ನಮ್ಮ ಶ್ರೇಷ್ಠ ಮತ್ತು ಪಾವನ (ಪವಿತ್ರ) ಭರತಭೂಮಿಯ ಸಾವಿರಾರು ವರ್ಷಗಳ ಪರಂಪರೆ ಮತ್ತು ನಮ್ಮ ವೈದಿಕ ಸನಾತನ ಹಿಂದೂ ಸಂಸ್ಕೃತಿಯ ಪುನರುಜ್ಜೀವನವಾದರೆ ಮಾತ್ರ, ರಾಷ್ಟ್ರ ಉಳಿಯುವುದು !

೧. ಭರತ ಭೂಮಿಯ ಸಾವಿರಾರು ವರ್ಷಗಳ ಪರಂಪರೆಯು ಯುವ ಪೀಳಿಗೆಯಲ್ಲಿ ಪ್ರಜ್ಞೆ, ಪ್ರತಿಭೆ, ಬಲ ಮತ್ತು ಸತ್ವವನ್ನು ವಿಕಾಸಗೊಳಿಸುವುದು !

ನಮ್ಮ ಶ್ರೇಷ್ಠ, ಪವಿತ್ರ ಭರತ ಭೂಮಿಯ ಸಾವಿರಾರು ವರ್ಷಗಳ ಪರಂಪರೆ ನಮ್ಮ ಹಿಂದಿದೆ. ಅದರ ನಾಚಿಕೆ ಏತಕ್ಕಾಗಿ ? ಇದು ನಮ್ಮ ತೇಜಪುಂಜ ಶ್ರೇಷ್ಠತೆಯ ಅಭಿಮಾನವೇ ಆಗಿದೆ. ಜಗತ್ತಿಗೆ ಈ ವೈಶಿಷ್ಟ್ಯಗಳನ್ನೇ ಕಲಿಸಬೇಕಾಗಿದೆ. ಭಾರತವು ನೇತೃತ್ವವನ್ನು ವಹಿಸ ಬೇಕು. ಈ ಜ್ವಲಂತ ಮತ್ತು ಉಗ್ರ (ಭಯಂಕರ) ಅಭಿಮಾನವು ನಮ್ಮ ಯುವಪೀಳಿಗೆಯಲ್ಲಿ ಅಪೂರ್ವ ಪ್ರಜ್ಞೆ, ಪ್ರತಿಭೆ, ಬಲ ಮತ್ತು ಸತ್ವವನ್ನು ವಿಕಾಸಗೊಳಿಸುವುದು.

೨. ಸ್ವಾತಂತ್ರ್ಯದ ನಂತರ ಆಂಗ್ಲ ಮಾನಸಿಕತೆಯ ಜನರು ಅಧಿಕಾರಕ್ಕೆ ಬಂದಿದ್ದರಿಂದ ನಮ್ಮ ಮೂಲ ಆದರ್ಶ ಮತ್ತು ಮಾನದಂಡಗಳು ಹಾಳಾದವು

ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ, ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಸಂಪೂರ್ಣ ಮುಳುಗಿದ್ದ ಭಾರತೀಯ ಜನರ ಕೈಯಲ್ಲಿ, ಅಂದರೆ ಆಂಗ್ಲ ಮಾನಸಿಕತೆಯಿರುವವರ ಕೈಯಲ್ಲಿ ಅಧಿಕಾರ ಮತ್ತು ನಿರ್ಧಾರ ಗಳು ಬಂದವು. ಬ್ರಿಟಿಷ ಆಡಳಿತವು ಯಾವ ಭಾರತದ ರಾಜ್ಯವ್ಯವಸ್ಥೆ ಮತ್ತು ಆಡಳಿತವನ್ನು ತಯಾರು ಮಾಡಿತ್ತೋ, ಅದೇ ಚೌಕಟ್ಟಿನಲ್ಲಿಯೇ ಈ ಆಂಗ್ಲ ಮಾನಸಿಕತೆಯ ಜನರು ಅಧಿಕಾರಕ್ಕೆ ಬಂದರು. ಆದುದರಿಂದ ಅವರು ನಮ್ಮ ಮೂಲ ಆದರ್ಶಗಳನ್ನು ಮತ್ತು ಮಾನದಂಡಗಳನ್ನು ನಾಶ ಮಾಡಿದರು.

೩. ‘ಆರ್ಯ ಋಷಿಗಳು ಈ ಭಾರತಭೂಮಿಯನ್ನು ತಮ್ಮ ತಪಸ್ಸಿನಿಂದ ನಿರ್ಮಿಸಿದರು’, ಎಂಬುದನ್ನು ಹಿಂದೂಗಳಿಗೆ ಕಲಿಸುವುದು ಆವಶ್ಯಕ !

ವೈದಿಕ ಪದ್ಧತಿಯ ಸನಾತನ ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದರೆ ಮಾತ್ರ ನಮ್ಮ ರಾಷ್ಟ್ರ ಉಳಿಯುವುದು; ಆದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುವಿರಿ ? ಪ್ರಗತಿಪರರ ಮತ್ತು ನೆಹರೂವಾದಿಗಳ ರಾಜಕೀಯ ಸಂಘಟನೆ ಮತ್ತು ಅವರ ಕಾರ್ಯವು ಕೇವಲ ತಮ್ಮ ಅಧಿಕಾರಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಇದೆ. ಅಧಿಕಾರವೇ ಅವರ ಮೂಲ ಉದ್ದೇಶವಾಗಿದೆ. ಭಾರತದ ಸಮಾಜ ರಚನೆಯ ಅಧ್ಯಯನ ಮಾಡಿದ್ದೀರಾ ? ಹಿಂದೂ ಸಮಾಜಕ್ಕೆ ಪ್ರಾಚೀನ ಸಮಾಜ ರಚನಾಶಾಸ್ತ್ರಗಳ ಬಹಳಷ್ಟು ಆಧಾರವಿದೆ. ಅದನ್ನು ನಿರ್ಲಕ್ಷಿಸಬೇಡಿ. ಈಗಲಾದರೂ ಹಿಂದೂಗಳು ಅಂತರ್ಮುಖರಾಗಿ ವಿಚಾರ ಮಾಡಬೇಕು. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ಮತ್ತು ಅಧ್ಯಯನದ ಪುಸ್ತಕಗಳಿಂದ ‘ಆರ್ಯರ ಆಕ್ರಮಣದ ಸಿದ್ಧಾಂತ’ವನ್ನು ಗಡಿಪಾರು ಮಾಡಿ ‘ಆರ್ಯರೇ ಈ ಭೂಮಿಯ ಅಧಿಪತಿಗಳು (ಅಧಿಕಾರಿಗಳು), ಅವರು ಇಲ್ಲಿಯವರೇ, ಆರ್ಯ ಋಷಿಗಳೇ ಈ ಭಾರತಭೂಮಿಯನ್ನು ತಪಸ್ಸಿನಿಂದ ನಿರ್ಮಿಸಿದರು’, ಎಂಬ ಸಿದ್ಧಾಂತವನ್ನು ಮಂಡಿಸಿದರೆ, ಕಲಿಸಿದರೆ ಮತ್ತು ಹೇಳಿದರೆ ಮಾತ್ರ, ಹಿಂದೂಗಳಿಗೆ ಉಳಿಗಾಲವಿದೆ. ಇಲ್ಲದಿದ್ದರೆ ಹಿಂದೂಗಷ್ಟು ದೌರ್ಭಾಗ್ಯವಂತರು ಹಿಂದೂಗಳೇ !

೪. ಪಾಶ್ಚಾತ್ಯ ಶಿಕ್ಷಣದಿಂದ ನಾವು ಪುರುಷರಂತೂ ಶ್ರದ್ಧಾಹೀನ ರಾಗಿದ್ದೇವೆ. ನಮ್ಮ ಧರ್ಮ ಪರಂಪರೆಗಳು, ರೂಢಿಗಳು, ಮತ್ತು ಕುಲಾಚಾರದಿ ಪರಂಪರೆಗಳಂತಹ ಪ್ರತಿಯೊಂದು ಆಚಾರಣೆಯ ಬಗ್ಗೆ ಅನುಮಾನ ಪಡುವುದು ಮತ್ತು ಅಶ್ರದ್ಧೆಯು ನಮ್ಮ ಸ್ವಭಾವವಾಗಿದೆ. ನಮ್ಮ ರಾಷ್ಟ್ರೀಯ ಸಂಪತ್ತಾಗಿರುವ ಸ್ತ್ರೀಯರು ತಮ್ಮಲ್ಲಿನ ಸನಾತನ ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಅವರ ನಿಷ್ಠೆಯನ್ನು ಉಳಿಸಿಕೊಳ್ಳಬೇಕು.
(ಆಧಾರ : ಮಾಸಿಕ ‘ಘನಗರ್ಜಿತ’, ಮೇ ೨೦೨೧)