ಯಾಲಕ್ಕಿಯನ್ನು ತಿನ್ನುವುದರ ಲಾಭಗಳು ಮತ್ತು ಯಾಲಕ್ಕಿಯನ್ನು ಯಾರು ತಿನ್ನಬಾರದು ?

ಉರ್ಜೆಯನ್ನು ಕೊಡುವ ಯಾಲಕ್ಕಿ !

ನಮ್ಮಲ್ಲಿ ಮೊದಲಿನಿಂದಲೂ ಸಾಯಂಕಾಲದ ಯಾವುದೇ ಕಾರ್ಯಕ್ರಮಕ್ಕೆ ಕಾಫಿಯಲ್ಲಿ ಯಾಲಕ್ಕಿಯನ್ನು ಹಾಕಿಕೊಡುವ ಪದ್ಧತಿಯಿದೆ. ಯಾಲಕ್ಕಿಯಿಂದ ಶರೀರದ ದಣಿವು (ಆಯಾಸ) ಕಡಿಮೆಯಾಗುತ್ತದೆ ಮತ್ತು ಪುನಃ ಉರ್ಜೆ (ಶಕ್ತಿ) ಸಿಗುತ್ತದೆ. ನೀವು ಬಹಳಷ್ಟು ದಣಿದಿದ್ದರೂ ನಿಮಗೆ ಉತ್ಸಾಹವೆನಿಸುತ್ತದೆ. ನೀವು ತುಂಬಾ ದಣಿದಿರುವಾಗ ನಿಮಗೆ ಹೊರಗೆ ಹೋಗಬೇಕಾಗಿದ್ದರೆ ಒಂದು ಯಾಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಂಡು ಹೋದರೆ ನಿಮಗೆ ಕೂಡಲೇ ಉತ್ಸಾಹವೆನಿಸುವುದು !

ಡಾ. ಶಿಲ್ಪಾ ಚಿಟ್ನಿಸ್ ಜೋಶಿ

ಬಹುಗುಣಿ ಯಾಲಕ್ಕಿ !

ಯಾಲಕ್ಕಿಯು ಮನುಷ್ಯನ ಬಾಯಿಯ ಆರೋಗ್ಯಕ್ಕಾಗಿ ಉತ್ತಮ ಜೌಷಧಿಯಾಗಿದೆ. ಬಾಯಿಗೆ ದುರ್ಗಂಧ ಬರುವುದು, ಹಲ್ಲುಗಳ ಸೋಂಕು (ಇನಫೆಕ್ಷನ್), ಒಸಡುಗಳ ರೋಗ ಹಾಗೂ ಬಾಯಿಯಲ್ಲಿನ ಗಾಯಗಳನ್ನು ದೂರಗೊಳಿಸಲು ಯಾಲಕ್ಕಿ ಉಪಯುಕ್ತವಾಗಿದೆ. ಯಾಲಕ್ಕಿಯಿಂದ ರಕ್ತದೊತ್ತಡ ಮತ್ತು ಮಧುಮೇಹವಿರುವ ಜನರಿಗೂ ಲಾಭವಾಗುತ್ತದೆ. ಕೋಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುವ ರೋಗಿಗಳಿಗೂ ಯಾಲಕ್ಕಿಯ ಲಾಭವಾಗಬಹುದು. ತೂಕವನ್ನು ಕಡಿಮೆ ಮಾಡಲು ಯಾಲಕ್ಕಿಯು ಉಪಯುಕ್ತವಾಗಿದೆ. ದಾಹವನ್ನು ಕಡಿಮೆ ಮಾಡುವುದು ಮತ್ತು ‘ಎಂಟಿಆಕ್ಸಿಡೆಂಟ್’ ಈ ಗುಣಗಳು ಯಾಲಕ್ಕಿಯಲ್ಲಿ ಕಂಡುಬರುತ್ತವೆ.

ಯಾವ ರೋಗಗಳಿಗಾಗಿ ಯಾಲಕ್ಕಿ ವರ್ಜ್ಯವಾಗಿದೆ ?

ಯಾರು ಹೃದಯರೋಗ ಅಥವಾ ಇತರ ರೋಗಗಳಿಗಾಗಿ ರಕ್ತವನ್ನು ತೆಳ್ಳಗೆ ಮಾಡಲು, ಯಕೃತ್ತು ಮತ್ತು ಪಚನದ ರೋಗಗಳಿಗಾಗಿ ಮತ್ತು ನಿರಾಶೆಯನ್ನು ದೂರ ಮಾಡಲು ಜೌಷಧಿಗಳನ್ನು ತೆಗೆದುಕೊಳ್ಳುತ್ತಾರೆಯೋ, ಅವರು ಯಾಲಕ್ಕಿಯ ಸೇವನೆಯನ್ನು ಮಾಡಬಾರದು. ಪಿತ್ತಾಶಯದಲ್ಲಿ ಕಲ್ಲುಗಳಿರುವವರೂ ಯಾಲಕ್ಕಿಯನ್ನು ಸೇವಿಸಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ದಿನದಲ್ಲಿ ಹೆಚ್ಚೆಂದರೆ ೨ ಯಾಲಕ್ಕಿಗಳನ್ನು ತಿನ್ನಬಹುದು. ಪೇಟೆಯಲ್ಲಿ ಸಿಗುವ ಯಾಲಕ್ಕಿಗಳಲ್ಲಿ ರಾಸಾಯನಿಕ ಮತ್ತು ತಂಬಾಕುಜನ್ಯ ಪದಾರ್ಥಗಳಿರುವ ಸಾಧ್ಯತೆ ಇರುತ್ತದೆ. ಆದುದರಿಂದ ಅವುಗಳಿಂದ ದೂರವಿರುವುದೇ ಉತ್ತಮ.

– ಡಾ. ಶಿಲ್ಪಾ ಚಿಟಣೀಸ ಜೋಶಿ, ಸ್ತ್ರೀರೋಗ ಮತ್ತು ವಂಧ್ಯತ್ವತಜ್ಞ (ಬಂಜತನ), ಕೋಥರೂಡ, ಪುಣೆ, ಮಹಾರಾಷ್ಟ್ರ.