ಅಮೇರಿಕಾದ ಇಬ್ಬರು ಸಂಸದರಿಂದ ಸಂಸತ್ತಿನಲ್ಲಿ ಪ್ರಸ್ತಾವ !
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿನ ರೋ ಖನ್ನಾ ಮತ್ತು ಸಿವ ಚಾಬೋಟ್ ಈ ಇಬ್ಬರು ಸಂಸದರು ಸಂಸತ್ತಿನಲ್ಲಿ ಒಂದು ಪ್ರಸ್ತಾವ ಮಂಡಿಸಿದ್ದಾರೆ ಇದರಲ್ಲಿ ೧೯೭೧ ರಲ್ಲಿ ಪಾಕಿಸ್ತಾನಿ ಸೈನ್ಯವು ಅಂದಿನ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಹಿಂದೂ ಮತ್ತು ಬಂಗಾಲಿ ಮುಸಲ್ಮಾನ ಇವರ ಮೇಲೆ ನಡೆಸಿರುವ ಅತ್ಯಾಚಾರವನ್ನು ‘ನರಸಂಹಾರ ’ಎಂದು ಘೋಷಿಸಿರಿ ಎಂದು ಒತ್ತಾಯಿಸಿದ್ದಾರೆ. ಹಾಗೂ ಈ ಪ್ರಕರಣದಲ್ಲಿ ಪಾಕಿಸ್ತಾನವು ಬಾಂಗ್ಲಾದೇಶದಲ್ಲಿನ ನಾಗರೀಕರ ಕ್ಷಮೆ ಕೋರುಲು ಕೂಡ ಒತ್ತಾಯಿಸಿದ್ದಾರೆ. ಈ ಇಬ್ಬರು ಸಂಸದರು ಭಾರತೀಯ ಮೂಲದವರಾಗಿದ್ದಾರೆ.
ಖನ್ನಾ ಇವರು, ೧೯೭೧ ರಲ್ಲಿ ಬಾಂಗ್ಲಾದೇಶದಲ್ಲಿ ಯಾವ ನರಸಂಹಾರ ನಡೆದಿತ್ತು, ಅದರಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ಇದರಲ್ಲಿ ಶೇಕಡ ೮೦ ರಷ್ಟು ಹಿಂದೂಗಳಾಗಿದ್ದರು ಎಂದು ಹೇಳಿದರು.
ಅಶಾಂತಿ ಮತ್ತು ವಿನಾಶದತ್ತ ಸಾಗುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳು !‘ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ಜನರ ಪರಿಸ್ಥಿತಿ ತುಂಬಾ ಕರುಣಾಮಯವಾಗಿದೆ. ಆ ಜನರು ಯಾವಾಗಲೂ ‘ಫ್ಯಾಶನ್’ ಬದಲಾಯಿಸುತ್ತಾರೆ, ‘ಬಟ್ಟೆ, ಫರ್ನಿಚರ್, ಮನೆ, ಕಾರುಗಳನ್ನು ಬದಲಾಯಿಸುತ್ತಾರೆ, ಅಷ್ಟೇ ಅಲ್ಲ, ಪತ್ನಿಯನ್ನೂ ಬದಲಾಯಿಸುತ್ತಾರೆ ! ‘ಕೆಲವಡೆಗಳಲ್ಲಿಯಂತೂ ಜನರು ತಮ್ಮ ತಮ್ಮ ಪತ್ನಿಯನ್ನು ಕರೆದೊಯ್ಯುತ್ತಾರೆ, ಎಲ್ಲ ಜನರು ನೃತ್ಯ ಮಾಡುತ್ತಾರೆ, ಕುಡಿಯುತ್ತಾರೆ ಮತ್ತು ತಮ್ಮ ಪತ್ನಿಯರನ್ನು ಆನಂದಿಸಲು ಬಿಡುತ್ತಾರೆ. ಆದರೂ ಬಡಪಾಯಿಗಳಿಗೆ ಸುಖ ಸಿಗುವುದಿಲ್ಲ. ದಿನೇ ದಿನೇ ಅವರು ಅಶಾಂತಿ ಮತ್ತು ಸರ್ವನಾಶದತ್ತ ಸಾಗುತ್ತಿದ್ದಾರೆ. (ಆಧಾರ : ಋಷಿ ಪ್ರಸಾದ, ಮೇ ೨೦೦೦) |
ಸಂಪಾದಕೀಯ ನಿಲುವುಭಾರತದಲ್ಲಿನ ಸಂಸದರಲ್ಲ, ಅಮೇರಿಕಾದಲ್ಲಿನ ಸಂಸದರು ಈ ರೀತಿ ಒತ್ತಾಯಿಸುತ್ತಾರೆ, ಇದು ಭಾರತಕ್ಕೆ ಲಚ್ಚಾಸ್ಪದವಾಗಿದೆ ! ಭಾರತದ ಸಂಸತ್ತಿನಲ್ಲಿ ಈ ರೀತಿಯ ಪ್ರಸ್ತಾವ ಸಮ್ಮತಿಸಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆ ಮಾಡುವುದಕ್ಕಾಗಿ ಕೂಡ ಸರಕಾರವು ಕೃತಿ ಶೀಲರಾಗಬೇಕು ! |