ಸನಾತನದ ಕಿರುಗ್ರಂಥ : ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ

‘ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಉಪಯುಕ್ತ ದೃಷ್ಟಿಕೋನ’ಗಳು ಈ ಗ್ರಂಥದ ಬಗ್ಗೆ ೨೬/೬ ನೇ ಸಂಚಿಕೆಯಲ್ಲಿ ನೋಡಿದೆವು. ಈಗ ಮುಂದಿನ ಭಾಗ ನೋಡೋಣ.

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/128370.html

೬.  ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಉಪಯುಕ್ತವಾಗಿರುವ ದೃಷ್ಟಿಕೋನಗಳು

೬ ಆ ೮. ತೊಂದರೆಗಳಿಂದ ಕೃತಜ್ಞತಾಭಾವ ಹೆಚ್ಚಾಗಲು ಸಹಾಯವಾಗುವುದು

(ಪೂ.) ಶ್ರೀ. ಸಂದೀಪ ಆಳಶಿ

ಅ. ‘ಸಾಧಕರಲ್ಲಿರುವ ಸ್ವಭಾವದೋಷ ಮತ್ತು ಅಹಂನ ಲಾಭವನ್ನು ಪಡೆದುಕೊಂಡು ಕೆಟ್ಟ ಶಕ್ತಿಗಳು ಸಾಧಕರ ತೊಂದರೆಗಳನ್ನು ಹೆಚ್ಚಿಸುತ್ತವೆ. ಇದರಿಂದ ಕೆಲವೊಮ್ಮೆ ಸಾಧಕರಲ್ಲಿನ ಸ್ವಭಾವದೋಷ ಮತ್ತು ಅಹಂನ್ನು ದೂರಗೊಳಿಸುವ ಗಾಂಭೀರ್ಯ ಹೆಚ್ಚಾಗಲು ಸಹಾಯವಾಗುತ್ತದೆ.

ಆ. ಸಾಧಕರಿಗೆ ತೊಂದರೆಗಳನ್ನು ಭೋಗಿಸಬೇಕಾಗುವುದರಿಂದ ಅವರ ಪ್ರಾರಬ್ಧ ನಾಶವಾಗುತ್ತಿರುತ್ತದೆ. ಮುಂದೆ ಆಪತ್ಕಾಲ ಮುಗಿದ ನಂತರ ಇಂತಹ ಸಾಧಕರು ತಮ್ಮ ಪ್ರಾರಬ್ಧದ ದೊಡ್ಡ ಪಾಲನ್ನು ಭೋಗಿಸಿ ತೀರಿಸಿರುವುದರಿಂದ, ಹಾಗೆಯೇ ಆಪತ್ಕಾಲದಲ್ಲಿನ ತೊಂದರೆಗಳಿಂದ ಶರೀರ ಮತ್ತು ಮನಸ್ಸಿನ ದುಃಖದ ಬಗೆಗಿನ ಪ್ರತಿಕಾರ ಕ್ಷಮತೆಯು ಮೊದಲೇ ಹೆಚ್ಚಾಗಿರುವುದರಿಂದ ಮುಂದೆ ಸಾಧನೆಯಲ್ಲಿನ ಅಡಚಣೆಗಳನ್ನು ದೂರಗೊಳಿಸುವುದು ಅವರಿಗೆ ಸುಲಭವಾಗುತ್ತದೆ. ಇದರಿಂದ ಅವರ ಆಧ್ಯಾತ್ಮಿಕ ಪ್ರಗತಿ ಬೇಗನೇ ಆಗಲು ಸಹಾಯವಾಗುತ್ತದೆ.

ಇ. ಪ್ರಾರಂಭದಲ್ಲಿ ತೊಂದರೆಗಳಿಂದ ಬೇಸರವಾಗುತ್ತದೆ, ಸೇವೆ ಮತ್ತು ಸಾಧನೆಯಲ್ಲಿನ ಉತ್ಸಾಹ ಕಡಿಮೆಯಾಗುತ್ತದೆ, ಮನಸ್ಸು ದುಃಖಿತವಾಗುತ್ತದೆ ಹಾಗೂ ಮನಸ್ಸಿಗೆ ನಕಾರಾತ್ಮಕತೆ ಅಥವಾ ನಿರಾಶೆ ಬರುತ್ತದೆ. ಆ ತೊಂದರೆಗಳು ಪದೇ ಪದೇ ಆಗತೊಡಗಿದರೆ ಮನಸ್ಸಿಗೆ ನಿಧಾನವಾಗಿ ಆ ತೊಂದರೆಗಳ ಅಭ್ಯಾಸವಾಗುತ್ತದೆ. ಇದರಿಂದಾಗಿ ಆ ತೊಂದರೆಗಳಿಂದ ಮನಸ್ಸಿಗಾಗುವ ದುಃಖದ ಸಂವೇದನೆಗಳು ನಿಧಾನವಾಗಿ ಕಡಿಮೆಯಾಗುತ್ತವೆ ಅಥವಾ ನಾಶವಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಮನಸ್ಸು ತೊಂದರೆಗಳ ಕಡೆಗೆ ಸಾಕ್ಷಿಭಾವದಿಂದ ನೋಡಲು ಕಲಿಯುತ್ತದೆ. ಸಾಧನೆಯಲ್ಲಿ ಸಾಕ್ಷಿಭಾವದ ಹಂತ ಶೇ. ೮೦ ರಷ್ಟು ಆಧ್ಯಾತ್ಮಿಕ ಮಟ್ಟದ ಮುಂದೆ ಸಾಧ್ಯವಾಗುತ್ತದೆ. ಆದರೆ ತೊಂದರೆಯಿರುವ ಸಾಧಕರಲ್ಲಿ ಕಡಿಮೆ ಆಧ್ಯಾತ್ಮಿಕ ಮಟ್ಟದಲ್ಲಿಯೇ ‘ತೊಂದರೆಗಳ ಕಡೆ ಸಾಕ್ಷಿಭಾವದಿಂದ ನೋಡುವ ವೃತ್ತಿ’ ನಿರ್ಮಾಣವಾಗುವುದರಿಂದ ಮುಂದೆ ಅವರಿಗೆ ಸಾಧನೆಯಲ್ಲಿ ಸಾಕ್ಷಿಭಾವದ ಹಂತವನ್ನು ಬೇಗನೇ ತಲುಪಲು ಸುಲಭವಾಗುತ್ತದೆ.

ಆದುದರಿಂದ ಸಾಧಕರು ತೊಂದರೆಗಳೆದುರು ಹತಾಶರಾಗದೇ, ತೊಂದರೆಗಳ ಬಗ್ಗೆ ಕೃತಜ್ಞತೆಯನ್ನೇ ಇಟ್ಟುಕೊಳ್ಳಬೇಕು. ಸಾಧಕರ ಮೇಲೆ ಪರಾತ್ಪರ ಗುರು ಡಾಕ್ಟರರ ಕೃಪೆಯಿರುವುದರಿಂದ ಸಾಧಕರಿಗೆ ತೊಂದರೆಗಳ ಕಾವು ಅಷ್ಟೊಂದು ತಾಗುವುದಿಲ್ಲ ಮತ್ತು ತೊಂದರೆಗಳೂ ಸಹನೀಯವಾಗಲು ಸಹಾಯವಾಗುತ್ತದೆ. ಇದಕ್ಕಾಗಿ ಸಾಧಕರು ಪರಾತ್ಪರ ಗುರು ಡಾಕ್ಟರರ ಬಗ್ಗೆಯೂ ಅನನ್ಯ ಭಾವದಿಂದ ಕೃತಜ್ಞರಾಗಿರಬೇಕು.’ – (ಪೂ.) ಶ್ರೀ. ಸಂದೀಪ ಆಳಶಿ (೨.೧೧.೨೦೧೮)

ಈ. ಕುಂತಿಯು ಭಗವಂತನಿಗೆ ”ಸಂಕಟಗಳಲ್ಲೇ ನನಗೆ ನಿನ್ನ ಸ್ಮರಣೆ ಹೆಚ್ಚಾಗುತ್ತದೆ; ಆದ್ದರಿಂದ ನೀನು ನನಗೆ ಹೆಚ್ಚೆಚ್ಚು ಸಂಕಟಗಳನ್ನೇ ಕೊಡು’’ ಎಂದಳು. ತೊಂದರೆಯಿರುವ ಸಾಧಕರು ಕುಂತಿಯ ಹಾಗೆ ದೇವರ ಬಳಿ ದುಃಖವನ್ನು ಬೇಡುವ ಆವಶ್ಯಕತೆ ಇಲ್ಲ; ಆದರೆ ‘ದುಃಖದಿಂದ ಭಗವಂತನ ಸ್ಮರಣೆಯನ್ನು ಹೆಚ್ಚು ಮಾಡುವ ಭಾಗ್ಯ ನಮಗೆ ದೊರಕಿತು’ ಎಂಬುದರ ವಿಚಾರ ಮಾಡಿ ದೇವರ ಬಗ್ಗೆ ಕೃತಜ್ಞತಾಭಾವವನ್ನು ಹೆಚ್ಚಿಸಬೇಕು. ಸಾಧಕರು ತೊಂದರೆಗಳಲ್ಲಿಯೂ ನಾಮಜಪ, ಭಾವಜಾಗೃತಿಯ ಪ್ರಯತ್ನ ಅಥವಾ ಸೇವೆಗಳನ್ನು ಮಾಡಲು ಪ್ರಯತ್ನಿಸಬೇಕು. ಇದರಿಂದ ದುಃಖದ ದುಃಖವೂ ಆಗುವುದಿಲ್ಲ ಮತ್ತು ಸಾಧನೆಯೂ ಆಗುವುದು.

೬ ಇ. ತೊಂದರೆಗಳಿಂದ ಪದೇ ಪದೇ ತಪ್ಪುಗಳಾದರೆ ನಿರಾಶರಾಗಬಾರದು : ತೊಂದರೆಯಿರುವ ಸಾಧಕರ ಮನಸ್ಸು ಮತ್ತು ಬುದ್ಧಿಯ ಮೇಲೆ ಸೂಕ್ಷ್ಮ ತ್ರಾಸದಾಯಕ ಆವರಣ ಪದೇ ಪದೇ ಬರುತ್ತಿರುತ್ತದೆ. ಇದರಿಂದ ಹೆಚ್ಚಾಗಿ ಇಂತಹ ಸಾಧಕರಿಂದ ಮಾಡಿದ ತಪ್ಪುಗಳೇ ಪದೇ ಪದೇ ಆಗುತ್ತಿರುತ್ತವೆ. ಪರಿಹಾರೋಪಾಯಗಳನ್ನು ಮಾಡಿಯೂ ಪುನಃ ಪುನಃ ಆ ತಪ್ಪುಗಳೇ ಆಗುವುದರಿಂದ ಕೆಲವು ಸಾಧಕರಿಗೆ ನಿರಾಶೆ ಬರುತ್ತದೆ. ಇಂತಹ ತಪ್ಪುಗಳಿಗೆ ‘ಮನಸ್ಸು ಮತ್ತು ಬುದ್ಧಿಯ ಮೇಲೆ ಸೂಕ್ಷ್ಮ ತ್ರಾಸದಾಯಕ ಆವರಣ ಬರುವುದು’ ಮುಖ್ಯ ಕಾರಣವಾಗಿರುವುದರಿಂದ ಸಾಧಕರು ನಿರಾಶರಾಗಬಾರದು. ಈಗ ತಪ್ಪುಗಳಾಗುತ್ತಿದ್ದರೂ ಅವುಗಳ ಬಗ್ಗೆ ಜಾಗರೂಕರಾಗಿ ಪುನಃ ಪುನಃ ಯೋಗ್ಯ ಪರಿಹಾರೋಪಾಯ ಮಾಡುವುದರಿಂದ ಚಿತ್ತದ ಮೇಲೆ ಅವುಗಳ ಸಂಸ್ಕಾರಗಳೇ ಆಗುತ್ತವೆ. ಅನೇಕ ಸಲ ಈ ಸಂಸ್ಕಾರಗಳಾಗುವುದರಿಂದ ಮುಂದೆ ತೊಂದರೆಗಳ ಪ್ರಭಾವ ಕಡಿಮೆಯಾದ ನಂತರ, ಇಂತಹ ತಪ್ಪುಗಳ ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆಯನ್ನು ಇಟ್ಟುಕೊಳ್ಳಬೇಕು.

೬ ಈ. ತೊಂದರೆಯಿರುವ ಸಾಧಕರು ಅತಿಯಾದ ಚಿಂತೆ ಅಥವಾ ಅತಿಯಾದ ಚಿಂತನೆ ತಡೆಗಟ್ಟಬೇಕು : ‘ಮಧ್ಯಮದಿಂದ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಮೇಲೆ ಕಡಿಮೆಯಿಂದ ಹೆಚ್ಚು ಪ್ರಮಾಣದಲ್ಲಿ ತೊಂದರೆಯ ಪ್ರಭಾವವಿರುತ್ತದೆ. ಇದರಿಂದ ಅವರಿಂದ ಪರಿಪೂರ್ಣ ಸಾಧನೆಯ ಪ್ರಯತ್ನವಾಗಲು ಸ್ವಲ್ಪ ಮಿತಿಯುಂಟಾಗುತ್ತದೆ. ಆಧ್ಯಾತ್ಮಿಕ ತೊಂದರೆಯಿರುವ ಕೆಲವು ಸಾಧಕರು ಸಾಧನೆಯ ಪ್ರಯತ್ನಗಳ ಸಂದರ್ಭದಲ್ಲಿ ಅತಿಯಾದ ಚಿಂತೆ ಅಥವಾ ಅತಿಯಾದ ಚಿಂತನೆ ಮಾಡುತ್ತಾರೆ. ಅತಿ ಚಿಂತೆ ಮಾಡುವುದರಿಂದ ಅನಾವಶ್ಯಕ ವಿಚಾರ ಅಥವಾ ಒತ್ತಡ ಹೆಚ್ಚಾಗಿ ಆಧ್ಯಾತ್ಮಿಕ ತೊಂದರೆಗಳಲ್ಲಿ ಹೆಚ್ಚಳವಾಗುತ್ತದೆ. ಆದ್ದರಿಂದ ಇಂತಹ ಸಾಧಕರು ‘ಸಾಧನೆಯ ಪ್ರಯತ್ನಗಳ ಬಗ್ಗೆ ಅಥವಾ ತಮಗೆ ಪ್ರತಿಕೂಲವೆನಿಸುವ ಪ್ರಸಂಗಗಳ ಬಗ್ಗೆ ಅತಿಯಾದ ಚಿಂತೆ ಅಥವಾ ಅತಿಯಾದ ಚಿಂತನೆ ಮಾಡದೇ ಸಾಧನೆಯ ದೃಷ್ಟಿಯಿಂದ ಆವಶ್ಯಕವಿರುವಷ್ಟು ಚಿಂತನೆ ಮಾಡಿ ಮತ್ತು ಅದರಿಂದ ಕಲಿತು ಸಾಧನೆ ಮಾಡುತ್ತಿರುವುದು’, ಹೆಚ್ಚು ಯೋಗ್ಯವಾಗಿದೆ. ಅತಿಯಾದ ಚಿಂತೆ ಅಥವಾ ಅತಿಯಾದ ಚಿಂತನೆಯನ್ನು ತಡೆಗಟ್ಟಲು ಸಾಧ್ಯವಿದ್ದಲ್ಲಿ ಕೂಡಲೇ ಜವಾಬ್ದಾರ ಸಾಧಕರ ಮಾರ್ಗದರ್ಶನ ಪಡೆಯಬೇಕು. ಇದರಿಂದ ನಮ್ಮ ಮನಸ್ಸಿನ ಶಕ್ತಿ ಉಳಿಯುತ್ತದೆ ಮತ್ತು ಯೋಗ್ಯ ದೃಷ್ಟಿಕೋನವೂ ಕಲಿಯಲು ಸಿಗುತ್ತದೆ.

‘ನಮಗೆ ಸಾಧನೆಯಲ್ಲಿನ ಎಲ್ಲ ವಿಷಯವೂ ಪರಿಪೂರ್ಣವಾಗಿಯೇ ಮಾಡಲು ಬರಬೇಕು’ ಎಂಬ ದುರಾಗ್ರಹವನ್ನಿಟ್ಟುಕೊಳ್ಳಬಾರದು. ‘ತೀವ್ರ ಸ್ವರೂಪದ ಯಾವುದಾದರೊಂದು ಸ್ವಭಾವದೋಷ ಅಥವಾ ಅಹಂನ ಲಕ್ಷಣಗಳ ಮೇಲೆ ಕೂಡಲೇ ಹಿಡಿತ ಸಾಧಿಸಲು ಬರುತ್ತಿಲ್ಲ’ ಎಂದರೆ ‘ನಮ್ಮ ಸಾಧನೆಯೇ ಆಗುತ್ತಿಲ್ಲ’ ಎಂದಲ್ಲ, ಏಕೆಂದರೆ ಅದು ಒಟ್ಟು ಸಾಧನೆಯ ಒಂದು ಸಣ್ಣ ಭಾಗವಾಗಿರುತ್ತದೆ. ನಾಮಜಪ, ಸೇವೆ, ಭಾವಜಾಗೃತಿಯ ಪ್ರಯತ್ನ ಇವುಗಳಂತಹ ಇತರ ಪ್ರಯತ್ನಗಳಿಂದಲೂ ನಮ್ಮ ಸಾಧನೆ ಆಗುತ್ತಲೇ ಇರುತ್ತದೆ. ಆದ್ದರಿಂದ ‘ಸಾಧನೆಯ ಪ್ರಯತ್ನ ಪರಿಪೂರ್ಣವಾಗಿ ಆಗುವುದಿಲ್ಲ’ ಎಂದು ಬೇಸರ ಪಡದೇ ‘ಅದನ್ನು ಪರಿಪೂರ್ಣವಾಗಿ ಮಾಡಲು ಪ್ರಯತ್ನ ಮಾಡುತ್ತಿರುವುದು’ ಸಾಧನೆಯೇ ಆಗಿದೆ’ ಎಂಬ ವಿಚಾರ ಮಾಡಬೇಕು. ಮುಂದೆ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾದಾಗ ಎಲ್ಲ ಪ್ರಯತ್ನಗಳು ಪರಿಪೂರ್ಣವಾಗಿ ಮಾಡಲು ಆಗುವುದು.’ – (ಪೂ.) ಶ್ರೀ. ಸಂದೀಪ ಆಳಶಿ (೧೪.೨.೨೦೨೧)

೬ ಉ. ತೊಂದರೆಗಳಿಗೆ ವಶವಾಗದೇ ಮನೋಬಲವನ್ನು ಹೆಚ್ಚಿಸಿ ತೊಂದರೆಗಳೊಂದಿಗೆ ಹೋರಾಡಬೇಕು : ‘ಅನೇಕ ಸಾಧಕರು ತೊಂದರೆಗಳಿಗೆ ವಶವಾಗುತ್ತಿರುವುದು ಕಂಡು ಬರುತ್ತದೆ, ಉದಾ. ತೊಂದರೆಗಳು ಹೆಚ್ಚಾದರೆ ದುಃಖಿತ ಅಥವಾ ನಕಾರಾತ್ಮಕವಾಗುವುದು, ‘ತೊಂದರೆಯಿದೆ’ ಎಂದು ಸೇವೆಯಲ್ಲಿ ರಿಯಾಯಿತಿ ಪಡೆಯುವುದು, ‘ತೊಂದರೆಯಿದೆ’ ಎಂದು ಮಲಗಿಕೊಂಡಿರುವುದು, ‘ಆಧ್ಯಾತ್ಮಿಕ ಉಪಾಯಗಳನ್ನು ಮಾಡಿಯೂ ತೊಂದರೆ ಕಡಿಮೆಯಾಗುವುದಿಲ್ಲ’ ಎಂಬ ವಿಚಾರದಿಂದ ಉಪಾಯಗಳನ್ನು ಮಾಡುವುದನ್ನು ಮುಂದೂಡುತ್ತಿರುವುದು ಅಥವಾ ಮನಃಪೂರ್ವಕವಾಗಿ ಮಾಡದಿರುವುದು.

ಹೆಚ್ಚಿನ ಕ್ರಾಂತಿಕಾರಿ ಮತ್ತು ರಾಷ್ಟ್ರಪುರುಷರಿಗೆ ಸಾಧನೆ ಗೊತ್ತಿರಲಿಲ್ಲ, ಅವರಿಗೆ ಯಾರೂ ಗುರುಗಳಿರಲಿಲ್ಲ, ಹಾಗೆಯೇ ಅವರಿಗೆ ರಕ್ಷಣೆ ನೀಡುವವರೂ ವಿಶೇಷವಾಗಿ ಯಾರೂ ಇರಲಿಲ್ಲ. ಹೀಗಿರುವಾಗಲೂ ಅವರು ಧೀರೋದಾತ್ತವಾಗಿ ಹೋರಾಡಿದರು. ಸನಾತನದ ಸಾಧಕರು ಸಾಧನೆಯನ್ನು ಮಾಡುತ್ತಿರುವುದರಿಂದ ಅವರ ಹಿಂದೆ ಭಗವಂತನಿದ್ದಾನೆ, ಸ್ಥೂಲದಿಂದ ಮತ್ತು ಸೂಕ್ಷ್ಮದಿಂದ ಸಾಧಕರ ಕಾಳಜಿ ವಹಿಸುವ ಪರಾತ್ಪರ ಗುರು ಡಾಕ್ಟರರಂತಹ ಮಹಾನ್‌ ಗುರುಗಳಿದ್ದಾರೆ ಹಾಗೂ ಸಾಧಕರು ದೇವರ ಅನುಭೂತಿಗಳನ್ನೂ ಪಡೆದಿದ್ದಾರೆ. ಆದರೂ ಸಾಧಕರು ತೊಂದರೆಗಳೆದುರು ಏಕೆ ಇಷ್ಟೊಂದು ಹತಾಶರಾಗುತ್ತಾರೆ ? ಕೆಟ್ಟ ಶಕ್ತಿಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತವೆ, ಆದರೆ ಸಾಧಕರು ತಮ್ಮ ಕೆಲಸವನ್ನು, ಅಂದರೆ ಸಾಧನೆಯನ್ನು ಸರಿಯಾಗಿ ಮಾಡುವುದಿಲ್ಲವೆಂಬುದೇ ಇದಕ್ಕೆ ಉತ್ತರವಾಗಿದೆ !

ಪರಾತ್ಪರ ಗುರು ಡಾಕ್ಟರರು ಸಮಷ್ಟಿ ಆಧ್ಯಾತ್ಮಿಕ ತೊಂದರೆಗಳ ಆಘಾತಗಳನ್ನು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ; ಆದ್ದರಿಂದ ಈ ತೊಂದರೆಗಳ ಕಾವು ಸಾಧಕರಿಗೆ ವಿಶೇಷವಾಗಿ ತಾಗುವುದಿಲ್ಲ. ‘ನಾವು ನಾಮಜಪ ಇತ್ಯಾದಿ ಆಧ್ಯಾತ್ಮಿಕ ಉಪಾಯಗಳನ್ನು ಪರಿಣಾಮಕಾರಿಯಾಗಿ ಮಾಡಿದರೆ ಮಾತ್ರ ಪರಾತ್ಪರ ಗುರು ಡಾಕ್ಟರರ ಮೇಲಾಗುವ ಸಮಷ್ಟಿ ಆಧ್ಯಾತ್ಮಿಕ ತೊಂದರೆಗಳ ಆಘಾತಗಳು ಕಡಿಮೆಯಾಗುವವು’ ಎಂಬುದರ ವಿಚಾರವನ್ನು ಸಾಧಕರು ಮಾಡಬೇಕು. ಮನಃಪೂರ್ವಕವಾಗಿ ಮತ್ತು ಭಾವಪೂರ್ಣವಾಗಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು ಸಾಧಕರ ಸಾಧನೆಯೇ ಆಗಿದೆ !’ – (ಪೂ.) ಶ್ರೀ. ಸಂದೀಪ ಆಳಶಿ (೨೩.೩.೨೦೧೫)

೬ ಊ. ಸಣ್ಣಪುಟ್ಟ ಶಾರೀರಿಕ ಮತ್ತು ಮಾನಸಿಕ ತೊಂದರೆಗಳ ಕಡೆಗೆ ನಿರ್ಲಕ್ಷ್ಯ ಮಾಡಬಾರದು : ‘ಶಾರೀರಿಕ ಮತ್ತು ಮಾನಸಿಕ ತೊಂದರೆಗಳು ಹೆಚ್ಚಾದರೆ, ಸಾಧನೆ ಸರಿಯಾಗಿ ಆಗುವುದಿಲ್ಲ’ ಎಂಬ ಸತ್ಯವನ್ನರಿತು ಶಾರೀರಿಕ ಮತ್ತು ಮಾನಸಿಕ ತೊಂದರೆಗಳ ಬಗ್ಗೆ ಜಾಗರೂಕರಾಗಿದ್ದು ಅವು ಕಡಿಮೆಯಿರುವಾಗಲೇ ಪರಿಣಾಮಕಾರಿ ಪರಿಹಾರೋಪಾಯಗಳನ್ನು ಮಾಡಬೇಕು.

೬ ಎ. ತೊಂದರೆಗಳು ಕಡಿಮೆಯಾಗದಿರುವುದರ ಹಿಂದಿನ ಕಾರಣಗಳ ಚಿಂತನೆಯನ್ನು ಮಾಡುವುದು : ಆಧ್ಯಾತ್ಮಿಕ ತೊಂದರೆಯಿರುವ ಹೆಚ್ಚಿನ ಸಾಧಕರು ‘ತೊಂದರೆಯಿದೆ’ ಎಂದು ಕೇವಲ ಆಧ್ಯಾತ್ಮಿಕ ಉಪಾಯಗಳ ಮೇಲೆಯೇ ಒತ್ತು ನೀಡುತ್ತಾರೆ, ಆದರೆ ಉಪಾಯಗಳು ‘ಗುಣಾತ್ಮಕವಾಗಿ ಆಗುತ್ತವೆಯೇ ? ತೊಂದರೆಗಳು ಹೆಚ್ಚಾಗುವುದರ ಹಿಂದಿರುವ ಸ್ವಭಾವದೋಷಗಳನ್ನು ದೂರಗೊಳಿಸಲು ತಳಮಳದಿಂದ ಪ್ರಯತ್ನಗಳಾಗುತ್ತವೆಯೇ ? (ಸಣ್ಣ ಸ್ವಭಾವದೋಷಗಳಿಂದಲೂ ತೊಂದರೆಗಳು ಹೆಚ್ಚಾಗಬಹುದು.)’ ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚು ವಿಚಾರ ಮಾಡುವುದಿಲ್ಲ. ಇದರಿಂದ ಅವರ ತೊಂದರೆಗಳು ಬೇಗನೇ ಕಡಿಮೆಯಾಗುವುದಿಲ್ಲ. ತೊಂದರೆಯಿರುವ ಸಾಧಕರು ಮೇಲಿನಂತೆ ಚಿಂತನೆ ಮಾಡಿದರೆ ತೊಂದರೆಗಳನ್ನು ದೂರಗೊಳಿಸಲು ಅವರ ಪ್ರಯತ್ನಗಳಿಗೆ ಯೋಗ್ಯ ದಿಶೆ ದೊರೆಯಲು ಸಹಾಯವಾಗುತ್ತದೆ. ಸಾಧಕರಿಗೆ ಆವಶ್ಯಕತೆಯೆನಿಸಿದರೆ ಚಿಂತನೆ ಮಾಡಲು  ಅವರು ಕುಟುಂಬದವರ ಅಥವಾ ಸೇವೆಯ ಜವಾಬ್ದಾರ ಸಾಧಕರ ಸಹಾಯ ಪಡೆಯಬಹುದು.’

– (ಪೂ.) ಶ್ರೀ. ಸಂದೀಪ ಆಳಶಿ (೨೬.೮.೨೦೨೦)