ಸಾಧಕರೇ, ಸದ್ಯ ಆಗುತ್ತಿರುವ ವಿವಿಧ ತೊಂದರೆಗಳನ್ನು ಮೆಟ್ಟಿನಿಲ್ಲಲು ತಮ್ಮ ಸಾಧನೆಯನ್ನು ಹೆಚ್ಚಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಸದ್ಯ ಅನೇಕ ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆ ಹೆಚ್ಚಾಗಿದೆ. ತೊದರೆಯು ದಿನದಿಂದ ದಿನಕ್ಕೆ ಹೆಚ್ಚಾಗುವ ಪ್ರಮಾಣವು ಆಪತ್ಕಾಲ ಸಮೀಪಿ ಸುತ್ತಿರುವುದರ ದ್ಯೋತಕವಾಗಿದೆ. ‘ಈ ಆಪತ್ಕಾಲದಿಂದ ಪಾರಾಗಲು ತಮ್ಮ ಸಾಧನೆಯನ್ನು ಹೆಚ್ಚಿಸುವುದೇ ಏಕೈಕ ಉಪಾಯವಾಗಿದೆ, ಎಂಬುದನ್ನು ಸಾಧಕರು ಗಮನದಲ್ಲಿಡ ಬೇಕು. ಎಲ್ಲರೂ ದಿನವಿಡೀ ಹೆಚ್ಚೆಚ್ಚು ಸಮಯ ಸತ್ಸೇವೆ ಯಲ್ಲಿರಲು ಪ್ರಯತ್ನಿಸಬೇಕು. ವ್ಯಷ್ಟಿ ಸಾಧನೆಯ, ಅದರಲ್ಲೂ ವಿಶೇಷವಾಗಿ ‘ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸ ಬಹುದು ?, ಇದರತ್ತವೂ ಹೆಚ್ಚು ಗಮನ ಕೊಡಬೇಕು. – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧೦.೨೦೨೨)