ಡಾ. ಎಸ್. ಜೈಶಂಕರ್ ಇವರ ಪತ್ರಕರ್ತರ ಸಭೆಯು ಪ್ರಸಾರವಾದ ನಂತರ ಕೆನಡಾದಿಂದ ಆಸ್ಟ್ರೇಲಿಯಾದ ಯೂಟ್ಯೂಬ್ ಚಾನೆಲ್ ನಿಷೇಧ !

ಕೆನಡಾದ ಭಾರತದ್ವೇಷ ಮುಂದುವರೆದಿದೆ !

ಓಟಾವಾ (ಕೆನಡಾ) – ‘ಆಸ್ಟ್ರೇಲಿಯಾ ಟುಡೇ’ ಈ ಜಾಲತಾಣದಲ್ಲಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನಿ ವೊಂಗ ಇವರು ಕ್ಯಾನಬೇರಾ (ಆಸ್ಟ್ರೇಲಿಯಾ) ಇಲ್ಲಿ ಜಂಟಿಯಾಗಿ ಪತ್ರಕರ್ತರ ಸಭೆಯನ್ನು ಪ್ರಸಾರ ಮಾಡಿದ್ದರು. ಪತ್ರಕರ್ತರ ಸಭೆಯ ಪ್ರಸಾರವಾದ ನಂತರ ಕೆಲವು ಗಂಟೆಯಲ್ಲಿಯೇ ಕೆನಡಾದ ಸರಕಾರವು ‘ಆಸ್ಟ್ರೇಲಿಯಾ ಟುಡೇ’ ದ ಯೂಟ್ಯೂಬ್ ಚಾನಲ್ ನಿಷೇಧಿಸಿತು. ಈ ಪ್ರಕರಣದಲ್ಲಿ ಭಾರತವು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಈ ಪತ್ರಕರ್ತರ ಸಭೆಯಲ್ಲಿ ಜೈ ಶಂಕರ್ ಇವರು ಭಾರತ ಮತ್ತು ಕೆನಡಾದ ರಾಜಕೀಯ ಸಂಬಂಧದ ಕುರಿತು ಮಾತನಾಡಿದ್ದರು.

ಕೆನಡಾದ ಅಭಿವ್ಯಕ್ತಿ ಸ್ವಾತಂತ್ರ್ಯ ಕಪಟವಾಗಿದೆ ! – ಭಾರತದಿಂದ ಟೀಕೆ

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಇವರು ದೆಹಲಿಯಲ್ಲಿನ ಪತ್ರಕರ್ತರ ಸಭೆಯಲ್ಲಿ, ‘ಆಸ್ಟ್ರೇಲಿಯಾ ಟುಡೇ’ ದ ಯೂಟ್ಯೂಬ್ ಚಾನೆಲನ್ನು ನಿಷೇಧಿಸಲಾಗಿದ್ದು ಈಗ ಕೆನಡಾದಲ್ಲಿನ ಪ್ರೇಕ್ಷಕರಿಗೆ ಅದು ಲಭ್ಯವಿಲ್ಲ, ಇದು ವಿಚಿತ್ರವಾಗಿದೆ. ಈ ಕೃತಿ ಕೆನಡಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಡೋಂಗಿತನದ ಕುರಿತು ಮತ್ತೊಮ್ಮೆ ಬೆಳಕು ಚೆಲ್ಲಿದೆ ಎಂದು ಹೇಳಿದರು.
ರಣಧೀರ ಜೈಸ್ವಾಲ್ ಇವರು ಮಾತು ಮುಂದುವರೆಸಿ, ವಿದೇಶಾಂಗ ಸಚಿವ ಜೈಶಂಕರ್ ಇವರು ಸಿಡ್ನಿಯಲ್ಲಿ ಅವರ ಪ್ರಸಾರ ಮಾಧ್ಯಮಗಳ ಕಾರ್ಯಕ್ರಮದಲ್ಲಿ ೩ ವಿಷಯಗಳು ಪ್ರಸ್ತಾಪಿಸಿದರು. ಮೊದಲನೆಯದು ಕೆನಡಾದಿಂದ ಮಾಡಲಾದ ಆರೋಪ ಮತ್ತು ಯಾವುದೇ ವಿಶಿಷ್ಟ ಸಾಕ್ಷಿ ನೀಡದೆ ಇರುವುದು ಒಂದು ನಮೂನೆ ಸಿದ್ಧಪಡಿಸಿತು. ಎರಡನೆಯ ವಿಷಯ ಎಂದರೆ ಅದು ಕೆನಡಾದಲ್ಲಿನ ಭಾರತೀಯ ಮುತ್ಸದ್ದಿಗಳ ಮೇಲೆ ಇರಿಸಿರುವ ಕಣ್ಣಗಾವಲು, ಅದು ಸ್ವೀಕರಿಸಲಾಗದು ಎಂದು ಅವರು ಹೇಳಿದರು. ವಿದೇಶಾಂಗ ಸಚಿವರು ಹೇಳಿರುವ ಮೂರನೆಯ ವಿಷಯ ಎಂದರೆ ಭಾರತ ವಿರೋಧಿ ಘಟಕಗಳಿಗೆ ಕೆನಡಾದಲ್ಲಿ ರಾಜಕೀಯ ಸ್ಥಾನ ನೀಡಲಾಗಿದೆ. ಇದರಿಂದ ಕೆನಡಾ ‘ಆಸ್ಟ್ರೇಲಿಯಾ ಟುಡೇ’ ಚಾನಲನ್ನು ಏಕೆ ನಿಷೇಧಿಸಿದೆ ? ಇದು ಗಮನಕ್ಕೆ ಬರುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಈಗ ಕೆನಡಾದ ಜೊತೆಗಿನ ಎಲ್ಲಾ ರೀತಿಯ ಸಂಬಂಧ ತೋರೆಯುವುದು, ಇದೇ ಅದಕ್ಕೆ ಯೋಗ್ಯ ಪ್ರತ್ಯುತ್ತರ ನೀಡುವ ಏಕೈಕ ಉಪಾಯವಾಗಿದೆ. ಭಾರತವು ಪಾಕಿಸ್ತಾನದ ಜೊತೆಗೆ ಹೇಗೆ ವರ್ತಿಸುತ್ತಿದೆ, ಹಾಗೆಯೇ ಈಗ ಕೆನಡಾದ ಜೊತೆಗೆ ವರ್ತಿಸುವುದು ಆವಶ್ಯಕವಾಗಿದೆ !