ಪಾಕಿಸ್ತಾನದ ಭಯೋತ್ಪಾದಕನನ್ನು ‘ಅಂತಾರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಲು ಚೀನಾದಿಂದ ಮತ್ತೊಮ್ಮೆ ವಿರೋಧ !

ನ್ಯೂಯಾರ್ಕ್ (ಅಮೇರಿಕಾ) – ‘ಲಷ್ಕರ್-ಎ-ತೊಯ್ಬಾ’ ಮುಖ್ಯಸ್ಥ ಹಾಫೀಜ್ ಸಯೀದನ ಮಗ ತಲ್ಹಾ ಸಯೀದನ ಹೆಸರನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಭಯೋತ್ಪಾದಕರೆಂದು ಘೋಷಿಸಲ್ಪಡುವವರ ಪಟ್ಟಿಯಲ್ಲಿ ಹಾಕಿತ್ತು; ಆದರೆ ಚೀನಾ ಈ ಪಟ್ಟಿಯನ್ನು ವಿರೋಧಿಸಿತು. ಸಯೀದನ ಹೆಸರನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸುವಂತೆ ಭಾರತವು ವಿಶ್ವಸಂಸ್ಥೆಗೆ ಪ್ರಸ್ತಾಪವನ್ನು ಸಲ್ಲಿಸಿತ್ತು. ಈ ಹಿಂದೆ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಶಾಹಿದ ಮೆಹಮೂದನನ್ನು ಕೂಡ ‘ಅಂತಾರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವ ಪ್ರಸ್ತಾಪವನ್ನು ಚೀನಾ ವಿರೋಧಿಸಿತ್ತು.
ಏಪ್ರಿಲ್ ೮ ರಂದು ಭಾರತದ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಲ್ಹಾ ಸಯೀದನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ತಲ್ಹಾ ಸಯೀದನು ಲಷ್ಕರ್-ಎ-ತೊಯ್ಬಾದ ಪ್ರಮುಖ ಭಯೋತ್ಪಾದಕನಾಗಿದ್ದು ಮೌಲ್ವಿ ಶಾಖೆಯ ಮುಖ್ಯಸ್ಥನಾಗಿದ್ದಾನೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಉಗ್ರರ ನೇಮಕಾತಿ ಮತ್ತು ನಿಧಿ ಸಂಗ್ರಹಣೆಯಲ್ಲಿ ಸಯೀದ ಸಕ್ರಿಯ ಸಹಭಾಗಿತ್ವವಿದೆ. ಭಾರತದಲ್ಲಿ ಹಾಗೂ ಅಫ್ಘಾನಿಸ್ತಾನದಲ್ಲಿನ ಭಾರತಕ್ಕೆ ಸಂಬಂಧಪಟ್ತ ಸ್ಥಳಗಳ ಮೇಲೆ ದಾಳಿ ನಡೆಸುವ ಲಷ್ಕರ್-ಎ-ತೊಯ್ಬಾದ ಸಂಚುಗಳನ್ನು ರೂಪಿಸುವಲ್ಲಿಯೂ, ಅವುಗಳನ್ನು ಕಾರ್ಯಗತಗೊಳಿಸುವಿಕೆಯಲ್ಲಿಯೂ ಸಯೀದನ ಪಾಲ್ಗೊಳ್ಳುವಿಕೆಯಿದೆ.

ಸಂಪಾದಕೀಯ ನಿಲುವು

ಚೀನಾದ ಇಂತಹ ಚಟುವಟಿಕೆಗಳನ್ನು ಜಗತ್ತಿನ ಎಲ್ಲ ದೇಶಗಳೂ ಸಂಘಟಿತ ರೀತಿಯಲ್ಲಿ ವಿರೋಧಿಸಲೇಬೇಕು !