ಕೃಷಿಯ ಕೆಲಸಗಳನ್ನು ಮನೆಯವರೆಲ್ಲರೂ ಹಂಚಿಕೊಳ್ಳಬೇಕು !

ಸನಾತನದ ‘ಮನೆಮನೆಯಲ್ಲಿ ಕೈತೋಟದ ಅಭಿಯಾನ

ಸೌ. ರಾಘವಿ ಕೊನೆಕರ

‘ನಾವು ನಮ್ಮ ಕುಟುಂಬಕ್ಕಾಗಿ ತರಕಾರಿಗಳ ಕೃಷಿ ಮಾಡಿದರೆ ಅದರಲ್ಲಿ ನಿಯಮಿತವಾಗಿ ಮಾಡಬೇಕಾದ ಅನೇಕ ಸಣ್ಣ ಪುಟ್ಟ ಕೆಲಸಗಳಿರುತ್ತವೆ, ಉದಾ. ಗಿಡಗಳಿಗೆ ನೀರು ಹಾಕುವುದು, ಪ್ರತಿದಿನ ದೇವರ ಪೂಜೆಗಾಗಿ ಹೂವುಗಳನ್ನು ಮತ್ತು ಕೊಯ್ಲುಗೆ ಬಂದ ತರಕಾರಿಗಳನ್ನು ತರುವುದು, ಜೀವಾಮೃತ ತಯಾರಿಸುವುದು. ಈ ಎಲ್ಲ ಕೆಲಸಗಳನ್ನು ಮನೆಯಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಹಂಚಿಕೊಂಡು ಮಾಡಿದರೆ, ಒಬ್ಬರ ಮೇಲೆ ಹೆಚ್ಚಿನ ಕೆಲಸದ ಒತ್ತಡ ಬೀಳುವುದಿಲ್ಲ. ಎಲ್ಲರಿಗೂ ಕೃಷಿ ತನ್ನದೆನಿಸುತ್ತದೆ. ಬಹಳಷ್ಟು ಹೊಸ ವಿಷಯಗಳು ನಿಸರ್ಗದ ಸಾನಿಧ್ಯದಲ್ಲಿ ಕಲಿಯಲು ಸಿಗುತ್ತದೆ ಮತ್ತು ಎಲ್ಲರ ಕಷ್ಟದ ಫಲ ಸವಿಯುವ ಆನಂದವನ್ನು ಅನುಭವಿಸಲು ಬರುತ್ತದೆ !’ – ಸೌ. ರಾಘವೀ ಮಯೂರೇಶ ಕೋನೆಕರ, ಢವಳೀ, ಫೊಂಡಾ, ಗೋವಾ. (೧೬.೯.೨೦೨೨)