Anti-Hindu Film ‘Puzhu’ : ಹಿಂದೂಗಳ ಮಾನಹಾನಿಯಾಗಲೆಂದೇ ಮಲಯಾಳಂ ಚಲನಚಿತ್ರ ‘ಪುಝು’ ನಿರ್ಮಾಣ !

  • ತಮಿಳುನಾಡಿನ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ಮುಖಂಡ ಮೊಹಮ್ಮದ ಶರ್ಷಾದ್ ಬನಿಯಾಂದಿಯವರ ದಾವೆ !

  • ಖ್ಯಾತ ನಟ ಮಮ್ಮುಟ್ಟಿಯನ್ನು ‘ಜಿಹಾದಿ’ ಎಂದು ಪಟ್ಟ !

(ಈಕೋಸಿಸ್ಟಂ ಎಂದರೆ ಯಾವುದೇ ಒಂದು ವಿಚಾರಸರಣಿ ಮುಂದಕ್ಕೆ ಜಗ್ಗಲು ಎಲ್ಲ ಸ್ತರದಲ್ಲಿ ನಿಯೋಜಿತ ಪದ್ಧತಿಯಿಂದ ಮಾಡುವ ಪ್ರಯತ್ನ)

ಚೆನ್ನೈ (ತಮಿಳುನಾಡು) – ಕಳೆದ 53 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಮಮ್ಮುಟ್ಟಿ ಅವರನ್ನು ‘ಜಿಹಾದಿ’ ಎಂದು ಆರೋಪ ಕೇಳಿಬಂದಿದೆ. ಇಲ್ಲಿನ ಉದ್ಯಮಿ ಮತ್ತು ಮಾರ್ಕ್ಸವಾದಿ ಕಮ್ಯುನಿಸ್ಟ ಮುಖಂಡ ಮೊಹಮ್ಮದ್ ಶರ್ಷಾದ್ ಬನಿಯಾಂದಿ ಅವರು ಈ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬನಿಯಾಂದಿ ಮಾತನಾಡಿ, ಮಮ್ಮುಟ್ಟಿ ಅವರ ಮಾಜಿ ಪತ್ನಿ ರಥಿನಾ ಪಿ.ಟಿ. ಮತ್ತು ಚಿತ್ರಕಥೆಗಾರ ಹರ್ಷದ್ ಕೂಡಿಕೊಂಡು ಹಿಂದೂ ವಿರೋಧಿ ಮತ್ತು ಮೇಲ್ಜಾತಿ ವಿರೋಧಿ ಸಿನಿಮಾ ಮಾಡಿದ್ದರು. ಇದರಲ್ಲಿ ಮಮ್ಮುಟ್ಟಿ ನಾಯಕ ನಟನಾಗಿ ಕೆಲಸ ಮಾಡಿದ್ದಾರೆ. ಹಿಂದೂಗಳ ಮಾನಹಾನಿ ಮಾಡಲು ಈ ಸಿನಿಮಾ ನಿರ್ದೇಶನ ಮಾಡುವಂತೆ ರಥಿನಾ ಪಿ.ಟಿ.ಯವರ ಮೇಲೆ ಒತ್ತಡ ಹೇರಲಾಗಿತ್ತು ಎಂದು ಬನಿಯಾಂದಿಯವರು ದಾವೆ ಮಾಡಿದ್ದಾರೆ.

ಮಾರ್ಕ್ಸವಾದಿ ಕಮ್ಯುನಿಸ್ಟ ಮುಖಂಡ ಮೊಹಮ್ಮದ್ ಶರ್ಷಾದ್ ಬನಿಯಾಂದಿ

ಈ ಪ್ರಕರಣ 2022 ರಲ್ಲಿ ಬಿಡುಗಡೆಯಾದ ‘ಪುಝು’ ಚಲನಚಿತ್ರಕ್ಕೆ ಸಂಬಂಧಿಸಿದೆ, ಇದನ್ನು ಮಮ್ಮುಟ್ಟಿ ಅವರ ‘ವೆಫೆರರ್ ಫಿಲ್ಮ್ಸ್’ ಈ ಸಂಸ್ಥೆ ನಿರ್ಮಿಸಿತ್ತು.

1. ಈ ಚಲನಚಿತ್ರದಲ್ಲಿ ಮಮ್ಮುಟ್ಟಿಯವರು ‘ಉಚ್ಚ ಜಾತಿ’ಯ ಐ.ಪಿ.ಎಸ್. ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಅಧಿಕಾರಿಯು ತನ್ನ ಸಹೋದರಿ ದಲಿತ ಪ್ರಯಕರನೊಂದಿಗೆ ಓಡಿ ಹೋದಳೆಂದು, ಅವಳನ್ನು ತಿರಸ್ಕರಿಸುತ್ತಾನೆ.

2. ಬನಿಯಾಂದಿಯವರ ಪ್ರಕಾರ, ರಥಿನಾ ಪಿ.ಟಿ.ಯವರು ಮನರಂಜನಾ ಚಲನಚಿತ್ರ ನಿರ್ಮಿಸಲು ಯೋಜಿಸಿದ್ದರು; ಆದರೆ ಅವಳಿಗೆ ಕೆಲವು ಉನ್ನತ ವ್ಯಕ್ತಿಗಳು ಹೇಳಿದಂತೆ ಕೇಳಬೇಕಾಯಿತು ಎಂದು ಹೇಳಲಾಗುತ್ತಿದೆ.

3. ಬನಿಯಾಂದಿಯವರು ಚಲನಚಿತ್ರದ ಬರಹಗಾರ ಹರ್ಷದ್ ಅವರನ್ನೂ ಸಹ ‘ಇಸ್ಲಾಮಿಕ್ ಕಟ್ಟರವಾದಿ’ ಎಂದು ಬಣ್ಣಿಸಿದ್ದಾರೆ.

4. ಕುತೂಹಲಕಾರಿಯಾಗಿ, ಮಮ್ಮುಟ್ಟಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. 2007 ರಲ್ಲಿ ‘ಡೆಮಾಕ್ರಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ’ದ ಅಖಿಲ ಭಾರತ ಸಮ್ಮೇಳನದಲ್ಲಿ ಮಮ್ಮುಟ್ಟಿ ಅವರು, ಗುಜರಾತ್‌ನಲ್ಲಿ ಈ ಸಂಘಟನೆ ಸಕ್ರಿಯವಾಗಿದ್ದರೆ 2002 ರಲ್ಲಿ ಗಲಭೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದ್ದರು.

(ಎಡದಿಂದ) ಮಮ್ಮುಟ್ಟಿ ಮತ್ತು ಅವರ ಮಾಜಿ ಪತ್ನಿ ರಥಿನಾ ಪಿ.ಟಿ.

ಸಂಪಾದಕೀಯ ನಿಲುವು

ಈ ದಾವೆಯಲ್ಲಿ ಸತ್ಯವಿರಲಿ ಅಥವಾ ಇಲ್ಲದಿರಲಿ; ಆದರೆ ಭಾರತ ಮತ್ತು ಹಿಂದೂಗಳ ವಿರುದ್ಧ ಸಂಪೂರ್ಣ `ಈಕೋ ಸಿಸ್ಟಂ’ ರೂಪದಲ್ಲಿ ಯಾವ ರೀತಿ ಕಾರ್ಯನಿರತವಾಗಿದೆ ? ಎನ್ನುವುದಕ್ಕೆ ಇದು ಒಂದು ಚಿಕ್ಕ ಉದಾಹರಣೆಯಾಗಿದೆ !