ಅಪಾರ ಸಹನೆ ಮತ್ತು ದೇವರ ಮೇಲಿನ ದೃಢಶ್ರದ್ಧೆಗಳಿಂದ ಗಂಭೀರ ಅನಾರೋಗ್ಯವನ್ನು ಸ್ಥಿರವಾಗಿ ಎದುರಿಸಿದ ಸನಾತನದ ೭ ನೇ ಸಂತರಾದ ಪೂ. ಪದ್ಮಾಕರ ಹೊನಪ

ಪೂ. ಪದ್ಮಾಕರ ಹೊನಪ

ಮೂಲತಃ ನಾಸಿಕ್‌ನವರಾದ ಪೂ. ಪದ್ಮಾಕರ ಹೊನಪ ಅವರು ೧೯೯೮ ರಲ್ಲಿ ಸನಾತನದ ಸಂಪರ್ಕಕ್ಕೆ ಬಂದರು. ತಕ್ಷಣವೇ ಸೇವೆ ಮತ್ತು ಸಾಧನೆಯನ್ನು ಪ್ರಾರಂಭಿಸಿದರು. ೨೦೦೬ ರಲ್ಲಿ ಹೊನಪ ದಂಪತಿಗಳು ಪೂರ್ಣ ಸಮಯದ ಸಾಧನೆಗಾಗಿ ನಾಸಿಕನಿಂದ ರಾಮನಾಥಿ ಆಶ್ರಮಕ್ಕೆ ಬಂದರು. ಆಶ್ರಮಕ್ಕೆ ಬಂದಾಗಿನಿಂದ ಪೂ. ಪದ್ಮಾಕರ ಹೊನಪ ಇವರು ಸದಾ ಸಾಧನಾನಿರತರಾಗಿರಲು ಪ್ರಯತ್ನಿಸಿದರು. ಅವರು ಪ್ರತಿಯೊಂದು ಸೇವೆಯನ್ನು ಭಾವಪೂರ್ಣ ಮಾಡುತ್ತಿದ್ದರು. ೧೧.೬.೨೦೧೧ ರಂದು ಪೂ. ಪದ್ಮಾಕರ ಹೊನಪ ಅವರನ್ನು ಸನಾತನದ ೭ ನೇ ಸಂತರೆಂದು ಘೋಷಿಸಲಾಯಿತು. ೧೨.೮.೨೦೧೦ ರಂದು ಅವರ ಪತ್ನಿ ಸೌ. ನಿರ್ಮಲಾ ಹೊನಪ ಇವರು ದೇಹತ್ಯಾಗ ಮಾಡಿದರು. ಪತ್ನಿಯ ಮೃತ್ಯುವಿನ ನಂತರವೂ ಪೂ. ಹೊನಪ ಅವರು ಸ್ಥಿರ ಮತ್ತು ದೃಢ ಶ್ರದ್ಧೆಯಿಂದ ಸಾಧನೆ ಮಾಡುತ್ತಿದ್ದರು. ಪೂ (ದಿ.) ಸೌ. ನಿರ್ಮಲಾ ಹೊನಪರ ಸಾಧನೆಯಿಂದಾಗಿ ೨೦೧೩ ರಲ್ಲಿ ಮೃತ್ಯುವಿನ ನಂತರ ಸಂತರೆಂದು ಘೋಷಿಸಲಾಯಿತು.

ಹೊನಪ ದಂಪತಿಗಳ ಉತ್ತಮ ಸಂಸ್ಕಾರದಿಂದಾಗಿ ಅವರ ಪುತ್ರಿ ಸುಶ್ರೀ (ಕು.) ದೀಪಾಲಿ ಹೊನಪ ಮತ್ತು ಪುತ್ರ ಶ್ರೀ. ರಾಮ ಹೊನಪ ಇಬ್ಬರೂ ಸನಾತನದ ರಾಮನಾಥಿ ಆಶ್ರಮದಲ್ಲಿ ಪೂರ್ಣ ಸಮಯದ ಸಾಧನೆ ಮಾಡುತ್ತಿದ್ದಾರೆ. ೨೦೧೮ ರಲ್ಲಿ ಪೂ. ಪದ್ಮಾಕರ ಹೊನಪ ಅವರಿಗೆ ಅರ್ಬುದ ರೋಗವಾಗಿರುವುದು ಪತ್ತೆಯಾಗಿತ್ತು. ಅವರ ಕ್ಲಾವಿಕಲ್‌ಗಳ ಮೂಳೆಗಳು (ಸೊಂಟ ಮತ್ತು ತೊಡೆಗಳನ್ನು ಸಂಪರ್ಕಿಸುವ ಕೀಲುಗಳು) ವಯಸ್ಸಾದಂತೆ ಸವೆಯುವುದರಿಂದ ಅವರು ತೀವ್ರವಾದ ನೋವಿನಿಂದ ಬಳಲುತ್ತಿದ್ದರು. ಅಂತಹ ನೋವಿನಲ್ಲಿಯೂ ಪೂ. ಹೊನಪಕಾಕಾ ದಣಿವರಿಯದೆ ಸಾಧಕರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದರು.

೩೦.೧೦.೨೦೨೨ ರಂದು ಸಂಜೆ ೪.೨೭ ಕ್ಕೆ ಪೂ. ಪದ್ಮಾಕರ ಹೊನಪ ಇವರು ದೇಹತ್ಯಾಗ ಮಾಡಿದರು. ಅವರಲ್ಲಿನ ನಮ್ರತೆ, ಶರಣಾಗತಭಾವ, ಪ್ರೇಮಭಾವ, ಸೇವಾಭಾವ ಮತ್ತು ಅಲ್ಪಅಹಂ, ಈ ಗುಣಗಳನ್ನು ಎಲ್ಲರೂ ನೋಡಿದರು. ಅವರ ಅಪಾರ ಸಹನೆ ಮತ್ತು ದೇವರಲ್ಲಿ ದೃಢ ಶ್ರದ್ಧೆಗಳಿಂದಾಗಿ ಪೂ. ಹೊನಪ ಇವರು ತೀವ್ರ ಅನಾರೋಗ್ಯವನ್ನು ಧೈರ್ಯದಿಂದ ಎದುರಿಸಿದರು.

‘(ದಿ.) ಪೂ. ಹೊನಪ ಅವರ ಆಧ್ಯಾತ್ಮಿಕ ಉನ್ನತಿಯು ಉತ್ತರೋತ್ತರ ಹೆಚ್ಚಾಗಲಿ’, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !

–  ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ (೩೦.೧೦.೨೦೨೨)