ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿದ್ದ ತುಳಸಿಯ ಸಸಿಯ ರೆಂಬೆ, ಎಲೆ ಮತ್ತು ಮಂಜರಿ ಕೆಂಪು ಮತ್ತು ಗುಲಾಬಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಕು. ಮಧುರಾ ಭೋಸಲೆ

ಪರಾತ್ಪರ ಗುರು ಡಾ. ಆಠವಲೆಯವರು ನಿಯಮಿತವಾಗಿ ನೀರು ಹಾಕುತ್ತಿದ್ದ ಅವರ ಕೋಣೆಯ ಹೊರಗೆ ಟೆರೇಸ್‌ನಲ್ಲಿರುವ ತುಳಸಿಯ ಸಸಿಯ ರೆಂಬೆ, ಎಲೆ ಮತ್ತು ಮಂಜರಿ ೨೪.೧.೨೦೧೯ ರಂದು ಒಮ್ಮೆಲೆ ಕೆಂಪು ಮತ್ತು ಗುಲಾಬಿ ಕಾಣಿಸುವುದು ಮತ್ತು ಅದರ ಅಧ್ಯಾತ್ಮಶಾಸ್ತ್ರವನ್ನು ಮುಂದೆ ಕೊಡಲಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿದ್ದ ಅವರ ಕೋಣೆಯ ಹೊರಗೆ ಬಾಲ್ಕನಿಯಲ್ಲಿದ್ದ ತುಳಸಿಯ ಸಸಿಯ ಎಲೆ ಮತ್ತು ಮಂಜರಿ

೧. ತುಳಸಿಯ ಸಸಿಯ ಮಹಾತ್ಮೆ 

ತುಳಸಿ ವನಸ್ಪತಿಯು ಮೂಲದಲ್ಲಿ ಸಾತ್ತ್ವಿಕವಾಗಿದ್ದು ಅದರಲ್ಲಿ ಶ್ರೀವಿಷ್ಣುವಿನ ನಿರ್ಗುಣ-ಸಗುಣ ತತ್ತ್ವ ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಶ್ರೀವಿಷ್ಣುವಿನ ಪೂಜೆಯಲ್ಲಿ ಅವನಿಗೆ ತುಳಸೀದಳಗಳನ್ನು ಅಥವಾ ಮಂಜರಿಗಳನ್ನು ಅರ್ಪಿಸಲಾಗುತ್ತದೆ. ರಾಮತುಳಸಿಯಲ್ಲಿ ರಾಮತತ್ತ್ವ ಮತ್ತು ಕೃಷ್ಣತುಳಸಿಯಲ್ಲಿ ಕೃಷ್ಣತತ್ತ್ವ ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಇದರಿಂದ ತುಳಸಿಗೆ ದಿವ್ಯತ್ವ ಪ್ರಾಪ್ತವಾಗಿ ಅವಳಿಗೆ ‘ತುಳಸಿದೇವಿ’ ಎಂದೂ ಹೇಳಲಾಗುತ್ತದೆ.

೨. ಪರಾತ್ಪರ ಗುರು ಡಾ. ಆಠವಲೆಯವರು ನಿಯಮಿತವಾಗಿ ನೀರು ಹಾಕುತ್ತಿದ್ದ ತುಳಸಿಯ ಸಸಿಯ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಸೂಕ್ಷ್ಮ ಸ್ತರದಲ್ಲಾಗುವ ಕಾರ್ಯ

೨ ಅ. ಪರಾತ್ಪರ ಗುರು ಡಾ. ಆಠವಲೆಯವರು ನಿಯಮಿತವಾಗಿ ನೀರು ಹಾಕುತ್ತಿದ್ದ ತುಳಸಿಯ ಸಸಿಯು ತುಂಬಾ ಒಳ್ಳೆಯ ರೀತಿಯಲ್ಲಿ ಬೆಳೆದಿದ್ದು, ಅದನ್ನು ನೋಡಿದಾಗ ಚೈತನ್ಯ ಮತ್ತು ಆನಂದದ ಅರಿವಾಗುತ್ತದೆ : ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ಅಂಶಾವತಾರರಾಗಿದ್ದಾರೆ. ಅವರು ತುಳಸಿಯ ಗಿಡಕ್ಕೆ ನೀರು ಹಾಕುವಾಗ ಅವರ ದೇಹದಿಂದ ಪ್ರಕ್ಷೇಪಿಸುವ ಚೈತನ್ಯವು ತುಳಸಿಗೆ ನೀರಿನ ರೂಪದಲ್ಲಿ ಸಿಗುತ್ತದೆ. ಆದ್ದರಿಂದ ಈ ತುಳಸಿಯ ಸಸಿ ಇಷ್ಟೊಂದು ಚೆನ್ನಾಗಿ ಬೆಳೆದಿದ್ದು, ಅದನ್ನು ನೋಡಿದಾಗ ಚೈತನ್ಯ ಮತ್ತು ಆನಂದದ ಅರಿವಾಗುತ್ತದೆ.

೨ ಆ. ಪರಾತ್ಪರ ಗುರು ಡಾ. ಆಠವಲೆಯವರು ನಿಯಮಿತವಾಗಿ ನೀರು ಹಾಕುತ್ತಿದ್ದ ತುಳಸಿಯ ಸಸಿಯಲ್ಲಿ ಶ್ರೀವಿಷ್ಣುವಿನ ತತ್ತ್ವವು ಪಂಚತತ್ತ್ವಗಳ ಸ್ತರದಲ್ಲಿ ತುಂಬಾ ಪ್ರಮಾಣದಲ್ಲಿ ಕಾರ್ಯನಿರತವಾಗಿದೆ : ಪರಾತ್ಪರ ಗುರು ಡಾ.ಆಠವಲೆಯವರು ನಿಯಮಿತವಾಗಿ ನೀರು ಹಾಕುತ್ತಿದ್ದ ತುಳಸಿಯ ಸಸಿಯಲ್ಲಿ ಶ್ರೀವಿಷ್ಣುವಿನ ತತ್ತ್ವವು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿದೆ. ಈ ತುಳಸಿಯ ಗಿಡದಿಂದ ಪರಾತ್ಪರ ಗುರುದೇವರ ಕೋಣೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಪಂಚತತ್ತ್ವಗಳ ಸ್ತರದಲ್ಲಿ ಶಕ್ತಿ ಮತ್ತು ಚೈತನ್ಯ ಪ್ರಕ್ಷೇಪಿಸುವುದರಿಂದ ಸುತ್ತಲಿನ ವಾಯುಮಂಡಲದ ಶುದ್ಧೀಕರಣವಾಗುತ್ತದೆ.

೩. ತುಳಸಿಯ ಸಸಿಯ ಎಲೆ ಮತ್ತು ಮಂಜರಿ ಸ್ಥೂಲದಲ್ಲಿ ಕೆಂಪು ಮತ್ತು ಗುಲಾಬಿ ಕಾಣಿಸುವುದರ ಹಿಂದಿನ ಕಾರ್ಯ ಕಾರಣಭಾವ ಮತ್ತು ಸೂಕ್ಷ್ಮ ಸ್ತರದಲ್ಲಿ ಆಗುವ ತಾರಕ ಮತ್ತು ಮಾರಕ ಸ್ವರೂಪದ ಕಾರ್ಯ

ತುಳಸಿಯ ಸಸಿಯಲ್ಲಿ ಶ್ರೀವಿಷ್ಣುವಿನ ತತ್ತ್ವವು ಬಹಳಷ್ಟು ಪ್ರಮಾಣದಲ್ಲಿ ಕಾರ್ಯನಿರತವಾಗಿದೆ. ಆ ತತ್ತ್ವವು ಪಂಚತತ್ತ್ವಗಳಲ್ಲಿನ ಆವಶ್ಯ ತತ್ತ್ವದ ಸ್ತರದಲ್ಲಿ ವಾಯುಮಂಡಲದಲ್ಲಿ ಪ್ರಕ್ಷೇಪಿತವಾಗುತ್ತದೆ. ಯಾವಾಗ ಈ ತತ್ತ್ವವು ತೇಜತತ್ತ್ವದ ಸ್ತರದಲ್ಲಿ ಕಾರ್ಯನಿರತವಾಗುತ್ತದೆಯೋ, ಆಗ ತುಳಸಿಯ ಎಲೆ ಮತ್ತು ಮಂಜರಿಗಳ ಬಣ್ಣವು ಸ್ಥೂಲದಲ್ಲಿ ಬದಲಾಗುತ್ತದೆ.

೩ ಅ. ತುಳಸಿಯ ಸಸಿಯಿಂದ ಮಾರಕ ಸ್ವರೂಪದ ಕಾರ್ಯವಾಗುವುದರಿಂದ ಅದರ ಎಲೆ ಮತ್ತು ಮಂಜರಿಯ ಬಣ್ಣವು ಸ್ಥೂಲದಲ್ಲಿ ಕೆಂಪಗೆ ಕಾಣಿಸುವುದು : ಯಾವಾಗ ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಕೆಟ್ಟ ಶಕ್ತಿಗಳು ಸೂಕ್ಷ್ಮದಲ್ಲಿ ಆಕ್ರಮಣ ಮಾಡುತ್ತವೆಯೋ, ಆಗ ಈ ತುಳಸಿಯ ಸಸಿಯಿಂದ ಶ್ರೀವಿಷ್ಣುವಿನ ಮಾರಕ ಶಕ್ತಿ ಪ್ರಕ್ಷೇಪಿಸಿ ಪರಾತ್ಪರ ಗುರುದೇವರಿಗೆ ತೊಂದರೆಗಳನ್ನು ಕೊಡುವ ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮ ಯುದ್ಧವಾಗಿ ಪರಾತ್ಪರ ಗುರುದೇವರ ರಕ್ಷಣೆಯಾಗುತ್ತದೆ. ಆಗ ತುಳಸಿಯ ಸಸಿಯ ಎಲೆ ಮತ್ತು ಮಂಜರಿ ಕೆಂಪಗೆ ಕಾಣಿಸುತ್ತವೆ.

೩ ಆ. ತುಳಸಿಯ ಗಿಡದಿಂದ ತಾರಕ ಸ್ವರೂಪದ ಕಾರ್ಯವಾಗುವುದರಿಂದ ಅದರ ಎಲೆ ಮತ್ತು ಮಂಜರಿಗಳ ಬಣ್ಣ ಸ್ಥೂಲದಲ್ಲಿ ಗುಲಾಬಿ ಕಾಣಿಸುತ್ತವೆ : ಪರಾತ್ಪರ ಗುರು ಡಾ. ಆಠವಲೆಯವರ ಪ್ರಾಣಶಕ್ತಿ ಕಡಿಮೆಯಾಗಿ ಅವರಿಗೆ ಆಯಾಸವಾದಾಗ ತುಳಸಿಯಲ್ಲಿನ ಶ್ರೀ ಮಹಾಲಕ್ಷ್ಮಿದೇವಿಯ ತಾರಕ ತತ್ತ್ವ ಕಾರ್ಯರತವಾಗಿ ಸಸಿಯಿಂದ ಪ್ರಾಣವಾಯು ಪ್ರಕ್ಷೇಪಿಸುತ್ತದೆ. ಆಗ ತುಳಸಿಯ ಎಲೆ ಮತ್ತು ಸಸಿಗಳ ಬಣ್ಣ ಗುಲಾಬಿ ಕಾಣಿಸುತ್ತದೆ. ಈ ರೀತಿ ಪರಾತ್ಪರ ಗುರುದೇವರ ಸ್ಥಿತಿಗನುಸಾರ ಅವರ ಕೋಣೆಯ ಬಾಲ್ಕನಿಯಲ್ಲಿರುವ ತುಳಸಿಯ ಸಸಿಯಲ್ಲಿ ಸ್ಥೂಲದಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ‘ತುಳಸಿಯ ಸಸಿಯ ಕಾರ್ಯವು ಈಶ್ವರೇಚ್ಛೆಯಿಂದ ಹೇಗೆ ನಡೆಯುತ್ತಿರುತ್ತದೆ’, ಎಂಬುದು ಕಲಿಯಲು ಸಿಗುತ್ತದೆ.

‘ಶ್ರೀಗುರುಗಳ ಕೃಪೆಯಿಂದಲೇ ಈ ದೈವೀ ಬದಲಾವಣೆಯಲ್ಲಿನ ಕಾರ್ಯಕಾರಣಭಾವವು ತಿಳಿಯಿತು’, ಅದಕ್ಕಾಗಿ ನಾನು ಶ್ರೀಗುರುಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೫.೨೦೨೨)

ವಾಚಕರಿಗೆ ವಿನಂತಿ !

‘ಇಲ್ಲಿ ಪ್ರಕಟಿಸಿದ ತುಳಸಿಯ ಸಸಿಯ ಎಲೆ ಮತ್ತು ಮಂಜರಿ ಕೆಂಪು ಗುಲಾಬಿ ಆಗಿರುವುದರ ಬಣ್ಣದ ಛಾಯಾಚಿತ್ರವನ್ನು ಸ್ಪಷ್ಟವಾಗಿ ನೋಡಲು ವಾಚಕರು ‘ಸನಾತನ ಪ್ರಭಾತ’ದ ಜಾಲತಾಣದಲ್ಲಿನ https://bit.ly/3gtPXnH ಈ ಲಿಂಕ್‌ಗೆ ಭೇಟಿ ನೀಡಬೇಕು. (ಇದರಲ್ಲಿನ ಕೆಲವು ಅಕ್ಷರಗಳು ‘ಕ್ಯಾಪಿಟಲ್’ ಆಗಿವೆ.)

ತಜ್ಞರು, ಅಧ್ಯಯನಕಾರರು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !

ಸಂತರು ನೀರು ಹಾಕುತ್ತಿದ್ದ ತುಳಸಿಯ ಸಸಿಯಲ್ಲಿನ ಬುದ್ಧಿಅಗಮ್ಯ ಬದಲಾವಣೆಯ ಕಾರ್ಯಕಾರಣಭಾವವನ್ನು ಶೋಧಿಸಲು ಸಾಧಕರು ಪ್ರಯತ್ನಿಸುತ್ತಿದ್ದಾರೆ. ‘ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿದ್ದ ತುಳಸಿಯ ರೆಂಬೆ, ಎಲೆ ಮತ್ತು ಮಂಜರಿ ಕೆಂಪು-ಗುಲಾಬಿಯಾಗುವುದರ ಹಿಂದಿನ ಕಾರಣವೇನು ? ಈ ಸಂದರ್ಭದಲ್ಲಿ ತಜ್ಞರು, ಅಧ್ಯಯನಕಾರರು, ಈ ವಿಷಯದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ದೃಷ್ಟಿಯಲ್ಲಿ ಸಂಶೋಧನೆ ಮಾಡುವವರ ಸಹಾಯ ನಮಗೆ ಲಭಿಸಿದರೆ ನಾವು ಅವರಿಗೆ ಕೃತಜ್ಞರಾಗಿರುವೆವು.

– ವ್ಯವಸ್ಥಾಪಕ, ಸನಾತನ ಆಶ್ರಮ, ರಾಮನಾಥಿ ಗೋವಾ.

ಸಂಪರ್ಕ : ಶ್ರೀ. ಆಶಿಷ ಸಾವಂತ

ವಿ-ಅಂಚೆ : mav.research೨೦೧೪@gmail.com

ಸೂಕ್ಷ್ಮ : ವ್ಯಕ್ತಿಯ ಸ್ಥೂಲವೆಂದರೆ, ಪ್ರತ್ಯಕ್ಷ ಕಾಣಿಸುವ ಅವಯವ ಮೂಗು, ಕಿವಿ, ಕಣ್ಣು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯ, ಮನಸ್ಸು ಮತ್ತು ಬುದ್ಧಿಯ ಆಚೆಗಿರುವುದು ‘ಸೂಕ್ಷ್ಮ’ ಸಾಧನೆಯಲ್ಲಿ ಪ್ರಗತಿ ಹೊಂದಿರುವ ಕೆಲವು ವ್ಯಕ್ತಿಗಳಿಗೆ ಈ ‘ಸೂಕ್ಷ್ಮ’ ಸಂವೇದನೆಯ ಅರಿವಾಗುತ್ತದೆ. ಈ ‘ಸೂಕ್ಷ್ಮ’ ಜ್ಞಾನದ ವಿಷಯದಲ್ಲಿ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಅನುಭೂತಿ : ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು

ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.