ಆಂಗ್ಲ ಭಾಷೆಯ ಮೋಹವನ್ನು ಬಿಟ್ಟು ಭಾರತೀಯ ಭಾಷೆಗಳನ್ನು ಸಮೃದ್ಧಗೊಳಿಸುವ ಪ್ರತಿಜ್ಞೆ ಮಾಡೋಣ !

ಇಂದು ಕನ್ನಡ ರಾಜ್ಯೋತ್ಸವದ ನಿಮಿತ್ತ..

ಸದ್ಯ ಭಾರತದ ಎಲ್ಲ ಸ್ತರದಲ್ಲಿ ಆಂಗ್ಲ ಭಾಷೆಯ ವೈಭವೀಕರಣ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಈ ವೈಭವೀಕರಣವೆಂದರೆ ಪರಕೀಯ ಗುಲಾಮಗಿರಿಯ ಲಕ್ಷಣವಾಗಿದೆ. ನಿಜವಾಗಿ ನೋಡಿದರೆ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಆಂಗ್ಲ ಭಾಷೆಯನ್ನು ಗೌಣವೆಂದು ಪರಿಗಣಿಸಿ ಸ್ಥಳೀಯ ಮಾತೃ ಭಾಷೆಯಲ್ಲಿಯೇ ಸರ್ವಾಂಗೀಣ ವಿಕಾಸವಾಗಿ ಅವರ ಪ್ರಗತಿಯಾಗಿರುವುದು ಕಂಡು ಬರುತ್ತಿದೆ. ಆದ್ದರಿಂದ ಭಾರತವೂ ಆಂಗ್ಲ ಭಾಷೆಯ ಮೋಹವನ್ನು ಬಿಟ್ಟು ಮಾತೃಭಾಷೆ ಸಹಿತ ರಾಜಭಾಷೆ ಹಿಂದಿಯನ್ನು ಉಪಯೋಗಿಸುವ ಅವಶ್ಯಕತೆಯಿದೆ. ಈ ವಿಷಯದ ಊಹಾಪೋಹವನ್ನು ಈ ಲೇಖನದಲ್ಲಿ ಮಾಡಲಾಗಿದೆ.

೧. ಭಾರತದಲ್ಲಿ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಅನೇಕ ಸಮೃದ್ಧ ಭಾಷೆಗಳಿರುವಾಗ ಆಂಗ್ಲ ಭಾಷೆಯ ಪ್ರಭಾವ ಅತೀ ಹೆಚ್ಚಿರುವುದು ಹಾಗೂ ಆಂಗ್ಲ ಭಾಷೆ ಮಾತನಾಡುವವರನ್ನು ವಿದ್ವಾಂಸರೆಂದು ತಿಳಿಯಲಾಗುತ್ತದೆ

ಭಾಷೆಯು ಒಂದು ಅದ್ಭುತ ವಿಷಯವಾಗಿದೆ. ಭಾಷೆಯಿಂದ ಸಮಾಜ ನಿರ್ಮಾಣವಾಯಿತು ಹಾಗೂ ಸಮಾಜವು ಭಾಷೆ ಯನ್ನು ಸಂವರ್ಧನಗೊಳಿಸಿತು. ಭಾಷೆಯು ಸಾಮುದಾಯಿಕ ಸಂಪತ್ತಿಯಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಸಂಪೂರ್ಣ ಜ್ಞಾನವು ದೇಶದ ವಿವಿಧ ಭಾಷೆಗಳಲ್ಲಿ ನಿರ್ಮಾಣ ವಾಯಿತು. ಮಾತೃಭಾಷೆಯ ಮಡಿಲಲ್ಲಿಯೆ ವಿಚಾರಗಳ ಜನ್ಮ ಮತ್ತು ವಿಕಾಸವಾಗುತ್ತದೆ. ಮಾತೃಭಾಷೆಯು ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಸ್ವಾಭಾವಿಕ ಮಾಧ್ಯಮವಾಗಿದೆ. ಭಾರತದಲ್ಲಿ ಅನೇಕ ಸಮೃದ್ಧ ಭಾಷೆಗಳಿವೆ; ಆದರೆ ಇಲ್ಲಿ ವಿದೇಶಿ ಆಂಗ್ಲ ಭಾಷೆಯ ಪ್ರಭಾವ ಅತೀ ಹೆಚ್ಚು ಪ್ರಮಾಣದಲ್ಲಿದೆ. ಆಂಗ್ಲ ಮಾತನಾಡುವವರನ್ನು ವಿದ್ವಾಂಸರೆಂದು ತಿಳಿಯಲಾಗುತ್ತದೆ, ಆಂಗ್ಲರು ಭಾರತಕ್ಕೆ ಬಂದಾಗ ಅವರು ತಮ್ಮ ಜೊತೆಯಲ್ಲಿ ಆಂಗ್ಲ ಭಾಷೆ ಮತ್ತು ಅವರ ಸಂಸ್ಕೃತಿಯನ್ನು ತಂದರು. ಆಂಗ್ಲಭಾಷೆ ಮತ್ತು ಬ್ರಿಟಿಷ ವಿದ್ವಾಂಸರು `ಹಿಂದೆ ಭಾರತವು ರಾಷ್ಟ್ರವಾಗಿರಲಿಲ್ಲ, ಅವರೇ ಭಾರತವನ್ನು ರಾಷ್ಟ್ರವನ್ನಾಗಿ ಮಾಡಿದರು’, ಎಂದು ಅಪಪ್ರಚಾರ ಮಾಡಿದರು. ಅದರಿಂದ ದೊಡ್ಡ ಪ್ರಮಾಣದಲ್ಲಿ ರಾಷ್ಟ್ರೀಯ ಹಾನಿಯಾಯಿತು.

೨. ಭಾರತವು ಆಂಗ್ಲ ಮತ್ತು ಆಂಗ್ಲೀಕರಣದ ಮೋಹಪಾಶದಿಂದ ಮುಕ್ತವಾಗುವ ಅವಶ್ಯಕತೆಯಿದೆ !

ಇತ್ತೀಚೆಗಷ್ಟೆ ಭೋಪಾಳ (ಮಧ್ಯಪ್ರದೇಶ)ದಲ್ಲಿ `ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಆಧರಿಸಿ ಒಂದು ಕಾರ್ಯಕ್ರಮದಲ್ಲಿ ಕೇಂದ್ರೀಯ ಗೃಹಮಂತ್ರಿ ಅಮಿತ ಶಾಹ ಇವರು, “ಆಂಗ್ಲದ ಮೋಹದಿಂದ ನಾವು ದೇಶದ ವಿಕಾಸದಲ್ಲಿ ನಮ್ಮ ಪ್ರತಿಭೆಯನ್ನು ಕೇವಲ ಶೇ. ೫ ರಷ್ಟೇ ಉಪಯೋಗಿಸುತ್ತಿದ್ದೇವೆ. ಇಂದು ಕೂಡ ದೇಶದಲ್ಲಿ ಶೇ. ೯೫ ರಷ್ಟು ಮಕ್ಕಳು ಮಾತೃಭಾಷೆಯಲ್ಲಿ ಕಲಿಯುತ್ತಾರೆ. ಯಾವಾಗ ಸ್ಥಳೀಯ ಭಾಷೆಯಲ್ಲಿ ಕಲಿತಿರುವ ಮಕ್ಕಳು ದೇಶದ ಪ್ರತಿಯೊಂದು ವ್ಯವಸ್ಥೆಯಲ್ಲಿ ಭಾಗವಹಿಸುವರೊ, ಆಗ ಭಾರತವು ವಿಶ್ವದಲ್ಲಿ ಸೂರ್ಯಪ್ರಕಾಶದ ಹಾಗೆ ಹೊಳೆಯುವುದು’, ಎಂದಿದ್ದರು. ಶಾಹ ಇವರ ಚಿಂತನೆಯು ನಿಜವಾಗಿಯೂ ಯೋಗ್ಯವಾಗಿದೆ. ಭಾರತವು ಆಂಗ್ಲ ಮತ್ತು ಆಂಗ್ಲೀಕರಣದ ಮೋಹಪಾಶದಿಂದ ಮುಕ್ತವಾಗಬೇಕು.

೩. ಜಗತ್ತಿನಾದ್ಯಂತ ಅತ್ಯಲ್ಪ ಪ್ರಮಾಣದಲ್ಲಿ ಮಾತನಾಡಲಾಗುವ ಆಂಗ್ಲ ಭಾಷೆಗೆ ಭಾರತದಲ್ಲಿ ಮಹಾರಾಣಿಯ ಸ್ಥಾನ ಪ್ರಾಪ್ತಿಯಾಗಿದೆ

ಆಂಗ್ಲ ಭಾಷೆಯನ್ನು ವಿಶ್ವಭಾಷೆಯೆಂದು ಹೇಳಲಾಗುತ್ತದೆ; ಆದರೆ ಜಪಾನ್, ರಷ್ಯಾ, ಚೀನಾ ಇತ್ಯಾದಿ ದೇಶಗಳಲ್ಲಿ ಆಂಗ್ಲ ಭಾಷೆಗೆ ಹೆಚ್ಚಿನ ಮಹತ್ವನ್ನು ನೀಡುವುದಿಲ್ಲ. ಏಶಿಯಾ ಖಂಡದ ೪೮ ದೇಶಗಳಲ್ಲಿ ಭಾರತದ ಹೊರತು ಯಾವುದೇ ದೇಶದ ಮುಖ್ಯ ಭಾಷೆ ಆಂಗ್ಲವಲ್ಲ. ಅಝರ್‌ಬೈಜಾನ್ ದೇಶದ ಭಾಷೆ `ಅಜೇರೀ’ ಹಾಗೂ `ತುರ್ಕಿ, ಇಸ್ರೇಲ್ ನ ಭಾಷೆ `ಹಿಬ್ರೂ’, ಅಝಬೆಕಿಸ್ತಾನದ `ಉಜ್ಬೇಕ’, ಇರಾಣದ `ಫಾರಸೀ’, ಸೌದೀ ಅರಬ, ಸಿರಿಯಾ, ಇರಾಕ್, ಜಾರ್ಡನ್, ಯೆಮೇನ್, ಬಹಾರೀನ್, ಕತಾರ ಮತ್ತು ಕುವೇತ್ ಈ ದೇಶಗಳ ಭಾಷೆ `ಅರಬೀ’ ಆಗಿದೆ. ಚೀನಾ ಮತ್ತು ತೈವಾನ ಇವರ ಭಾಷೆ `ಮಂದಾರಿನ’, ಶ್ರೀಲಂಕಾದವರ ಭಾಷೆ `ಸಿಂಹಳೀ’ ಮತ್ತು `ತಮಿಳು’ ಆಗಿದೆ. ಅಫ್ಗಾನಿಸ್ತಾನದ `ಪಶ್ತೊ’ ಮತ್ತು ತುರ್ಕಿಯ ಭಾಷೆ `ತುರ್ಕಿ’ ಆಗಿದೆ. ರೋಮ್ ಆಂಗ್ಲ ಭಾಷೆಯದ್ದೆಂದು ತಿಳಿಯಲಾಗುತ್ತದೆ; ಆದರೆ ಯುರೋಪ್‌ನ ೪೩ ದೇಶಗಳಲ್ಲಿನ ೪೦ ದೇಶಗಳ ಭಾಷೆ ಆಂಗ್ಲವಲ್ಲ. ಡೆನ್ಮಾರ್ಕ್ನ ಭಾಷೆ `ಡಾನಿಶ್’, ಚೆಕ್ ಗಣರಾಜ್ಯದ `ಚೆಕ್’, ರಷ್ಯಾದ `ರೂಸೀ’, ಸ್ವೀಡನ್‌ನ `ಸ್ವೀಡಿಶ್’, ಜರ್ಮನಿಯ `ಜರ್ಮನ್’, ಪೋಲ್ಯಾಂಡ್‌ನ `ಪೊಲೀಶ್’, ಇಟೇಲಿಯ `ಇಟೇಲಿಯನ್’, ಗ್ರೀಸ್‌ನ `ಗ್ರೀಕ್’. ಯುಕ್ರೇನ್‌ನ `ಯುಕ್ರೇನೀ’, ಫ್ರಾನ್ಸ್ನ `ಫ್ರೆಂಚ್’, ಸ್ಪೇನ್‌ನ `ಸ್ಪೇನಿಶ್’, ಹೀಗಿದೆ. ಕೇವಲ ಬ್ರಿಟನ್‌ನ ಭಾಷೆ `ಆಂಗ್ಲ’ ಹಾಗೂ ಐರ್ಲ್ಯಾಂಡ್ `ಐರಿಶ್’ ಮತ್ತು `ಆಂಗ್ಲ’, ಆಗಿದೆ. ಜಗತ್ತಿನಾದ್ಯಂತ ಆಂಗ್ಲ ಮತ್ತು ಫಾರಸೀ ಮಾತನಾಡದಿರುವಾಗ ಅದು ಭಾರತದಲ್ಲಿ ಮಾತ್ರ ಮಹಾರಾಣಿಯಾಗಿದೆ.

೪. ಮೋಹನದಾಸ ಗಾಂಧಿಯವರು ಆಂಗ್ಲ ಭಾಷೆಯನ್ನು ತಿರಸ್ಕರಿಸುವುದು

ಆಂಗ್ಲ ಭಾಷೆ ಕೇವಲ ಭಾಷೆ ಮಾತ್ರವಲ್ಲ, ಅದರ ವಿಶೇಷ ಸಂಸ್ಕೃತಿಯೂ ಇದೆ. ಅದು ಭಾರತೀಯ ಸಭ್ಯತೆ ಮತ್ತು ಸಂಸ್ಕೃತಿಯ ವಿರುದ್ಧವಿದೆ ಹಾಗೂ ಶ್ರೇಷ್ಠತಾವಾದಿಯಾಗಿದೆ. `ಈಸ್ಟ್ ಇಂಡಿಯಾ ಕಂಪನಿ’ಯು ಭಾರತವನ್ನು ಒಡೆದು ತನ್ನ ಸ್ವಾರ್ಥವನ್ನು ಸಾಧಿಸಿದಂತೆಯೇ ಆಂಗ್ಲೀಕರಣವು ಭಾರತೀಯ ಭಾಷೆಯಲ್ಲಿ ವ್ಯತ್ಯಾಸವನ್ನು ಮಾಡಿತು. ಭಾರತದಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳನ್ನು ಉಪಯೋಗಿಸಲಾಗುತ್ತಿತ್ತು. ಕಾಂಗ್ರೆಸ್ ಅದರ ಜನ್ಮದಿಂದಲೆ ಆಂಗ್ಲಕ್ಕೆ ವಿಶೇಷ ಮಹತ್ವವನ್ನು ಕೊಡುತ್ತಾ ಬಂದಿದೆ. ಒಮ್ಮೆ ಮೋಹನದಾಸ ಗಾಂಧಿ ಹೇಳಿದ್ದರು, `ಆಂಗ್ಲವು ಹಿಂದೂಸ್ತಾನೀ ರಾಜಕಾರಣಿಗಳ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇದು ದೇಶ ಮತ್ತು ಮನುಷ್ಯತ್ವದ ವಿಷಯದಲ್ಲಿ ಅಪರಾಧವಾಗಿದೆ.’ ೧೯೧೬ ರಲ್ಲಿ ಮೋಹನದಾಸ ಗಾಂಧಿಯವರು ಲಕ್ಷ್ಮಣಪುರಿಯಲ್ಲಿ (`ಉತ್ತರಪ್ರದೇಶ) ನಡೆದ `ಅಖಿಲ ಭಾರತೀಯ ಒಂದು ಭಾಷೆ-ಒಂದು ಲಿಪಿ ಸಮ್ಮೇಳನ’ದಲ್ಲಿ ಮಾತನಾಡುತ್ತಾ, “ನಾನು ಅಲ್ಪಸ್ವಲ್ಪ ಭಾಷೆ ಮಾತನಾಡಬಲ್ಲೆ. ಆಂಗ್ಲ ಮಾತನಾಡುವುದರಿಂದ ನನಗೆ ಪಾಪ ತಗಲುತ್ತದೆ. ಯಾರ ಮುಂದೆಯೂ ಬಗ್ಗುವ ಅವಶ್ಯಕತೆಯಿಲ್ಲ. ನಾವು ನಮ್ಮದೇ ಭಾಷೆ ಯಲ್ಲಿ ಮಾತನಾಡಬೇಕು”, ಎಂದಿದ್ದರು.

೫. ಜನತಾ ಪಕ್ಷದ ಸರಕಾರ `ಸಂಘ ಜನಸೇವಾ ಆಯೋಗ’ದ ಪರೀಕ್ಷೆಯನ್ನು ಆಂಗ್ಲ ಮಾಧ್ಯಮದಲ್ಲಿ ತೆಗೆದುಕೊಳ್ಳುವ ಬದಲು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ತೆಗೆದುಕೊಳ್ಳಲು ಪ್ರಾರಂಭಿಸುವುದು

ಕಾಂಗ್ರೆಸ್ ಸರಕಾರ `ಸಂಘ ಜನಸೇವಾ ಆಯೋಗ’ದ ಪರೀಕ್ಷೆಯನ್ನು ಆಂಗ್ಲ ಭಾಷೆಯಲ್ಲಿ ತೆಗೆದುಕೊಂಡಿತು. ಜನತಾ ಪಕ್ಷದ ಮೊದಲ ಕಾಂಗ್ರೆಸ್ ರಹಿತ ಸರಕಾರವು ಹಿಂದಿ ಮತ್ತು ಪ್ರಾದೇಶಿಕ ಭಾಷೆಯ ವಿದ್ಯಾರ್ಥಿಗಳಿಗೆ ನ್ಯಾಯವನ್ನು ನೀಡಿತು. ೧೯೭೯ ರಿಂದ ಹಿಂದಿ ಮತ್ತು ಪ್ರಾದೇಶಿಕ ಭಾಷೆಯ ವಿದ್ಯಾರ್ಥಿಗಳೂ ಅವರ ಭಾಷೆಯಲ್ಲಿಯೇ ಪರೀಕ್ಷೆಯನ್ನು ಕೊಡುತ್ತಿದ್ದಾರೆ. ಸಂಸ್ಕೃತಿ, ಸೇವಾ ಮತ್ತು ಸಂವಾದದ ಭಾಷೆ ಭಾರತೀಯ ಆಗಿದೆ. ಹೀಗಿದ್ದರೂ ಆಂಗ್ಲ ಉಚ್ಚ ಮಟ್ಟದ ಭಾಷೆಯಾಯಿತು. ಮಾತೃಭಾಷೆಯನ್ನು ಉಪಯೋಗಿಸದೆ ಸಂಸ್ಕೃತಿ ನಿಷ್ಟ್ರಮಾಣವಾಗಿತ್ತು. ಆಂಗ್ಲವನ್ನು ಮಿಶ್ರ ಭಾಷೆ ಎಂದು ಹೇಳುವವರು ಆತ್ಮಹೀನರಾಗಿದ್ದಾರೆ.

೬. ಭಾರತಕ್ಕೆ ಆಂಗ್ಲವು ಕೇವಲ ಒಂದು ಭಾಷೆಯಾಗಿರದೆ ಪಾರತಂತ್ರ್ಯದ ಸಂಕೇತವಾಗಿದೆ

ಸಂವಿಧಾನ ಸಭೆಯಲ್ಲಿ `ರಾಜಭಾಷಾ’ ವಿಷಯದಲ್ಲಿ ದೊಡ್ಡ ಚರ್ಚೆ ನಡೆದಿತ್ತು. ಆಗ ಅಲಗೂ ರಾಯ ಶಾಸ್ತ್ರೀ ಹೇಳಿದ್ದರು, “ಆಂಗ್ಲದ ಸ್ಪರ್ಧೆ ಹಿಂದಿಯೊಂದಿಗಿದೆ, ಬಾಂಗ್ಲಾ, ತಮಿಳು, ತೆಲುಗು ಮತ್ತು ಕನ್ನಡ ಇವುಗಳೊಂದಿಗಿಲ್ಲ. ಆಂಗ್ಲರ ಆಡಳಿತ ಮುಗಿದಿದೆ. ಈಗ ಆಂಗ್ಲ ನಮ್ಮ ಯಾವುದೇ ಪ್ರಾಂತ್ಯದ ಭಾಷೆಯಲ್ಲ.” ಆರ್.ವಿ.ಧುಳೆಕರ್ ಇವರು ಹಿಂದಿಯನ್ನು `ರಾಷ್ಟ್ರ ಭಾಷೆ’ಯೆಂದು ಹೇಳಿದರು. ಇದಕ್ಕೆ ಅನೇಕ ಸದಸ್ಯರು ಆಕ್ಷೇಪವೆತ್ತಿದರು. ಧುಳೆಕರ್ ಹೇಳಿದ್ದರು, “ಆಂಗ್ಲದ ಹೆಸರಿನಲ್ಲಿ ೧೫ ವರ್ಷಗಳ ಪಟ್ಟಿಯನ್ನು ಬರೆದಿರುವುದರಿಂದ ರಾಷ್ಟ್ರದ ಹಿತಸಾಧಿಸಲು ಸಾಧ್ಯವಿಲ್ಲ.”

೭. ಆಂಗ್ಲದ ಅತಿ ಪ್ರಭಾವದಿಂದ ಭಾರತೀಯ ಇತಿಹಾಸದ ಲೇಖನವೂ ಮಲಿನವಾಗಿದೆ ! – ಪ್ರಧಾನಿ ನರೇಂದ್ರ ಮೋದಿ

ಸ್ವಾತಂತ್ರ್ಯ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಯ ಸಂಕಲ್ಪವನ್ನು ಪೂರ್ಣಗೊಳಿಸಲು ೫ ಪ್ರತಿಜ್ಞೆಗಳನ್ನು ಮಾಡಿದರು. ಇವುಗಳಲ್ಲಿ `ದಾಸ್ಯತ್ವದ ಪ್ರತಿಯೊಂದು ಮಾನಸಿಕತೆಯಿಂದ ಮುಕ್ತಿ ಪಡೆಯುವುದು’, ಇದು ಮಹತ್ವದ್ದಾಗಿದೆ. `ಭಾರತದಲ್ಲಿ ಆಂಗ್ಲ ಭಾಷೆಯು ದಾಸ್ಯತ್ವದ ವಿಚಾರಗಳಿಗೆ ಮುಖ್ಯ ಆಧಾರವಾಗಿದೆ. ಬ್ರಿಟಿಷರ ಆಳ್ವಿಕೆ ಹೋಗಿ ೭೫ ವರ್ಷಗಳು ಪೂರ್ಣವಾಗಿವೆ. ಆದರೂ ಆಂಗ್ಲ ಸಂಸ್ಕಾರದ ದುಷ್ಪçಭಾವವು ಹೆಚ್ಚುತ್ತಿದೆ. ಆಂಗ್ಲವು ನಿಜವಾಗಿಯೂ ಒಂದು ಭಾಷೆಯಾಗಿದೆ. ಭಾಷೆಯೆಂದು ಅದರ ಜ್ಞಾನವಿರುವುದು ತಪ್ಪಲ್ಲ; ಆದರೆ ಭಾರತಕ್ಕೆ ಆಂಗ್ಲ ಭಾಷೆಯು ಕೇವಲ ಒಂದು ಭಾಷೆಯಲ್ಲ, ಅದು ಪಾರತಂತ್ರ್ಯದ ಒಂದು ಸಂಕೇತವಾಗಿದೆ. ಆಂಗ್ಲದ ಅತೀಪ್ರಭಾವದಿಂದ ಭಾರತೀಯ ಇತಿಹಾಸದ ಲೇಖನವೂ ಮಲಿನವಾಗಿದೆ’, ಎಂದು ಕೂಡ ಮೋದಿಯವರು ಹೇಳಿದ್ದಾರೆ. ಆಂಗ್ಲದ ಸಂಸ್ಕೃತಿ ಮತ್ತು ಸಭ್ಯತೆಯ ಮೇಲಿನ ದುಷ್ಪರಿಣಾಮವು ಸ್ಪಷ್ಟವಾಗಿ ಕಂಡುಬರುತ್ತದೆ. ಕೇಂದ್ರೀಯ ಗೃಹಸಚಿವ ಅಮಿತ ಶಾಹ ಇವರು ತಮ್ಮ ಭಾಷಣದಲ್ಲಿ, `ಆಂಗ್ಲರು ಆಡಳಿತ ನಡೆಸಲು ಭಾರತೀಯ ಸಮಾಜದಲ್ಲಿ ಅನೇಕ ರೀತಿಯ ಹೀನ ಭಾವನೆಗಳನ್ನು ನಿರ್ಮಾಣ ಮಾಡಿದರು. ಈಗ ಈ ಭಾವನೆಯನ್ನು ತ್ಯಜಿಸುವ ಅವಶ್ಯಕತೆಯಿದೆ. ಈಗ ಭಾರತ ಆತ್ಮವಿಶ್ವಾಸವುಳ್ಳ ರಾಷ್ಟ್ರವಾಗಿದೆ. ರಾಷ್ಟ್ರಜೀವನದ ಎಲ್ಲ ಕ್ಷೇತ್ರಗಳಲ್ಲಿ ಉತ್ಸಾಹವಿದೆ.’

ಹಾಗಾಗಿ ಎಲ್ಲ ಭಾರತೀಯ ಭಾಷೆಗಳಿಗೆ ಸಮೃದ್ಧಗೊಳಿಸುವ ಪಣ ತೊಡಬೇಕು. ಆಂಗ್ಲ ಸಂಸ್ಕಾರಗಳಿಗೆ ಮುಕ್ತಿ ನೀಡಲು ಇದೇ ಯೋಗ್ಯ ಸಮಯವಾಗಿದೆ. – ಹೃದಯನಾರಾಯಣ ದೀಕ್ಷಿತ್

(ಆಧಾರ – ದೈನಿಕ `ಜಾಗರಣ’, ೨೮.೮.೨೦೨೨ )