ಒಬ್ಬ ಪುರುಷನು ವಿವಾಹಿತ ಎಂಬ ಮಾಹಿತಿಯಿದ್ದರೂ ಯಾವುದಾದರೂ ಸ್ತ್ರಿಯು ಅವನ ಜೊತೆ ಗೆ ಶಾರೀರಿಕ ಸಂಬಂಧ ಇಟ್ಟುಕೊಂಡರೆ ಬಲಾತ್ಕಾರ ಎಂದಾಗುವುದಿಲ್ಲ ! – ಕೇರಳ ಉಚ್ಚ ನ್ಯಾಯಾಲಯದ ತೀರ್ಪು

ನವದೆಹಲಿ – ಯಾವುದಾದರೂ ಮಹಿಳೆ ವಿವಾಹಿತ ಪುರುಷನ ಜೊತೆಗೆ ಅವನ ವಿವಾಹದ ಮಾಹಿತಿ ಇದ್ದರೂ ಶಾರೀರಿಕ ಸಂಬಂಧ ಇರಿಸಿಕೊಂಡರೆ ಆಗ ಅದು ಬಲಾತ್ಕಾರ ಅನಿಸುವುದಿಲ್ಲ. ಇಂತಹ ಪ್ರಕರಣದಲ್ಲಿ ಸ್ತ್ರೀ ಮತ್ತು ಪುರುಷ ಇವರಲ್ಲಿನ ದೈಹಿಕ ಸಂಬಂಧವು ಪ್ರೇಮ ಮತ್ತು ಆಸಕ್ತಿಯದ್ದಾಗಿರುತ್ತದೆ. ಆದ್ದರಿಂದ ಅವರು ವಿವಾಹದ ಆಮಿಷ ತೋರಿಸಿ ಬಲಾತ್ಕಾರ ನಡೆಸಿದ್ದಾರೆ ಎಂಬ ಚೌಕಟ್ಟಿನಲ್ಲಿ ಬರುವುದಿಲ್ಲ, ಎಂದು ತೀರ್ಪು ಕೇರಳ ಉಚ್ಚ ನ್ಯಾಯಾಲಯವು ಒಂದು ಪ್ರಕರಣದ ವಿಚಾರಣೆ ನಡೆಸುವಾಗ ತೀರ್ಪನ್ನು ನೀಡಿದೆ. ಈ ಪ್ರಕರಣ ನ್ಯಾಯಾಲಯದ ಅರ್ಜಿದಾರರ ಮೇಲಿನ ಅತ್ಯಾಚಾರದ ಆರೋಪವನ್ನು ತಿರಸ್ಕರಿಸುವಾಗ ಇದನ್ನು ಸ್ಪಷ್ಟಪಡಿಸಿದೆ.

೩೩ ವಯಸ್ಸಿನ ವ್ಯಕ್ತಿಯೊಬ್ಬರು ತನ್ನ ಮೇಲಾದ ವಿವಾಹದ ಆಮಿಷ ತೋರಿಸಿ ಬಲಾತ್ಕಾರ ನಡೆಸಿರುವ ಆರೋಪವನ್ನು ರದ್ದು ಪಡಿಸಲು ಮನವಿಯನ್ನು ಸಲ್ಲಿಸಿದ್ದರು. ವಿಚಾರಣೆಯಲ್ಲಿ ಯುವತಿಗೆ ಆಕೆಯ ಸ್ನೇಹಿತ ಈಗಾಗಲೇ ವಿವಾಹಿತವೆಂದು ತಿಳಿದಿರುವುದು ತಿಳಿದು ಬಂದಿತು. ಅದರ ನಂತರ ಕೂಡ ಇಬ್ಬರು ತಮ್ಮ ಸಂಬಂಧವನ್ನು ನಿರಂತರವಾಗಿ ಮುಂದುವರೆಸಿದರು. ಅಷ್ಟೇ ಅಲ್ಲದೆ ಈಗ ಯುವಕನು ವಿಚ್ಛೇದನ ಪಡೆದ ನಂತರವೂ ಇಬ್ಬರಲ್ಲಿನ ಸಂಬಂಧ ಮುಂದುವರೆದಿತ್ತು.