ಸರ್ವಧರ್ಮಸಮಭಾವದ ಗುಂಗಿನಲ್ಲಿರುವ ಹಿಂದೂಗಳಿಗೆ ಆಘಾತ ಮಾಡಲು ಹೊಂಚು ಹಾಕುತ್ತಿರುವ ಮತಾಂಧರು ಮತ್ತು ಮಿಶನರಿಗಳು !

‘ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಕೆ. ನಾರಾಯಣ ಸ್ವಾಮಿಯವರು ವೈಕುಂಠ ಏಕಾದಶಿಯಂದು ತಿರುಪತಿಯ ಬಾಲಾಜಿ ದೇವಸ್ಥಾನದಿಂದ ಹೊರಗೆ ಬಂದು ಜನರಿಗೆ ‘ಮೆರಿ ಕ್ರಿಸ್‌ಮಸ್’ ಎಂದು ಹೇಳುತ್ತಾರೆ, ಆಗ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ದಕ್ಷಿಣದ ಅನೇಕ ರಾಜ್ಯಗಳಲ್ಲಿ ನಡೆಯುತ್ತಿರುವ ಮತಾಂತರ, ಈಶಾನ್ಯ ಭಾರತದಲ್ಲಿ ಹೆಚ್ಚುಕಡಿಮೆ ಪೂರ್ಣಗೊಂಡಿರುವ ಕ್ರೈಸ್ತೀಕರಣ, ಮುಸಲ್ಮಾನರ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಆ ತುಲನೆಯಲ್ಲಿ ಕಡಿಮೆಯಾಗುತ್ತಿರುವ ಹಿಂದೂಗಳ ಜನಸಂಖ್ಯೆ ಇಂತಹ ದೊಡ್ಡ ಸವಾಲುಗಳು ನಮ್ಮ ಮುಂದಿವೆ. ತಗ್ಗಿದ ಧ್ವನಿಯಲ್ಲಿ ಕೇಳಿಬರುವ ಇನ್ನೊಂದು ಧ್ವನಿಯೆಂದರೆ, ‘ನೀವು ಶ್ರೀರಾಮಮಂದಿರವನ್ನು ಕಟ್ಟಿರಿ; ಆದರೆ ಮುಂದಿನ ೫೦ ರಿಂದ ೧೦೦ ವರ್ಷಗಳಲ್ಲಿ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವರು. ಆಗ ನಾವು ಉಳಿದ ಎಲ್ಲಾ ಮಂದಿರಗಳನ್ನು ಧ್ವಂಸ ಮಾಡುವೆವು.’ ಇದು ಹಿಂದೂವಿರೋಧಿ ಶಕ್ತಿಗಳ ಬಹುದೊಡ್ಡ ಒಳಸಂಚಾಗಿದೆ ಮತ್ತು ಈ ಒಳಸಂಚಿನಿಂದ ಹಿಂದೂ ಧರ್ಮವು ಸುರಕ್ಷಿತವಾಗಿ ಹೊರ ಬರಲಿಕ್ಕಿದ್ದರೆ, ಯಾವ ಮಿಶನರಿ ಮಾನಸಿಕತೆಯಿಂದ ಕ್ರೈಸ್ತ ಧರ್ಮಗುರುಗಳು ವಿಶ್ವದ ಯಾವುದೇ ಮೂಲೆಗೆ ಹೋಗಿ ಮತಾಂತರದ ಪ್ರಚಾರ ಮಾಡಲು ಸಿದ್ಧರಿರುವರೋ, ಅಷ್ಟೇ ಕಟ್ಟರ್ ಮತ್ತು ಸಮರ್ಪಿತ ಚಿತ್ತದಿಂದ ಹಿಂದೂ ಧರ್ಮದ ಪ್ರಚಾರ ಮಾಡಲು ಸಾಧ್ಯವಿರುವ ಒಂದು ಹೊಸ ಗುಂಪನ್ನು ನಾವು ಸಿದ್ಧಪಡಿಸಬೇಕಾಗಿದೆ. ಇತಿಹಾಸದಲ್ಲಿ ಆದಿಶಂಕರಾಚಾರ್ಯರು, ಸಂತ ಜ್ಞಾನೇಶ್ವರರು, ಸಮರ್ಥರಾಮದಾಸ ಸ್ವಾಮಿ, ಬಂಗಾಲದಲ್ಲಿನ ಚೈತನ್ಯ ಮಹಾಪ್ರಭು, ಸ್ವಾಮಿ ವಿವೇಕಾನಂದರು ಮತ್ತು ಆರ್ಯಸಮಾಜದ ಶ್ರದ್ಧಾನಂದರು ಮುಂತಾದವರ ಆದರ್ಶ ನಮ್ಮ ಮುಂದಿದೆ. ‘ಸ್ವರಾಜ್ಯ’ ಎಂಬ ಹೆಸರಿನ ಮಾಸಿಕದಲ್ಲಿ ಲೇಖಕ ಆರ್. ಜಗನ್ನಾಥ ಇವರ ಲೇಖನವು ಇತ್ತೀಚೆಗಷ್ಟೇ ಓದಲು ಸಿಕ್ಕಿತು ಅದರಲ್ಲಿ ನೀಡಿರುವ ಕೆಲವು ಮಹತ್ವದ ವಿಷಯಗಳು ವಾಚನಕ್ಕೆ ಯೋಗ್ಯವಾಗಿವೆ.

೧. ಬಹುಸಂಖ್ಯಾತ ಹಿಂದೂಗಳು ತಮ್ಮನ್ನು ‘ಓಪನ್’ (ಮುಕ್ತ) ಮತ್ತು ‘ಲಿಬೆರಲ್’ (ಸ್ವತಂತ್ರ ವಿಚಾರದವರು) ಆಗಿದ್ದೇವೆ’, ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆೆ; ಆದರೆ ಪಶ್ಚಿಮ ಉತ್ತರಪ್ರದೇಶ, ಅಸ್ಸಾಂ, ಬಂಗಾಲ ಹಾಗೂ ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಹೆಚ್ಚುತ್ತಿರುವ ಜನಸಂಖ್ಯೆಯತ್ತ ದುರ್ಲಕ್ಷ್ಯವಾಗುತ್ತಿದೆ. ದಕ್ಷಿಣದ ಕ್ರೈಸ್ತರ ವಿಸ್ತಾರ ಮತ್ತು ಇತರೆಡೆಯ ಮತಾಂತರವನ್ನು ದುರ್ಲಕ್ಷಿಸುತ್ತೇವೆ.

೨. ಕೇವಲ ಹಿಂದೂ ಧರ್ಮದಲ್ಲಿ ವಿಶ್ವಕಲ್ಯಾಣದ ಸಂಕಲ್ಪನೆ

ಇಲ್ಲಿನ ಬಹುಸಂಖ್ಯಾತ ಹಿಂದೂ ಸಮಾಜವು ‘ಸರ್ವ ಧರ್ಮಗಳು ಸಮಾನವಾಗಿವೆ’, ಎಂದು ತಿಳಿಯುತ್ತದೆ, ಎಂಬುದು ಅಪ್ಪಟ ಸುಳ್ಳು. ‘ಧರ್ಮ’, ‘ರಿಲಿಜನ್’ ಮತ್ತು ‘ಮಜಹಬ’ ಇದರಲ್ಲಿ ಆಕಾಶ-ಪಾತಾಳದಷ್ಟು ವ್ಯತ್ಯಾಸವಿದೆ. ಕೇವಲ ಹಿಂದೂ ಧರ್ಮದಲ್ಲಿಯೇ ವಿಶ್ವಕಲ್ಯಾಣದ ಸಂಕಲ್ಪನೆ ಇದ್ದು ಇಸ್ಲಾಮ್ ಮತ್ತು ಕ್ರೈಸ್ತ ಧರ್ಮವು ಕೇವಲ ಅವರ ಪಂಥದವರಲ್ಲಿಯೇ ಕಲ್ಯಾಣದ ಇಚ್ಛೆಯನ್ನು ಪ್ರಕಟಿಸುತ್ತದೆ. ‘ಲಾ ಇಲಾಹಾ ಇಲ್ಲಾಲಾ’ (ಅಲ್ಲಾನ ಹೊರತು ಬೇರೆ ಯಾರೂ ದೇವರಿಲ್ಲ) ಈ ಸಾಲಿನ ಅರ್ಥ ಮೂಲತಃ ಏಕೇಶ್ವರವಾದವನ್ನು ಹೇಳುತ್ತದೆ. ‘ನಮ್ಮ ಆ ಧರ್ಮವೇ ನಿಜ, ನಮ್ಮ ಆ ದೇವರೇ ಸತ್ಯ, ಇತರರಿಗೆ ಬದುಕುವ ಹಕ್ಕಿಲ್ಲ’, ಇಂತಹ ವಿಚಾರಗಳು ಇತರ ಧರ್ಮೀಯರಲ್ಲಿದೆ.

೩. ಕ್ರೈಸ್ತರ ಕುತಂತ್ರ

ಕ್ರೈಸ್ತರ ಜನಸಂಖ್ಯೆ ಮಾತ್ರ ಜನಗಣನೆಯಿಂದ ತಿಳಿಯುವುದಿಲ್ಲ. ಏಕೆಂದರೆ ‘ಕ್ರಿಪ್ಟೋ ಕ್ರಿಶ್ಚನ್’ ಎನ್ನುವ ಒಂದು ಹೊಸ ಪ್ರಜಾತಿಯು ಸದ್ಯ ನೋಡಲು ಸಿಗುತ್ತಿದೆ. ಇದರ ಅರ್ಥ ಹೆಸರು ಬದಲಾಯಿಸಲ್ಲ; ಆದರೆ ಮನಸ್ಸಿನಿಂದ ಕ್ರೈಸ್ತ ಧರ್ಮವನ್ನು ಅವಲಂಬಿಸುವುದು. ಉದಾಹರಣೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಇದ್ದು ಹೆಸರಿನಿಂದ ಅವರು ಹಿಂದೂ ಎಂದೆನಿಸುತ್ತಿದ್ದರೂ ವಾಸ್ತವದಲ್ಲಿ ಕ್ರೈಸ್ತರಾಗಿದ್ದಾರೆ.

೪. ಪ್ರಗತಿಪರ ವಿಚಾರವಾದಿಗಳು ಮತ್ತು ಸಾಮ್ಯವಾದಿಗಳಿಂದ ಆಗುತ್ತಿರುವ ಬುದ್ಧಿಭ್ರಮಣೆ

ಸದ್ಯ ಪ್ರಗತಿಪರ ವಿಚಾರವಾದಿಗಳು ಮತ್ತು ಸಾಮ್ಯವಾದಿ ವಿಚಾರಶೈಲಿಯ ತಥಾಕಥಿತ ವಿದ್ವಾಂಸರು ‘ಹಿಂದೂ ಧರ್ಮ’ ಮತ್ತು ‘ಹಿಂದುತ್ವ’ ಹೀಗೆ ಎರಡು ಬೇರೆ ಬೇರೆ ಸಂಕಲ್ಪನೆಯನ್ನು ದೊಡ್ಡ ಚಾತುರ್ಯದಿಂದ ಉಪಯೋಗಿಸಿ ಬಹುಸಂಖ್ಯಾತ ಹಿಂದೂಗಳ ಬುದ್ಧಿಭ್ರಮಣೆ ಮಾಡುತ್ತಿದ್ದಾರೆ. ‘ಹಿಂದೂ ಧರ್ಮವು ಶ್ರೇಷ್ಠವಾಗಿದ್ದು ಹಿಂದುತ್ವವೆಂಬುದು ಕೆಟ್ಟದಾಗಿದೆ’, ಎಂದು ಸದ್ಯ ಪ್ರಚಾರ ಮಾಡುತ್ತಿದ್ದಾರೆ. ದುರ್ಭಾಗ್ಯದಿಂದ ಬಹುಸಂಖ್ಯಾತ ಹಿಂದೂಗಳಿಗೆ ಧರ್ಮಶಿಕ್ಷಣ ಹಾಗೂ ವೈಚಾರಿಕ ಜಾಗರೂಕತೆ ಕೂಡ ಅವಶ್ಯಕತೆಯಿದೆ. (ಆಧಾರ: ತ್ರೈಮಾಸಿಕ ‘ಸದ್ಧರ್ಮ’)