ಭಾರತ ಬ್ರಿಟಿಷರ ವಸಾಹತುಶಾಹಿಯ ಸಂಕೋಲೆಯಿಂದ ನಿಜವಾಗಿಯೂ ಮುಕ್ತವಾಗಿದೆಯೇ ?

ಪಲ್ಕೀ ಶರ್ಮಾ

ಬ್ರಿಟನ್ನಿನ ರಾಣಿಯ ನಿಧನಕ್ಕೆ ಭಾರತದ ಪ್ರಸಾರಮಾಧ್ಯಮಗಳು, ರಾಜಕಾರಣಿಗಳು, ಚಲನಚಿತ್ರ ಕಲಾವಿದರು ನೀಡಿರುವ ಅನಾವಶ್ಯಕ ಮಹತ್ವ, ಇದರಿಂದ ಇಂದಿಗೂ ನಾವು ಮಾನಸಿಕ ದೃಷ್ಟಿಯಲ್ಲಿ ಬ್ರಿಟಿಷರ ಗುಲಾಮಗಿರಿಯಲ್ಲಿ ಸಿಲುಕಿದ್ದೇವೆ, ಎಂಬುದು ಅರಿವಾಗುತ್ತದೆ. ಇದರತ್ತ ಗಮನ ಹರಿಸುವ ಈ ಲೇಖನ !

೧. ಭಾಷೆ

೧ ಅ. ಮಾತೃಭಾಷೆಯಲ್ಲಿ ಮಾತನಾಡುವವರಿಗೆ ಗೌಣಸ್ಥಾನಮಾನ, ಆಂಗ್ಲ ಭಾಷೆ ಬರುವವರಿಗೆ ಗೌರವ ನೀಡುವುದು : ಮೊತ್ತಮೊದಲು ನಾವು ಭಾಷೆಯ ವಿಚಾರ ಮಾಡೋಣ. ಸಂಭಾಷಣೆ ಮಾಡುವಾಗ ಹೆಚ್ಚು ಪ್ರಮಾಣದಲ್ಲಿ ಆಂಗ್ಲ ಭಾಷೆಯನ್ನು ಉಪಯೋಗಿಸಲಾಗುತ್ತದೆ. ಸದ್ಯ ಭಾರತದಲ್ಲಿ ೨೮ ರಾಜ್ಯಗಳು ಮತ್ತು ೮ ಕೇಂದ್ರಾ ಡಳಿತ ಪ್ರದೇಶಗಳಿವೆ. ಅದರಲ್ಲಿ ಪ್ರತಿಯೊಂದು ರಾಜ್ಯದಲ್ಲಿ ೨ ಭಾರತೀಯ ಭಾಷೆಗಳಿವೆ. ಭಾರತದಲ್ಲಿ ೧೯ ಸಾವಿರದ ೫೬೯ ಮಾತೃಭಾಷೆಗಳಿದ್ದು ಇವುಗಳಲ್ಲಿ ೧೨೧ ಭಾಷೆಗಳನ್ನು ೧೦ ಸಾವಿರಕ್ಕಿಂತಲೂ ಹೆಚ್ಚು ಸಲ ಮಾತನಾಡಲಾಗುತ್ತದೆ. ಭಾರತದಲ್ಲಿ ಅಧಿಕೃತವಾದ ೨೨ ಭಾಷೆಗಳಿವೆ. ಇವೆಲ್ಲ ಭಾಷೆಗಳಿರುವಾಗ ಸ್ವತಂತ್ರ ಭಾರತದಲ್ಲಿ ಒಂದೇ ಭಾಷೆಯಲ್ಲಿ ಪ್ರಾವೀಣ್ಯವನ್ನು ಪಡೆಯಲು ಪ್ರಯತ್ನವಾಗುತ್ತದೆ. ಅದುವೇ ನಮ್ಮ ಮೇಲೆ ದಾಳಿ ಮಾಡಿರುವ ಆಂಗ್ಲರ ಆಂಗ್ಲ ಭಾಷೆ ! ಭಾರತದ ಸ್ವಾತಂತ್ರ್ಯ ಹೋರಾಟವು `ನಮ್ಮ ಸ್ವಂತದ ಗುರುತಿರಬೇಕು’, ಎಂಬುದಕ್ಕಾಗಿತ್ತು. ನಮ್ಮ ಮಾತೃ ಭಾಷೆಯಿಂದ ನಮ್ಮ ಸ್ವತಂತ್ರ ಪರಿಚಯ ಹೆಚ್ಚು ಪ್ರಮಾಣದಲ್ಲಿ ಆಗಲು ಸಾಧ್ಯವಿದೆ. ಒಂದು ವೇಳೆ ಭಾರತ ಸ್ವತಂತ್ರವಾಗಿದ್ದರೆ ನಾವು ನಮ್ಮ ಮಾತೃಭಾಷೆಯ ಪ್ರಸಾರ ಏಕೆ ಮಾಡುವುದಿಲ್ಲ ? ನಮಗೆ ನಮ್ಮ ಭಾರತೀಯ ಭಾಷೆಯನ್ನು ಉಪಯೋಗಿಸಲು ಏಕೆ ನಾಚಿಕೆಯಾಗುತ್ತದೆ ? ಯಾರಾದರೂ ಹಿಂದಿ, ಕನ್ನಡ, ತಮಿಳು, ಉಡಿಯಾ, ಆಸಾಮೀ, ಬಂಗಾಲಿ ಇತ್ಯಾದಿ ಭಾಷೆ ಮಾತನಾಡುತ್ತಿದ್ದರೆ, ಅವರನ್ನು ಹಿಂದುಳಿದವರ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ಈ ಭಾಷೆಯನ್ನು ಮಾತನಾಡುವವರಿಗೆ ಗೌಣ ಸ್ಥಾನ ನೀಡಲಾಗುತ್ತದೆ; ಆದರೆ ಅದೇ ವ್ಯಕ್ತಿ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದರೆ, ಅವನಿಗೆ ಮಾನ್ಯತೆ ಸಿಗುತ್ತದೆ.

೧ ಆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳಲ್ಲಿ ಹೆಚ್ಚು ಪ್ರಮಾಣದಲ್ಲಿ ಪ್ರಗತಿಯಾಗಿದೆ ಎಂದು ಸಂಶೋಧನೆಯಿಂದ ಅರಿವಾಗುವುದು : ನಮ್ಮನ್ನು ಆಳಿದವರ ಭಾಷೆಗೆ ಇಂದು ಪ್ರಾಧಾನ್ಯತೆಯನ್ನು ಕೊಡಲಾಗುತ್ತದೆ. ಭಾರತದಲ್ಲಿ ಆಂಗ್ಲವನ್ನು ಸಾಮಾಜಿಕ ಹಾಗೂ ಆರ್ಥಿಕ ಸ್ತರದಲ್ಲಿ ಉಪಯೋಗಿಸಲಾಗುತ್ತಿದೆ. ನಿಮಗೆ ಯಶಸ್ಸು ಬೇಕಿದ್ದರೆ ಆಂಗ್ಲ ಭಾಷೆ ಬರುವುದು ಅತ್ಯಾವಶ್ಯಕವಾಗಿದೆ. ಹೆಚ್ಚಿನ ಪಾಲಕರು ತಮ್ಮ ಮಕ್ಕಳಿಗೆ ನಿರರ್ಗಳವಾಗಿ ಆಂಗ್ಲ ಭಾಷೆ ಮಾತನಾಡಲು ಬರಬೇಕೆಂಬ ಸಂಕಲ್ಪನೆಯಲ್ಲಿ ಮುಳುಗಿರುವುದು ಕಂಡುಬರುತ್ತದೆ. ಅವರ ನಿಲುವೆಂದರೆ ಆಂಗ್ಲ ಭಾಷೆಯಲ್ಲಿ ನಿಪುಣನಾದರೆ ಇತರ ಎಲ್ಲ ವಿಷಯಗಳಲ್ಲಿ ಹೆಚ್ಚು ಅಂಕಗಳು ಸಿಗಲು ಸಾಧ್ಯವಿದೆ; ಅದರೆ ಆ ನಿಲುವು ತಪ್ಪಾಗಿದೆ. ವಾಸ್ತವದಲ್ಲಿ ಮಾತೃಭಾಷೆಯಲ್ಲಿ ಪರಿಪೂರ್ಣತೆ ಬಂದರೆ ಇತರ ಭಾಷೆಗಳಲ್ಲಿ ಹೆಚ್ಚು ಅಂಕ ಸಿಗಲು ಸಾಧ್ಯವಿದೆ. ೧೯೭೩ ರಲ್ಲಿ ಓರ್ವ ಸಂಶೋಧಕನು ಮಾಡಿದ ಅಭ್ಯಾಸಕ್ಕನುಸಾರ, ಅಮೇರಿಕಾದ ಮೆಕ್ಸಿಕೊದಲ್ಲಿ ವಾಸಿಸುವ ಅಮೇರಿಕಾ ಮೂಲದ ನಾಗರಿಕರು ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರು ಹಾಗೂ ಅನಂತರ ಸ್ಪೇನಿಶ್ ಭಾಷೆಯಲ್ಲಿ ಶಿಕ್ಷಣ ಪಡೆದರು. ಅವರ ಕಾರ್ಯಶೈಲಿಯು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯದೆ ನೇರವಾಗಿ ಸ್ಪೇನಿಶ್ ಭಾಷೆಯಲ್ಲಿ ಕಲಿಯುವವರಿಗಿಂತ ಹೆಚ್ಚು ಚೆನ್ನಾಗಿತ್ತು. ಹೋಂಡ್ಯೂರಸ್, ಇರಾನ್ ಮತ್ತು ಟೋಗೋ ಈ ದೇಶಗಳಲ್ಲಿ ಇದೇ ರೀತಿಯ ಸಂಶೋಧನೆ ಮಾಡಲಾಯಿತು. ಇದರಲ್ಲಿ ಮಕ್ಕಳಿಗೆ ಮನೆಯಲ್ಲಿ ಮಾತನಾಡುವ ಭಾಷೆಯಲ್ಲಿ ಕಲಿಸಿ ದರೆ ಅವರಿಗೆ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಸಿಗುತ್ತದೆ, ಎಂಬುದು ಕಂಡುಬಂದಿದೆ. `ಆಂಗ್ಲ ಭಾಷೆಯೆಂದರೆ ಯಶಸ್ಸು’, ಎಂಬ ಸಮೀ ಕರಣವಾಗಿದೆ. `ನಿಮಗೆ ಯಶಸ್ಸು ಬೇಕಿದ್ದರೆ, ಆಂಗ್ಲ ಭಾಷೆ ಬರಲೇ ಬೇಕು’, ಎಂದು ಅನೇಕರಿಗೆ ಅನಿಸುತ್ತದೆ. ಸದ್ಯ ಜಪಾನ್, ಜರ್ಮನಿ ಮತ್ತು ಚೀನಾ ಇತ್ಯಾದಿ ದೇಶಗಳು ಆರ್ಥಿಕ ಕ್ಷೇತ್ರಗಳಲ್ಲಿ ಜಗತ್ತಿನ ಮೊದಲ ೫ ಕ್ರಮಾಂಕದಲ್ಲಿವೆ. ಈ ದೇಶಗಳಲ್ಲಿನ ಹೆಚ್ಚಿನ ಜನರು ಆಂಗ್ಲ ಮಾತನಾಡುವುದಿಲ್ಲ.

೨. ಇತಿಹಾಸ

೨ ಅ. ಬ್ರಿಟಿಷರು ಶಿಕ್ಷಣದ ಮೂಲಕ ದಾಳಿಕೋರರ ವಿಷಯದಲ್ಲಿ ತಪ್ಪು ಇತಿಹಾಸವನ್ನು ಕಲಿಸುವುದು : ಭಾರತದ ಶಾಲೆಗಳಲ್ಲಿ ಕಲಿಸುವ ಇತಿಹಾಸವು ಭಾರತದ ಇತಿಹಾಸವಲ್ಲ. ಆ ಇತಿಹಾಸವು ಬ್ರಿಟಿಷರ ದೃಷ್ಟಿಯಲ್ಲಿ ಸಿದ್ಧಪಡಿಸಿದ ಭಾರತದ ಇತಿಹಾಸವಾಗಿದೆ. ಬ್ರಿಟಿಷರು ಭಾರತದ ಅವನತಿಗೆ ಇತಿಹಾಸವನ್ನು ಸಾಧನವೆಂದು ಉಪಯೋಗಿಸಿದರು. ೧೮೬೮ ರಲ್ಲಿ ಸಾಹಿತ್ಯ, ಇತಿಹಾಸ ಹಾಗೂ ತತ್ತ್ವಜ್ಞಾನದ ಪ್ರಸಿದ್ಧ ಅಭ್ಯಾಸಕ ಮ್ಯಾಕ್ಸ್ಮುಲ್ಲರ್ ಇವರು `ಡ್ಯುಕ್ ಆಫ್ ಆರ್ಗಾಯ’ ಇವರಿಗೆ ಒಂದು ಪತ್ರ ಬರೆದನು. ಅವನು ಆಗ ಭಾರತದ ಕಾರ್ಯದರ್ಶಿಯಾಗಿದ್ದನು. ಮ್ಯಾಕ್ಸ್ಮುಲ್ಲರ್ ಆ ಪತ್ರದಲ್ಲಿ ಹೇಳುತ್ತಾನೆ “ಭಾರತದ ಮೇಲೆ ಒಮ್ಮೆ ವಿಜಯ ಪಡೆದಿದ್ದೇವೆ; ಆದರೆ ಶಿಕ್ಷಣದ ಮೂಲಕ ಅದರ ಮೇಲೆ ಪುನಃ ವಿಜಯ ಪಡೆಯಬೇಕಾಗಿದೆ.’’ ಬ್ರಿಟಿಷರು ಅವರ ದೃಷ್ಟಿಯಲ್ಲಿ ಪೂರಕವಾದ ಇತಿಹಾಸವನ್ನು ಬರೆದರು. ಅವರು ಅಲೆಕ್ಝಾಂಡರ್ ಭಾರತದ ಮೇಲೆ ದಾಳಿ ಮಾಡಿ ವಿಜಯ ಗಳಿಸಿದ ನಂತರ ದೇಶ ದಲ್ಲಿ ಸುಧಾರಣೆಯಾಯಿತು. `ಶಕ ಮತ್ತು ಕುಶಾಣ ಇವರು ಭಾರತೀಯರಿಗೆ ಒಳ್ಳೆಯ ಆಡಳಿತವನ್ನು ನೀಡಿದರು. ಭಾರತದ ಮೇಲೆ ದಾಳಿ ಮಾಡಿದ ಮಹಮ್ಮದ ಘೋರಿ, ತುಘಲಕ ಮತ್ತು ಅಕ್ಬರ ಇವರು ಒಳ್ಳೆಯ ಆಡಳಿತಗಾರರಾಗಿದ್ದರು. ಅಕ್ಬರ ತುಂಬಾ ಒಳ್ಳೆಯ ರಾಜನಾಗಿದ್ದನು’, ಎಂದು ಇತಿಹಾಸವನ್ನು ಬರೆದರು. ರಾಜ ಮಾನಸಿಂಹ ಇವನು ಅಕ್ಬರನ ಸೈನ್ಯದ ಸರದಾರನಾಗಿದ್ದನು. ಅವನು ತನ್ನ ಪರಾಕ್ರಮದ ಬಲದಿಂದ ಅಕ್ಬರನಿಗೆ ಸಾಮ್ರಾಜ್ಯವನ್ನು ಹೆಚ್ಚಿಸಲು ಸಹಾಯ ಮಾಡಿದನು. ಆದರೆ ನಮಗೆ ಅವನ ಇತಿಹಾಸವನ್ನು ಏಕೆ ಕಲಿಸುವುದಿಲ್ಲವೆೆಂದರೆ ಅವನು ಭಾರತೀಯನಾಗಿದ್ದನು. ಆದ್ದರಿಂದ ಅವನನ್ನು ಪ್ರಸಿದ್ಧಿ ಮಾಡುವುದು ಬ್ರಿಟಿಷರಿಗೆ ಸರಿಯೆನಿಸಲಿಲ್ಲ. ನಮ್ಮ ಇತಿಹಾಸದ ಪುಸ್ತಕದಲ್ಲಿ ಇನ್ನೂ ಇಂತಹ ಲೇಖನಗಳನ್ನೇ ಆರಿಸಲಾಗುತ್ತದೆ.

೨ ಆ. ಭಾರತೀಯ ಪುಸ್ತಕಗಳಲ್ಲಿ ಬ್ರಿಟಿಷ ವಿಚಾರಶೈಲಿಯ ಪ್ರಭಾವವಿರುವುದರಿಂದ ದೇಶದ ಪ್ರಾಚೀನ ಸತ್ಯ ಇತಿಹಾಸವನ್ನು ಕಲಿಸುವುದಿಲ್ಲ : ನಮ್ಮ ಪುಸ್ತಕಗಳಲ್ಲಿ ನ್ಯೂಟನ್‌ನ ವಿಷಯದಲ್ಲಿ ಬರೆಯಲಾಗುತ್ತದೆ; ಆದರೆ ಬ್ರಹ್ಮಗುಪ್ತ ಎಂಬ ಆರನೆ ಶತಮಾನದ ಪ್ರಸಿದ್ಧ ಗಣಿತತಜ್ಞನು ೧ ರಿಂದ ೯ ಈ ಅಂಕೆ ಮತ್ತು ಶೂನ್ಯವನ್ನು ಕಂಡು ಹಿಡಿದಿದ್ದಾನೆ, ಇದನ್ನು ಭಾರತೀಯರಿಗೆ ಕಲಿಸುವುದಿಲ್ಲ. ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಜಗತ್ತಿನ ಮೇಲೆ ಪ್ರಭಾವ ಬೀರುವ ವೈದಿಕ ಗಣಿತದ ವಿಷಯದಲ್ಲಿ ಬರೆಯುವುದಿಲ್ಲ. ಭಾರತದ ಕೃಷಿ ಪದ್ಧತಿಯನ್ನು ಸಂಪೂರ್ಣ ಜಗತ್ತು ಹೇಗೆ ಅಂಗೀಕರಿಸಿತು ? ಪ್ರಾಚೀನ ಭಾರತವು ಒಂದು ಉತ್ಕೃಷ್ಟ ವ್ಯಾಪಾರ ಮಾಡುವ ದೇಶವಾಗಿತ್ತು. ಏಶಿಯಾದ ಕೆಲವು ಪ್ರದೇಶಗಳಲ್ಲಿರುವ ಭಾರತೀಯ ಸಂಸ್ಕೃತಿಯ ಪ್ರಭಾವದ ವಿಷಯ ಹೇಳಲ್ಪಡುವುದಿಲ್ಲ. ಅದೇ ರೀತಿ ಭಾರತದಲ್ಲಿನ ಇತಿಹಾಸದ ಪುಸ್ತಕದಿಂದ ಅಹೋಮನ ಸಾಮ್ರಾಜ್ಯದ ವಿಷಯದಲ್ಲಿ ಉಲ್ಲೇಖವಿಲ್ಲ. ಅವರು ಅಸ್ಸಾಮ್‌ನಲ್ಲಿ ೬೦೦ ವರ್ಷ ರಾಜ್ಯಾಡಳಿತ ನಡೆಸಿದರು ಮತ್ತು ಬ್ರಿಟಿಷರನ್ನೂ ಸೋಲಿಸಿದ್ದರು. ನಮ್ಮ ಪುಸ್ತಕದಲ್ಲಿ ಚೋಳರು ಮತ್ತು ಪಾಂಡ್ಯರಿಗೆ ಸ್ವಲ್ಪ ಪ್ರಮಾಣದಲ್ಲಿ ಪ್ರಸಿದ್ಧಿ ನೀಡಲಾಗುತ್ತದೆ.

ನಮ್ಮ ಪಠ್ಯಪುಸ್ತಕಗಳಲ್ಲಿರುವುದು ಭಾರತದ ಇತಿಹಾಸವೇ ಅಲ್ಲ, ಜಗತ್ತಿನ ಇತಿಹಾಸವನ್ನೂ ಬ್ರಿಟಿಷರ ಪರ ಬರೆದು ಪಕ್ಷಪಾತ ಮಾಡಲಾಗಿದೆ. ಉದಾ. ಇತಿಹಾಸದಲ್ಲಿ ಬ್ರಿಟಿಷ ಮತ್ತು ಅಮೇರಿಕನ್ ಸೈನ್ಯದ ಉಲ್ಲೇಖ ಬರುತ್ತದೆ. ಬ್ರಿಟಿಷ ಸೈನ್ಯದಲ್ಲಿದ್ದು ಹೋರಾಡಿದ ಭಾರತೀಯರ ಇತಿಹಾಸವೆಲ್ಲಿದೆ ? ಎರಡನೆಯ ಮಹಾಯುದ್ಧದಲ್ಲಿ ದಿಕ್ಕು ಬದಲಿಸಿದ ಘಟನೆಯೆಂದರೆ, ರಶ್ಯಾದಲ್ಲಿ ನಾಝೀ ಸೈನ್ಯಕ್ಕಾದ ಪರಾಭವ. ಬ್ರಿಟಿಷರು ಈ ಇತಿಹಾಸವನ್ನು ವಿದ್ಯಾರ್ಥಿಗಳಿಂದ ಅಡಗಿಸಲು ಇಚ್ಛಿಸುತ್ತಾರೆ; ಆದರೆ ನಾವು ಈ ಇತಿಹಾಸವನ್ನು ಏಕೆ ಅಡಗಿಸಬೇಕು ? ಭಾರತದ ಮೇಲೆ ಇನ್ನೂ ಬ್ರಿಟಿಷರ ವಿಚಾರ ಶೈಲಿಯ ಪ್ರಭಾವವಿದೆ.

೩. ವಿವಿಧ ಭಾರತೀಯ ಸಂಸ್ಥೆಗಳ ಮೇಲಿರುವ ಬ್ರಿಟಿಷ ವಿಚಾರಶೈಲಿಯ ಪ್ರಭಾವವನ್ನು ಕಿತ್ತೆಸೆಯುವುದು ಆವಶ್ಯಕ !

ಮೂರನೇ ಅಂಶವೆಂದರೆ ಭಾರತದ ಸಂಸ್ಥೆಗಳ ಮೇಲೆಯೂ ಬ್ರಿಟಿಷ ವಿಚಾರಶೈಲಿಯ ಪ್ರಭಾವವಿದೆ. ಭಾರತದ ಸಂಸತ್ತಿನಲ್ಲಿ ಮಸೂದೆಯನ್ನು ಸಮ್ಮತಿಸುವಾಗ ಇದುವರೆಗೂ ಅಭಿಪ್ರಾಯವನ್ನು ಕೇಳಲು `ಐ’ ಮತ್ತು `ನೋ’ ಇದನ್ನು ಉಪಯೋಗಿಸಲಾಗುತ್ತದೆ. ಲೋಕಸಭೆಯ ಸಭಾಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರ ಹಿಂದೆ ಸಿಪಾಯಿ ನಿಂತಿರುವುದನ್ನು ನಾವು ನೋಡುತ್ತೇವೆ. ಭಾರತದಲ್ಲಿ ಇನ್ನೂ ನ್ಯಾಯಾಧೀಶರಿಗೆ `ಮೈ ಲಾರ್ಡ್’, `ಯುವರ್ ಆನರ್’ ಎಂದು ಸಂಬೋಧಿಸಲಾಗುತ್ತದೆ. ನಮ್ಮ ಎಲ್ಲ ನ್ಯಾಯವ್ಯವಸ್ಥೆಗಳು ಬ್ರಿಟಿಷ ಪದ್ಧತಿಯನ್ನೇ ಆಧರಿಸಿದೆ. ಭಾರತೀಯ ಸೈನ್ಯದಲ್ಲಿ `ಸೇವಾದಾರ’ ಮತ್ತು `ಸಹಾಯಕ’ ಈ ಶಬ್ದಗಳನ್ನು ಉಪಯೋಗಿಸುವ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯುತ್ತಿದೆ. ಬ್ರಿಟಿಷರು ಧರ್ಮ ಮತ್ತು ಪಾರಂಪರಿಕ ಸಮೂಹಗಳಲ್ಲಿ ಒಡಕನ್ನುಂಟು ಮಾಡಿದರು. ಭಾರತದಲ್ಲಿ ಅದನ್ನು ಇನ್ನೂ ಸ್ವಾಗತಿಸಲಾಗುತ್ತಿದೆ. ನಾವು ನಮ್ಮ ಮಕ್ಕಳಿಗೆ ಹೊಸ ಸಂಶೋಧನೆ ಮಾಡುವ ಸ್ವಾತಂತ್ರ್ಯ ನೀಡುವುದಿಲ್ಲ. ಅವರು ಬ್ರಿಟಿಷ ಶಿಕ್ಷಣಪದ್ಧತಿಯ ಗುಲಾಮರಾಗಿದ್ದಾರೆ. `ಸ್ವಾತಂತ್ರ‍್ಯವೆಂದರೆ ಕೇವಲ ಅಧಿಕಾರ ಪರಿವರ್ತನೆ’ ಎಂದಾಗುವುದಿಲ್ಲ. ನಮಗೆ ನಮ್ಮ ಪದ್ಧತಿಯನ್ನು ಆರಿಸಲು ಸಾಧ್ಯವಿಲ್ಲವೆಂದಾದರೆ ನಾವು ಸ್ವತಂತ್ರರೆಂದು ಹೇಗೆ ಹೇಳಬಹುದು ? ಇಂದಿಗೂ ಭಾರತೀಯ ಸೈನ್ಯದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನವಿಲ್ಲ. ಅನೇಕ ಭಾರತೀಯರಿಗೆ ಭಾರತೀಯ ಉಡುಗೆ ಇಷ್ಟವಿಲ್ಲ. ವಿಶ್ವವಿದ್ಯಾಲಯಗಳ ಪದವಿಪ್ರದಾನ ಸಮಾರಂಭದಲ್ಲಿ ಇನ್ನೂ ಕಪ್ಪು ಕೋಟ್ ಉಪಯೋಗಿಸಲಾಗುತ್ತದೆ. ನಮ್ಮ ಪೊಲೀಸ್ ಖಾತೆಯಲ್ಲಿ ಇನ್ನೂ `ಲಾಠಿಚಾರ್ಜ್’ ಶಬ್ದವನ್ನು ಉಪಯೋಗಿಸಲಾಗುತ್ತದೆ. ನಮಗೆ ಆಂಗ್ಲದಿಂದ ಲೇಖನ ಮಾಡುವ ಕಾಂಗ್ರೆಸ್ಸಿನ ಮುಖಂಡ ಶಶಿ ಥರೂರ್ ಇಷ್ಟವಾಗುತ್ತಾರೆ; ಆದರೆ ನಾವು ನಮ್ಮ ಮಾತೃಭಾಷೆಯ ಮೇಲೆ ಪ್ರಭುತ್ವವನ್ನು ಪಡೆಯುವ ವಿಷಯದಲ್ಲಿ ಮಾತ್ರ ಪ್ರಶ್ನೆ ಕೇಳುತ್ತೇವೆ. ನಮಗೆ ಇಂಗ್ಲೆಂಡ್ ನಲ್ಲಿನ ರಾಜಮನೆತನದ ವಿಷಯದಲ್ಲಿ ಹೆಚ್ಚು ಮಾಹಿತಿ ಇದೆ; ಆದರೆ ನಮಗೆ ಶಾತವಾಹನನಂತಹ ರಾಜನ ವಿಷಯದಲ್ಲಿ ಏನೂ ಮಾಹಿತಿಯಿಲ್ಲ. ಭಾರತ ಪ್ರಗತಿ ಸಾಧಿಸಿದೆ ಎಂಬುದು ನಿಶ್ಚಿತ; ಆದರೆ ಭಾರತೀಯರು ಬ್ರಿಟಿಷರ ಹಿಡಿತದಿಂದ ಮುಕ್ತರಾಗುವ ಅವಶ್ಯಕತೆ ಇಂದಿಗೂ ಇದೆ.

– ಪಲ್ಕೀ ಶರ್ಮಾ ಉಪಾಧ್ಯಾಯ, ಮಾಜಿ ವಾರ್ತಾನಿವೇದಕಿ ಮತ್ತು ಪತ್ರಕರ್ತೆ (ಆಧಾರ : ‘WIONews’ ವಾರ್ತಾವಾಹಿನಿ)