‘ಝುಂಬಾ ಡಾನ್ಸ್’ ವ್ಯಾಯಾಮದಿಂದ ಝುಂಬಾ-ಪ್ರಶಿಕ್ಷಕ ಮತ್ತು ಅದನ್ನು ಮಾಡುವ ವ್ಯಕ್ತಿಗಳ ಮೇಲಾದ ಪರಿಣಾಮ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ

‘ಇತ್ತೀಚೆಗೆ ಜಗತ್ತಿನ ಅನೇಕ ದೇಶಗಳಲ್ಲಿ ‘ಝುಂಬಾ ಡಾನ್ಸ್ ವರ್ಕಔಟ್’ (ವ್ಯಾಯಾಮ) ಬಹಳ ಜನಪ್ರಿಯವಾಗುತ್ತಿದೆ. ಸದ್ಯ ಜಗತ್ತಿದಾದ್ಯಂತ ೧೮೦ ದೇಶಗಳಲ್ಲಿ ‘ಝುಂಬಾ ಡಾನ್ಸ್’ನ ಕ್ಲಾಸಸ್ (ಪ್ರಶಿಕ್ಷಣವರ್ಗ)ಗಳನ್ನು ತೆಗೆದುಕೊಳ್ಳಲಾಗುತ್ತದೆ. ‘ಝುಂಬಾ ಡಾನ್ಸ್’ನಲ್ಲಿ ‘ಏರೊಬಿಕ್ಸ್’ಗೆ (Aerobics) (ಶರೀರದ ಪ್ರಾಣವಾಯುವಿನ ಪ್ರಮಾಣವನ್ನು ಹೆಚ್ಚಿಸಲು ಮಾಡಲಾಗುವ ವ್ಯಾಯಾಮದ ಪ್ರಕಾರ) ‘ವೆಸ್ಟರ್ನ ಮ್ಯೂಜಿಕ್’ (Western Music – ಪಾಶ್ಚಾತ್ಯ ಸಂಗೀತ) ಮತ್ತು ‘ವೆಸ್ಟರ್ನ ಡಾನ್ಸ್’(Western Dance-ಪಾಶ್ಚಾತ್ಯ ನೃತ್ಯ) ಇವುಗಳನ್ನು ಜೋಡಿಸಲಾಗಿದೆ. ಈ ವ್ಯಾಯಾಮದ ಪ್ರಕಾರಗಳು ‘ಕೊಲಂಬಿಯಾ’ ದೇಶದಿಂದ ಬಂದಿವೆ. ‘ಝುಂಬಾ ಡಾನ್ಸ್’ ಮಾಡುವುದರಿಂದ ಸಂಪೂರ್ಣ ಶರೀರದ ವ್ಯಾಯಾಮವಾಗುತ್ತದೆ, ಹಾಗೆಯೇ ಈ ವ್ಯಾಯಾಮದ ಪ್ರಕಾರಗಳನ್ನು ಮಾಡುವುದರಿಂದ ಶರೀರದಲ್ಲಿನ ಕೊಬ್ಬು ಕಡಿಮೆಯಾಗಿ ಶರೀರದ ಆಕಾರ ಸಮತಟ್ಟಾಗಿ ಸುಂದರ ಕಾಣಿಸುತ್ತದೆ, ಮಾನಸಿಕ ದೌರ್ಬಲ್ಯ ಕಡಿಮೆಯಾಗುವುದು, ಆತ್ಮವಿಶ್ವಾಸ ಹೆಚ್ಚಾಗುವುದು ಮುಂತಾದ ಲಾಭಗಳು ಆಗುತ್ತವೆ’, ಎಂದು ‘ಝುಂಬಾ ಡಾನ್ಸ್’ನ ತಜ್ಞರು ಹೇಳುತ್ತಾರೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

‘ಝುಂಬಾ ಡಾನ್ಸ್’ ವ್ಯಾಯಾಮದಿಂದ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ನವೆಂಬರ್ ೨೦೧೯ ರಲ್ಲಿ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಎಂಬ ವೈಜ್ಞಾನಿಕ ಉಪಕರಣವನ್ನು ಬಳಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಟಿಪ್ಪಣಿ –  ಲೇಖನದಲ್ಲಿ ಮುಂದೆ ‘ಝುಂಬಾ ಡಾನ್ಸ್’ ವ್ಯಾಯಾಮಕ್ಕೆ ‘ಝುಂಬಾ ವ್ಯಾಯಾಮ’ ಎಂದು ಹೇಳಲಾಗಿದೆ

ಝುಂಬಾ ಡಾನ್ಸ್

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ಝುಂಬಾ-ಪ್ರಶಿಕ್ಷಕನು ಆಶ್ರಮದಲ್ಲಿ ಆಧ್ಯಾತ್ಮಿಕ ತೊಂದರೆಯಿರುವ ಮತ್ತು ಇಲ್ಲದಿರುವ ಸಾಧಕರಿಗೆ ಝುಂಬಾ ವ್ಯಾಯಾಮವನ್ನು ಕಲಿಸಿದನು. ಝುಂಬಾ ವ್ಯಾಯಾಮದ ಮೊದಲು ಮತ್ತು ನಂತರ ಎಲ್ಲರನ್ನು ‘ಯು.ಎ.ಎಸ್.’ ಉಪಕರಣದಿಂದ ಪರೀಕ್ಷಿಸಲಾಯಿತು. ಝುಂಬಾ ವ್ಯಾಯಾಮದ ನಂತರ ಝುಂಬಾ-ಪ್ರಶಿಕ್ಷಕ ಮತ್ತು ಆಧ್ಯಾತ್ಮಿಕ ತೊಂದರೆಯಿರುವ ಮತ್ತು ಇಲ್ಲದಿರುವ ಸಾಧಕರಿಗಾದ ಪರಿಣಾಮಗಳನ್ನು ಮುಂದೆ ಕೊಡಲಾಗಿದೆ.

೧ ಅ. ‘ಝುಂಬಾ’ ವ್ಯಾಯಾಮದಿಂದ ಝುಂಬಾ-ಪ್ರಶಿಕ್ಷಕ ಮತ್ತು ಆಧ್ಯಾತ್ಮಿಕ ತೊಂದರೆಯಿರುವ ಹಾಗೂ ಇಲ್ಲದಿರುವ ಸಾಧಕರ ಮೇಲಾದ ಪರಿಣಾಮ

ಮೇಲಿನ ಕೋಷ್ಟಕದಿಂದ ಗಮನಕ್ಕೆ ಬಂದ ಅಂಶಗಳು

೧. ಝುಂಬಾ ವ್ಯಾಯಾಮದ ನಂತರ ಝುಂಬಾ-ಪ್ರಶಿಕ್ಷಕನಲ್ಲಿನ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ನಕಾರಾತ್ಮಕ ಊರ್ಜೆಗಳು ಕಡಿಮೆಯಾದವು. (ಇದರ ಕಾರಣವನ್ನು ಅಂಶ ‘೩ ಈ ೧’ ರಲ್ಲಿ ಕೊಡಲಾಗಿದೆ.) ಝುಂಬಾ-ಪ್ರಶಿಕ್ಷಕನಲ್ಲಿ ಸಕಾರಾತ್ಮಕ ಊರ್ಜೆ ಕಂಡುಬರಲಿಲ್ಲ.

೨. ಝುಂಬಾ ವ್ಯಾಯಾಮದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಲ್ಲಿನ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ನಕಾರಾತ್ಮಕ ಊರ್ಜೆಗಳಲ್ಲಿ ಹೆಚ್ಚಳವಾಯಿತು. ಅವರಲ್ಲಿಯೂ ಸಕಾರಾತ್ಮಕ ಊರ್ಜೆ ಕಂಡುಬರಲಿಲ್ಲ.

೩. ಝುಂಬಾ ವ್ಯಾಯಾಮದ ನಂತರ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕನಲ್ಲಿನ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು, ಅವನಲ್ಲಿ ‘ಅಲ್ಟ್ರಾವೈಲೆಟ್’ ನಕಾರಾತ್ಮಕ ಊರ್ಜೆ ಉತ್ಪನ್ನವಾಗಿ ಅವನಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು.

ಸೌ. ಮಧುರಾ ಕರ್ವೆ

೨. ನಿಷ್ಕರ್ಷ

‘ಝುಂಬಾ’ ವ್ಯಾಯಾಮದಿಂದ ಆಧ್ಯಾತ್ಮಿಕ ತೊಂದರೆಯಿರುವ ಮತ್ತು ಇಲ್ಲದಿರುವ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮವಾಯಿತು.

೩. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ‘ಝುಂಬಾ’ ವ್ಯಾಯಾಮದಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸುವುದು : ವ್ಯಾಯಾಮದಿಂದ ಶರೀರದಲ್ಲಿ ಸಂಗ್ರಹವಾಗಿರುವ ತೊಂದರೆದಾಯಕ ಊರ್ಜೆ ಕಡಿಮೆ ಅಥವಾ ನಾಶವಾಗಿ ಸಕಾರಾತ್ಮಕ ಊರ್ಜೆ ಉತ್ಪನ್ನವಾಗುವುದು ಅಥವಾ ಅದರಲ್ಲಿ ಹೆಚ್ಚಳವಾಗುವುದು ಅಪೇಕ್ಷಿತವಾಗಿದೆ; ಸೂರ್ಯ ನಮಸ್ಕಾರ, ಯೋಗಾಸನ, ಪ್ರಾಣಾಯಾಮ ಇತ್ಯಾದಿಗಳಿಂದ ಈ ಲಾಭವಾಗುತ್ತದೆ. ಝುಂಬಾ ವ್ಯಾಯಾಮದಲ್ಲಿ ಶರೀರದ ಅಸಾತ್ತ್ವಿಕ ಚಲನವಲನ, ಹಾಗೆಯೇ ವ್ಯಾಯಾಮಕ್ಕೆ ಅಸಾತ್ತ್ವಿಕ ಪಾಶ್ಚಾತ್ಯ ಸಂಗೀತ ಮತ್ತು ನೃತ್ಯವನ್ನು ಜೋಡಿಸಿರುವುದರಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸಿದವು. ಈ ತೊಂದರೆದಾಯಕ ಸ್ಪಂದನಗಳಿಂದ ಆಧ್ಯಾತ್ಮಿಕ ತೊಂದರೆಯಿರುವ ಮತ್ತು ಇಲ್ಲದಿರುವ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮವಾಯಿತು.

೩ ಆ. ಝುಂಬಾ ವ್ಯಾಯಾಮದಿಂದ ಆಧ್ಯಾತ್ಮಿಕ ತೊಂದರೆಯಿರುವ ಮತ್ತು ಇಲ್ಲದಿರುವ ಸಾಧಕರ ಮೇಲಾದ ನಕಾರಾತ್ಮಕ ಪರಿಣಾಮ

೩ ಆ ೧. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರು : ಪರೀಕ್ಷಣೆಯಲ್ಲಿನ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿದೆ. ವ್ಯಾಯಾಮ ಮಾಡುವ ಮೊದಲು ಆ ಸಾಧಕರಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ನಕಾರಾತ್ಮಕ ಊರ್ಜೆಗಳಿದ್ದವು. ಝುಂಬಾ ವ್ಯಾಯಾಮದ ನಂತರ ಸಾಧಕರಲ್ಲಿನ ನಕಾರಾತ್ಮಕ ಊರ್ಜೆಯು ಹೆಚ್ಚಳವಾಗಿರುವುದು ಕಂಡುಬಂದಿತು. ಹಾಗಾಗಿ, ಝುಂಬಾ ವ್ಯಾಯಾಮದಿಂದ ಪ್ರಕ್ಷೇಪಿಸಿದ ತೊಂದರೆದಾಯಕ ಸ್ಪಂದನಗಳಿಂದ ಸಾಧಕರ ದೇಹದಲ್ಲಿನ ತೊಂದರೆದಾಯಕ ಶಕ್ತಿಗಳ ಸ್ಥಾನಗಳು ಜಾಗೃತವಾಗಿ ಅವು ಕಾರ್ಯನಿರತವಾದವು ಮತ್ತು ಆ ಸ್ಥಾನಗಳು ಈ ವ್ಯಾಯಾಮದಿಂದ ಪ್ರಕ್ಷೇಪಿಸಿದ ತೊಂದರೆದಾಯಕ ಸ್ಪಂದನಗಳನ್ನು ಗ್ರಹಿಸಿದವು; ಇದರಿಂದ ಸಾಧಕರ ಸುತ್ತಲಿನ ಕಪ್ಪು (ತೊಂದರೆದಾಯಕ ಸ್ಪಂದನಗಳ) ಆವರಣದಲ್ಲಿ ಹೆಚ್ಚಳವಾಯಿತು. ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ವ್ಯಕ್ತಿಯ ಸುತ್ತಲಿನ ಕಪ್ಪು (ತೊಂದರೆದಾಯಕ ಸ್ಪಂದನಗಳ) ಆವರಣ, ಹಾಗೂ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ವ್ಯಕ್ತಿಯ ದೇಹದಲ್ಲಿನ ಕೆಟ್ಟ ಶಕ್ತಿಗಳು ಸಂಗ್ರಹಿಸಿದ ತೊಂದರೆದಾಯಕ ಸ್ಪಂದನಗಳನ್ನು ತೋರಿಸುತ್ತದೆ.)

೩ ಆ ೨. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ : ವ್ಯಾಯಾಮದ ಮೊದಲು ಸಾಧಕನಲ್ಲಿ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆ ಮತ್ತು ಸಕಾರಾತ್ಮಕ ಊರ್ಜೆಯೂ ಇತ್ತು. ಝುಂಬಾ ವ್ಯಾಯಾಮದಿಂದ ಪ್ರಕ್ಷೇಪಿತವಾದ ತೊಂದರೆದಾಯಕ ಸ್ಪಂದನಗಳಿಂದ ಸಾಧಕನ ದೇಹದಲ್ಲಿ ತೊಂದರೆದಾಯಕ ಶಕ್ತಿಯ (‘ಅಲ್ಟ್ರಾವೈಲೆಟ್’) ಸ್ಪಂದನಗಳು ಉತ್ಪನ್ನವಾಗಿ ಅವನ ಸುತ್ತಲಿನ ಕಪ್ಪು ಆವರಣದಲ್ಲಿ (‘ಇನ್ಫ್ರಾರೆಡ್’ನಲ್ಲಿ) ಹೆಚ್ಚಳವಾಗಿ ಅವನಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು. ಸೌ. ಮಧುರಾ ಕರ್ವೆ

ಸೂಕ್ಷ್ಮದಿಂದ ಲಭಿಸಿದ ಜ್ಞಾನ

ಕು. ಮಧುರಾ ಭೋಸಲೆ

೩ ಇ. ಝುಂಬಾ ವ್ಯಾಯಾಮದ ನಂತರ ಪರೀಕ್ಷಣೆಯಲ್ಲಿದ್ದ ಸಾಧಕರಿಗಾದ ತೊಂದರೆಗಳು : ಝುಂಬಾ ವ್ಯಾಯಾಮದ ನಂತರ ಪರೀಕ್ಷಣೆಯಲ್ಲಿನ ಮೂವರೂ ಸಾಧಕರಿಗೆ ತಮ್ಮ ಸುತ್ತಲಿನ ಕಪ್ಪು ಆವರಣದಲ್ಲಿ ಹೆಚ್ಚಳವಾಗಿ ರುವುದು ಅರಿವಾಯಿತು. ಅವರು, ‘ಝುಂಬಾ ವ್ಯಾಯಾಮದ ನಂತರ ತಲೆ ಭಾರವಾಗುವುದು, ದಣಿವಾಗುವುದು, ಮನಸ್ಸು ಅಸ್ವಸ್ಥ ವಾಗುವುದು ಇತ್ಯಾದಿ ತೊಂದರೆಗಳಾದವು’ ಎಂದು ಹೇಳಿದರು.

೩ ಈ. ಝುಂಬಾ ವ್ಯಾಯಾಮದ ನಂತರ ಝುಂಬಾ-ಪ್ರಶಿಕ್ಷಕನಲ್ಲಿ ನಕಾರಾತ್ಮಕ ಊರ್ಜೆ ಹೆಚ್ಚಳವಾಗದೇ, ಕಡಿಮೆ ಯಾಗುವುದು ಮತ್ತು ಇತರ ಸಾಧಕರಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು ಇವುಗಳ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ : ‘ಝುಂಬಾ ವ್ಯಾಯಾಮ’ವು ರಜ-ತಮ ಪ್ರಧಾನ ವ್ಯಾಯಾಮವಾಗಿದೆ. ಇದಕ್ಕೆÀ ಎರಡು ಕಾರಣಗಳಿವೆ. ಝುಂಬಾ ವ್ಯಾಯಾಮಕ್ಕಾಗಿ ಹಾಕುವÀ ಸಂಗೀತ ಅತ್ಯಂತ ರಜ-ತಮ ಪ್ರಧಾನವಾಗಿರುತ್ತದೆ. ಈ ಸಂಗೀತವನ್ನು ಕೇಳುವಾಗÀ ಅದರಿಂದ ತೊಂದರೆದಾಯಕ ಶಕ್ತಿಯ ಸ್ಪಂದನಗಳು ಪ್ರಕ್ಷೇಪಿತವಾಗಿ ವ್ಯಕ್ತಿಯ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲಿನ ತೊಂದರೆದಾಯಕ ಆವರಣವು ಹೆಚ್ಚಾಗುತ್ತದೆ, ಹಾಗೆಯೇ ಈ ವ್ಯಾಯಾಮವು ಅಸಾತ್ತ್ವಿಕವಾಗಿದೆ. ಇದರಿಂದ ಪಾಶ್ಚಾತ್ಯ ಸಂಗೀತಕ್ಕನುಸಾರ ಝುಂಬಾ ವ್ಯಾಯಾಮದಿಂದ ವ್ಯಕ್ತಿಯ ದೇಹದಲ್ಲಿ ಮತ್ತು ದೇಹದ ಸುತ್ತಲೂ ರಜ-ತಮ ಪ್ರಧಾನ ತೊಂದರೆದಾಯಕ ಆವರಣ ತಯಾರಾಗುತ್ತದೆ. ಝುಂಬಾ ಸಂಗೀತ ಮತ್ತು ವ್ಯಾಯಾಮದಲ್ಲಿ ಮಾಯಾವಿ ಸ್ಪಂದನಗಳಿರುವುದರಿAದ, ಅದÀನ್ನು ಕೇಳುವಾಗ ವ್ಯಕ್ತಿಗೆ ಮಾಯಾವಿ ಸುಖದ ಅನುಭೂತಿ ಬಂದು ಝುಂಬಾ ವ್ಯಾಯಾಮವನ್ನು ಮಾಡಲು ಉತ್ಸಾಹವೆನಿಸುತ್ತದೆ.

ಝುಂಬಾ ವ್ಯಾಯಾಮ ಮಾಡುವಾಗ ಝುಂಬಾ ಪ್ರಶಿಕ್ಷಕನಲ್ಲಿ ಕಾರ್ಯನಿರತವಾಗಿರುವ ತೊಂದರೆದಾಯಕ ಶಕ್ತಿ ಮತ್ತು ಆಶ್ರಮದಲ್ಲಿನ ಚೈತನ್ಯ ಶಕ್ತಿ ಇವುಗಳಲ್ಲಿ ಸೂಕ್ಷ್ಮದಲ್ಲಿ ಯುದ್ಧವಾಯಿತು. ಈ ಸೂಕ್ಷ್ಮ ಯುದ್ಧದಲ್ಲಿ ಪ್ರಶಿಕ್ಷಕನಲ್ಲಿ ಕಾರ್ಯನಿರತವಾಗಿರುವ ತೊಂದರೆದಾಯಕ ಶಕ್ತಿಯು ತುಂಬಾ ಪ್ರಮಾಣದಲ್ಲಿ ವ್ಯಯವಾಯಿತು. ಇದರಿಂದ ಅವನ (ಪ್ರಶಿಕ್ಷಕನಲ್ಲಿನ) ನಕಾರಾತ್ಮಕ ಊರ್ಜೆಯ ಪ್ರಮಾಣ ಕಡಿಮೆಯಾಯಿತು. ಇದರಿಂದ ಆಶ್ರಮದಲ್ಲಿನ ಚೈತನ್ಯ ಕಾರ್ಯನಿರತವಾಗಿರುವುದರಿಂದ ಅಲ್ಲಿ ರಜ-ತಮ ಪ್ರಧಾನ ಕೃತಿಗಳನ್ನು ಮಾಡಿದ ನಂತರ ಆ ಕೃತಿಯಲ್ಲಿನ ಆ ಗುಣಗಳ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ಸತ್ತ÷್ವಪ್ರಧಾನದ ಕೃತಿ ಮಾಡಿದರೆ ಉದಾ. ಭರತನಾಟ್ಯಮ್ ನೃತ್ಯವನ್ನು ಮಾಡಿದರೆ ಸಾತ್ತಿ÷್ವಕತೆಯು ತುಂಬಾ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಪ್ರಶಿಕ್ಷಕನು ಝುಂಬಾ ವ್ಯಾಯಾಮವನ್ನು ಆಶ್ರಮದ ಹೊರಗೆ ಅಂದರೆ ಇತರ ಸ್ಥಳಗಳಲ್ಲಿ ಮಾಡಿದ್ದರೆ, ಅವನಲ್ಲಿನ ನಕಾರಾತ್ಮಕ ಊರ್ಜೆ ತುಂಬಾ ಪ್ರಮಾಣದಲ್ಲಿ ಹೆಚ್ಚಾಗುತ್ತಿತ್ತು. ಝುಂಬಾ ಪ್ರಶಿಕ್ಷಕನು ಆಶ್ರಮದ ಹೊರಗಿನ ವ್ಯಕ್ತಿಯಾಗಿದ್ದರಿಂದ ಅವನು ಆಶ್ರಮಕ್ಕೆ ಬಂದಾಗ ಅವನ ಮೇಲೆ ಆಶ್ರಮದಲ್ಲಿನ ಚೈತನ್ಯದ ಪರಿಣಾಮವಾಯಿತು.

ಪರೀಕ್ಷಣೆಯಲ್ಲಿನ ಝುಂಬಾ ವ್ಯಾಯಾಮ ಮಾಡುವ ಸಾಧಕರು ಆಶ್ರಮದವರೇ ಆಗಿದ್ದರು. ಆದುದರಿಂದ ಅವರ ಮೇಲೆ ಆಶ್ರಮದಲ್ಲಿನ ಚೈತನ್ಯದಿಂದ ಪ್ರತ್ಯೇಕವಾದಂತಹ ಯಾವುದೇ ಪರಿಣಾಮವಾಗಲಿಲ್ಲ. ಅವರ ಮೇಲೆ ಝುಂಬಾ ವ್ಯಾಯಾಮದಿಂದ ಪ್ರಕ್ಷೇಪಿಸುವ ತೊಂದರೆದಾಯಕ ಶಕ್ತಿಯ ಪರಿಣಾಮವೇ ಆಯಿತು. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳು ಸಂಗೀತ ಮತ್ತು ವ್ಯಾಯಾಮದಿಂದ ಪ್ರಕ್ಷೇಪಿಸುವ ತೊಂದರೆದಾಯಕ ಶಕ್ತಿಯನ್ನು ಸಂಗ್ರಹಿಸಿದ್ದರಿAದ ಆ ಸಾಧಕರ ಸುತ್ತಲಿನ ತೊಂದರೆದಾಯಕ ಅಥವಾ ನಕಾರಾತ್ಮಕ ಶಕ್ತಿಯ ಪ್ರಮಾಣವು ಹೆಚ್ಚಾಯಿತು.’

– ಕು. ಮಧುರಾ ಭೊಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೩.೨೦೨೧)

೪. ಸಾರಾಂಶ : ಸಂಕ್ಷಿಪ್ತದಲ್ಲಿ, ‘ಝುಂಬಾ ವ್ಯಾಯಮದಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಈ ತೊಂದರೆದಾಯಕ ಸ್ಪಂದನಗಳಿಂದ ಝುಂಬಾ ವ್ಯಾಯಾಮ ಮಾಡುವ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ನಕಾರಾತ್ಮಕ ಪರಿಣಾಮವಾಗುತ್ತದೆ’, ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾಯಿತು.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೩.೩.೨೦೨೧)

ವಿ-ಅಂಚೆ : [email protected]

ಸೂರ್ಯನಮಸ್ಕಾರ, ಯೋಗಾಸನಗಳು ಮತ್ತು ಪ್ರಾಣಾಯಾಮದ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳಿರಿ !

‘ನಮ್ಮ ಪ್ರಾಚೀನ ಋಷಿಮುನಿಗಳು ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರಬೇಕು, ಹಾಗೆಯೇ ಅವನಿಗೆ ಆಧ್ಯಾತ್ಮಿಕ ಲಾಭವಾಗಬೇಕೆಂದು ಸೂರ್ಯನಮಸ್ಕಾರ, ಯೋಗಾಸನ, ಪ್ರಾಣಾಯಾಮ ಇವುಗಳಂತಹ ಉಪಯುಕ್ತ ಜ್ಞಾನವನ್ನು ಮನುಷ್ಯನಿಗೆ ಕೊಟ್ಟಿದ್ದಾರೆ. ಸೂರ್ಯನಮಸ್ಕಾರ, ಯೋಗಾಸನಗಳು ಮತ್ತು ಪ್ರಾಣಾಯಾಮವನ್ನು ಮಾಡುವುದರಿಂದ ವ್ಯಕ್ತಿಗಾಗುವ ಶಾರೀರಿಕ ಮತ್ತು ಮಾನಸಿಕ ಲಾಭಗಳು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಸೂರ್ಯನಮಸ್ಕಾರ, ಯೋಗಾಸನ ಮತ್ತು ಪ್ರಾಣಾಯಾಮದ ಕುರಿತು ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡಲಾಗುತ್ತಿದೆ. ಈ ಸಂಶೋಧನೆಯ ಅಂತರ್ಗತ ಮಾಡಿರುವ ವೈಜ್ಞಾನಿಕ ಪರೀಕ್ಷಣೆಗಳಿಂದ ‘ವ್ಯಕ್ತಿಯು ಸೂರ್ಯನಮಸ್ಕಾರ, ಯೋಗಾಸನ ಮತ್ತು ಪ್ರಾಣಾಯಾಮವನ್ನು ಮಾಡುವುದರಿಂದ ‘ಅವನಲ್ಲಿನ ನಕಾರಾತ್ಮಕ ಸ್ಪಂದನಗಳು ತುಂಬಾ ಕಡಿಮೆ ಅಥವಾ ಪೂರ್ಣ ಕಡಿಮೆಯಾಗಿ ಅವನಲ್ಲಿ ಸಕಾರಾತ್ಮಕ ಸ್ಪಂದನಗಳು ಉತ್ಪನ್ನವಾಗುವುದು ಅಥವಾ ಅದರಲ್ಲಿ ಹೆಚ್ಚಳವಾಗುವುದು’, ಹೀಗೆ ಆಧ್ಯಾತ್ಮಿಕ ಸ್ತರದಲ್ಲಿನ ಲಾಭಗಳಾಗು ತ್ತವೆ’, ಎಂಬುದು ಸ್ಪಷ್ಟವಾಗಿದೆ. ಈ ಅಮೂಲ್ಯ ಸಂಪತ್ತನ್ನು ಒದಗಿಸಿಕೊಟ್ಟಿರುವ ಋಷಿಮುನಿಗಳ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ !’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೩.೩.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವುಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.