೧. ಭಾರತದ ಮೇಲೆ ಮಾನಸಿಕ ಒತ್ತಡ ಹೇರಲು ಚೀನಾವು ಗಡಿಯಲ್ಲಿ ವಿವಿಧ ಶಸ್ತಾçಸ್ತçಗಳ ಕವಾಯತಿ (ಡ್ರೀಲ್) ಮಾಡುವುದು ಮತ್ತು ಭಾರತದ ಯುದ್ಧ ಸಿದ್ಧತೆಯು ಉತ್ತಮವಾಗಿರುವುದರಿಂದ ಚೀನಾದ ಕೃತ್ಯಗಳಿಂದಭಾರತದ ಮೇಲೆ ಯಾವುದೇ ಪರಿಣಾಮವಾಗದಿರುವುದು
ಅ. ಇತ್ತೀಚೆಗಷ್ಟೆ ಭಾರತ ಮತ್ತು ಚೀನಾದ ನಡುವಿನ ಕೋರ್ ಕಮಾಂಡರ್ (ಮೇಲಧಿಕಾರಿಗಳ) ಸ್ತರದ ಚರ್ಚೆಯಲ್ಲಿ ಏನೂ ನಿಷ್ಪನ್ನವಾಗಲಿಲ್ಲ ಎಂಬ ಒಂದು ವಾರ್ತೆ ಬಂದಿತ್ತು. ಹಾಗೆಯೇ ಚೀನಾದ ಸೈನ್ಯವು ಭಾರತದ ಯಾವ ಎರಡು ಸ್ಥಳಗಳಲ್ಲಿ ಒಳಗೆ ನುಗ್ಗಿತ್ತೋ ಅಲ್ಲಿಂದ ಅದು ಹಿಂದೆ ಹೋಗಲೂ ಸಿದ್ಧವಿಲ್ಲ. ಆದರೂ ಈ ಚರ್ಚೆಗಳು ಮುಂದುವರಿಯಲಿಕ್ಕಿವೆ. ಇಷ್ಟರ ವರೆಗೆ ೧೬ ಚರ್ಚೆಗಳಾದವು ಹಾಗೂ ಮುಂದೆಯೂ ಆಗಲಿವೆ; ಆದರೆ ಚೀನಾ ಗಡಿವಿವಾದವನ್ನು ಎಂದಿಗೂ ನಿಲ್ಲಿಸುವುದಿಲ್ಲ. ಇದರ ಮೂಲಕ ಚೀನಾಗೆ ಭಾರತದ ಮೇಲೆ ನಿರಂತರವಾಗಿ ಒತ್ತಡವನ್ನು ಹಾಕಿ ಅದರ ಆರ್ಥಿಕ ಪ್ರಗತಿಯಲ್ಲಿ ಅಡ್ಡಿಯುಂಟು ಮಾಡಲಿಕ್ಕಿದೆ. ಆದ್ದರಿಂದ ಈ ಗಡಿವಿವಾದವು ಭವಿಷ್ಯದಲ್ಲಿ ಅಂತ್ಯವಾಗುವ ಸಾಧ್ಯತೆ ವಿರಳ. ಅದಕ್ಕಾಗಿ ಭಾರತವು ಸಿದ್ಧವಾಗಿರಬೇಕು.
ಆ. ಚೀನಾವು ಆ ಪರಿಸರದಲ್ಲಿ ತನ್ನ ಕೆಲವು ಅತ್ಯಾಧುನಿಕ `ರಾಕೇಟ್ ಲಾಂಚರ್’ಗಳ ಪ್ರಯೋಗಗಳನ್ನು ಮಾಡುತ್ತಿದೆ ಎಂಬ ಇನ್ನೊಂದು ವಾರ್ತೆಯೂ ಇದೆ. ಇದು ಕೂಡ ಒಂದು ಮಾನಸಿಕ ಯುದ್ಧವಾಗಿದ್ದು ಅದರ ಮೂಲಕ ಚೀನಾ ಭಾರತಕ್ಕೆ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಇದರ ಬಗ್ಗೆಯೂ ಚಿಂತಿಸುವ ಅವಶ್ಯಕತೆಯಿಲ್ಲ; ಏಕೆಂದರೆ ಪಾರಂಪರಿಕ ಯುದ್ಧಕ್ಕಾಗಿ ಭಾರತೀಯ ಸೈನಿಕರು ಸಿದ್ಧರಾಗಿದ್ದಾರೆ.
ಇ. ಚೀನಾ ಶಿನ್‌ಝಿಯಾಂಗ್‌ನಲ್ಲಿ `ರಾಕೇಟ್ ಮೈನ್’ನ ಸಾದರೀಕರಣ ಮಾಡಿರುವ ಇನ್ನೂ ಒಂದು ವಾರ್ತೆ ಬಂದಿದೆ. ಆದರೆ ಅದರಿಂದಲೂ ಭಾರತದ ಮೇಲೆ ಯಾವುದೇ ಪರಿಣಾಮ ವಾಗುವುದಿಲ್ಲ. ತದ್ವಿರುದ್ಧ ಅದರಿಂದ ಶಿನ್‌ಝಿಯಾಂಗ್‌ನ ಜನರ ಮೇಲೆಯೇ ಪರಿಣಾಮವಾಗಲಿದೆ. ಆ ಪ್ರಾಂತದಲ್ಲಿರುವ ೨೦ ಲಕ್ಷ ಕ್ಕಿಂತಲೂ ಹೆಚ್ಚು ಮುಸಲ್ಮಾನರನ್ನು ಚೀನಾ ಸೆರೆಮನೆಯಲ್ಲಿಟ್ಟಿದೆ. ಅವರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವಿಲ್ಲ.
ಈ. ಅದರ ಮುಂದಿನ ವಾರ್ತೆ ಹೇಗಿದೆಯೆಂದರೆ, ಲಡಾಕ್‌ನಲ್ಲಿನ ಪೇಂಗಾಗ್ ತ್ಸೋ ಸರೋವರದ ಪಕ್ಕದಲ್ಲಿ ಚೀನಾದ ಸೈನಿಕರು ಅಭ್ಯಾಸ (ಡ್ರಿಲ್) ಮಾಡುತ್ತಿದ್ದರು. ಸರೋವರದ ಶೇ. ೩೩ ರಷ್ಟು ಭಾಗ ಭಾರತದ ಸರಹದ್ದಿನಲ್ಲಿದೆ. ಅದರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಅವರ ಈ ಅಭ್ಯಾಸ ನಡೆಯುತ್ತಿತ್ತು. ಇದರ ಬಗ್ಗೆಯೂ ಚಿಂತೆ ಮಾಡುವ ಆವಶ್ಯಕತೆಯಿಲ್ಲ; ಏಕೆಂದರೆ ಇಂತಹ ಅನೇಕ ಅಭ್ಯಾಸಗಳನ್ನು ಭಾರತ ಈ ಹಿಂದೆಯೂ ನೋಡಿದೆ. ಇದನ್ನು ಚೀನಾವು ಕೇವಲ ತೋರಿಕೆಗಾಗಿ ಮಾಡುತ್ತದೆ. ಅವರಲ್ಲಿ ಯುದ್ಧ ಮಾಡುವ ಕ್ಷಮತೆಯೇ ಇಲ್ಲ.
೨. ಚೀನಾದ ಆಕ್ರಮಕ ಕಾರ್ಯಾಚರಣೆಗಳಿಗೆ ಪ್ರತ್ಯುತ್ತರವನ್ನು ನೀಡಲು ಭಾರತೀಯ ಸೈನಿಕರುಚೀನಾದ ವಿರುದ್ಧ ಅಧಿಕ ಆಕ್ರಮಕರಾಗುವುದು
ಈ ಭಾಗದಲ್ಲಿ ಶೀಘ್ರದಲ್ಲಿಯೇ ಭಾರತ ಮತ್ತು ಅಮೇರಿಕಾ ಜಂಟಿ ಸಮರಾಭ್ಯಾಸ ಮಾಡಲಿದೆ, ಇದೂ ನಮಗೆ ತಿಳಿದಿರಬೇಕು. ಅದರ ಮುಂದಿನ ವಾರ್ತೆ ಹೀಗಿದೆ, ಭಾರತವೂ ವಿವಿಧ ಅತ್ಯಾಧುನಿಕ ಶಸ್ತಾçಸ್ತçಗಳನ್ನು ಅಲ್ಲಿ ಹೇಗೆ ಉಪಯೋಗಿಸಬೇಕು ? ಎಂಬುದರ ಅಭ್ಯಾಸವನ್ನು ಮಾಡುತ್ತಿದೆ. ಭಾರತದ ಮಥುರಾದಲ್ಲಿರುವ `೧-ಕಾರ್ಪ್ಸ್’ (` ಸ್ಟ್ರೆಕ್ ಕಾರ್ಪ್ಸ್’) ಸೈನ್ಯದ ಆಧುನಿಕ ಶಸ್ತ್ರಸ್ತ್ರಗಳಿಂದ ಸಿದ್ಧವಿರುವ ತುಕಡಿಯು ಮೊದಲು ಪಾಕಿಸ್ತಾನದ ವಿರುದ್ಧದಲ್ಲಿ ಇತ್ತು. ಈಗ ಅದನ್ನು ಚೀನಾದ ವಿರುದ್ಧ ನಿಲ್ಲಿಸಲಾಗಿದೆ, ಅಂದರೆ ಈಗ ಭಾರತದ ಸೈನ್ಯ ಚೀನಾದ ವಿರುದ್ಧ ಹೆಚ್ಚು ಆಕ್ರಮಕವಾಗಿದೆ. ಭಾರತದಲ್ಲಿ ಇಂತಹ ಕೆಲವು `ಸ್ಟ್ರೆಕ್ ಕಾರ್ಪ್ಸ್’, ಅಂದರೆ ಆಕ್ರಮಕ ಕಾರ್ಪ್ಸ್ಗಳಿವೆ. ಯುದ್ಧವಾದರೆ ಅವು ಪಾಕಿಸ್ತಾನದ ಒಳಗೆ ನುಗ್ಗಿ ಅವರೊಂದಿಗೆ ನೇರವಾಗಿ ಯುದ್ಧವನ್ನು ಮಾಡಬಹುದಾಗಿತ್ತು. ಆ `೩ ಸ್ಟ್ರೆಕ್ ಕಾರ್ಪ್ಸ್’ಗಳಲ್ಲಿನ ಒಂದು ` ಸ್ಟ್ರೆಕ್ -೧ ಕಾರ್ಪ್ಸ್ವನ್ನು ಚೀನಾದ ವಿರುದ್ಧ ನಿಲ್ಲಿಸಲಾಗಿದೆ. ಅದನ್ನು ಲಡಾಖ್‌ನಲ್ಲಿ ಆಕ್ರಮಕ ಕಾರ್ಯಾಚರಣೆಗಾಗಿ ಉಪಯೋಗಿಸಲಾಗುವುದು. ಇನ್ನೊಂದು `ಸ್ಟ್ರೆಕ್ ಕಾರ್ಪ್ಸ್’ ಅರುಣಾಚಲ ಪ್ರದೇಶದಲ್ಲಿ ಚೀನಾದ ವಿರುದ್ಧ ಉಪಯೋಗಿಸಲಾಗುವುದು. ಇದರ ಅರ್ಥ ಭಾರತ ಆಕ್ರಮಕ ಸೈನ್ಯವನ್ನು ಸಜ್ಜುಗೊಳಿಸಿದೆ.
೩. ಟಿಬೇಟ್ ಜನರಿಗೆ ನಮ್ಮ ಬೆಂಬಲವಿದೆ ಎಂದು ತೋರಿಸಲು ಭಾರತ ಅವರ ಧರ್ಮಗುರು ದಲಾಯಿ ಲಾಮಾ ಇವರನ್ನು ಲಡಾಖ್‌ಗೆ ಕರೆತರುವುದು
ಇಷ್ಟು ಮಾತ್ರವಲ್ಲ, ಟಿಬೇಟ್‌ನ ಧರ್ಮಗುರುಗಳಾದ ದಲಾಯಿ ಲಾಮಾ ಇವರು ಲಡಾಖ್‌ಗೆ ಬಂದಿದ್ದಾರೆ. ಅವರು ಒಂದು ತಿಂಗಳು ಅಲ್ಲಿಯೆ ಇರುವವರಿದ್ದಾರೆ. ಅವರು ಯೋಗಾಯೋಗದಿಂದ ಅಲ್ಲಿಗೆ ಬಂದಿಲ್ಲ, ಅವರನ್ನು ಕರೆದುಕೊಂಡು ಬರಲಾಗಿದೆ. `ನಿಮಗೆ ನಾವು ಕೂಡ ತೊಂದರೆಗಳನ್ನು ಕೊಡಬಲ್ಲೆವು’, ಎಂಬುದನ್ನು ಚೀನಾಗೆ ತೋರಿಸಲು ಭಾರತ ಹೀಗೆ ಆಟವಾಡಿದೆ. ಇದರಿಂದ `ಟಿಬೇಟ್‌ನ ಜನರಿಗೆ ಯಾವ ಆಧ್ಯಾತ್ಮಿಕ ಸ್ವಾತಂತ್ರ್ಯ ಬೇಕಾಗಿದೆಯೋ, ಅದಕ್ಕೆ ನಮ್ಮ ಪೂರ್ಣ ಬೆಂಬಲವಿದೆ’, ಎನ್ನುವ ದೊಡ್ಡ ಸಂದೇಶವನ್ನು ಭಾರತ ಚೀನಾಗೆ ನೀಡಿದೆ.
ಭಾರತ ಮುಂದೆ ಇದಕ್ಕಿಂತಲೂ ದೊಡ್ಡ ಸಂದೇಶವನ್ನು ನೀಡುವ ಸಿದ್ಧತೆಯಲ್ಲಿದೆ. `ಜೀ ೨೦’ ದೇಶಗಳ ಒಂದು ಪರಿಷತ್ತು ಭಾರತದಲ್ಲಿ (ಜಗತ್ತಿನ ಎಲ್ಲಕ್ಕಿಂತ ದೊಡ್ಡ ದೇಶ) ನಡೆಯಲಿಕ್ಕಿದೆ. ಭಾರತ ಈ ಪರಿಷತ್ತನ್ನು ಲಡಾಖ್‌ನಲ್ಲಿ ನಡೆಸಲು ನಿರ್ಧರಿಸಿದೆ. ವಿಶೇಷವೇನೆಂದರೆ ಇದರಲ್ಲಿ ಅಮೇರಿಕಾ ಸಹಿತ ಚೀನಾ ಕೂಡ ಸೇರಿದೆ. ಇದರಿಂದ ಭಾರತ ಚೀನಾಗೆ ಒಂದು ಸಂದೇಶವನ್ನು ನೀಡಲು ಇಚ್ಛಿಸುತ್ತದೆ, ಅದೇನೆಂದರೆ, ಭಾರತಕ್ಕೂ ಅಲ್ಲಿ ಆಕ್ರಮಕ ಕಾರ್ಯಾಚರಣೆಗಳನ್ನು ಮಾಡಲಿಕ್ಕಿದೆ ಹಾಗೂ ಭಾರತೀಯ ಸೈನ್ಯ ಚೀನಾದ ವಿರುದ್ಧ ರಕ್ಷಣೆಯನ್ನು ಮಾಡಿಕೊಳ್ಳುವಷ್ಟು ಸಿದ್ಧತೆ ಮಾಡಿದೆ. ಚೀನಾದ ಪ್ರತಿಯೊಂದು ಕಾರ್ಯಾಚರಣೆಗೂ ಭಾರತ ಪ್ರತ್ಯುತ್ತರ ನೀಡುತ್ತಿದೆ. ಆದ್ದರಿಂದ ನಾವು ಚೀನಾದ ಯಾವುದೇ ದಾದಾಗಿರಿಯನ್ನು ಸಹಿಸಿಕೊಳ್ಳುವುದಿಲ್ಲ. ಚೀನಾದ ಈ ಮಾನಸಿಕ ಯುದ್ಧವು ಬಹಳಷ್ಟು ದಿನ ನಡೆಯಲಿಕ್ಕಿಲ್ಲ. ಆದ್ದರಿಂದ ಭಾರತವೂ ಸತತ ಸಿದ್ಧವಾಗಿರಬೇಕಾಗುತ್ತದೆ.’
– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.