೨೬/೧೧ ರ ಸೂತ್ರಧಾರರಿಗೆ ಶಿಕ್ಷೆ ವಿಧಿಸಿ !

ನ್ಯೂಯಾರ್ಕ್ ನಲ್ಲಿನ ಪಾಕಿಸ್ತಾನಿ ರಾಯಭಾರಿ ಕಚೇರಿಯ ಬಳಿ ಭಾರತೀಯರ ಪ್ರತಿಭಟನೆ !

ಪಾಕಿಸ್ತಾನದ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಭಾರತೀಯರು

ನ್ಯೂಯಾರ್ಕ್ (ಅಮೇರಿಕಾ) – ಮುಂಬಯಿ ಮೇಲಿನ ೨೬/೧೧ರ ಭಯೋತ್ಪಾದಕ ದಾಳಿಗೆ ೧೪ ವರ್ಷ ಕಳೆದಿದೆ ಅದರ ಪ್ರಯುಕ್ತ ಇಲ್ಲಿಯ ಭಾರತೀಯರು ಪಾಕಿಸ್ತಾನದ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಾಕಿಸ್ತಾನ ಈ ದಾಳಿಯ ಸೂತ್ರಧಾರರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯರು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಅವರ ಕೈಯಲ್ಲಿ ಇರುವ ಫಲಕದಲ್ಲಿ `ವಂದೇ ಮಾತರಂ’, `ಭಾರತ್ ಮಾತಾ ಕಿ ಜೈ’, `ನಾವು ಕ್ಷಮಿಸುವುದಿಲ್ಲ ಮತ್ತು ಮರೆಯುವುದಿಲ್ಲ’, `ಪಾಕಿಸ್ತಾನದ ಮೇಲೆ ನಿಷೇದ ಹೇರಿ’ ಎಂದು ಬರೆಯಲಾಗಿತ್ತು.

ಸಂಪಾದಕೀಯ ನಿಲುವು

ಕಳೆದ ೧೪ ವರ್ಷದಲ್ಲಿ ಪಾಕಿಸ್ತಾನವು ಈ ಸೂತ್ರದಾರರಿಗೆ ಶಿಕ್ಷೆ ನೀಡಲಿಲ್ಲ ಮತ್ತು ಮುಂದೆಯೂ ನೀಡುವುಲು ಸಾಧ್ಯತೆ ಇಲ್ಲ. ಪಾಕಿಸ್ತಾನಕ್ಕೆ ಭಾರತವು ಸೈನ್ಯ ಕಾರ್ಯಾಚರಣೆಯ ಮೂಲಕ ಅದಕ್ಕೆ ಪಾಠ ಕಲಿಸುವುದು ಅವಶ್ಯಕವಾಗಿದೆ !