‘ವಿಶೇಷ ಸಂವಾದ’ : ‘ಪಿ.ಎಫ್.ಐ. ಅನ್ನು ಏಕೆ ನಿಷೇಧಿಸಬೇಕು ?’
ನಾಗರಿಕರಿಂದ ಚುನಾಯಿತಗೊಂಡ ಸರಕಾರವು ಮಾಡಿದ ಕಾನೂನುಗಳನ್ನು ದೊಡ್ಡ ಪ್ರಮಾಣದಲ್ಲಿ ವಿರೋಧಿಸಿ ಹಿಂಸಾಚಾರ ಮಾಡಲಾಗುತ್ತಿದೆ. ೨೦೧೪ ರ ನಂತರ ಭಯೋತ್ಪಾದನೆಯ ಸ್ವರೂಪವೇ ಬದಲಾಗುತ್ತಿದೆ. ಸದ್ಯ ‘ಎಜಿಟೇಶನಲ್ ಟೆರರಿಸಮ್’ನ (ಆಂದೋಲನಾತ್ಮಕ ಭಯೋತ್ಪಾನೆ) ಮೂಲಕ ದೇಶಕ್ಕೆ ಅಪಾಯ ಸೃಷ್ಟಿಸುವ ಕೃತ್ಯವು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ನಡೆಸುತ್ತಿದೆ. ಭಯೋತ್ಪಾದನಾ ದಾಳಿಗಿಂತಲೂ ಗಲಭೆ, ಜನರನ್ನು ಉಗ್ರರನ್ನಾಗಿ ಮಾಡುವುದು ಇವುಗಳಿಂದ ಹೆಚ್ಚು ಹಾನಿಯಾಗುತ್ತದೆ ಎಂಬುದನ್ನು ಈ ಜನರು ಅರಿತಿದ್ದಾರೆ. ಆದ್ದರಿಂದ ಪಿ.ಎಫ್.ಐ.ನ ಸಮಗ್ರ ತನಿಖೆಯಾಗಿ ಅದರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ಸೇನಾದಳದ ಸೇವಾನಿವೃತ್ತ ಬ್ರಿಗೇಡಿಯರ್ ಹೇಮಂತ್ ಮಹಾಜನ್ ಪ್ರತಿಪಾದಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಪಿ.ಎಫ್.ಐ. ಅನ್ನು ಏಕೆ ನಿಷೇಧಿಸಬೇಕು ?’ ಎಂಬ ವಿಷಯದ ಕುರಿತು ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಬ್ರಿಗೇಡಿಯರ್ ಹೇಮಂತ ಮಹಾಜನ ತಮ್ಮ ಮಾತನ್ನು ಮುಂದುವರೆಸುತ್ತಾ, ಉಗ್ರವಾದಿ ಸಂಘಟನೆಗಳು ಅಥವಾ ಭಯೋತ್ಪಾದನಾ ಸಂಘಟನೆಗಳು ಕಾರ್ಯನಿರ್ವಹಿಸಲು ಹಣದ ಅಗತ್ಯವಿದೆ. ಪಿ.ಎಫ್.ಐ.ಗೆ ಇಸ್ಲಾಮಿಕ್ ರಾಷ್ಟ್ರಗಳಿಂದ ಫಂಡಿಂಗ್ ಸಿಗುತ್ತವೆ. ಈ ಫಂಡಿಂಗ್ ನಿಲ್ಲಬೇಕು. ಆಗ ಮಾತ್ರ ಈ ಭಯೋತ್ಪಾದನಾ ಚಟುವಟಿಕೆಗಳು ನಿಲ್ಲುತ್ತವೆ. ಯಾವ ಇಸ್ಲಾಮಿಕ್ ರಾಷ್ಟ್ರಗಳು ಮತ್ತು ದೇಶದ ಇತರ ಸಂಘಟನೆಗಳು ಪಿ.ಎಫ್.ಐ.ಗೆ ಹಣಕಾಸಿನ ನೆರವು ನೀಡುತ್ತವೆಯೋ ಅವುಗಳ ಮೇಲೆ ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಬೇಕು. ಎಲ್ಲಿಯ ವರೆಗೆ ಪಿ.ಎಫ್.ಐ.ಗೆ ಹಣಕಾಸು ಮಾರ್ಗಗಳು ಮುಚ್ಚುವುದಿಲ್ಲವೋ ಅಲ್ಲಿಯ ವರೆಗೆ ಭಯೋತ್ಪಾದನಾ ಚಟುವಟಿಕೆಗಳು ನಿಲ್ಲುವುದಿಲ್ಲ ಎಂದು ಹೇಳಿದರು.
ಜಿನ್ನಾನಂತೆಯೇ ‘ಪಿ.ಎಫ್.ಐ.’ ಭಾರತವನ್ನು ಒಡೆದು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತದೆ ! – ಪ್ರವೀಣ ದೀಕ್ಷಿತ್
ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಪ್ರವೀಣ ದೀಕ್ಷಿತ್ ಇವರು ಮಾತನಾಡುತ್ತಾ, ೧೯೪೭ ರಲ್ಲಿ ಮೊಹಮ್ಮದ್ ಜಿನ್ನಾ ಅಖಂಡ ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನಾಗಿ ಮಾಡಿದರು. ಅದೇ ಆಧಾರದಲ್ಲಿ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ‘ಪಿ.ಎಫ್.ಐ.’ ಷಡ್ಯಂತ್ರ ನಡೆಸುತ್ತಿದೆ. ಕೊಲ್ಲಿ ರಾಷ್ಟ್ರಗಳು ‘ಪಿ.ಎಫ್.ಐ.’ಗೆ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿಗಳನ್ನು ಕಳುಹಿಸುತ್ತವೆ, ಭಾರತದಲ್ಲಿ ಧರ್ಮದ್ವೇಷ ಮತ್ತು ಕೋಮುದ್ವೇಷವನ್ನು ಹರಡುವ ಮೂಲಕ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಆದ್ದರಿಂದ ಕೇವಲ ‘ಪಿ.ಎಫ್.ಐ.’ ಅನ್ನು ನಿಷೇಧಿಸುವುದರಿಂದ ಈ ಚಟುವಟಿಕೆಗಳು ನಿಲ್ಲುವುದಿಲ್ಲ; ಏಕೆಂದರೆ ಅದೊಂದು ವೈಚಾರಿಕ ಸಿದ್ಧಾಂತವಾಗಿದೆ. ಅವರು ಪುನಃ ಬೇರೊಂದು ಹೆಸರಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವರು. ಇದಕ್ಕಾಗಿ ಕೇಂದ್ರವು ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ ಜಾರಿಗೆ ತಂದಿದ್ದು, ಅದರ ಆಧಾರದಲ್ಲಿ ಸಂಘಟನೆಯ ಹೆಸರನ್ನು ಬದಲಾಯಿಸಿ ಚಟುವಟಿಕೆಗಳನ್ನು ನಡೆಸುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾಯಿದೆಯಿಂದ ತ್ವರಿತವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಭಯೋತ್ಪಾದಕರು ದೊಡ್ಡ ದೇಶದ್ರೋಹಿ ಕೃತ್ಯಗಳನ್ನು ನಡೆಸಲು ಧೈರ್ಯ ಮಾಡುವುದಿಲ್ಲ. ಭಯೋತ್ಪಾದಕರ ವಿರುದ್ಧ ನ್ಯಾಯಯುತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ, ಆದರೂ ‘ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿದೆ’, ಎಂದು ಭಯೋತ್ಪಾದಕರ ಬೆಂಬಲಿಗರು ಕೂಡಾಗುತ್ತಿರುವುದು ಕಂಡು ಬರುತ್ತಿದೆ. ಇಂತಹ ಸುಳ್ಳು ಅಪಪ್ರಚಾರಗಳ ವಿರುದ್ಧ ಜನಜಾಗೃತಿಯಾಗಬೇಕು, ಎಂದೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಪ್ರವೀಣ ದೀಕ್ಷಿತ್ ಹೇಳಿದರು.