ಸಮುದ್ರದ ‘ಉಬ್ಬರವಿಳಿತಗಳಿಂದ ಅಡುಗೆಯ ಮೇಲೆ ಏನಾದರೂ ಪರಿಣಾಮವಾಗುತ್ತದೆಯೇ ?’ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಬರುತ್ತದೆ. ನಿಜ ಹೇಳಬೇಕಾದರೆ ಇದರ ಉತ್ತರ ‘ಹೌದು’ ಎಂದಿದೆ. ಅದು ಹೇಗೆ ? ಎಂಬುದನ್ನು ಸ್ಪಷ್ಟಪಡಿಸುವ ಲೇಖನವನ್ನು ಇಲ್ಲಿ ಕೊಡುತ್ತಿದ್ದೇವೆ. |
೧. ಸಮುದ್ರದ ಉಬ್ಬರವಿಳಿತದ ಸಮಯದಲ್ಲಿ ಪದಾರ್ಥಗಳನ್ನು ಎಣ್ಣೆಯಲ್ಲಿ ಕರಿದರೆ ಅದರ ಮೇಲೆ ಪರಿಣಾಮವಾಗುತ್ತದೆ !
ದೀಪಾವಳಿಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚಕ್ಕುಲಿ, ಅನ್ನರಸ, ಶಂಕರಪಾಳೆ ಮುಂತಾದವುಗಳನ್ನು ಮಾಡಿ, ನಾವು ಅವುಗಳನ್ನು ಯಾವ ಡಬ್ಬಿಯಲ್ಲಿ ಹಾಕಿಡುತ್ತೇವೆಯೋ, ಆ ಡಬ್ಬಿಯ ತಳದಲ್ಲಿ ತುಂಬಾ ಎಣ್ಣೆ ಸಂಗ್ರಹವಾಗುತ್ತದೆ ಮತ್ತು ಆ ಪದಾರ್ಥಗಳೂ ಸ್ವಲ್ಪ ಮೆದು ಆಗುತ್ತವೆ. ಪದಾರ್ಥಗಳನ್ನು ಮಾಡುವ ವ್ಯಕ್ತಿ ಮತ್ತು ಪದಾರ್ಥಗಳಲ್ಲಿ ಉಪಯೋಗಿಸಿದ ಸಾಮಾನುಗಳ ಪ್ರಮಾಣ ಅಷ್ಟೇ ಆಗಿರುತ್ತದೆ, ಆದರೆ ಆ ಪದಾರ್ಥಗಳು ತುಂಬಾ ಎಣ್ಣೆಯನ್ನು ಹೀರುತ್ತವೆ. ಬಟಾಟೆ ವಡೆ, ಭಜೀ ಮಾಡಿದರೆ ಅವು ಕೆಲವೊಮ್ಮೆ ತುಂಬಾ ಎಣ್ಣೆಯನ್ನು ಹೀರಿಕೊಳ್ಳುತ್ತವೆ. ಇದರ ಕಾರಣವೆಂದರೆ, ಆ ಪದಾರ್ಥಗಳನ್ನು ಸಮುದ್ರದ ಇಳಿತದ ಸಮಯದಲ್ಲಿ ಎಣ್ಣೆಯಲ್ಲಿ ಕರಿಯಲಾಗಿರುತ್ತದೆ.
ಒಂದು ವೇಳೆ ನಾವು ಸಮುದ್ರದ ಉಬ್ಬರದ ಸಮಯದಲ್ಲಿ ಪದಾರ್ಥಗಳನ್ನು ಕರಿದರೆ ಎಣ್ಣೆ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ ಮತ್ತು ಪದಾರ್ಥಗಳೂ ಚೆನ್ನಾಗಿ ಆಗುತ್ತವೆ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಅವು ಉತ್ತಮವಾಗಿರುತ್ತವೆ.
೨. ಉಬ್ಬರವಿಳಿತಗಳ ಸಮಯವನ್ನು ಕಂಡು ಹಿಡಿಯುವ ಪದ್ಧತಿ ಮತ್ತು ಪದಾರ್ಥಗಳ ಮೇಲೆ ಪ್ರತ್ಯಕ್ಷ ಆಗುವ ಪರಿಣಾಮ
ಉಬ್ಬರವಿಳಿತಗಳ ಸಮಯವನ್ನು ಕಂಡು ಹಿಡಿಯುವ ಪದ್ಧತಿಯು ಈ ಮುಂದಿನಂತಿದೆ. ದಿನದ ತಿಥಿಯು ದಿನಪತ್ರಿಕೆಗಳಲ್ಲಿ ಅಥವಾ ನೆಟ್‌ನಲ್ಲಿ ಸಿಗುತ್ತದೆ; ಅದರ ಸರಳ ಮತ್ತು ಸುಲಭವಾದ ಪದ್ಧತಿಯನ್ನು ಇಲ್ಲಿ ಕೊಡುತ್ತಿದ್ದೇವೆ.
‘ಪಂಚಾಂಗದಲ್ಲಿ ಇಂದಿನ ತಿಥಿಯನ್ನು ನೋಡಬೇಕು, ಉದಾಹರಣೆಗೆ ಇಂದಿನ ತಿಥಿ ಕೃಷ್ಣ ೨ ಆಗಿದೆ ಎಂದು ತಿಳಿಯೋಣ. ತಿಥಿ ೨ ೩/೪ = ೧.೫. ೧.೫ ಅಂದರೆ ಮಧ್ಯಾಹ್ನ ೧.೩೦ ಕ್ಕೆ ಪೂರ್ಣ ಉಬ್ಬರ ಇದೆ. ಪೂರ್ಣ ಉಬ್ಬರದ ಸಾಧಾರಣ ೩ ಗಂಟೆಗಳ ಮೊದಲು ಪದಾರ್ಥಗಳನ್ನು ಕರಿಯಲು ಆರಂಭಿಸಬೇಕು. (ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೩೦ ರ ವರೆಗೆ), ಆದರೆ ನೀವು ಮಧ್ಯಾಹ್ನ ೧.೩೦ ರ ನಂತರ ಕರಿಯಲು ಆರಂಭಿಸಿದರೆ, ಹೇಗೆ ಸಮಯ ಮುಂದೆ ಮುಂದೆ ಹೋಗುತ್ತದೆಯೋ, ಹಾಗೆ ಪದಾರ್ಥಗಳು ಹೆಚ್ಚು ಎಣ್ಣೆಯನ್ನು ಹೀರುವವು. ಯಾವಾಗ ನಮಗೆ ಹೆಚ್ಚು ಪ್ರಮಾಣದಲ್ಲಿ ಪದಾರ್ಥಗಳನ್ನು ಕರಿಯುವುದಿರುತ್ತದೆಯೋ, ಆಗ ನಾವು ಈ ಸಮಯವನ್ನು ಪಾಲಿಸಿದರೆ, ಪದಾರ್ಥಗಳು ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುವವು ಮತ್ತು ಪದಾರ್ಥಗಳೂ ಉತ್ತಮವಾಗುವವು ಮತ್ತು ಅವು ಆರೋಗ್ಯಕ್ಕೂ ಉತ್ತಮವಾಗಿರುವುದು. ನಮ್ಮ ಮನೆಯಲ್ಲಿ ದೀಪಾವಳಿಯ ಎಲ್ಲ ಪದಾರ್ಥಗಳನ್ನು ಈ ಮೇಲಿನ ಪದ್ಧತಿಯಿಂದ ಉಬ್ಬರ ಮತ್ತು ಇಳಿತವನ್ನು ನೋಡಿಯೇ ಮಾಡಲಾಗುತ್ತದೆ.
೩. ಏರಿಕೆ ಮತ್ತು ಇಳಿಕೆಯ ಸಮಯದಲ್ಲಿ ಎಣ್ಣೆಯನ್ನು ಹೆಚ್ಚು-ಕಡಿಮೆ ಹೀರಿಕೊಳ್ಳುವುದರ ಶಾಸ್ತ್ರೀಯ ಸ್ಪಷ್ಟೀಕರಣ
೩ ಅ. ಅಷ್ಟಮಿ ಮತ್ತು ಹುಣ್ಣಿಮೆಯ ದಿನ ಜಲತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ : ಏರಿಕೆಯ (ಉಬ್ಬರ) ಸಮಯದಲ್ಲಿ ‘ಹೈಡ್ರೋಫಿಲಿಕ್ ಫೋರ್ಸೆಸ್ (ಜಲವಿರೋಧಿ ಕ್ರಿಯೆ) ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಕೇವಲ ಸಮುದ್ರದಲ್ಲಿ ಮಾತ್ರವಲ್ಲ, ಮನುಷ್ಯನ ಶರೀರದಲ್ಲಿರುವ ೫-೬ ಲೀಟರ್ ದ್ರವ ಪದಾರ್ಥ, ರಕ್ತ, ಹಾರ್ಮೋನ್ಸ್ (ಗ್ರಂಥಿರಸ) ಇವುಗಳ ಮೇಲೆಯೂ ಪರಿಣಾಮವಾಗುತ್ತದೆ. ಹುಣ್ಣಿಮೆ, ಅಮಾವಾಸ್ಯೆ ಮತ್ತು ಅಷ್ಟಮಿ ಈ ತಿಥಿಗಳಿಗೆ ಈ ಫೋರ್ಸಗಳು ಹೆಚ್ಚು ಕಾರ್ಯನಿರತವಾಗಿರುತ್ತವೆ. ಅದ್ದರಿಂದ ಮಾನಸಿಕ ಕಾಯಿಲೆಗಳಿರುವವರಿಗೆ ಹುಚ್ಚು ಹಿಡಿಯುವ ಅಟ್ಯಾಕ್ ಬರುವುದು ಅಥವಾ ಮೈಮೇಲೆ ಬರುವುದು, ಕಿರಿಕಿರಿ ಆಗುವುದು ಇಂತಹ ಘಟನೆಗಳೂ ಆಗುತ್ತವೆ. ಅದ್ದರಿಂದ ಮೈಯಲ್ಲಿನ ದ್ರವರೂಪ ಮತ್ತು ನೀರು ಇರುವ ‘ಹಾರ್ಮೋನ್ಸ್’ ಮೇಲೆ-ಕೆಳಗೆ ಆಗುವುದರಿಂದ ಈ ತಿಥಿಗಳಂದು ಸ್ವಭಾವದ ಮೇಲೆ ಹೆಚ್ಚು ಪರಿಣಾಮವಾಗುತ್ತದೆ. ಇದೇ ತತ್ತ್ವದಿಂದ ಸಮುದ್ರದಲ್ಲಿ ಏರಿಕೆ (ಉಬ್ಬರ) ಬರುವುದು, ಮಳೆ ಹೆಚ್ಚು-ಕಡಿಮೆ ಬೀಳುವುದು ಮತ್ತು ದೇವತೆಗಳ ಶಕ್ತಿತತ್ತ್ವವು ಹೆಚ್ಚು ಕಾರ್ಯನಿರತವಾಗಿರುವುದು, ಈ ಘಟನೆಗಳು ಅಷ್ಟಮಿ ಮತ್ತು ಹುಣ್ಣಿಮೆಗಳಂದು ಘಟಿಸುತ್ತವೆ; ಏಕೆಂದರೆ ಆ ಸಮಯದಲ್ಲಿ ಜಲತತ್ತ್ವ ಹೆಚ್ಚು ಕಾರ್ಯನಿರತವಾಗಿರುತ್ತದೆ.
೩ ಆ. ಏರಿಕೆಯ (ಉಬ್ಬರದ) ಸಮಯದಲ್ಲಿ ಜಲತತ್ತ್ವ ಹೆಚ್ಚು ಕಾರ್ಯನಿರತವಾಗಿರುವುದರಿಂದ ಮನಸ್ಸಿನ ಚಂಚಲತೆ ಮತ್ತು ನಿರಾಶೆಯನ್ನು ದೂರಗೊಳಿಸಲು ಉಪ್ಪು ನೀರಿನಿಂದ ಸ್ನಾನವನ್ನು ಮಾಡಬೇಕು : ಮನಸ್ಸು ಚಂಚಲ, ಉದ್ವಿಗ್ನ ಅಥವಾ ನಿರಾಶೆ ಅನಿಸುತ್ತಿದ್ದರೆ, ಉಗುರುಬಿಸಿ ನೀರಿನಲ್ಲಿ ಒಂದು ಮುಷ್ಟಿ ಉಪ್ಪು ಹಾಕಿ ಸ್ನಾನ ಮಾಡಬೇಕು. ಏರಿಕೆಯ (ಉಬ್ಬರದ) ಸಮಯದಲ್ಲಿ ಜಲತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುವುದರಿಂದ ಉಪ್ಪು ಸುಲಭವಾಗಿ ಕರಗುತ್ತದೆ. ಉಪ್ಪಿನಲ್ಲಿನ ‘NaCl‘ (ಸೋಡಿಯಮ್ ಕ್ಲೋರೈಡ್)ನಲ್ಲಿ ಶರೀರ ಮತ್ತು ಮನಸ್ಸಿನಲ್ಲಿನ ‘ನೆಗೆಟಿವ್’ (ನಕಾರಾತ್ಮಕ) ಶಕ್ತಿಯನ್ನು ಸೆಳೆದುಕೊಳ್ಳುವ ಕ್ಷಮತೆ ಇರುತ್ತದೆ; ಏಕೆಂದರೆ ಉಪ್ಪು ನೀರಿನಲ್ಲಿ ಕರಗಿದಾಗ ಐಯನ್ಸ್ (ಪ್ರಭಾರಿತ ಅಣುಗಳು) ಸಿದ್ಧವಾಗಿ ಅವು ವಿದ್ಯುತ್‌ವಹನವನ್ನು ಮಾಡಬಹುದು. ನಮ್ಮ ಶರೀರದಲ್ಲಿಯೂ ವಿದ್ಯುತ್‌ವಹನ ನಿರಂತರವಾಗಿ ನಡೆದಿರುತ್ತದೆ. ಉಪ್ಪು ಹೆಚ್ಚು ತೆಳು ಮತ್ತು ನುಣ್ಣಗೆ ಇರುವುದರಿಂದ ಮಲವಿಸರ್ಜನೆಗೂ ಸಹಾಯವಾಗುತ್ತದೆ. ಇದಲ್ಲದೇ ಏರಿಕೆಯ (ಉಬ್ಬರದ) ಸಮಯದಲ್ಲಿ ಒಂದು ಬಾಲ್ದಿ ನೀರಿನಲ್ಲಿ ಉಪ್ಪುಹಾಕಿ ಸ್ನಾನ ಮಾಡಿದರೆ, ಮನಃಶಾಂತಿ ಸಿಗುತ್ತದೆ.
೩ ಇ. ಏರಿಕೆ (ಉಬ್ಬರ) ಮತ್ತು ಇಳಿಕೆಯ ಸಮಯದಲ್ಲಿ ಪದಾರ್ಥಗಳು ಎಣ್ಣೆ ಮತ್ತು ನೀರನ್ನು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಹೀರಿಕೊಳ್ಳುವುದರ ಕಾರಣ : ಏರಿಕೆಯ (ಉಬ್ಬರದ) ಸಮಯದಲ್ಲಿ ಕರಿಯುವ ಎಣ್ಣೆಯು ನೀರಿನ ವಿರುದ್ಧ ಧರ್ಮದ (ಹೈಡ್ರೋಫೋಬಿಕ್-ಜಲವಿರೋಧಿ) ಆಗಿರುವುದರಿಂದ ಪದಾರ್ಥಗಳಲ್ಲಿ ಅದರ ಹೀರುವಿಕೆ ಕಡಿಮೆ ಆಗುತ್ತದೆ. ಆಗ ಪದಾರ್ಥಗಳಲ್ಲಿ ನೀರನ್ನು ಶೋಷಿಸುವ ವೃತ್ತಿ (ಹೈಡ್ರೋಫಿಲಿಕ್-ಜಲಪ್ರಿಯ) ಇರುತ್ತದೆ. ತದ್ವಿರುದ್ಧ ಇಳಿತದ ಸಮಯದಲ್ಲಿ ನೀರಿನ ಪ್ರಭಾವ (ಹೈಡ್ರೋಫಿಲಿಕ್ – ಇಫೆಕ್ಟ್) ಮತ್ತು ಪೃಥ್ವಿಯ ಮೇಲಿನ ಜಲತತ್ತ್ವದ ಪರಿಣಾಮವು (ಹೈಡ್ರೋಫಿಲಿಕ್ ಇಫೆಕ್ಟ್) ಹೆಚ್ಚಾಗುತ್ತದೆ. ಅದ್ದರಿಂದ ಇಳಿತ ಆರಂಭವಾದಾಗ ಕರಿಯುವ ಪದಾರ್ಥಗಳು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುತ್ತಿರಬಹುದು. ಈ ತತ್ತ್ವದಿಂದಲೆ ಖಿಚಡಿ, ಸಾರು, ತೊವ್ವೆ, ಪಲ್ಯ ಇತ್ಯಾದಿಗಳನ್ನು ಮಾಡುವಾಗ ಉಬ್ಬರದ ಸಮಯದಲ್ಲಿ ಕಡಿಮೆ ಸೀಟಿಗಳಲ್ಲಿ ಬೇಯುತ್ತವೆ ಮತ್ತು ಇಳಿತದ ಸಮಯದಲ್ಲಿ ಹೆಚ್ಚು ಸಮಯ ತಗಲಬಹುದು.
೪. ದೇವದೇವಿಯರು ಅಷ್ಟಮಿ ಅಥವಾ ಹುಣ್ಣಿಮೆಯ ತಿಥಿಯಂದು ಅವತಾರ ತಾಳುವುದರ ಹಿಂದಿನ ತತ್ತ್ವ
ಇದೇ ತತ್ತ್ವದಿಂದಾಗಿ ಹೆಚ್ಚೆಚ್ಚು ಶಕ್ತಿಯನ್ನು ಗ್ರಹಿಸುವ ಕ್ಷಮತೆಯಿರುವ ದೇವದೇವತೆಗಳು ಅಷ್ಟಮಿ ಅಥವಾ ಹುಣ್ಣಿಮೆ ತಿಥಿಯಂದು ಅವತಾರ ತಾಳುತ್ತಾರೆ, ಉದಾಹರಣೆಗೆ ಚೈತ್ರ ಹುಣ್ಣಿಮೆಗೆ ಹನುಮಾನ, ಶ್ರಾವಣ ಹುಣ್ಣಿಮೆಗೆ ಬಲರಾಮ, ಅಷ್ಟಮಿಗೆ ಶ್ರೀಕೃಷ್ಣ ಮತ್ತು ದೇವಿ, ಆಶ್ವಯುಜ ಹುಣ್ಣಿಮೆಗೆ ಶಿವಶಕ್ತಿ ಸಂಚಾರ, ಮಾರ್ಗಶಿರ ಹುಣ್ಣಿಮೆಗೆ ದತ್ತಾತ್ರೇಯ ಇತ್ಯಾದಿ. ಆದ್ದರಿಂದ ಈ ಲೇಖನದಲ್ಲಿ ‘ಪದಾರ್ಥಗಳನ್ನು ಕರಿಯುವುದು ಮತ್ತು ಉಬ್ಬರ-ಇಳಿತ ಈ ಮಾಹಿತಿಯು ಶಾಸ್ತ್ರೀಯವಾಗಿದ್ದು ಅದರಲ್ಲಿ ಹಳೆಯದು, ಸುಳ್ಳು ಅಥವಾ ಮೂಢನಂಬಿಕೆ ಇತ್ಯಾದಿ ಏನೂ ಇಲ್ಲ, ಇದನ್ನು ಗಮನದಲ್ಲಿಡಿ.
– ಶ್ರೀ. ಸಾಗರ ಬರ್ವೆ, ಕೊಥರೂಡ ಪುಣೆ. (ಆಧಾರ: ಸಾಮಾಜಿಕ ಜಾಲತಾಣ)