Kerala ED : ಕೇರಳ: ಜಾರಿ ನಿರ್ದೇಶನಾಲಯದಿಂದ ಸಿಪಿಐ ಪಕ್ಷದ ಜಮೀನು ಮತ್ತು 73 ಲಕ್ಷ ರೂಪಾಯಿಯ ಬ್ಯಾಂಕ್ ಖಾತೆ ವಶ !

ಕೊಚ್ಚಿ (ಕೇರಳ) – ಕರುವಣ್ಣೂರಿನ ಸೇವಾ ಸಹಕಾರಿ ಬ್ಯಾಂಕ್ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಭೂಮಿ ಮತ್ತು 73 ಲಕ್ಷ ರೂಪಾಯಿಯ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡಿದೆ. ಇದರೊಂದಿಗೆ ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳ ಒಟ್ಟು 28 ಕೋಟಿ 65 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಹ ವಶಪಡಿಸಿಕೊಂಡಿದೆ. ಈ ಹಣವನ್ನು ಸಿಪಿಐ ಫಲಾನುಭವಿಗಳಿಂದ ಹಣದ ರೂಪದಲ್ಲಿ ಸ್ವೀಕರಿಸಿದೆ ಎಂದು ಇಡಿ ಹೇಳಿದೆ. ಸಿಪಿಐ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ‘ಇಡಿ ‘ನಮ್ಮ ಪಕ್ಷವನ್ನು ಬ್ಯಾಂಕ್ ಹಗರಣದೊಂದಿಗೆ ಜೋಡಿಸಲು ಪ್ರಯತ್ನಿಸಿದರೆ, ನಾವು ಅದರ ವಿರುದ್ಧ ಕಾನೂನು ಮತ್ತು ರಾಜಕೀಯವಾಗಿ ಹೋರಾಡುತ್ತೇವೆ’ ಎಂದು ಸಿಪಿಐ ಉತ್ತರಿಸಿದೆ.

ಸಂಪಾದಕೀಯ ನಿಲುವು

ಇಂತಹ ಭ್ರಷ್ಟ ಪಕ್ಷವನ್ನು ನಿಷೇಧಿಸಲು ರಾಷ್ಟ್ರೀಯವಾದಿ ಪಕ್ಷಗಳು ಮತ್ತು ಸಂಘಟನೆಗಳು ಒತ್ತಾಯಿಸಬೇಕು !