ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧನೆಯ ವಿಷಯದಲ್ಲಿ ಭಾರತದ ಮಹತ್ವ ತಿಳಿಯಿರಿ !

‘ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡಬೇಕಿದ್ದರೆ, ಭಾರತ ಬಿಟ್ಟು ಬೇರೆ ಯಾವುದೇ ದೇಶದಲ್ಲಿ ರಬೇಡಿ; ಏಕೆಂದರೆ ಭಾರತೀಯರ ಸ್ಥಿತಿ ಸರಿಯಿರದಿದ್ದರೂ, ಭಾರತ ದಂತಹ ಸಾತ್ತ್ವಿಕ ದೇಶ ವಿಶ್ವದಲ್ಲಿ ಎಲ್ಲಿಯೂ ಇಲ್ಲ. ಬೇರೆ ಎಲ್ಲಾ ದೇಶಗಳಲ್ಲಿ ರಜ-ತಮದ ಪ್ರಮಾಣ ಅತ್ಯಧಿಕವಾಗಿದೆ; ಆದರೂ ಶೇ. ೫೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಯು ಜಗತ್ತಿನಲ್ಲಿ ಎಲ್ಲಿಯೂ ಇದ್ದು ಸಾಧನೆ ಮಾಡಬಹುದು !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಯಾವುದಕ್ಕೆ ಮಾನವನ ಪ್ರಗತಿ ಎನ್ನುತ್ತಾರೆ ಎಂಬುದೂ ವಿಜ್ಞಾನಕ್ಕೆ ತಿಳಿದಿಲ್ಲ !

ಮಾನವನು ಆದಿಮಾನವನಿಂದ ಇಲ್ಲಿಯ ತನಕ ಪ್ರಗತಿ ಮಾಡಿಕೊಂಡಿದ್ದಾನೆ, ಎಂದು ಪಾಶ್ಚಿಮಾತ್ಯ ವಿಜ್ಞಾನ ಹೇಳುತ್ತದೆ. ವಾಸ್ತವದಲ್ಲಿ ಮಾನವನ ಪ್ರಗತಿಯಾಗಿಲ್ಲ, ಬದಲಾಗಿ ಅವನು ಪರಮಾವಧಿಯ ಅಧೋಗತಿಯತ್ತ ಸಾಗುತ್ತಿದ್ದಾನೆ. ಸತ್ಯಯುಗ ದಲ್ಲಿ ಮಾನವನು ದೇವರೊಂದಿಗೆ ಏಕರೂಪನಾಗಿದ್ದನು. ತ್ರೇತಾ ಮತ್ತು ದ್ವಾಪರ ಯುಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಧೋಗತಿ ಯಾಗತೊಡಗಿತು. ಈಗ ಕಲಿಯುಗದ ಆರಂಭದಲ್ಲಿಯೇ ಅವನ ಪರಮಾವಧಿಯ ಅಧೋಗತಿಯಾಗಿದೆ. ಕಲಿಯುಗದಲ್ಲಿ ಇನ್ನು ಉಳಿದ ಸುಮಾರು ೪ ಲಕ್ಷ ೨೬ ಸಾವಿರ ವರ್ಷಗಳಲ್ಲಿ ಅವನ ಇನ್ನೆಷ್ಟು ಅಧೋಗತಿಯಾಗುವುದು ಎಂಬುದರ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ