ಬೆಲ್ಜಿಯಮಿನ ರಾಜಧಾನಿ ಬ್ರಸೆಲ್ಸ್ ನಲ್ಲಿ ಹಿಂಸಾಚಾರ !

ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯಲ್ಲಿ ಮೋರೊಕ್ಕೊ ಬೆಲ್ಜಿಯಮಅನ್ನು ಮಣಿಸಿತು

ಬ್ರಸೆಲ್ಸ್ (ಬೆಲ್ಜಿಯಮ) – ಕತಾರದಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯಲ್ಲಿ ಮೊರೊಕ್ಕೊ ಮತ್ತು ಬೆಲ್ಜಿಯಮ ಇವರ ನಡುವೆ ನಡೆದಿರುವ ಸ್ಪರ್ಧೆಯಲ್ಲಿ ಮೊರೊಕ್ಕೊದ ಬೆಲ್ಜಿಯಮಅನ್ನು ಸೋಲಿಸಿದನಂತರ ಬೆಲ್ಜಿಯಮನ ರಾಜಧಾನಿ ಬ್ರಸೆಲ್ಸ್ ನಲ್ಲಿ ಹಿಂಸಾಚಾರ ನಡೆದಿದೆ. ಸೋಲಿನಿಂದ ಆಕ್ರೋಶಗೊಂಡಿರುವ ಫುಟ್ಬಾಲ್ ಪ್ರೇಮಿಗಳು ಇಲ್ಲಿಯ ವಾಹನಗಳನ್ನು ಧ್ವಂಸ ಮಾಡಿ ಮತ್ತು ಅದಕ್ಕೆ ಬೆಂಕಿ ಹಚ್ಚುವ ಘಟನೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರು ವಾಯುವಿನ ಉಪಯೋಗ ಮತ್ತು ನೀರಿನ ಉಪಯೋಗ ಮಾಡಿದ್ದಾರೆ. ಈ ಹಿಂಸಾಚಾರದ ಪ್ರಕರಣದಲ್ಲಿ ೧೨ ಜನರನ್ನು ವಶಕ್ಕೆ ಪಡೆಯಲಾಗಿದೆ.

ಜಗತ್ತಿನ ಎರಡನೆಯ ಸ್ಥಾನದ ಫುಡ್ಬಾಲ್ ಸಂಘ ಎಂದು ಬೆಲ್ಜಿಯಮ ಸಂಘದ ಪರಿಚಯವಿದೆ. ಮೊರೊಕ್ಕೊ ವಿರುದ್ಧ ಪಂದ್ಯದಲ್ಲಿ ಬೆಲ್ಜಿಯಮ ಸಂಘಕ್ಕೆ ಒಂದೇ ಒಂದು ಗೋಲ್ ಕೂಡ ಸಿಗಲಿಲ್ಲ ಹಾಗೂ ವಿಶ್ವ ಮಟ್ಟದಲ್ಲಿ ೨೨ ನೇ ಸ್ಥಾನದಲ್ಲಿರುವ ಮೊರೊಕ್ಕೊ ೨ ಗೋಲ್ ಮಾಡಿತು.