ಕಣ್ಣೂರ್ (ಕೇರಳ) ಇಲ್ಲಿನ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿ 2 ಐಸ್ ಕ್ರೀಮ್ ಬಾಂಬ್ ಸ್ಫೋಟ

(ಟಿಪ್ಪಣಿ: ಐಸ್ ಕ್ರೀಮ್ ಬಾಂಬ್ ಎಂದರೆ ಚೆಂಡಿನ ಆಕಾರದ ಐಸ್ ಕ್ರೀಮ್ ಪಾತ್ರೆ(ಕಂಟೇನರ್) ಬಳಸಿ ತಯಾರಿಸಿದ ಒಂದು ರೀತಿಯ ಸ್ಫೋಟಕ)

ಕಣ್ಣೂರು (ಕೇರಳ) – ಕಣ್ಣೂರಿನ ಪರಿಯಾರಂನಲ್ಲಿ ಮೇ 13ರಂದು 2 ಐಸ್ ಕ್ರೀಮ್ ಬಾಂಬ್ ಸ್ಫೋಟಗೊಂಡಿದೆ. ಬಾಂಬ್ ಎಸೆದವರನ್ನು ಶೋಧಿಸಲಾಗುತ್ತಿದೆ. ಇಲ್ಲಿನ ಒಂದು ದೇವಸ್ಥಾನದ ಭಕ್ತರು ನೀಡಿದ ಅರ್ಪಣೆಯ ಸೂತ್ರದ ಆಧಾರದಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ (ಮಾಕಪ) ಮತ್ತು ಭಾಜಪ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ.

ಈ ಬಾಂಬ್ ಸ್ಫೋಟದ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಎರಡೂ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚರ್ಚೆ ಆರಂಭಿಸಿದ್ದಾರೆ.

ಸಂಪಾದಕೀಯ ನಿಲುವು

ಕೇರಳದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ! ಕೇಂದ್ರ ಸರಕಾರ ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು, ಎಂದು ಜನರಿಗೆ ಅನಿಸುತ್ತದೆ.!