೧. ಭಾರತೀಯರು ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತಿಗೆ ಮರುಳಾಗಿ ಸ್ವದೇಶಿ ದಂತಮಂಜನ ಬಳಸುವುದನ್ನು ನಿಲ್ಲಿಸಿ ‘ಪೇಸ್ಟ್’ ಬಳಸುತ್ತಾರೆ ಹಾಗೂ ಮುಂದೆ ಪುನಃ ಅದೇ ಕಂಪನಿಯವರು ಭಾರತೀಯ ಪದಾರ್ಥಗಳ ಜಾಹೀರಾತನ್ನು ಮಾಡುವುದು
ಕೆಲವು ವರ್ಷಗಳ ಹಿಂದೆ ದೂರಚಿತ್ರವಾಹಿನಿಯಲ್ಲಿ ಬಹುರಾಷ್ಟ್ರೀಯ ಕಂಪನಿಯ ಪೇಸ್ಟ್‌ನ ಒಂದು ಜಾಹೀರಾತು ಬರುತ್ತಿತ್ತು. ಇದರಲ್ಲಿ, “ಉಪ್ಪು ಮತ್ತು ಇದ್ದಲಿಯಂತಹ ಕಣಗಳಿರುವ ಪದಾರ್ಥದಿಂದ ನಿಮ್ಮ ಹಲ್ಲಿನ ಗುಣಮಟ್ಟ ಕುಸಿಯುತ್ತದೆ”, ಎಂದು ಹೇಳಲಾಗುತ್ತಿತ್ತು. ಅದನ್ನು ಕೇಳಿ ನಾವು ನಮ್ಮ ಒಳ್ಳೆಯ ದಂತಮಂಜನ ಉಪಯೋಗಿಸುವುದನ್ನು ನಿಲ್ಲಿಸಿದೆವು. ಆಗ ಆ ಕಂಪನಿಯು ಮೃದುವಾದ ಹಿಟ್ಟಿನಂತಹ ಬಿಳಿಯಾದ ಶುಭ್ರವಾದ ಪೇಸ್ಟ್‌ನ ಮಾರಾಟವನ್ನು ಆರಂಭಿಸಿತು. ಕೆಲವು ವರ್ಷಗಳ ನಂತರ ಅದೇ ಕಂಪನಿಯು ಪುನಃ ಜಾಹೀರಾತನ್ನು ನೀಡಿ ಅದರಲ್ಲಿ ನಿಮ್ಮ ಪೇಸ್ಟ್‌ನಲ್ಲಿ ಉಪ್ಪು ಇದೆಯೇ ?’, ಎಂದು ಪ್ರಶ್ನಿಸುತ್ತಿತ್ತು. ಅನಂತರ ಅವರು ತಮ್ಮ ‘ಪೇಸ್ಟ್’ನಲ್ಲಿ ಉಪ್ಪು ಮತ್ತು ಇದ್ದಲು ಹಾಕಿ ಹೊಸ ಪೇಸ್ಟ್ ಮಾರಾಟಕ್ಕೆ ತಂದರು ಹಾಗೂ ಅದು ಹೇಗೆ ಚೆನ್ನಾಗಿದೆ’, ಎಂಬುದನ್ನು ಮನದಟ್ಟು ಮಾಡಿ ಗ್ರಾಹಕರು ಅದನ್ನು ಖರೀದಿಸುವಂತೆ ಮಾಡಿದರು. ಇದರಿಂದ ಅರಿವಾಗುವ ಅಂಶವೆಂದರೆ, ‘ಮೊದಲಿಗೆ ಉಪ್ಪು ಹಾಗೂ ಇದ್ದಲು ನಿಮ್ಮ ಹಲ್ಲುಗಳಿಗೆ ಹೇಗೆ ಹಾನಿಕರವಾಗಿದೆ ?’, ಎಂಬುದನ್ನು ಹೇಳಿದರು ಹಾಗೂ ಕೆಲವು ವರ್ಷಗಳ ನಂತರ “ಅದೇ ಉಪ್ಪು ಮತ್ತು ಇದ್ದಲು ನಿಮ್ಮ ಹಲ್ಲುಗಳಿಗೆ ಹೇಗೆ ಲಾಭದಾಯಕವಾಗಿದೆ ?”, ಎಂಬುದನ್ನು ಹೇಳಿ ಗ್ರಾಹಕರು ಅದನ್ನು ಖರೀದಿಸುವ ಹಾಗೆ ಮಾಡಿದರು. ಬಹುರಾಷ್ಟ್ರೀಯ ಕಂಪನಿಗಳಿಗೆ ಎಷ್ಟರ ತನಕ ಭಾರತೀಯರನ್ನು ಉಪ್ಪು ಮತ್ತು ಇದ್ದಲು ಉಪಯೋಗಿಸುವುದರಿಂದ ನಾವು ತಡೆಯುವುದಿಲ್ಲವೊ, ಅಷ್ಟರತನಕ ಅವರ ಹಲ್ಲು ಕೆಡುವುದೇ ಇಲ್ಲ ಮತ್ತು ನಾವು ಹಲ್ಲಿನ ವಿಷಯದ ನಮ್ಮ ಒಂದೇ ಒಂದು ಉತ್ಪಾದನೆಯನ್ನು ಕೂಡ ಮಾರಾಟ ಮಾಡಲು ಸಾಧ್ಯವಿಲ್ಲ, ಎಂಬುದು ತಿಳಿದಿತ್ತು.’
೨. ಭಾರತೀಯರು ಆಚಾರಧರ್ಮಕ್ಕನುಸಾರ ಬೆರಳಿಂದ ಹಲ್ಲುಜ್ಜುವುದನ್ನು ನಿಲ್ಲಿಸಿ ಪಾಶ್ಚಾತ್ಯರ ಹಾಗೆ ‘ಬ್ರಶ್’ ಉಪಯೋಗಿಸುವುದರಿಂದ ಹಲ್ಲುಗಳ ಸಂರಕ್ಷಣ ಕವಚ ಸವೆದು ಅದರಲ್ಲಿ ಕೀಟಗಳಾಗುವುದು
ನಾವು ಹಿಂದೆ ದಂತಮಂಜನ ಹಾಕಿ ಬೆರಳಿಂದ ಹಲ್ಲುಜ್ಜುತ್ತಿದ್ದೆವು. ಬಹುರಾಷ್ಟ್ರೀಯ ಕಂಪನಿಗಳು ಜಾಹೀರಾತಿನಿಂದ ‘ಬೆರಳಿಂದ ಹಲ್ಲುಜ್ಜುವ ಬದಲು ‘ಪೇಸ್ಟ್’ ಮತ್ತು ‘ಬ್ರಶ್’ ಉಪಯೋಗಿಸಿ ಹಲ್ಲುಜ್ಜಿದರೆ ಚೆನ್ನಾಗಿರುತ್ತದೆ’, ಎಂಬುದನ್ನು ಮನದಟ್ಟು ಮಾಡಿದರು. ಅದೇ ರೀತಿ ನಾವು ಇವೆರಡೂ ವಸ್ತುಗಳನ್ನು ಉಪಯೋಗಿಸಲು ಆರಂಭಿಸಿದೆವು. ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ, ‘ನಾವು ಹಲ್ಲು ಮತ್ತು ಒಸಡಿಗೆ ಬೆರಳಿಂದ ದಂತಮಂಜನವನ್ನು ಹಚ್ಚಿ ಉಜ್ಜುತ್ತೇವೆ. ಆಗ ಅವುಗಳಿಗೆ ಒಂದು ರೀತಿಯ ಮಾಲೀಶ ಆಗುತ್ತದೆ ಹಾಗೂ ಅದರಿಂದ ನಮ್ಮ ಒಸಡು ಗಟ್ಟಿಮುಟ್ಟಾಗುತ್ತದೆ ಮತ್ತು ದಂತಮಂಜನದಲ್ಲಿನ ಆಯುರ್ವೇದದ ಔಷಧಗಳಿಂದ ಹಲ್ಲುಗಳಲ್ಲಿ ಕೀಟಾಣುಗಳಾಗುತ್ತಿರಲಿಲ್ಲ ಹಾಗೂ ಹಲ್ಲುಗಳು ಗಟ್ಟಿಯಾಗಿರುತ್ತಿದ್ದವು. ಈಗ ನಾವು ಪೇಸ್ಟ್ ಮತ್ತು ‘ಬ್ರಶ್’ ಉಪಯೋಗಿಸಲು ಆರಂಭಿಸಿದ ನಂತರ ನಮ್ಮ ಹಲ್ಲುಗಳ ಮೇಲಿದ್ದ ಒಂದು ಪ್ರಕಾರದ ಆವರಣ ಅಂದರೆ ಒಂದು ಸಂರಕ್ಷಕ ಸವೆದು ಹಲ್ಲುಗಳ ಗುಣಮಟ್ಟ ಕಡಿಮೆಯಾಗುತ್ತದೆ. ಇದರ ಜೊತೆಗೆ ಒಸಡು ಕೂಡ ಉಜ್ಜಲ್ಪಡುವುದರಿಂದ ಅದರ ಮೇಲಿನ ಆವರಣವೂ ಕಡಿಮೆಯಾಯಿತು. ನಾವು ತಾವಾಗಿಯೇ ಪೇಸ್ಟ್ ಮತ್ತು ಬ್ರಶ್ ಉಪಯೋಗಿಸಿ ತಮ್ಮ ಹಲ್ಲುಗಳನ್ನು ಕೆಡಿಸಲು ಆರಂಭಿಸಿದೆವು. ಈ ಹಿಂದೆ ನಮ್ಮ ಮನೆಯಲ್ಲಿ ಅಜ್ಜಿ-ಅಜ್ಜ, ಮುತ್ತಜ್ಜ ಇವರಿಗೆ ಯಾವತ್ತೂ ಹಲ್ಲಿನ ತೊಂದರೆ ಆಗಿರಲಿಲ್ಲ ಅಥವಾ ಅವರ ಬಾಯಿಯಲ್ಲಿ ವಾಸನೆಯೂ ಬರುತ್ತಿರಲಿಲ್ಲ. ನಾವು ತಪ್ಪು ಪದ್ಧತಿ ಮತ್ತು ಜಾಹೀರಾತುಗಳಿಗೆ ಮರುಳಾದ ಕಾರಣ ಅದಕ್ಕೆ ವಶವಾಗುವಂತೆ ಮಾಡಿದರು ಹಾಗೂ ನಾವು ನಮ್ಮ ಹಲ್ಲುಗಳನ್ನು ಕೆಡಿಸುತ್ತಾ ಹೋದೆವು.
– ನಿಸರ್ಗೋಪಚಾರ ತಜ್ಞ ದೀಪಕ ಜೋಶಿ, ದೇವದ ಪನವೇಲ್ (೨೮.೭.೨೦೨೨)