ಉಕ್ರೇನನಲ್ಲಿ ಅಣುಬಾಂಬ್ ಉಪಯೋಗಿಸಬಾರದು !

ಚೀನಾದ ರಾಷ್ಟ್ರಪತಿ ಶೀ ಜಿನಪಿಂಗರಿಂದ ರಷ್ಯಾದ ರಾಷ್ಟ್ರಾಧ್ಯಕ್ಷ ಪುಟಿನ್ ಇವರಿಗೆ ಮನವಿ

ಬೀಜಿಂಗ (ಚೀನಾ) – ಉಕ್ರೇನ ಮೇಲೆ ಅಣುಬಾಂಬ್ ಉಪಯೋಗಿಸಬಾರದು ಎಂದು ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ್ ಇವರು ರಷ್ಯಾದ ರಾಷ್ಟ್ರಾಧ್ಯಕ್ಷ ಪುಟಿನ್ ಇವರಿಗೆ ಮನವಿ ಮಾಡಿದ್ದಾರೆ. ‘ಅಣುಬಾಂಬ್ ಉಪಯೋಗಿಸುವ ಬೆದರಿಕೆಯನ್ನು ನಾವು ವಿರೋಧಿಸುತ್ತೇವೆ’, ಎಂದೂ ಅವರು ಹೇಳಿದರು. ಜರ್ಮನಿಯ ಚಾನ್ಸಲರ್ ಆಲಾಫ ಸ್ಚೋಲ್ಸ್ ಇವರು ಸದ್ಯ ಚೀನಾದ ಪ್ರವಾಸದಲ್ಲಿದ್ದಾರೆ. ಅವರೊಂದಿಗೆ ಚರ್ಚಿಸುವಾಗ ಜಿನಪಿಂಗ್ ಇವರು ಈ ಮೇಲಿನಂತೆ ಮನವಿ ಮಾಡಿದರು. ಇದರೊಂದಿಗೆ ‘ಜರ್ಮನಿಯು ರಷ್ಯಾ ಮತ್ತು ಉಕ್ರೇನ ಇವರಲ್ಲಿ ಶಾಂತಿ ನಿರ್ಮಾಣ ಮಾಡಲು ಚರ್ಚಿಸಲು ಪ್ರಯತ್ನಿಸಬೇಕು’, ಎಂದೂ ಜಿನಪಿಂಗ್ ಇವರು ಹೇಳಿದರು.

ಸಂಪಾದಕೀಯ ನಿಲುವು

ಶೀ ಜಿನಪಿಂಗ್ ಇವರು ರಷ್ಯಾಗೆ ಈ ರೀತಿಯ ಮನವಿ ಮಾಡುವುದರೊಂದಿಗೆ ಸ್ವತಃ ತಮ್ಮ ಕಡೆಗೆ ನೋಡಿಕೊಂಡು ತಾವು ಪಕ್ಕದ ದೇಶದೊಂದಿಗೆ ಏನು ಮಾಡುತ್ತಿದ್ದಾರೆ ಎನ್ನುವುದನ್ನೂ ವಿಚಾರ ಮಾಡಬೇಕು !