ಕೇರಳದಲ್ಲಿ ಸದ್ಯ ಸಾಮ್ಯವಾದಿ (ಕಮ್ಯುನಿಸ್ಟ್) ಪಕ್ಷದ ಸರಕಾರವಿದೆ. ಕೇರಳವು ೧೯೫೬ ರಲ್ಲಿ ಭಾರತ ಸಂಘ ರಾಜ್ಯದ ಒಂದು ಸ್ವತಂತ್ರ ರಾಜ್ಯವೆಂದು ಅಸ್ತಿತ್ವಕ್ಕೆ ಬಂದಿತು ಮತ್ತು ೧೯೫೭ ರಲ್ಲಿ ಕೇರಳದಲ್ಲಿ ಮೊದಲ ಸರಕಾರ (ಪ್ರಜಾಪ್ರಭುತ್ವ) ಸಾಮ್ಯವಾದಿ (ಕಮ್ಯುನಿಸ್ಟ್) ಪಕ್ಷದ್ದಾಯಿತು. ಈ ರಾಜ್ಯ ನಿರ್ಮಾಣವಾಗಿ ೬೫ ವರ್ಷಗಳ ನಂತರ ‘ಕಮ್ಯುನಿಸ್ಟ್’ ಕೇರಳದ ಮಾರ್ಗಕ್ರಮಣ ಹೇಗೆ ನಡೆದಿದೆ ಎಂಬ ಪ್ರವಾಸಾನುಭವ….
೧. ಕೇರಳದ ಕಮ್ಯುನಿಸ್ಟರನ್ನು ಉತ್ತೇಜಿಸಿದವರು ಯಾರು ?
ಕೇರಳದಲ್ಲಿ ‘ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ’ದ ರಾಜ್ಯವಿದೆ. ಹೆಸರಿಗನುಸಾರ ಪಕ್ಷಕ್ಕೆ ‘ಕಾರ್ಲ್ ಮಾರ್ಕ್ಸ್’ ಇವರು (ಜರ್ಮನಿಯ ಆರ್ಥಶಾಸ್ತ್ರಜ್ಞರು, ತತ್ತ್ವಜ್ಞಾನಿ ಮತ್ತು ಸಮಾಜವಾದಿ ನೇತಾರ) ಪ್ರೇರಣೆಯಾಗಿದ್ದಾರೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ ಮತ್ತು ಚುನಾವಣೆಗಳ ಮೂಲಕ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರು ತ್ತವೆ. ಜಗತ್ತಿನಾದ್ಯಂತದ ಕಮ್ಯುನಿಸ್ಟರ ಇತಿಹಾಸವನ್ನು ನೋಡಿದರೆ ಅವರು ಚುನಾವಣೆಗಳನ್ನು ಎದುರಿಸುವುದಿಲ್ಲ. ರೈತರ ಮತ್ತು ಶ್ರಮಜೀವಿಗಳ ರಕ್ತರಂಜಿತ ಬಂಡಾಯದ ಮೂಲಕ ಅಧಿಕಾರದ ಮಾರ್ಗದಲ್ಲಿ ಸಾಗುತ್ತದೆ’, ಈ ಕಮ್ಯುನಿಸ್ಟ್ ತತ್ತ್ವಜ್ಞಾನದ ಮೇಲೆ ಅವರ ಶ್ರದ್ಧೆಯಿರುತ್ತದೆ. ಆದುದರಿಂದ ೧೯೫೭ ರ ವರೆಗಾದರೂ ಜಗತ್ತಿನ ಯಾವುದೇ ಕಮ್ಯುನಿಸ್ಟ್ ಸರಕಾರವು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರಲಿಲ್ಲ; ಆದರೆ ಕೇರಳದಲ್ಲಿ ಮಾತ್ರ ಆ ವರ್ಷ ಅಲ್ಲಿನ ಕಮ್ಯುನಿಸ್ಟ್ ಪಕ್ಷ ಮೊದಲ ಬಾರಿಗೆ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತು. ಕೇರಳದಲ್ಲಿನ ಈ ಪಕ್ಷದ ವೈಶಿಷ್ಟ್ಯವೇನೆಂದರೆ ಅವರ ಪ್ರಸಾರ ಸಾಧನ ಅಥವಾ ಬ್ಯಾನರ್ಸ್-ಪೋಸ್ಟರ್ಸುಗಳ ಮೇಲೆ ಸ್ಥಳೀಯ ಮುಖಂಡರ ಅಥವಾ ಪಕ್ಷದ ರಾಷ್ಟ್ರೀಯ ಮುಖಂಡರ ಛಾಯಾಚಿತ್ರಗಳು ಇರುವುದಿಲ್ಲ. ಕಾಂಗ್ರೆಸ್‌ನಲ್ಲಿ, ಅವರ ಪ್ರಚಾರ ಸಾಧನಗಳ ಮೇಲೆ ಮಹಾತ್ಮಾ ಗಾಂಧಿಯವರಿಂದ ಹಿಡಿದು ರಾಹುಲ ಗಾಂಧಿಯವರೆಗೆ ಎಲ್ಲರ ಛಾಯಾಚಿತ್ರಗಳಿರುತ್ತವೆ. ಭಾಜಪದ ಪ್ರಚಾರ ಸಾಧನಗಳ ಮೇಲೆಯೂ ಅಟಲಜೀಯವರಿಂದ ಹಿಡಿದು ಅಮಿತ ಶಹಾರವರೆಗೆ ಎಲ್ಲರ ಛಾಯಾಚಿತ್ರಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಕೇರಳದ ಕಮ್ಯುನಿಸ್ಟ್ರ ವಿಭಿನ್ನತೆ ಗಮನಕ್ಕೆ ಬರುತ್ತದೆ. ಅವರ ಪ್ರಚಾರ ಸಾಧನಗಳ ಮೇಲೆ ಜಗತ್ತಿನಾದ್ಯಂತ ಕಮ್ಯುನಿಸ್ಟ್ ಕ್ರಾಂತಿಯನ್ನು ಮಾಡಿದ ಮೂವರು ಮುಖಂಡರ ಚಿತ್ರಗಳಿರುತ್ತವೆ! ಮೊದಲ ಚಿತ್ರ, ಅರ್ಜೇಂಟಿನಾದ ಕಮ್ಯುನಿಸ್ಟ್ ಕ್ರಾಂತಿಯ ಯುವಾ ನಾಯಕ ‘ಚೆ ಗವ್ಹಾರಾ’ ಇವರ ವಿವಿಧ ಪೋಸ್ಟರ್ಸ್ಗಳದ್ದಾಗಿದೆ ! ಎರಡನೇಯ ಚಿತ್ರ ಬಣ್ಣ ಬಳಿದ ಗೋಡೆಗಳ ಮೇಲೆ ‘ಕಾರ್ಲ್ ಮಾರ್ಕ್ಸ್’, ‘ಫ್ರೆಡ್ರಿಕ್ ಎಂಗಲ್’ ಮತ್ತು ‘ವಾಲ್ದೀಮಿರ್ ಲೆನೀನ್’ ಇವರ ಸಾಮೂಹಿಕ ಛಾಯಾಚಿತ್ರಗಳದ್ದಾಗಿದೆ. ಇಂತಹ ಪೋಸ್ಟರ್ಸುಗಳು ಮತ್ತು ಈ ರೀತಿ ಬಣ್ಣ ಬಳಿದ ಗೋಡೆಗಳು ಕೋಚಿನ್-ಎರ್ನಾಕುಲಮ್ ನಗರದಲ್ಲಿ ಎಲ್ಲೆಡೆ ಕಾಣಿಸುತ್ತವೆ ಮತ್ತು ಅವುಗಳೊಂದಿಗೆ, ರಸ್ತೆಗಳಲ್ಲಿನ ದಾರಿದೀಪಗಳ ಮತ್ತು ವಿದ್ಯುತ್‌ವಾಹಿನಿಗಳ ಕಂಬಗಳ ಮೇಲೆ ಹಾಕಲಾದ ಕಮ್ಯುನಿಸ್ಟ್ ಪಾರ್ಟಿಯ ಕುಡುಗೋಲು-ಸುತ್ತಿಗೆಯ ಚಿಹ್ನೆ ಇರುವ ಧ್ವಜಗಳು ಕಾಣಿಸುತ್ತವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಸ್ವಾತಂತ್ರ್ಯದ ೭೫ ವರ್ಷಗಳ ನಂತರವೂ ಕಮ್ಯುನಿಸ್ಟ್ ಪಕ್ಷಕ್ಕೆ ರಾಷ್ಟ್ರೀಯ ಸ್ತರದಲ್ಲಿ ಜಾಹೀರಾತು ಮಾಡುವಂತಹ ಆದರ್ಶ ವ್ಯಕ್ತಿತ್ವದ ಮುಖಂಡನು ದೊರಕಿಲ್ಲ; ಆದುದರಿಂದಲೇ ವಿದೇಶಿ ಜರ್ಮನಿ-ರಷ್ಯಾ-ಅರ್ಜೆಂಟಿನಾದ ಮುಖಂಡರ ಚಿತ್ರಗಳನ್ನು ಹಾಕುವಲ್ಲಿ ಅವರು ಇಂದಿಗೂ ಧನ್ಯತೆಯನ್ನು ಪಡೆಯುತ್ತಿದ್ದಾರೆ. ದುರದೃಷ್ಟವಶಾತ್ ಇದು ರಾಷ್ಟ್ರೀಯತೆಯಲ್ಲ !
೨. ‘ಗಲ್ಫ್ ಮನಿ’ಯೇ ದೊಡ್ಡ ಆರ್ಥಿಕ ಸಂಪನ್ಮೂಲ !
ಭಾರತದ ಒಟ್ಟು ನಿರುದ್ಯೋಗದ ದರಕ್ಕಿಂತ ಕೇರಳದ ನಿರೋದ್ಯೋಗದ ದರ ಬಹಳ ಹೆಚ್ಚಿದೆ. ಅಲ್ಲಿ ಸಾಕ್ಷರತೆ ಶೇ. ೧೦೦ ರಷ್ಟಿದ್ದರೂ ಉದ್ಯೋಗ ಮತ್ತು ಇತರ ಕೆಲಸಗಳು ಬಹಳ ಕಡಿಮೆ ಇವೆ; ಏಕೆಂದರೆ ಅಲ್ಲಿ ಯಾವುದಾದರೊಂದು ಉದ್ಯೋಗ ಆರಂಭವಾದರೆ ತಕ್ಷಣ ಅಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಹೆಸರಿನ ಯುನಿಯನ್ ಧ್ವಜಗಳನ್ನು ಹಾಕುತ್ತಾರೆ. ‘ಕೆಲಸ ಮಾಡುವುದು ಕಡಿಮೆ, ಆದರೆ ಬೇಡಿಕೆಗಳು ಮಾತ್ರ ಅನೇಕ’ ಎಂಬ ದಬ್ಬಾಳಿಕೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಉದ್ಯೋಗಗಳು ಉಳಿಯಲು ಸಾಧ್ಯವಿಲ್ಲ. ಆದುದರಿಂದ ಶಿಕ್ಷಣ ಪಡೆದ ಕೇರಳವಾಸಿಗಳಿಗೆ ನೌಕರಿಗಳು ಸಿಗುವುದಿಲ್ಲ ! ಹೆಚ್ಚಿನಾಂಶ ಕಲಿತ ಕೇರಳದ ಜನರು ಗಲ್ಫ್ ದೇಶಗಳಲ್ಲಿನ ನೌಕರಿಗಳನ್ನು ಸ್ವೀಕರಿಸುತ್ತಾರೆ. ಗಲ್ಫ್ ದೇಶಗಳಲ್ಲಿ ಕೇರಳದ ಜನರು ಪ್ರಮುಖವಾಗಿ ದಾದಿಗಳು(ನರ್ಸ್), ವಾಹನಚಾಲಕರು (ಡ್ರೈವರ್), ತಂತ್ರಜ್ಞರು (ಟೆಕ್ನಿಕಲ್ ಸ್ಕಿಲ್ಡ್ ಲೇಬರ್) ಮುಂತಾದ ನೌಕರಿಗಳನ್ನು ಮಾಡುತ್ತಾರೆ. ಅವರ ವಿದೇಶಿ ಪ್ರವಾಸ ಸುಲಭವಾಗಬೇಕೆಂದು ಚಿಕ್ಕದಾದ ಕೇರಳ ರಾಜ್ಯದಲ್ಲಿ ೪ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಿವೆ. ಇಂದು ಕೇರಳದ ೩೫ ಲಕ್ಷ ಜನರು ಗಲ್ಫ್ ದೇಶಗಳಲ್ಲಿದ್ದಾರೆ, ಅವರಿಂದ ಕೇರಳ ರಾಜ್ಯಕ್ಕೆ ವಿದೇಶಿ ಉತ್ಪನ್ನ ಸಿಗುತ್ತದೆ ಮತ್ತು ಅಲ್ಲಿನ ಆರ್ಥಿಕ ವ್ಯವಸ್ಥೆ ನಡೆಯುತ್ತದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಇಲ್ಲದಿದ್ದರೂ ವಿದೇಶಿಯರ ಗಳಿಕೆಯಿಂದಾಗಿ ಕೇರಳ ರಾಜ್ಯದ ಆರ್ಥಿಕ ವ್ಯವಸ್ಥೆಯು ಸ್ಥಿರವಾಗಿದೆ. ಅದರಲ್ಲಿ ಕೇರಳದ ಕಮ್ಯುನಿಸ್ಟ್ರ ಕೊಡುಗೆ ಶೂನ್ಯವಾಗಿದೆ.
೩. ನೀಲಿ ಬಟ್ಟೆಗಳನ್ನು ತೊಟ್ಟ ಕೂಲಿಕಾರ್ಮಿಕರ ಗೂಂಡಾಗಿರಿ !
ಕೋಚಿನ್-ಎರ್ನಾಕುಲಮ್ ನಗರಗಳಲ್ಲಿ ಎಲ್ಲೆಡೆ ನೀಲಿ ಬಟ್ಟೆಗಳನ್ನು ತೊಟ್ಟ ಕೂಲಿಕಾರ್ಮಿಕರು ಕಾಣಿಸುತ್ತಾರೆ. ಅವರಿಗೆ ‘ನೊಕ್ಕೂ ಕುಲಿ’ ಎನ್ನುತ್ತಾರೆ. ಯಾವುದೇ ಸಾರ್ವಜನಿಕ ಸಾರಿಗೆ (ಪಬ್ಲಿಕ್ ಟ್ರಾನ್ಸಪೋರ್ಟ) ವಾಹನಗಳಲ್ಲಿನ ಸರಕುಸಾಮಾನುಗಳನ್ನು ಇಳಿಸಬೇಕಾಗಿದ್ದರೆ ಅಥವಾ ಏರಿಸಬೇಕಾಗಿದ್ದರೆ ಅವರನ್ನು ಕರೆಯಬೇಕಾಗುತ್ತದೆ. ನಾವೇ ಸ್ವತಃ ಅವುಗಳನ್ನು ಇಳಿಸುವವರಿದ್ದರೂ, ಅವರಿಗೆ ಹಣವನ್ನು ಕೊಡಬೇಕಾಗುತ್ತದೆ. ಮಾಲೀಕರು ಅವರನ್ನು ನೋಡುತ್ತಿದ್ದರೂ ಅವರು ಕೇಳಿದಷ್ಟು ಹಣವನ್ನು ಕೊಡುವ ‘ಕಮ್ಯುನಿಸ್ಟ್’ ಕೆಟ್ಟ ರೂಢಿ ಇಲ್ಲಿದೆ. ಅನೇಕ ಸುಶಿಕ್ಷಿತ ಯುವಕರು ಗುಂಪುಗಳಲ್ಲಿ ಕೂಲಿಗಳ ನೀಲಿ ಬಣ್ಣದ ಉಡುಪುಗಳನ್ನು ಧರಿಸಿಕೊಂಡು ನಗರದಲ್ಲಿ ತಿರುಗಾಡುತ್ತಿರುತ್ತಾರೆ ಮತ್ತು ಹಣವನ್ನು ವಸೂಲಿ ಮಾಡುತ್ತಿರುತ್ತಾರೆ. ಕಮ್ಯುನಿಸ್ಟ್ ಪಕ್ಷದ ಸಂರಕ್ಷಣೆ ಇರುವುದರಿಂದ ಅವರನ್ನು ಯಾರೂ ವಿರೋಧಿಸುವುದಿಲ್ಲ. ಇದು ಕಮ್ಯುನಿಸ್ಟರ ರಾಜ್ಯ ಹೇಗಿರುತ್ತದೆ, ಎಂಬುದರ ಒಂದು ಜ್ವಲಂತ ಉದಾಹರಣೆಯಾಗಿದೆ !
ಕೇರಳದಲ್ಲಿ ಕಮ್ಯುನಿಸ್ಟರ ಸರ್ವಾಧಿಕಾರ !
ಕೇರಳದಲ್ಲಿ ಹೆಚ್ಚಿನ ಹಿಂದೂಗಳು ಕಮ್ಯುನಿಸ್ಟ್ ಪಕ್ಷಕ್ಕೆ ಮತವನ್ನು ನೀಡುತ್ತಾರೆ. ಓರ್ವ ಸಾಮಾನ್ಯ ಮನೆಯಲ್ಲಿನ ಹಿಂದೂ ಮತದಾರನಿಗೆ ನಾನು, ‘ನೀವು ಕಮ್ಯುನಿಸ್ಟ್ ಪಕ್ಷಕ್ಕೆ ಏಕೆ ಮತ ಕೊಡುತ್ತೀರಿ ?’ ಎಂದು ಕೇಳಿದೆ. ಆಗ ಅವನು, ಮೃತ್ಯುವಿನ ನಂತರ ಇಲ್ಲಿ ಹೆಗಲು ಕೊಡಲು ಜನರು ಬರುವುದಿಲ್ಲ. ಅಂತ್ಯಸಂಸ್ಕಾರವನ್ನು ಯಾರು ಮಾಡುವರು, ಎಂಬ ಪ್ರಶ್ನೆ ಇರುತ್ತದೆ ? ಇಂತಹ ಸಮಯದಲ್ಲಿ ಮನೆಯಲ್ಲಿ ಯಾರದಾದರೂ ಮೃತ್ಯುವಾದರೆ, ಸ್ಥಳೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯಾಲಯದಿಂದ ಚಟ್ಟ ಮತ್ತು ಅಂತ್ಯಸಂಸ್ಕಾರದ ಸಾಹಿತ್ಯಗಳು ಬರುತ್ತವೆ. ಪಕ್ಷದ ಕಾರ್ಯಕರ್ತರು ಸ್ವತಃ ಹೆಗಲು ಕೊಟ್ಟು ಶವವನ್ನು ಸ್ಮಶಾನ ಭೂಮಿಯ ವರೆಗೆ ತಲುಪಿಸುತ್ತಾರೆ. ಈ ರೀತಿ ಇನ್ಯಾರು ಮಾಡುವರು ? ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ ! ಕೇರಳದ ಹಿಂದೂಗಳು ತಮ್ಮನ್ನು ಸ್ಮಶಾನಕ್ಕೆ ಒಯ್ಯಲು ಕಮ್ಯುನಿಸ್ಟ್ ಪಕ್ಷಕ್ಕೆ ಮತ ನೀಡುತ್ತಾರೆ, ಇಷ್ಟು ಮಾತ್ರ ಅವರ ಮಾತುಗಳಿಂದ ತಿಳಿಯಿತು !
– ಶ್ರೀ. ಚೇತನ ರಾಜಹಂಸ (ಆಧ್ಯಾತ್ಮಿಕ ಮಟ್ಟ ಶೇ. ೬೭), ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.