‘ಪಿ.ಎಫ್.ಐ.’ ಮೇಲಿನ ನಿಷೇಧದ ವಿರುದ್ಧ ಟ್ವೀಟ್ ಮಾಡಲಾಗಿತ್ತು !

ಭಾರತದಲ್ಲಿ ಪಾಕಿಸ್ತಾನ ಸರಕಾರದ ಟ್ವಿಟರ್ ಖಾತೆಯ ಮೇಲೆ ನಿಷೇಧ !

ನವ ದೆಹಲಿ – ಭಾರತದಲ್ಲಿ ಪಾಕಿಸ್ತಾನ ಸರಕಾರದ ಟ್ವಿಟರ್ ಖಾತೆಯನ್ನು ಭಾರತ ಸರಕಾರ ನಿಷೇಧಿಸಿದೆ. ಭಾರತವು ಇತ್ತೀಚೆಗೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಅನ್ನು ೫ ವರ್ಷಗಳ ಕಾಲ ನಿಷೇಧಿಸಿದ ನಂತರ ಈ ಖಾತೆಯಿಂದ ಅದನ್ನು ಟೀಕಿಸುವಂತಹ ಟ್ವೀಟ್ ಅನ್ನು ಪ್ರಸಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಈ ನಿಷೇಧವನ್ನು ಹೇರಲಾಗಿದೆ ಎನ್ನಲಾಗುತ್ತಿದೆ.


ಕೆನಡಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ವನ್ನು ಬೆಂಬಲಿಸಿ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿತ್ತು. ಈ ಟ್ವೀಟ್‌ನಲ್ಲಿ, ‘ಭಾರತ ಸರಕಾರವು ‘ಪಿ.ಎಫ್.ಐ.’ ಅನ್ನು ಗುರಿಯಾಗಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಲ್ಲಂಘಿಸಿದೆ. ಸದ್ಯದ ಈ ನಿರಂಕುಶಾಧಿಕಾರದ ಅಡಿಯಲ್ಲಿ ಇದೇ ರೀತಿಯ ಕ್ರಮ ನಡೆಯುತ್ತಿತ್ತು.’ ಇದಾದ ಬಳಿಕ ಪಾಕ್ ನ ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಲಾಗಿತ್ತು.