ಔಷಧಿ ನಿರ್ಮಾಣ ಸಂಸ್ಥೆಗಳ (ಫಾರ್ಮಾ ಕಂಪನಿಗಳ) ಅವ್ಯವಹಾರವನ್ನು ಹೇಗೆ ನಿಯಂತ್ರಿಸುವುದು ?

ಭಾರತೀಯ ವೈದ್ಯಕೀಯ ಪ್ರತಿನಿಧಿಗಳ (‘ಮೆಡಿಕಲ್ ರಿಪ್ರೆಸೆಂಟೆಟಿವಸ್’ ಅಂದರೆ ‘ಎಂ.ಆರ್.’) ಮಹಾಸಂಘ (‘ಫೆಡರೇಶನ ಆಫ್ ಮೆಡಿಕಲ್ ಅಂಡ್ ಸೇಲ್ಸ್ ರಿಪ್ರೆಸೆಂಟೆಟಿವ್ ಅಸೋಸಿಯೇಶನ ಆಫ್ ಇಂಡಿಯಾ’ ಅಂದರೆ ‘ಎಫ್.ಎಂ.ಆರ್.ಎ.ಐ.’) ಸರ್ವೋಚ್ಚ ನ್ಯಾಯಾಲಯದಲ್ಲಿ ಔಷಧ ನಿರ್ಮಾಣ ಸಂಸ್ಥೆಗಳ (ಫಾರ್ಮಾ ಕಂಪನಿಗಳು) ಅವ್ಯವಹಾರಗಳನ್ನು ನಿಯಂತ್ರಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದೆ. ಕಳೆದ ೪೦ ವರ್ಷಗಳಿಂದ ಕಾರ್ಯನಿರತವಾಗಿರುವ ಈ ಮಹಾಸಂಘದ ಆಶ್ಚರ್ಯಕರ ವಿಷಯವೇನೆಂದರೆ ಯಾವ ಕಂಪನಿಗಳ ಅವ್ಯವಹಾರಗಳ ವಿರುದ್ಧ ಈ ಎಲ್ಲ ‘ಎಂ.ಆರ್.’ಗಳು ಸಂಘಟಿತರಾಗಿ ತಿರುಗಿಬಿದ್ದಿದ್ದಾರೆಯೋ, ಅವರೆಲ್ಲರೂ ಅದೇ ಫಾರ್ಮಾ ಸಂಸ್ಥೆಗಳಲ್ಲಿ ನೌಕರಿಯನ್ನು ಮಾಡುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ದಾಖಲೆಗಳೆಂದು ಅವರು ಒಂದು ಪಟ್ಟಿಯನ್ನು ನೀಡಿದ್ದಾರೆ. ಇದನ್ನು ನೋಡಿ ‘ಭಾರತದಲ್ಲಿ ಇಂತಹ ಅನೇಕ ತಮಾಷೆಗಳು ಆಗುತ್ತಿರುತ್ತವೆ’, ಎಂದೇ ಅನಿಸುವುದು ! ಭಾರತೀಯ ಆಯುರ್ ವಿಜ್ಞಾನ ಪರಿಷತ್ತು (‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ ಅಂದರೆ ಎಂ.ಸಿ.ಐ.)  ೨೦೦೨ ರಲ್ಲಿ ‘ವ್ಯವಹಾರಬದ್ಧತೆ, ಶಿಷ್ಟಾಚಾರ ಮತ್ತು ನೈತಿಕ ಬಂಧನಗಳು’, ಇವುಗಳ ಅಡಿಯಲ್ಲಿ ವೈಯಕ್ತಿಕವಾಗಿ ಡಾಕ್ಟರರ ಮೇಲೆ ಯಾವುದೇ ಔಷಧಿ ಸಂಸ್ಥೆಗಳಿಂದ ಯಾವುದೇ ರೀತಿಯ ‘ಫ್ರೀ’(ಉಚಿತ) ಉಡುಗೊರೆ ತೆಗೆದುಕೊಳ್ಳುವ ಅಥವಾ ‘ಲಂಚ’ ತೆಗೆದುಕೊಳ್ಳುವುದನ್ನು ಕಾನೂನಿನನ್ವಯ ಅಪರಾಧವೆಂದು ನಿರ್ಣಯಿಸಿ ನಿರ್ಬಂಧಿಸಿತು. ಇದನ್ನು ಉಲ್ಲಂಘಿಸಿರುವುದು ಕಂಡು ಬಂದರೆ (ಇಲ್ಲಿ ಕಣ್ಣಿಗೆ ಕಾಣಿಸುವುದು ಮಹತ್ವದ್ದಾಗಿದೆ), ಆ ಡಾಕ್ಟರರ ಪರವಾನಿಗೆ  ರದ್ದಾಗಬಹುದು. ಕಳೆದ ೨ ದಶಕಗಳಲ್ಲಿ ಡಾಕ್ಟರರಿಗೆ ಕೋಟ್ಯವಧಿ ಹಣವನ್ನು ವಿತರಿಸುವ ಪ್ರಸಾದ ವಸ್ತುಸ್ಥಿತಿಯಾಗಿದ್ದರೂ, ಆಗಿನ ‘ಎಮ್.ಸಿ.ಐ.’ ಮತ್ತು ಈಗಿನ ‘ರಾಷ್ಟ್ರೀಯ ಆಯುರ್ ವಿಜ್ಞಾನ ಆಯೋಗ’ಕ್ಕೆ (‘ನ್ಯಾಶನಲ್ ಮೆಡಿಕಲ್ ಕಮಿಶನ’ ಅಂದರೆ ‘ಎನ್.ಎಂ.ಸಿ’ಗೆ) ಇಂತಹ ಅಪರಾಧವನ್ನು ಮಾಡುತ್ತಿರುವ ಯಾವ  ಡಾಕ್ಟರರೂ ಈ ೨೦ ವರ್ಷಗಳಲ್ಲಿ ಕಂಡು ಬಂದಿಲ್ಲ. ಇದನ್ನು ನಾವು ಬದಿಗಿಟ್ಟರೂ, ಡಾಕ್ಟರರನ್ನು ಅವರ ಯಾವ ಕೃತ್ಯಗಳು ಕಾನೂನುರೀತ್ಯಾ ಅಪರಾಧಿಗಳೆಂದು ನಿರ್ಧರಿಸುತ್ತವೆಯೋ, ಅದರಲ್ಲಿ ಸಹಭಾಗಿಗಳಾಗಿರುವ ಔಷಧ ಸಂಸ್ಥೆಗಳ ಮೇಲೆ ಯಾವ ಕ್ರಮ ಜರುಗಿಸಲಾಗುತ್ತದೆ ? ಇದರ ಉತ್ತರವೆಂದರೆ, ‘ಏನೂ ಇಲ್ಲ’, ಅಂದರೆ ಡಾಕ್ಟರರತ್ತ ದುರ್ಲಕ್ಷ್ಯಿಸುವುದು ಮತ್ತು ಲಂಚ ಕೊಡುವ ಸಂಸ್ಥೆಗಳ ಕಡೆಗೆ ಕಣ್ಣು ಮುಚ್ಚಿಕೊಂಡಿರುವುದು !

ಡಾ. ಅರುಣ ಗದ್ರೆ

೧. ಔಷಧಿ ಸಂಸ್ಥೆಗಳ ವತಿಯಿಂದ ಡಾಕ್ಟರರಿಗೆ ಉಡುಗೊರೆ ಎಂದು ನೀಡಲಾಗುವ ಔಷಧಿಗಳ ಮೇಲಿನ ತೆರಿಗೆ ರದ್ದು !

೨೦ ವರ್ಷಗಳಿಂದ ನಮ್ಮ ಆಡಳಿತಾಧಿಕಾರಿಗಳು ಎಂತಹ ಕುಂಭಕರ್ಣನ ನಿದ್ರೆಯಲ್ಲಿದ್ದಾರೆಂದರೆ, ಡಾಕ್ಟರರ ಲಂಚಕ್ಕಾಗಿ ಕೋಟ್ಯವಧಿ ರೂಪಾಯಿಗಳ ವ್ಯಯವಾಗುತ್ತದೆಯೋ, ಅದನ್ನು ‘ವ್ಯಾಪಾರದ ಅಭಿವೃದ್ಧಿಗಾಗಿ ಮಾಡಿದ ವೆಚ್ಚ’, ಎಂಬ ಲೆಕ್ಕ ಶೀರ್ಷಿಕೆಯಡಿಯಲ್ಲಿ ತೋರಿಸಿ ಔಷಧಿನಿರ್ಮಾಣ ಸಂಸ್ಥೆಗಳು ತೆರಿಗೆ ಉಳಿತಾಯ ಮಾಡುತ್ತಿದ್ದವು. ಒಬ್ಬ ಅಪರಾಧಿಗೆ ಅವನ ಪರವಾನಿಗೆ ರದ್ದುಗೊಳಿಸುವ ಶಿಕ್ಷೆ; ಆದರೆ ಇನ್ನೊಬ್ಬ ಅಪರಾಧಿಗೆ ಅದೇ ಅಪರಾಧದಲ್ಲಿ ಸಹಭಾಗಿಯಾಗಿರುವ ಬಗ್ಗೆ ಬಹುಮಾನ ಅಂದರೆ ‘ಟ್ಯಾಕ್ಸ್ ರಿಲೀಫ್ (ತೆರಿಗೆ ವಿನಾಯಿತಿ)’ ! ಹೀಗಿದ್ದರೂ, ಕೊನೆಗೂ ೨೦ ವರ್ಷಗಳ ಬಳಿಕ ನಮ್ಮ ಕೇಂದ್ರ ಹಣಕಾಸು ಇಲಾಖೆಯ ವರೆಗೆ ಈ ದೊಡ್ಡ ವ್ಯತ್ಯಾಸ  ತಲುಪಿತು.  ಈ ಸಲದ (೨೦೨೨-೨೩) ಹಣಕಾಸಿನ  ‘ಆಯ-ವ್ಯಯ ಮುಂಗಡಪತ್ರದಲ್ಲಿ ‘ಸ್ಪಷ್ಟವಾಗಿ ಇನ್ನು ಮುಂದೆ ಉಚಿತ ವಿಷಯಗಳಿಗೆ ಔಷಧಿ ಸಂಸ್ಥೆಗಳಿಗೆ ‘ಟ್ಯಾಕ್ಸ್ ರಿಲೀಫ್’ ಇರುವುದಿಲ್ಲವೆಂಬ ಸ್ವಾಗತಾರ್ಹವಾದ ನಿರ್ದೇಶನ ನೀಡಲಾಯಿತು. ಇದರರ್ಥ ಇಂದಿಗೂ ಅಪರಾಧ ಮಾಡಲು ಅನುಮತಿಯಿದೆ; ಆದರೆ ತೆರಿಗೆ ಭರಿಸಬೇಕಾಗುವುದು. ಅಂದರೆ ಆಮೆಯ ಗತಿಯಿಂದಲಾದರೂ ಒಂದು ಹೆಜ್ಜೆ ಮುಂದೆ ಇಡಲಾಗಿದೆ ! ವಾಸ್ತವಿಕವಾಗಿ ಲಂಚ ತೆಗೆದುಕೊಳ್ಳುವ ಡಾಕ್ಟರರ ಹೆಸರನ್ನು ಘೋಷಿಸುವಂತೆ ಕಠಿಣ ನಿರ್ದೇಶನವನ್ನು ಔಷಧಿ ಸಂಸ್ಥೆಗಳಿಗೆ ನೀಡಬಹುದಾಗಿತ್ತು; ಆದರೆ ಹಾಗೆ ಆಗಲಿಲ್ಲ.

೨.’ಡೊಲೊ’ ಮಾತ್ರೆಗಳಿಗಾಗಿ ಸಂಸ್ಥೆಗಳು ಡಾಕ್ಟರರ ಮೇಲೆ ೧ ಸಾವಿರ ಕೋಟಿ ರೂಪಾಯಿಗಳನ್ನು ದಾನ ನೀಡುವುದು ಮತ್ತು ಅದನ್ನು ತಡೆಯಲು ಕಾನೂನು ರಚಿಸುವಂತೆ ಕೂಗು ಎದ್ದಿರುವುದು

ಇನ್ನೂ ಮುಂದುವರಿದು ವೈದ್ಯಕೀಯ ಪ್ರತಿನಿಧಿಗಳ ಮಹಾಸಂಘವು ‘ನೇರ ತೆರಿಗೆಗಳ ಕೇಂದ್ರ ಮಂಡಳಿ’ಯಿಂದ (‘ಸಿಬಿಡಿಟಿ’ಯಿಂದ) ಪಟ್ಟಿಯನ್ನು ತರಿಸಿಕೊಂಡಿತು. ಯಾವ ಸಂಸ್ಥೆ ಎಷ್ಟು ಲಂಚವನ್ನು ‘ವ್ಯವಹಾರವೃದ್ಧಿಗಾಗಿ ವೆಚ್ಚ’ ಮಾಡಿದೆಯೆಂದು ತೋರಿಸಿದೆ ? ಬಳಿಕ ಮಹಾಸಂಘವು ಈ  ಪಟ್ಟಿಯ ಮಾಹಿತಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರವಾಗಿ ತನ್ನ ಸ್ವಂತ ದಾಖಲೆಯಾಗಿ ಬಳಸಿಕೊಂಡಿತು. ಈ ಪಟ್ಟಿಯಿಂದ ‘ಡೊಲೊ’ ಮಾತ್ರೆಗಾಗಿ ಆ ಸಂಸ್ಥೆಯು ಡಾಕ್ಟರರ ಮೇಲೆ ೧ ಸಾವಿರ ಕೋಟಿಗಳಷ್ಟು ರೂಪಾಯಿಗಳನ್ನು ದಾನದ ರೂಪದಲ್ಲಿ ವೆಚ್ಚ ಮಾಡಿರುವುದು ಬಹಿರಂಗವಾಯಿತು. ಮುಖ್ಯವಾಗಿ ಇದೇ ಹೆಸರು ಬಹಿರಂಗಗೊಂಡಾಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಧನಂಜಯ ಚಂದ್ರಚೂಡರು ‘ಅರೆ, ನನಗೆ ಕೋವಿಡ್ (ಕೊರೊನಾ) ಆದಾಗ, ನನಗೆ ಇದೇ ‘ಡೊಲೊ’ ಮಾತ್ರೆ ಬರೆದು ಕೊಟ್ಟಿದ್ದರು’’ ಎಂದು ಉದ್ಗಾರ ತೆಗೆದರು. ಅವರ ಈ ಉದ್ಗಾರದಿಂದ ಔಷಧಿ ಸಂಸ್ಥೆಗಳಿಗೆ ಉಡುಗೊರೆ (ಉಚಿತ) ನೀಡುವುದನ್ನು ಅಪರಾಧವೆಂದು ನಿರ್ಧರಿಸಲು ಕಾನೂನು ತರಲು ಕಳೆದ ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ ಸಮಯದಲ್ಲಿ ಔಷಧಗಳ ಮೇಲೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ನಿರ್ಗತಿಕರಾಗಿರುವ ಕೋಟ್ಯವಧಿ ನಾಗರಿಕರ ಆಸೆ ಚಿಗುರೊಡೆ ದಿದ್ದರೆ ಆಶ್ಚರ್ಯವೇನಿಲ್ಲ.’ ನಮಗೆ ಇದೇ ಮಾತ್ರೆಯನ್ನು ಬರೆದುಕೊಡುವುದು, ಆಕಸ್ಮಿಕವಾಗಿರಲಿಲ್ಲ’, ಎಂದು ಈ ಉದ್ಗಾರದ ಅರ್ಥವಾಗುತ್ತಿದ್ದರೆ ಮಾತ್ರ ನ್ಯಾಯಕ್ಕಾಗಿ ಇದನ್ನು ಸಕಾರಾತ್ಮಕ ಆಕಸ್ಮಿಕವೆಂದು ಒಪ್ಪಿಕೊಳ್ಳಬೇಕಾಗುವುದು.

೩.ಕೊರೊನಾ ಕಾಲದಲ್ಲಿ ಭಾರತೀಯ ಸಂಸ್ಥೆಗಳು ‘ಜೆನೆರಿಕ್’ ಔಷಧಿಗಳನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವುದು; ಆದರೆ ದೇಶದಲ್ಲಿ ಮಾತ್ರ ಹೆಸರಾಂತ ಸಂಸ್ಥೆಗಳ ಔಷಧಿಗಳು ಮಾರಾಟ ಮಾಡುವುದು

ಔಷಧಿ ಸಂಸ್ಥೆಗಳು ಆನೆಯಷ್ಟು ಬೃಹದಾಕಾರವಾಗಿದೆ. ಭಾರತದಲ್ಲಿ ಕೊವಿಡ ಮೊದಲಿನ ೨೦೧೯-೨೦ ವರ್ಷದಲ್ಲಿ ಈ ಸಂಸ್ಥೆಗಳ ವ್ಯವಹಾರ ೨ ಲಕ್ಷ ೮೯ ಸಾವಿರ ೯೯೮ ಕೋಟಿ ರೂಪಾಯಿಗಳಷ್ಟಾಗಿತ್ತು ಮತ್ತು ಈ ಆನೆ ಗೌರವವನ್ನು ತಂದುಕೊಡುವ ಕಾರ್ಯವನ್ನು ಕೂಡ ಮಾಡುತ್ತಿದೆ. ಅದು ದೇಶಕ್ಕೆ ‘ಜಗತ್ತಿನ ಫಾರ್ಮಸಿ’ ಎಂದು ಜಗತ್ಪ್ರಸಿದ್ಧಿಯನ್ನು ದೊರಕಿಸಿಕೊಟ್ಟಿದೆ. ಅದೇ ವರ್ಷ ಭಾರತದ ಔಷಧಿ ಕಂಪನಿಗಳು ೧ ಲಕ್ಷ ೪೬ ಸಾವಿರ ೨೬೦ ಕೋಟಿ ರೂಪಾಯಿಗಳ ‘ಜೆನೆರಿಕ್’ ಔಷಧಿಗಳನ್ನು ರಫ್ತು ಮಾಡಿದೆ. (ಜೆನೆರಿಕ್ ಔಷಧಿಗಳೆಂದರೆ ಅವುಗಳಲ್ಲಿ ಔಷಧಿಗಳ ಪ್ರಮಾಣ, ಗುಣಮಟ್ಟ ಮತ್ತು ಉಪಯೋಗವು ಹೆಸರಾಂತ ಔಷಧಿಗಳಂತೆಯೇ ಇರುತ್ತದೆ; ಆದರೆ ಅದಕ್ಕೆ ಪ್ರತ್ಯೇಕ ಹೆಸರು ಇರುವುದಿಲ್ಲ. ಈ ಔಷಧಿಗಳ ಬೆಲೆ ಅತ್ಯಲ್ಪವಿರುತ್ತದೆ.) ಆದರೆ ತಮಾಷೆಯೆಂದರೆ ಗುಣಮಟ್ಟದ ಔಷಧಿಗಳನ್ನು ಅಮೇರಿಕಾಗೆ ಪೂರೈಸುತ್ತಿರುವಾಗ ಇದೇ ಸಂಸ್ಥೆಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಜೆನೆರಿಕ ಮಾರಾಟ ಮಾಡದೇ ಅತ್ಯಧಿಕ ಬೆಲೆಯಿರುವ ಬ್ರ್ಯಾಂಡಗಳ (ಹೆಸರಾಂತ) ಮಾರಾಟ ಮಾಡುತ್ತಾರೆ.

೩ ಅ. ಔಷಧಿಗಳ ಮಾರುಕಟ್ಟೆಯಲ್ಲಿ ‘ಜಂಗಲರಾಜ’ ನಡೆದಿರುವುದು;

 ನಮ್ಮ ಪರಿಸ್ಥಿತಿ ಹೇಗಿದೆಯೆಂದರೆ, ಡಾಕ್ಟರರಿಗಾಗಿ ಕಠಿಣ (ಇಲ್ಲಿಯವರೆಗೆ ಬಹಳ ಜಾರಿಗೊಳಿಸದೇ ಇರುವ) ಕಾನೂನು ಮತ್ತು ಔಷಧಿ ಸಂಸ್ಥೆಗಳನ್ನು ಕೇವಲ ಪ್ರೀತಿಯಿಂದ ದೃಷ್ಟಿನೆಟ್ಟು ಒಂದು ಪ್ರೀತಿಯ ಬೆದರಿಕೆ ಹಾಕುವುದರಿಂದ ಔಷಧಿಗಳ ಮಾರುಕಟ್ಟೆಯಲ್ಲಿ ‘ಜಂಗಲರಾಜ’ ನಡೆದಿದೆ. ಈ ಔಷಧಿಗಳ ಒಂದು ವೈಶಿಷ್ಟ್ಯವೆಂದರೆ, ಗ್ರಾಹಕರು ಔಷಧಿಗಳನ್ನು ತಮ್ಮ ಮನಸ್ಸಿಗೆ ತೋಚಿದಂತೆ  ತೆಗೆದುಕೊಳ್ಳುವುದಿಲ್ಲ. ‘ಯಾವ ವಸ್ತುವನ್ನು ಖರೀದಿಸಬೇಕು ?’, ಎಂದು ನಿರ್ಧರಿಸುವ ಸ್ವಾತಂತ್ರ್ಯ ಔಷಧಿ ಖರೀದಿಸುವ ಗಿರಾಕಿಗಳಿಗೂ ಇರುವುದಿಲ್ಲ. ಖರೀದಿಸಲೇ ಬೇಕಾಗುವ ಆ ವಸ್ತುಗಳಾದರೂ ಎಂತಹದು ? ಎಂದರೆ, ನ್ಯಾಯಮೂರ್ತಿಗಳಿಗೂ ‘ಡೊಲೊ’ ತೆಗೆದುಕೊಳ್ಳಲೇ ಬೇಕಾಯಿತು.

ಇಂದು ಅನೇಕ ಡಾಕ್ಟರರು ರೋಗಿಯ ಅಸಹಾಯಕತೆಯನ್ನು ದುರುಪಯೋಗಿಸುತ್ತಿದ್ದಾರೆ. ಹಣದ ಲಾಲಸೆಗೆ ಒಳಗಾಗಿರುವ ಫಾರ್ಮಾ ಸಂಸ್ಥೆಗಳು ಪ್ರಾಮಾಣಿಕ ಡಾಕ್ಟರರನ್ನೂ ಕೂಡ ‘ಉಡುಗೊರೆ’ ನೀಡಿ ಭ್ರಷ್ಟಗೊಳಿಸುತ್ತಿದ್ದಾರೆ. ಹಿಂದೂ ರಾಷ್ಟ್ರದಲ್ಲಿ ಹೀಗೆ ಮಾಡುತ್ತಿರುವವರು ಯಾರಾದರೂ ಕಂಡು ಬಂದರೆ, ಅವರ ಮೇಲೆ ಶೀಘ್ರ ಕಠಿಣ ಕ್ರಮ ಕೈಕೊಳ್ಳಲಾಗುವುದು. ‘ಶುದ್ಧ ಮತ್ತು ನಿಃಸ್ವಾರ್ಥ ಮನಸ್ಸಿನಿಂದ ಸಮಾಜಸೇವೆ ಮಾಡುವುದು’, ಇದು ನಿಜವಾಗಿ ಹೇಳುವುದೇನೆಂದರೆ ವೈದ್ಯಕೀಯ ವ್ಯವಸಾಯದ ಘೋಷವಾಕ್ಯವಾಗಿದೆ. ಆದರೆ ಈ ರೀತಿ ಅದರ ದುರುಪಯೋಗಿಸಿಕೊಳ್ಳುವ ಹಿಂದೂ ರಾಷ್ಟ್ರದಲ್ಲಿ ಅದನ್ನು ದುರಪಯೋಗಿಸಿಕೊಳ್ಳುವವರ  ವಿರುದ್ಧ ಜನಹಿತಕಾರಿ ಕಠಿಣ ಕಾಯಿದೆ ಮಾಡಲಾಗುವುದು. ಇದನ್ನು ಗಮನಿಸಬೇಕು ! – ಸಂಪಾದಕರು

ಲೇಖಕರು : ಡಾ. ಅರುಣ ಗದ್ರೆ, ಜನಾರೋಗ್ಯ  ವಿಷಯದ ಅನೇಕ ಸಂಸ್ಥೆಗಳೊಂದಿಗೆ ಸಂಬಂಧಿಸಿದವರು.  (ಆಧಾರ : ‘ಲೋಕಸತ್ತಾ’ ದಿನಪತ್ರಿಕೆ ೭.೯.೨೦೨೨) (ಮುಂದುವರಿಯುವುದು)