾತನದ ಉತ್ಪಾದನೆ !ಶ್ರೀ ದತ್ತನ ಸಾತ್ವಿಕ ಚಿತ್ರ, ನಾಮಪಟ್ಟಿ ಮತ್ತು ಲಾಕೆಟ್ ಲಭ್ಯ ! ಸಂಚಾರಿವಾಣಿ ಸಂಖ್ಯೆ : ೯೩೭೯೭೭೧೭೭೧ ಸನಾತನದ ಗ್ರಂಥ ಸಂಪತ್ತು ಈಗ SanatanShop.com ದಲ್ಲಿ ಲಭ್ಯ |