ಹಿಂದೂಗಳ ಸಂಘಟಿತ ಹೋರಾಟದ ಪರಿಣಾಮ !
ಬೆಂಗಳೂರು – ಹಿಂದೂ ಸಂಘಟನೆಗಳ ನಿರಂತರ ಹೋರಾಟದಿಂದ ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ ದಲ್ಲಿ ಇಂದು ನಿಯೋಜಿತ ವೀರ್ ದಾಸ್ ಕಾಮೆಡಿ ಶೋ ರದ್ದಾಗಿದೆ. ವೀರ್ ದಾಸ್ ಎನ್ನುವ ವಿವಾದಿತ ಕಾಮೆಡಿಯನ್ ಈ ಹಿಂದೆ ಹಿಂದೂ ಧರ್ಮ, ಹಿಂದೂ ಮಹಿಳೆಯರ ಬಗ್ಗೆ ಮತ್ತು ಭಾರತದ ಬಗ್ಗೆ ಅಪಮಾನ ಮಾಡಿದ್ದನು. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮಸೇನೆ ವೈಯಾಲ್ ಕವಲ್ ಪೋಲಿಸ್ ಠಾಣೆಯಲ್ಲಿ ದೂರು ಧಾಕಲು ಮಾಡಿತ್ತು. ಇಂದು ಹಿಂದೂ ಜಾಗರಣ ವೇಧಿಕೆಯಿಂದ ಪ್ರತಿಭಟನೆ ಮಾಡಲಾಗಿತ್ತು. ಈ ರೀತಿಯಲ್ಲಿ ಹಿಂದೂಗಳ ಸಂಘಟಿತ ಹೋರಾಟಕ್ಕೆ ಮಣಿದು ಚೌಡಯ್ಯ ಮೆಮೊರಿಯಲ್ ಹಾಲ್ ಪದಾಧಿಕಾರಿಗಳು,ಆಯೋಜಕರು ಕಾರ್ಯಕ್ರಮವನ್ನು ರದ್ದು ಮಾಡಿದರು.
A show by actor-comedian Vir Das in Bengaluru was cancelled after protest #Bengaluruhttps://t.co/rBJOo3Ocpv
— IndiaToday (@IndiaToday) November 10, 2022
ಸಂಪಾದಕೀಯ ನಿಲುವುಹಿಂದೂಗಳೇ, ಈ ಯಶಸ್ಸಿಗಾಗಿ ಭಗವಂತನ ಚರಣಗಳಲ್ಲಿ ಕೃತಜ್ಞತೆ ವ್ಯಕ್ತಪಡಿಸಿರಿ ! ಹಿಂದೂ ಧರ್ಮ, ದೇವತೆ ಮುಂತಾದರ ಅವಮಾನ ಮಾಡುವವನ ಕಾರ್ಯಕ್ರಮಗಳನ್ನು ಹಿಂದೂಗಳಿಂದಲೇ ಆಯೋಜಿಸಲಾಗುತ್ತದೆ, ಇದು ಹಿಂದೂಗಳಿಗೆ ಲಜಾಸ್ಪದವಾಗಿದೆ. ಪಾಕಿಸ್ತಾನದಲ್ಲಿ ಹೇಗೆ ಧರ್ಮನಿಂದನೆ ಅಪರಾಧಕ್ಕಾಗಿ ಗಲ್ಲು ಶಿಕ್ಷೆ ಇದೆಯೋ ಅದೇ ರೀತಿಯ ಶಿಕ್ಷೆ ನೀಡುವ ಕಾನೂನು ಭಾರತದಲ್ಲಿ ಕೂಡ ಇರುವುದು ಈಗ ಅವಶ್ಯಕವಾಗಿದೆ. ಆಗಲೇ ಹಿಂದೂ ಧರ್ಮ, ದೇವತೆ ಮುಂತಾದರ ಅವಮಾನ ತಡೆಯಲು ಸಾಧ್ಯವಾಗುವುದು ! |