ಒಗ್ಗರಣೆ ಅವಲಕ್ಕಿಯಿಂದ ಪಿತ್ತ ಆಗುತ್ತದೆಯೇ ?

‘ಒಗ್ಗರಣೆ ಅವಲಕ್ಕಿಯು ತಿಂಡಿಯಲ್ಲಿ ಅತೀ ಹೆಚ್ಚು ತಿನ್ನುವ ಪದಾರ್ಥವಾಗಿದೆ. ಕೆಲವರಿಗೆ ಒಗ್ಗರಣೆ ಅವಲಕ್ಕಿ ಸೇವಿಸಿದ ನಂತರ ಗಂಟಲಿನಲ್ಲಿ ಅಥವಾ ಎದೆಯಲ್ಲಿ ಉರಿಯಾಗುವುದು ಹಾಗೂ ಹೊಟ್ಟೆ ತೊಳೆಸುವುದು ಈ ರೀತಿಯ ತೊಂದರೆ ಆಗುತ್ತದೆ. ಆದ್ದರಿಂದ ‘ಒಗ್ಗರಣೆ ಅವಲಕ್ಕಿಯಿಂದ ಪಿತ್ತ ಆಗುತ್ತದೆ’, ಎಂದು ಅವರಿಗೆ ಅನಿಸುತ್ತದೆ. ಆಯುರ್ವೇದದ ಪ್ರಕಾರ ಅವಲಕ್ಕಿ ಪಿತ್ತಕಾರಿ ಅಲ್ಲ. ಹುಳಿ, ಉಪ್ಪು, ಖಾರ ಮತ್ತು ಎಣ್ಣೆ ಪದಾರ್ಥ ತಿನ್ನುವುದರಿಂದ ಪಿತ್ತ ಆಗುತ್ತದೆ. ಹಲವಾರು ಬಾರಿ ಅವಲಕ್ಕಿ ಒಗ್ಗರಣೆ ಮಾಡುವಾಗ ಎಣ್ಣೆಯನ್ನು ವಿಪರೀತವಾಗಿ ಉಪಯೋಗಿಸಲಾಗುತ್ತದೆ. ತಿಂಡಿ ತಿಂದ ನಂತರವೂ ತಟ್ಟೆಯಲ್ಲಿ ಎಣ್ಣೆ ಇರುತ್ತದೆ. ಕೆಲವು ಸಾರಿ ಮುಷ್ಟಿಯಲ್ಲಿ ಅವಲಕ್ಕಿಯನ್ನು ತೆಗೆದುಕೊಂಡು ಹಿಂಡಿದರೆ ಎಣ್ಣೆ ಬಸಿಯುತ್ತದೆ ಅಷ್ಟು ಪ್ರಮಾಣದಲ್ಲಿ ಎಣ್ಣೆಯನ್ನು ಉಪಯೋಗಿಸಲಾಗುತ್ತದೆ. ಈ ಎಣ್ಣೆಯ ಜಿಡ್ಡಿಯಿಂದ ಪಿತ್ತ ಆಗುತ್ತದೆ. ಒಗ್ಗರಣೆ ಅವಲಕ್ಕಿ ಮಾಡುವಾಗ ಅತ್ಯಲ್ಪ ಪ್ರಮಾಣದಲ್ಲಿ ಎಣ್ಣೆ ಉಪಯೋಗಿಸಿದರೆ ಪಿತ್ತದ ತೊಂದರೆ ಆಗುವುದಿಲ್ಲ. ಕಡಿಮೆ ಎಣ್ಣೆಯನ್ನು ಉಪಯೋಗಿಸಿಯೂ ರುಚಿಕರ ಒಗ್ಗರಣೆ ಅವಲಕ್ಕಿ ಮಾಡಲು ಬರುತ್ತದೆ. ಯಾರಿಗೆ ಇದು ಬರುವುದಿಲ್ಲವೋ ಅವರು ತಿಳಿದಿರುವ ವ್ಯಕ್ತಿಗಳಿಂದ ಕಲಿತುಕೊಂಡರೇ ಮನೆಯಲ್ಲಿನ ಪಿತ್ತದ ತೊಂದರೆ ತುಂಬಾ ಕಡಿಮೆ ಆಗುವುದು.’ – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.