ಒತ್ತಡ ಕಡಿಮಗೊಳಿಸಲು ಕುಟುಂಬದವರ ಜೊತೆ ಊಟ ಮಾಡುವುದು ಆರೋಗ್ಯಕ್ಕಾಗಿ ಉಪಯುಕ್ತವಾಗಿದೆ ! – ಸಮೀಕ್ಷೆ

ನವದೆಹಲಿ – ಕುಟುಂಬದ ಜೊತೆ ಊಟ ಮಾಡುವುದರಿಂದ ಒತ್ತಡ ಕಡಿಮೆ ಆಗುತ್ತದೆ, ಹೀಗೆ ಶೇ. ೯೧ ಪೋಷಕರ ವಿಶ್ವಾಸವಿದೆ ಎಂದು ‘ಅಮೆರಿಕನ್ ಹಾರ್ಟ್ ಅಸೋಸಿಯೇಷನ್’ನ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

೧. ‘ವೇಕ್‌ಫೀಲ್ಡ್ ರಿಸರ್ಚ್’ನಿಂದ ‘ಹೆಲ್ದಿ ಫಾರ್ ಗುಡ್ ಮೂಮೆಂಟ್’ನ ಅಡಿಯಲ್ಲಿ ೧ ಸಾವಿರ ಅಮೆರಿಕಾದ ಹಿರಿಯ ನಾಗರೀಕರ ಸಮೀಕ್ಷೆ ಮಾಡಲಾಯಿತು. ಇದರಲ್ಲಿ, ಶೇ. ೮೪ ಜನರು ಅವರ ಪ್ರಿಯ ವ್ಯಕ್ತಿಯ ಜೊತೆ ಎಷ್ಟು ಸಾಧ್ಯ ಅಷ್ಟು ಸಮಯ ಕುಳಿತು ಊಟ ಮಾಡುವ ಆಸೆ ಇರುತ್ತದೆ; ಕಾರಣ ಸರಿಸುಮಾರು ಹಿರಿಯ ವ್ಯಕ್ತಿ ಸಾಮಾನ್ಯವಾಗಿ ಒಬ್ಬರೇ ಊಟ ಮಾಡುತ್ತಾರೆ ಎಂಬುದು ಗಮನಕ್ಕೆ ಬಂದಿದೆ.

೨. ಸಮೀಕ್ಷೆಯಲ್ಲಿ ಮೂರರಲ್ಲಿ ಇಬ್ಬರೂ, ಅವರು ಸ್ವಲ್ಪ ಒತ್ತಡದಲ್ಲಿ ಇರುತ್ತಾರೆ ಮತ್ತು ಶೇ. ೨೭ ರಷ್ಟು ಜನರು ಅವರು ಹೆಚ್ಚಿನ ಒತ್ತಡದಲ್ಲಿ ಇರುತ್ತಾರೆ ಎಂದು ಹೇಳಿದರು. ಸತತ ಒತ್ತಡದಲ್ಲಿರುವುದರಿಂದ ಹೃದ್ರೊಗ ಮತ್ತು ಪ್ಯಾರಲಿಸಸ್‌ನ ಅಪಾಯ ಹೆಚ್ಚುತ್ತದೆ, ಎಂದು ಸಂಶೋಧಕರ ಅಭಿಪ್ರಾಯವಾಗಿದೆ.

೩. ‘ಜಾನ್ಸ್ ಹ್ಯಾಪಿಕಿಂಗ್ಸ್‌ನ ಕಾರ್ಡಿಯಾಲಜಿ ವಿಭಾಗ’ದ ಸಹಯೋಗಿ ಸಂಚಾಲಕರು ಮತ್ತು ‘ಅಮೆರಿಕನ್ ಹಾರ್ಟ್ ಅಸೋಸಿಯೇಷನ್’ನ ಪ್ರಾಧ್ಯಾಪಕ ಎರಿನ್ ಮೀಕೋಸ್ ಇವರು, ಇತರರ ಜೊತೆ ಊಟ ಮಾಡುವುದರಿಂದ ಒತ್ತಡ ಕಡಿಮೆಯಾಗಲು ಸಹಾಯವಾಗುತ್ತದೆ ಹಾಗೂ ಸ್ವಾಭಿಮಾನ ಕೂಡ ಹೆಚ್ಚುತ್ತದೆ ಎಂದು ಹೇಳಿದರು.

೪. ಹತ್ತರಲ್ಲಿ ಆರು ಜನರಲ್ಲಿ, ಯಾವಾಗ ಅವರು ಇತರರ ಜೊತೆ ಊಟ ಮಾಡುತ್ತಾರೆ ಆಗ ಅವರ ಆರೋಗ್ಯಕ್ಕೆ ಉಪಯುಕ್ತ ಆಹಾರ ಸೇವಿಸುತ್ತಾರೆ. ನೀವು ವೈಯಕ್ತಿಕವಾಗಿ ಒಟ್ಟಾಗಿ ಸೇರಲು ಸಾಧ್ಯವಾಗುವುದಿಲ್ಲ ಆಗ ಒತ್ತಡ ಕಡಿಮೆ ಮಾಡುವುದಕ್ಕಾಗಿ ನೀವು ‘ವಿಡಿಯೋ ಕಾಲ್’ ಮೂಲಕ ಯಾವುದಾದರೂ ವ್ಯಕ್ತಿಯ ಜೊತೆ ಊಟ ಮಾಡಬಹುದು ಎಂಬ ವಿಶ್ವಾಸವನ್ನು ಹೊಂದಿದ್ದಾರೆ.