೧. ಭಾರತಕ್ಕೆ ವಲಸೆ ಬಂದ ಹಿಂದೂಗಳಿಗೆ ನರಕಯಾತನೆ ಮತ್ತು ಮತಾಂಧ ನುಸುಳುಕೋರರಿಗೆ ಅನೇಕ ಸೌಲಭ್ಯಗಳು
‘ಇಸ್ಲಾಮೀ ದೇಶಗಳಲ್ಲಿನ ಹಿಂದೂಗಳ ದಯನೀಯ ಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳು ಇಲ್ಲಿಯೂ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಈ ವಲಸೆ ಬಂದ ಹಿಂದೂಗಳು ದೆಹಲಿಯ ಆದರ್ಶ ನಗರ ಪರಿಸರದಲ್ಲಿರುತ್ತಾರೆ. ಅಲ್ಲಿ ೬ ವರ್ಷಗಳಿಂದ ವಿದ್ಯುತ್ ಪೂರೈಕೆಯಿಲ್ಲ. ವಿದ್ಯುತ್ ಪೂರೈಕೆಯನ್ನು ಪಡೆಯಲು ಗ್ರಾಹಕರ ಅಧಿಕಾರ ನಿಯಮದಲ್ಲಿನ ನಿಯಮ ೯ (೧) ಕ್ಕನುಸಾರ ಒಡೆತನ ಹಕ್ಕಿನ ಪುರಾವೆಯ ಅವಶ್ಯಕತೆ ಇರುವುದಿಲ್ಲ. ಈ ನಿಯಮವನ್ನು ಹಿಂದೂಗಳಿಗಾಗಿ ಉಪಯೋಗಿಸಿಲ್ಲ. ಈ ನಿಯಮಕ್ಕನುಸಾರ ಒಬ್ಬ ವ್ಯಕ್ತಿಯ ಕಟ್ಟಡದಲ್ಲಿ ಅನೇಕ ಬಾಡಿಗೆದಾರರು ಇರುತ್ತಾರೆ. ಪ್ರತಿಯೊಬ್ಬರಿಗೂ ಮನೆಯ ಮಾಲೀಕರ ಅನುಮತಿಯಿಂದ ವಿದ್ಯುತ್ತಿನ ಸ್ವತಂತ್ರ ಮೀಟರ್ ಕೊಡಲಾಗುತ್ತದೆ. ಚಳಿಗಾಲದಲ್ಲಿ ದೆಹಲಿಯಲ್ಲಿ ೪ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ಇರುತ್ತದೆ ಮತ್ತು ಬೇಸಿಗೆಯಲ್ಲಿ ೪೦ ರಿಂದ ೪೫ ಡಿಗ್ರಿ ಸೆಲ್ಸಿಯಸ್‌ನ ವರೆಗೆ ತಾಪಮಾನವಿರುತ್ತದೆ. ಕಳೆದ ಅನೇಕ ವರ್ಷಗಳಿಂದ ಅವರು ತಮ್ಮ ಮನೆಗಳಲ್ಲಿ ವಿದ್ಯುತ್ ಇಲ್ಲದೇ ಜೀವನವನ್ನು ನಡೆಸುತ್ತಿದ್ದಾರೆ. ಅದರಿಂದ ಅವರಿಗೆ ಎಷ್ಟು ತೊಂದರೆಯಾಗುತ್ತಿರಬಹುದು, ಎಂಬುದನ್ನು ನಾವು ಊಹಿಸಬಹುದು. ಮಹಿಳೆಯರಿಗೆ ಅಡುಗೆಮನೆಯಲ್ಲಿನ ಪ್ರತಿಯೊಂದು ಕೆಲಸವನ್ನು ಮಾಡುವಾಗ ವಿದ್ಯುತ್ ಆವಶ್ಯಕವಾಗಿರುತ್ತದೆ, ಹಾಗೆಯೇ ಅಭ್ಯಾಸ ಮಾಡಲು ಮಕ್ಕಳಿಗೂ ಅದರ ಅವಶ್ಯಕತೆಯಿರುತ್ತದೆ.
ಇಂತಹ ಸ್ಥಿತಿಯೇ ಕಾಶ್ಮೀರದಿಂದ ತಮ್ಮ ದೇಶದಲ್ಲಿಯೇ ವಲಸೆ ಬಂದಿರುವ ಹಿಂದೂಗಳದ್ದಾಗಿದೆ. ಅವರಿಗೂ ನಿರಾಶ್ರಿತರ ಡೇರೆಗಳಲ್ಲಿ ನರಕಯಾತನೆಯನ್ನು ಭೋಗಿಸಬೇಕಾಗುತ್ತಿದೆ. ‘೩೫-ಅ’ ಮತ್ತು ‘೩೭೦’ ಕಲಮ್ ರದ್ದಾದ ನಂತರವೂ ಅವರಿಗೆ ಪುನಃ ತಮ್ಮ ಮನೆಗೆ ಹೋಗಲು ಸಾಧ್ಯವಾಗಿಲ್ಲ. ಇದರ ವಿರುದ್ಧ ಬಾಂಗ್ಲಾದೇಶಿ ನುಸುಳುಕೋರರ ಮತ್ತು ರೋಹಿಂಗ್ಯಾ ಮುಸಲ್ಮಾನರ ಸ್ಥಿತಿಯಿದೆ. ಅವರು ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾರೆ, ಆದರೂ ಅವರು ಆರಾಮದಿಂದ ಇದ್ದಾರೆ. ಕೆಲವು ರಾಜ್ಯ ಸರಕಾರಗಳಂತೂ ಅವರಿಗೆ ಪಕ್ಕಾ ಮನೆಗಳನ್ನೂ ಕೊಡುತ್ತಿವೆ.
೨. ಭಾರತದಲ್ಲಿನ ಕಥಿತ ಜಾತ್ಯತೀತವಾದಿಗಳು, ಪ್ರಗತಿಪರರು ಮತ್ತು ಸರ್ವಧರ್ಮಸಮಭಾವದವರಿಂದ ಮತಾಂಧ ನುಸುಳುಕೋರರ ವಿರುದ್ಧದ ಕಾರ್ಯಾಚರಣೆಗೆ ವಿರೋಧ
ಭಾರತ ಸರಕಾರ ಹೊರಗಿನಿಂದ ಬಂದಿರುವ ಮತಾಂಧ ನುಸುಳುಕೋರರನ್ನು ಗುರುತಿಸಿ ಅವರನ್ನು ಅವರ ದೇಶಕ್ಕೆ ಕಳುಹಿಸುವ ಪ್ರಯತ್ನವನ್ನು ಮಾಡುತ್ತದೆ, ಆಗ ಭಾರತದಲ್ಲಿನ ಕಥಿತ ಜಾತ್ಯತೀತವಾದಿಗಳು, ಪ್ರಗತಿಪರರು ಮತ್ತು ಮತಾಂಧ ರನ್ನು ಓಲೈಸುವ ಸರ್ವಧರ್ಮಸಮಭಾವದವರು ವಿವಿಧ ನ್ಯಾಯಾಲಯಗಳಲ್ಲಿ ದಾವೆಗಳನ್ನು ದಾಖಲಿಸುತ್ತಾರೆ. ವಿಶೇಷ ವೆಂದರೆ ನಮ್ಮ ನ್ಯಾಯಾಲಯಗಳು ಕೂಡ ಅವುಗಳಿಗೆ ರದ್ದತಿಯ ಆದೇಶವನ್ನು ನೀಡಿ ಕಾನೂನಿನ ಜಂಜಾಲದಲ್ಲಿ ಸಿಲುಕಿಸುತ್ತವೆ. ಪೀಡಿತ ಹಿಂದೂಗಳ ಪ್ರಕರಣದಲ್ಲಿ ಯಾವಾಗ ದೆಹಲಿ ಉಚ್ಚನ್ಯಾಯಾಲಯವು ‘ಕಾರಣ ತೋರಿಸಿ ಎಂಬ ನೋಟೀಸ್’ನ್ನು ಜಾರಿ ಮಾಡಿತ್ತೋ, ಆಗ ಕೇಂದ್ರ ಸರಕಾರದ ವಕೀಲರು ”ಪೀಡಿತ ಹಿಂದೂಗಳ ದೈನ್ಯಾವಸ್ಥೆಯ ಬಗ್ಗೆ ಸಹಾನುಭೂತಿಪೂರ್ವಕ ವಿಚಾರ ಮಾಡಲಾಗುವುದು ಮತ್ತು ೨ ವಾರಗಳಲ್ಲಿ ಯೋಗ್ಯ ಸೂಚನೆಗಳನ್ನು ಸಂಬಂಧಪಟ್ಟವರಿಗೆ ಕೊಡಲಾಗುವುದು, ಹಾಗೆಯೇ ಇಂತಹ ಪ್ರತಿಜ್ಞಾಪತ್ರವನ್ನೂ ನ್ಯಾಯಾಲಯದಲ್ಲಿ ಸಾದರಪಡಿಸಲಾಗುವುದು ಎಂದು ಹೇಳಿದ್ದರು. ಈ ವಲಸೆಗಾರರಿಗೆ ಈಗ ಆಧಾರಕಾರ್ಡ್ಗಳನ್ನು ಕೊಡಲಾಗಿದೆ. ಅವರು ದೀರ್ಘಕಾಲದ ‘ವೀಸಾ’ಗಳ ಆಧಾರದಲ್ಲಿ ಇಲ್ಲಿ ಇದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಮೇಲೆ ಬಹಳ ಅತ್ಯಾಚಾರಗಳನ್ನು ಮಾಡಲಾಗುತ್ತದೆ. ಆದ್ದರಿಂದ ಅವರಿಗೆ ಭಾರತಕ್ಕೆ ವಲಸೆ ಬರದೇ ಬೇರೆ ಪರ್ಯಾಯವಿಲ್ಲ.”
೩. ಮಾನವಾಧಿಕಾರ ಆಯೋಗ, ಮಹಿಳಾ ಆಯೋಗ ಮತ್ತು ಮಕ್ಕಳಕಲ್ಯಾಣ ಆಯೋಗದ ಮತಾಂಧರ ಓಲೈಕೆ
ನಿತ್ಯ ದೂರಚಿತ್ರವಾಹಿನಿಗಳಲ್ಲಿ ದಿನವಿಡೀ ಸಂವಿಧಾನದ ವೈಭವೀಕರಣ ನಡೆಯುತ್ತಿರುತ್ತದೆ. ಮಾನವೀ ಹಕ್ಕುಗಳನ್ನು ಜೋಪಾನ ಮಾಡುವ ಬಗ್ಗೆ ಭಾಷಣಗಳನ್ನು ಬಿಗಿಯಲಾಗುತ್ತದೆ. ಯಾವಾಗ ಹಿಂದೂಗಳಿಗೆ ಜೀವಿಸಲು ಮೂಲಭೂತ ಸೌಲಭ್ಯಗಳನ್ನು ನೀಡುವ ಸಮಯ ಬರುತ್ತದೆಯೋ, ಆಗ ಮಾತ್ರ ಅದರ ಕಡೆಗೆ ದುರ್ಲಕ್ಷ ಮಾಡಲಾಗುತ್ತದೆ. ಮಾನವಾಧಿಕಾರ ಆಯೋಗ, ಮಹಿಳಾ ಆಯೋಗ ಅಥವಾ ಮಕ್ಕಳಕಲ್ಯಾಣ ಆಯೋಗಗಳಿಗೆ ಹಿಂದೂಗಳ ಮೇಲಿನ ಅತ್ಯಾಚಾರಗಳು ಕಾಣಿಸುವುದೇ ಇಲ್ಲ. ಯಾವಾಗ ಮತಾಂಧರು ‘ಲವ್ ಜಿಹಾದ್’ನ ಮಾಧ್ಯಮದಿಂದ ಹಿಂದೂ ಹುಡುಗಿಯರ ಮೇಲೆ ಅತ್ಯಾಚಾರ ಮಾಡುತ್ತಾರೆಯೋ, ಆಗ ಕೂಡ ಮಹಿಳಾ ಆಯೋಗ ಅಥವಾ ಮಾನವಾಧಿಕಾರ ಆಯೋಗ ಅವರಿಗೆ ಸಹಾಯ ಮಾಡುವುದಿಲ್ಲ.
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ
ಸಂವಿಧಾನವು ನಿರ್ಮಿಸಿದ ಇವೆಲ್ಲ ಆಯೋಗಗಳು ಕಳೆದ ೭೫ ವರ್ಷಗಳಿಂದ ಮತಾಂಧರ ಓಲೈಕೆಯನ್ನೇ ಮಾಡುತ್ತಿವೆ. ಆಮ್ ಆದಮಿ ಪಕ್ಷ (ಆಪ್), ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷ ಈ ಎಲ್ಲ ‘ಸೆಕ್ಯುಲರ್’ ಪಕ್ಷಗಳು ಮತಾಂಧರ ಓಲೈಕೆಯನ್ನು ಮಾಡಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತವೆ. ಅವರು ಮತಾಂಧರು ಮಾಡುವ ಗಲಭೆ, ಅತ್ಯಾಚಾರ ಮತ್ತು ಅಪರಾಧಗಳ ಕಡೆಗೆ ಕಣ್ಣುಮುಚ್ಚಿಕೊಂಡಿರುತ್ತಾರೆ. ಕೇವಲ ತಮ್ಮ ಸರಕಾರ ಅಧಿಕಾರಕ್ಕೆ ಬರಬೇಕು ಮತ್ತು ಅದು ೫ ವರ್ಷಗಳ ವರೆಗೆ ಉಳಿಯಬೇಕು ಎಂಬುದಕ್ಕಾಗಿ ಅವರು ಮತಾಂಧರಿಗೆ ಸಹಾಯ ಮಾಡುತ್ತಾರೆ. ಇವೆಲ್ಲವುಗಳನ್ನು ತಪ್ಪಿಸಲು ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಸಂಘಟನೆಯನ್ನು ಮಾಡುವುದು ಆವಶ್ಯಕವಾಗಿದೆ, ಹಾಗೆಯೇ ಪ್ರತಿದಿನ ಸ್ವಲ್ಪ ಸಮಯವನ್ನು ಹಿಂದೂಗಳ ಅಧಿಕಾರಕ್ಕಾಗಿ ಕೊಡುವುದೂ ಆವಶ್ಯಕವಾಗಿದೆ. ಹಿಂದೂಗಳು ಆದಷ್ಟು ಬೇಗನೇ ಹಿಂದೂ ರಾಷ್ಟ್ರ ಸ್ಥಾಪನೆಯಾಗಲು ಭಗವಂತನಿಗೆ ಶರಣಾಗಬೇಕು. ಇದರ ಜೊತೆಗೆ ಕಾನೂನುಮಾರ್ಗದಿಂದ ಪ್ರಯತ್ನಶೀಲರಾಗಿರಬೇಕು. ಅದರಿಂದ ಹಿಂದೂಗಳ ತೊಂದರೆಗಳು ಕಡಿಮೆಯಾಗಲು ಸಹಾಯವಾಗುವುದು.’
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ. (೧೯.೯.೨೦೨೨) |