೧. ಅರ್ಧ ಹೂವಿಗಿಂತ ಪೂರ್ಣ ಹೂವಿನಿಂದ ಒಳ್ಳೆಯ ಸ್ಪಂದನಗಳು ಬರುವುದು
‘ಆಕೃತಿ ‘ಅ’ದಲ್ಲಿ ಅರ್ಧ ಹೂವು ಮಧ್ಯದಲ್ಲಿ ಕತ್ತರಿಸಿದಂತೆ ಕಾಣಿಸುತ್ತದೆ. ಹೂವಿನ ಪಕಳೆಗಳು ಬೇರೆ ಬೇರೆ ಮಾಡಿದರೆ ಅಥವಾ ಹೂವಿನ ಎರಡು ಭಾಗಗಳನ್ನು ಮಾಡಿದರೆ ವಿಡಂಬನೆಯಾಗುತ್ತದೆ. ಆದುದರಿಂದ ಅದರಿಂದ ಒಳ್ಳೆಯ ಸ್ಪಂದನಗಳು ಬರುವುದಿಲ್ಲ.
ಆಕೃತಿ ‘ಆ’ದಲ್ಲಿ ಸಂಪೂರ್ಣ ಹೂವು ಇರುವುದರಿಂದ ಅದು ವಾಸ್ತವವೆಂದೆನಿಸುತ್ತದೆ. ಆದುದರಿಂದ ಅದು ನೋಡಲು ಒಳ್ಳೆಯದೆನಿಸುತ್ತದೆ ಮತ್ತು ಅದರಿಂದ ಒಳ್ಳೆಯ ಸ್ಪಂದನಗಳು ಬರುತ್ತವೆ. ಈ ಹೂವಿನ ಕಡೆಗೆ ನೋಡಿ ಕೆಲವರಿಗೆ ಭಾವದ ಮತ್ತು ಆ ಕುರಿತು ದೇವತೆಯ ತತ್ತ್ವದ ಅನುಭೂತಿಯೂ ಬರುತ್ತದೆ.
೨. ಚೌಕೋನ ಆಕಾರಕ್ಕಿಂತ ಗೋಲಾಕಾರದ ಹೂವು ಒಳ್ಳೆಯದೆನಿಸುತ್ತದೆ
೪ ಪಕಳೆಗಳ ಹೂವಿನಿಂದ ಚೌಕೋನವು ತಯಾರಾಗುತ್ತದೆ. ಆದುದರಿಂದ ‘ಅ’ ಈ ರಂಗೋಲಿಯು ಒಳ್ಳೆಯದೆನಿಸುವುದಿಲ್ಲ. ಆಕೃತಿ ‘ಆ’ದಲ್ಲಿ ೫-೬ ಅಥವಾ ಅದಕ್ಕಿಂತ ಹೆಚ್ಚು ಪಕಳೆಗಳ ಹೂವನ್ನು ಬಿಡಿಸಿದರೆ ಅದು ಗೋಲಾಕಾರವಾಗಿ ಕಾಣಿಸುತ್ತದೆ. ಹೂವಿನ ಗೋಲಾಕಾರವು ವಾಸ್ತವಿಕತೆಯ ಹೆಚ್ಚು ಹತ್ತಿರ ಇರುವುದರಿಂದ ಅದು ಒಳ್ಳೆಯದೆನಿಸುತ್ತದೆ; ಅದರ ಪರಿಣಾಮದಿಂದ ಹೂವಿನಲ್ಲಿ ದೇವತೆಯ ತತ್ತ್ವವು ಬರಲು ಸಹಾಯವಾಗುತ್ತದೆ.
೩. ಮಧ್ಯಭಾಗದಲ್ಲಿ ಒಂದು ಪಕಳೆ ಇರುವುದರಿಂದ ಹೂವಿನ ಕಡೆಗೆ ನೋಡಿ ಉತ್ಸಾಹವೆನಿಸುವುದು
ಆಕೃತಿ ‘ಅ’ದಲ್ಲಿ ಹೂವಿನಲ್ಲಿ ಮಧ್ಯಭಾಗದಲ್ಲಿ ಉದ್ದಗೆರೆಯನ್ನು ಬಿಡಿಸಿದರೆ ಅದರ ಅಕ್ಕಪಕ್ಕದಲ್ಲಿ ಎರಡು ಪಕಳೆಗಳು (ಆಕೃತಿ ‘ಅ’ ಯಲ್ಲಿನ ೧ ಮತ್ತು ೨) ಇರುವುದರಿಂದ ಹೂವು ನಿಷ್ಕ್ರಿಯವೆನಿಸುತ್ತದೆ. ಆದುದರಿಂದ ಅದು ಒಳ್ಳೆಯದೆನಿಸುವುದಿಲ್ಲ.
ಆಕೃತಿ ‘ಆ’ದಲ್ಲಿ ಹೂವಿನಲ್ಲಿ ಮಧ್ಯಭಾಗದಲ್ಲಿ ಉದ್ದಗೆರೆಯನ್ನು ಬಿಡಿಸಿದರೆ ಮಧ್ಯಭಾಗದಲ್ಲಿ ಒಂದೇ (ಆಕೃತಿಯ ೧) ಪಕಳೆ ಇರುವುದರಿಂದ ‘ಹೂವು ಕಾರ್ಯನಿರತವಾಗಿದೆ’, ಎಂದೆನಿಸುತ್ತದೆ. ಆದುದರಿಂದ ಅದರ ಕಡೆಗೆ ನೋಡಿ ಉತ್ಸಾಹವೆನಿಸುತ್ತದೆ.
– ಕು. ಸಂಧ್ಯಾ ಮಾಳಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೨.೨೦೧೭)